Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಟು ಸತ್ಯ

ಕಲ್ಪನೆಯ ಲೋಕದಲ್ಲಿ ಸಾಗಿ,
ಸಾವಿರ ಕನಸುಗಳ ಕಂಡು,
ಇಲ್ಲ ಸಲ್ಲದ ಭ್ರಮೆಯಲ್ಲಿ ಮುಳುಗಿ,
ಪ್ರಪಂಚವನ್ನೆಲ್ಲ ತನ್ನದೆಂದುಕೊಂಡು,
ಸುಂದರ ಕನ್ಯೆಯರೊಂದಿಗೆ ಸರಸವಾಡಿ,
ಸಿರಿವಂತಿಕೆಯಲಿ ಅಹಂಕಾರವ ಮೆರದು,
ದರ್ಪದಿಂದ ತಾನೇ ಶೂರನೆನುತಿರಲು,
ಥಟ್ಟನೆ ನೆನಪಾಗುವುದು ವಾಸ್ತವ ಲೋಕ,
ಬೇಡವೆಂದರೂ ಕಾಣುವುದು ಕಟು ಸತ್ಯ,
ಒಪ್ಪಿಕೊಳ್ಳಲೇಬೇಕು ಈ ಕಟು ಸತ್ಯ.

- ರವೀಂದ್ರಬಾಪೂರ(GNL)

29 Apr 2017, 12:25 pm

ಸವಿಯಾದ ಸ್ನೇಹಕ್ಕೆ

ಸವಿಯಾದ ಸ್ನೇಹಕ್ಕೆ ಸವಿ ನುಡಿಯ ಮಾತು.......ಮನಸ್ಸಿನ ಮಿಡಿತಕ್ಕೆ ಮರೆಯದ ಮಾತು..... ಕಲ್ಪನೆಯ ಕನಸ್ಸಿಗೆ ಕರಗದ ಮಾತು......ನಲ್ಮಯ ಹೃದಯಕ್ಕೆ ನನ್ನ ಈ ಪ್ರೀತಿಯ ಪಿಸುಮಾತು....

- Rahul manoj v r

29 Apr 2017, 12:20 pm

ಪ್ರಶ್ನಿಸುತ್ತಿವೆ...............✍

ಇನ್ನು ಅದೆಷ್ಟು ಕಣ್ಣೀರು ಬಾಕಿ
ಉಳಿದಿದೆಯೋ ಈ ನನ್ನ ನಾಯನದಲ್ಲಿ.........
ಇರುವ ಕಂಬನಿಯಲ್ಲಾ ಬೊಗಸೆಯಲ್ಲಿಡಿದು
ಆಕಾಶಕ್ಕೆ ಚಲ್ಲುವೆ..............

ಮಳೆಯ ರೂಪದಲ್ಲಾದರೂ ಧರೆಗೆ
ಬರಿಲಿ ನನ್ನ ಮನದಲ್ಲಿನ ನೋವೆಲ್ಲಾ
ಬರಿದಾಗಿ ಬಾಡೋಗಲಿ............

ಅತ್ತು ಅತ್ತು ಕನ್ನೆಲ್ಲಾ ಸೊತೋಗಿದೆ
ಯಾವಾಗ ನಮಗೆ ನಿನ್ನಿಂದ ವಿಮುಕ್ತಿ
ಎಂದು ನನ್ನನು ದಿನನಿತ್ಯ ಪ್ರಶ್ನಿಸುತ್ತಿವೆ........

- ಚುಕ್ಕಿ

29 Apr 2017, 10:18 am

ಹಾಸು ಬೆನ್ನಿಗೊಂದು ಮುತ್ತು

ಅವಳ ಮೊದಲ ಮುಟ್ಟು ನಿಂತಾಗ
ಗಂಡನಲ್ಲಿ ಹುಟ್ಟುವ ಅಸಂಖ್ಯ
ಆಸೆಗಳಿಗೆ ಹೆಸರೇನೂ ಇರುವುದಿಲ್ಲ
ಸ್ತ್ರೀ ಸಮುದಾಯವೇ,
ಇವ ಯಾವತ್ತೂ ದೇವರಾಗಬಲ್ಲ ಕಲ್ಲು
*
ಹೊಟ್ಟೆ ಉಬ್ಬುವ ಪ್ರತಿದಿನವು
ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾನೆ
ತನ್ನದೇ ಪ್ರತಿರೂಪ ಹುಟ್ಟಬೇಕೆಂಬ
ಇರಾದೆ ವ್ಯಕ್ತಪಡಿಸದೇ ಇರಿಸಿಕೊಳ್ಳುತ್ತಾನೆ
*
ನೀವು ಕೂಸಿನಿಂದ ತಿನ್ನುವ ಪ್ರತಿ
ಒದೆಗೂ ಎದೆ ನೀಡಬೇಕೆಂದು
ಆಶಿಸುವವನು ಇವನೇ
ಮಹಿಳೆಯರೇ
ನಿಮ್ಮ ನೋವ ನೋಡಿ ನಗುವುದಲ್ಲ ಅವನು
ತನ್ನ ಕಂದನ ಪರಾಕ್ರಮಕ್ಕೆ ಮುಗುಳುತ್ತಾನೆಯಷ್ಟೇ
*
ಹೆರಿಗೆ ವಾರ್ಡಿನಲ್ಲಿ ನಿಮ್ಮ ಯಾತನೆ
ಡೆಲ್ಟಾ ಮಾಪಕದಲ್ಲಿ ಅಳೆಯುತ್ತಾರೆ
ಗರ್ಭಧಾರಿಣಿಗಳೇ,
ಹಾಸು ಬೆನ್ನಿಗೆ ಮುತ್ತನಿಟ್ಟ ಇವನ
ದರ್ದು ಅಳೆಯುವ ಮಾಪಕ
ಇನ್ನೂ ಕಂಡುಹಿಡಿದಿಲ್ಲ..!!

