Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಾಳಿಗೆ ಬೇಕು ಪ್ರತಿ ಸವಿನೆನಪು..
ಮನಕೆ ಆಹ್ಲಾದ ತರುವುದೇ ಸವಿನೆನಪು....
ಮಂದಹಾಸ ತರುವುದು ನಮ್ಮ ಸವಿನೆನಪು..
ನಗುವ ಅರಳಿಸುವುದು ಎಲ್ಲರ ಸವಿನೆನಪು....
ಮುಖದಲ್ಲಿ ಕಾಣುವುದು ನೆನಸಿದ ಸವಿನೆನಪು..
ಅದೇ ಮರೆಸುವುದು ನೋವಿನ ಕಹಿನೆನಪು....
ಪ್ರತಿಯೊಂದು ಕೆಲಸವಾಗಲಿ ಮುಂದೆ ಸವಿನೆನಪು..
ಪ್ರತಿಯೊಂದು ನುಡಿ ನೆನಪಿಸಲಿ ಸವಿನೆನಪು....
ಸವಿನೆನಪು ನೆನಪಿಸುವರ ಸವಿನೆನನಪು..
ಆಗುವುದು ಮುಂದೊಮ್ಮೆ ಅವರ ಸವಿನೆನಪು....
ಬಾಳಿನ ಕೊನೆಯವರೆಗೂ ಇರಲಿ ಸವಿನೆನಪು..
ಹರಸುವ ಆ ದೇವ ಸಿಹಿನೆನಪು ನೆನಪಿಸುವರ ಸವಿನೆನಪು....
- KR Sreekamala
29 Apr 2017, 08:47 pm
ಬಾನ ಅಂಗಳದಲ್ಲಿ ಮೋಡಗಳ ಮುನಿಸು;
ಮಳೆಗಾಗಿ ಕಾದಿಹ ಇಳೆಯ ಕನಸು :
ಗಾಳಿ ಮಾತನಾಡಿ ಪಕ್ಕ ಕ್ಕೆ ಸರಿದಿಹುದು ಇಳೆಯ ಮಳೆಯ ನನಸು,
ಹೊರಗೆ ಹೋಗಲು ಹಿಂಜರಿಯುತಿದೆ ಮಾನವನ ಮನಸ್ಸು.
- ವೇಣು ಆರ್ ಚಿನ್ನದೂರು
29 Apr 2017, 08:11 pm
ಮತ್ತೊಂದು ಸಾರಿ ಮಗುವಾಗಳೇ
ಚಿಟ-ಪಟ ಜಾರುತ್ತಿರುವ ಮಳೆಯ
ಜೊತೆಗೂಡಿ ಆಟವಾಡಲು.........
ಇದು ನಿಲ್ಲುವವರೆಗೂ ನಾ
ಅದರ ಜೊತೆಗೂಡಿ ಮಾತನಾಡಲು.....
ತಂಪಾದ ತಂಗಾಳಿ ಹಾಗೊಮ್ಮೆ ಬೀಸುತ್ತಿದೆ
ಈಗೊಮ್ಮೆ ಓಡುತ್ತಿದೆ ............
ಕತ್ತಲಲ್ಲಿ ನನ್ನ ನೋಡಲು ಚುರುಕಾಗಿ
ನನ್ನ ತಾಕಿದೆ ಮಿಂಚಿಂದು ಗಡುಸಾಗಿ
ಕೊಂಚ ಹೊತ್ತು ನಿಂತು ನೋಡಲೇ
ಚಿಗುರೆಲೆಯ ಸೊಗಸನ್ನು
ಮಳೆಹನಿಯ ಮಾಯೆಯನ್ನು......
- ಚುಕ್ಕಿ
29 Apr 2017, 08:08 pm
ಎದಯಲಿ ಜಾರಿದ ಮಳೆ ಹನಿಯೇ
ಎಲ್ಲಡಗಿದ್ದೆ ಮರೆಯಾಗಿ..........
ತುಟಿಯಲಿ ಕರಗಿದ ಮಳೆ ಹನಿಯೇ
ಮರೆತೊಗಿದ್ದಾ ನನ್ನಿಲ್ಲಿ.......
ಕಣ್ಣಲಿ ನಿಂತ ಕಿರು ಹನಿಯೇ
ಕಳೆದೋಗಿದ್ದ ಬಿಸಿಲಲ್ಲಿ ......
ಗುಡುಗಿನ ಆಸರೆ ಜೊತೆಯಾಗಿ
ಮರಳಿ ಬಂದಾ ಧರೆಯಲ್ಲಿ........