-ಅವಿಜ್ಞಾನಿ

- ಅವಿಜ್ಞಾನಿ

29 Apr 2017, 10:08 am

ಕೈ ತುತ್ತು

ಮತ್ತೊಮ್ಮೆ ಆಸೆಯಾಗಿತ್ತು
ತಿನ್ನಲು ಅಮ್ಮನ ಕೈ ತುತ್ತು
ನೋಡುತ್ತಲೆ ಇರುವೆ ಮೂಡಣದತ್ತ
ಚಂದಮಾಮ ಮೂಡಿ ಬರುತಾನಂತ
ಅಮ್ಮನ ಮಡಿಲೊಳಗೆ‌ ಕುಳಿತು ಕೇಳಿದ ಕತೆಗಳ ಮೆಲಕುತ್ತ
ಆ ಬೆಳಕಲೆ ಅವಳೊಡನೆ ಕಲಿತ ಪಾಠವ ನೆನೆಯುತ್ತ
ಊಟವ ಅವನಿಗೆ ಕೊಡಲೆಂದು ಹುಸಿಯಲಿ‌ ಕರೆಯುತ್ತ
ಅನ್ನವ ಬಾಯಿಗಿಡಲು‌ ಹರಸಾಹಸ ಪಡುತಿದ್ದ ಅಮ್ಮನ‌ ನೆನೆಯುತ್ತ
ಎಲ್ಲವ ಅರಿಯುವ ಮುನ್ನ ಉರುಳಿದ ಕಾಲವ‌ ಶಪಿಸುತ್ತ
ಮತ್ತೊಮ್ಮೆ ಅಮ್ಮನ ಮಡಿಲ ಕೂಸಾಗಲು ಬಯಸುತ್ತ
ಕುಳಿತಿರುವೆ ಆ ಚಂದಿರನ ನೋಡುತ್ತಾ
ಎಲ್ಲವು ಮರುಕಳಿಸಲಿ ಇನ್ನೊಮ್ಮೆ ಎನ್ನುತ್ತ

- ಶ್ರೀಕಾವ್ಯ

28 Apr 2017, 11:19 pm

ಮದುವೆ ಮನೆಯಲೋಂದು ಪ್ರೇಮದ ಕತೆ

ಮದುವೆ ಮನೆಯಲ್ಲಿ ಹುಡುಗಿ
ಸಿಕ್ಕಳು
ಬೆಳದಿಂಗಳ ಚಂದಿರನಂತೆ
.
..... ನಕ್ಕಳು
ಪ್ರೀತಿಸೊಣ ಎಂದರೇ
ಅವಳೇ ಮದುಮಗಳು

- Rajeshkiccha4

28 Apr 2017, 09:45 pm

ನಂಬಿಕೆ

ಭಾವ ಬಂಧನಕೆ ನಂಬಿಕೆಯೇ ಅಡಿಪಾಯವಂತೆ
ಅದರೊಡನೆ ಮಾತಿಗೆ ಜನನ, ಮೌನಕೆ‌‌ ಮರಣ
ನಗುವಿನ ‌ಅಲೆಯು ಮಗುವಿನಂತ ಮನಸಲಿ
ಕಂಡಾಗ ಕಣ್ಣೀರ ಮಿಡಿವುದು ಹೃದಯವು ಅಲ್ಲಿ
ನಕ್ಕಾಗ ನಗುವು, ಅತ್ತಾಗ ಅಳುವು
ನಗಿಸಿ‌‌ ನಕ್ಕು ಅಳಿಸಿ‌ ಅತ್ತು ಕಣ್ಣೀರ ಒರೆಸಿ
ಮಾತು ಮನಸ ಬೆಸೆದು ಕೂಡಿಟ್ಟು ಕಾಪಾಡಿರಲು ಬಂಧವು

ನಂಬಿಕೆಯೇ ಮುರಿದರೇ ಮುಂದಿನದು.............?