ಮಿಂಚಿನು ಮೆಚ್ಚಿದ ಜೊತೆಗಾರ್ತಿ
ಭುವಿಯನು ಸೇರೆ ಬಾನೊಡತಿ......
ನೂರು ಕಲೆಗಳ ತೋರುವ ಕಲೆಗಾರ್ತಿ
ಸಾವಿರ ಸದ್ದಲ್ಲಿ ಸೆಳೆದೆ ನನ್ನ ಮನದೊಡತಿ.............
ನಿನ್ನಲಿ ನೆನೆಯಲು ಮನಸಾಗಿ
ಮುಂಗಾರು ಮಳೆಗೆ ಮನಸೋತೆ........
ಚಿಪ್ಪಿಲ್ಲದ ಸ್ವಾತಿ ಮುತ್ತಾಗಿ
ಹೃದಯವ ಸೇರೆ ಪ್ರಿಯವಾಗಿ........
- ಚುಕ್ಕಿ
29 Apr 2017, 07:41 pm
ಸೊಗಸಿಗಿ೦ತ ಸೊಗಸು
ನಮ್ಮನೆ ಚಹಾದ ಗಮ್ಮತ್ತು.
ಸವಿಯಿತಿರಲು, ಮನವು
ತಣಿಸುವುದು, ಮತ್ತೆ ಮತ್ತೆ
ಸವಿಯಬೇಕೆನಿಸುವುದು.
- Bore'S..!
- Ananth
29 Apr 2017, 05:55 pm
ನನಗೋ ಮುಗಿಲೆತ್ತರಕೆ ಏರುವಾಸೆ
ಮಳೆಹನಿಗೆ ಭೂಮಿಗೆ ಮುತ್ತಿಡುವಾಸೆ
ಭೂಮಿಯ ಮಡಿಲ ಸೇರುವ ಹನಿ ಮತ್ತೆ ಬರಬಹುದು ಅಂತರ್ಜಲವಾಗಿ
ಮುಗಿಲಿಂದ ಎತ್ತರಕ್ಕೆ ಹಾರಿದ ನಾನು ಬರಬಹುದೇ ಮತ್ತೆ -?
ಮುಗಿಲ ಮಡಿಲಿಂದ ಬರುವ ಹನಿ ಪರಿಶುಧ್ಧ
ಮುಗಿಲಿಂದ ಮೇಲೆ ಏರಿದ ನನ್ನಾತ್ಮ ಎಷ್ಟುಶುದ್ಧ
ಹೋಲಿಸಬಹುದೇ ನನ್ನನ್ನು ಮಳೆ ಹನಿಗೆ
ಮೇಲಿಂದ ಕೆಳಗೆ ಬಂದ ಹನಿಯದು ಸಾರ್ಥಕ್ಯದ ಭಾವ
ಕೆಳಗಿಂದ ಮೇಲಕ್ಕೆ ಹಾರಿದ ನನ್ನದು ತೀರದ ಸ್ವಾರ್ಥದ - ?
ಸ್ವಾರ್ಥದ ಆತ್ಮ ನರನದಾದರೆ
ನಿಸ್ವಾರ್ಥದ ಹನಿ ಪರಮಾತ್ಮನ ಕರುಣೆ
ಆತ್ಮ ಹನಿಯಾಗ ಬೇಕಾದರೆ ಬೆತ್ತಲೆಯಾಗು ಮನುಜ
ಅರಿಷಡ್ವರ್ಗಗಳ ಪರದೆಯ ಸರಿಸಿ
ರಾಗ ದ್ವೇಷಗಳ ಕಳೆಯ ಸುಟ್ಟು, ಸ್ನೇಹ ಪ್ರೀತಿಯ ಹಣತೆಯ ಹಚ್ಚಿ.
- Chaitra Maha Rudraswamy
29 Apr 2017, 05:30 pm
ಮತ್ತೆ ನೀರವ ಮುಸ್ಸಂಜೆ,
ಆಕಾಶದಲ್ಲೇ ಉಳಿದ ಮೋಡದ ತುಂಡು,
ಖಾಲಿ ಬೆರೆಳ ಸಂಧಿ,
ಚಂದ್ರನಿಗೆ ಪ್ರೀತಿ ಕಲಿಸಬೇಕು
ಬಂದುಬಿಡು ಗೆಳೆಯ......
- chinmayi.....chinni
29 Apr 2017, 03:22 pm
ನಿನ್ನ ನಗೆಯಿಂದ ಹರಡಿದ
ಬೆಳದಿಂಗಳ ಕಡಲಲಿ
ಮಿಂದು ಈಸುವ ಆಸೆ..
ನಿನ್ನ ಕಿರುನೋಟದ ಮಿಂಚಿನಲಿ
ಮಿನುಗುವ ಅಂಗಳದಲಿ
ಮನೆಮಾಡುವ ಮಹಾದಾಸೆ ...
ನಿನ್ನ ಸನಿಹದಲೆ ಕುಳಿತು
ನಿನ್ನ ಮಾತುಗಳ ಸದಾ ಸವಿಯುವ
ಸಖನಾಗುವ ಸಿಹಿ ಆಸೆ...
ನಿನ್ನ ಉಸಿರಿನ ತಂಪಾಗಿ
ಅಪ್ಪುಗೆಯ ಬಿಸಿಯಾಗಿ
ನಿನ್ನ ಬದುಕಾಗಿರಲು ಬಲು ಆಸೆ
- Prabhath
29 Apr 2017, 03:03 pm
ಕರಿ ಮಣಿಯ ಕನಸಲ್ಲಿ ಬಂದು
ಬಂಗಾರದ ಸರದಲ್ಲಿ ಕೂತು.....
ನಿತ್ಯ ನನ್ನ ನೆನೆಲೊಂದು ಹುಗುಗರೆ
ಕೊಟ್ಟೆ ಈ ಮಂಗಳಕರ ಅರಿಶಿನದಲ್ಲಿ
ಮಿಂದು ತಾಳಿಯರುಪದಲ್ಲಿ ನೀನೇನಾ
ಸಂಗಾತಿ...........
ತಳಿಯ ಸರದಲ್ಲಿ ಎರಡು ಸೂತ್ರಗಳು
ನಾನೊಂದು ನೀನೊಂದು ...........
ನಾನೆಂದು ನಿನ್ನ ಹೃದಯದಲ್ಲಿ ನಗು
ನಿನ್ನ ಎಂದೆಂದಿಗೂ ನನ್ನ ಪ್ರೀತಿಯಲ್ಲಿ
ಬೆರತೊಗೂ ಮಾತಿಲ್ಲದೆ ಸಂಗಾತಿ..........
ಏಳು ಹೆಜ್ಜೆ ನಿನ್ನಿಂದೆ ನಡೆದು
ನಾ ತಿಳಿಸುವೇ ಎಂದೆಂದೂ
ನಿನ್ನ ಕೈಬಿಡದ ಅರ್ಧಂಗಿ ನಾನಾಗುವೇನೆಂದು....
ತಿಳಿಸು ನೀನು ಎಂದಿಗೂ ನನ್ನ
ನೋವಲ್ಲಿ ನೀ ಮುಂದೆ ನಿಂತು
ನನ್ನ ಕಾಯುವೆನೆಂದು............
ನಿನ್ನ ಉಸಿರಲ್ಲಿ ಸಮಪಾಲು ಹಂಚಿ
ನನ್ನ ನಗುವಿಗೆ ಎಂದಿಗೂ ನಿನ್ನ ಪ್ರೀತಿಯೇ ಕಾರಣವಾಗುತ್ತೆಂದು...............
- ಚುಕ್ಕಿ
29 Apr 2017, 03:03 pm
ಹುಚ್ಚು ಮನಸಿನ
ಸ್ವಚ್ಚ ಭಾವದ
ಬಿಚ್ಚು ಮಾತನು ಕಂಡು
ಮೆಚ್ಚಿದ ಹೃದಯಕೆ
ಕಿಚ್ಚು ತುಂಬಿರಲು ಸೆಳೆತವು
ಕೆಚ್ಚಿನಿಂದ ಪ್ರೀತಿಯೆಂದು ನಂಬಿ
ಹಚ್ಚಿಕೊಂಡ ಮನಸೊಡನೆ ಕಾದಾಡಿ
ರಚ್ಚೆ ಹಿಡಿದು ಕನಸು ಹೆಣೆದು
ಸ್ವಚ್ಛಂದ ಬದುಕು ನೆನೆದು
ಸ್ವೇಚ್ಚೆಯ ಪರಿಮಿತಿ ತಿಳಿಯದೆ
ಬೆಚ್ಚಗೆ ಜೊತೆ ಬರಬೇಕಾದ ಮನಸೆ
ಕೊಚ್ಚಿ ಕೊಂದಿರಲು ಅರಿಯದೆ ಕಂಡ ಕನಸ
ತುಚ್ಚವಾಗಿರಲು ಸ್ವ ಬದುಕೆ
ಬೆಚ್ಚಿ ಬೀಳುವ ಸಮಯ ಪ್ರೀತಿಯೆಂಬ ದೈವತ್ವದಲು
- ಶ್ರೀಕಾವ್ಯ
29 Apr 2017, 01:41 pm