ಹುಟ್ಟಿದ ಮಾತಿಗೆ ಮರಣ, ಸತ್ತ ಮೌನಕೆ ಜನನ
ನಗುವಿನ ಅಲೆಯ ಚುಚ್ಚಿ‌ ಕೊಲ್ಲುವ ನೋವಿನ ಅನುಮಾನ
ಕಣ್ಣ ನೀರ ಕಂಡು ಮಿಡಿದ ಹೃದಯದಲಿ‌ ಮತ್ತದೇ ಕಣ್ಣೀರಿನ ಉತ್ಖನನ
ಮತ್ತದೇ ಅಳು ನಗುವಿನ ಪುನಾರಾಗಮನ

ನಗುವೇ ಅಳುವಾಗಿ, ಅಳುವು ಕಾಡಿ ಬಹುವಾಗಿ
ಬಂಧವ ಬೆಸೆದ ಮಾತೆ ನೋಯಿಸುವ ನನಸಾಗಿ
ಕನಸಲೂ ಕಾಡಯವುದು ಸಂಬಂಧವೂ ಪ್ರಶ್ನೆಯಾಗಿ

- ಶ್ರೀಕಾವ್ಯ

28 Apr 2017, 09:15 pm

ನೀ ...... ಹೆಣ್ಣೆ ?

ದಾಹವಾಗಿದ್ದಾಗ, ನಾನು ನೀರನ್ನ(ಪ್ರೀತಿ)ರಸುತ್ತಾ
ಮರಳುಗಾಡಿನಲ್ಲಿದ್ದಾಗ ,
ಓಯಸಿಸ್ ನಂತೆ ಗೋಚರಿಸಿ
ಮುಂದೆ ಮುಂದೆ ಕರೆದೊಯ್ದು
ಬಾಳಿನುದ್ದಕೂ ನಿರಾಸೆಯ ನೀರನ್ನು
ಕುಡಿಸಿದೆಯೇಕೆ ?
ಓಯಸಿಸ್ ನಂತೆ ಕಾಣುವ ನೀರಿಗೂ
ನಿನಗೂ ವ್ಯತ್ಯಾಸವಿಲ್ಲವೇ ?
ಅದಕೆಂದೇ ಮಾಯಾಂಗನೆ ಎಂದಿರಬೇಕು ?
ಚಂಚಲೆ ಎಂದಿರಬೇಕು ಋಷಿ ಮುನಿಗಳು.
ರಚನೆ ...... ಈರಣ್ಣ .ಹೆಚ್

- Eranna.HHamsa

28 Apr 2017, 08:54 pm

ನಮ್ಮ ಬೆಂಗಳೂರು...

ನಮ್ಮ ಬೆಂಗಳೂರು
ಗಡಿ ಮೀರಿ ಬೆಳೆಯುತಿದೆ
ಎಲ್ಲರ ಕೈ ಬೀಸಿ ಕರೆಯುತಿದೆ
ತನ್ನವರು ಪರರೆಂಬ ಭೇದವಿಲ್ಲದೆ

ಕನಸು ಗೆದ್ದವರ ‌ನೆಚ್ಚಿನ ಜಾಗವಿದು
ಸೋತು, ಗೆಲ್ಲುವ ಕನಸ ಕಂಡವರ ತಾಣವಿದು
ಸೋತು ಗೆದ್ದವರ, ಸೋತು ಸತ್ತವರ ಮೂಲವಿದು

ಹೈಟೆಕ್ ಇಲ್ಲುಂಟು,
ಐಟಿ ಬಿಟಿಯ ಜೊತೆಗೆ ಜಗದ ನಂಟು
ಕಂಡರೆ ಮುಗುಳ್ನಕ್ಕು ಮಾತಾಡುವವರು‌ ಎಲ್ಲಂಟು

ಸಾಕೆನಿಸಿದವರಿಗೆ ಬೆಂದಕಾಳೂರು
ಇದ್ದವರಿಗೆ ಬೆಂಗಳೂರು
ಬಂದವರಿಗೆ ಬ್ಯಾಂಗಳೂರು

ತುಂಡುಬಟ್ಟೆ ಗೇಣು ಹೊಟ್ಟೆಯ ಅರಿಯದವರು
ಕಾಣದ ಹೊಟ್ಟೆ ಬಟ್ಟೆಯ ಬೆಲೆಯ ತಿಳಿದವರು
ಹಿಡಿ ಅನ್ನ ಮೊಳ ವಸ್ತ್ರಕ್ಕೆ ಕಾದವರರು‌ ಬದುಕ ಕಟ್ಟುತ್ತಿರುವರು

ಪರರೇ ನಮ್ಮವರಾಗಿ, ನಮ್ಮವರೇ ಪರರಾಗಿ
ನಮ್ಮೊಳಗೆ ಪರರು ಸೇರಿ, ಪರರೊಳಗೆ ನಮ್ಮವರ ಹುಡುಕಿ
ಕನ್ನಡ ಎನ್ನಡವಾಗಿ, ಎನ್ನಡದೊಳಗೂ ನೂರಾರು ಭಾವ ಭಾಷೆ ಸೇರಿ
ಸೊರಗಿ‌ ಸೋತರು, ಸತ್ತು ಗೆದ್ದು ಮೆರೆಯುತಿಹುದು ಇಂತಿಪ್ಪ‌ ಬೆಂಗಳೂರು

- ಶ್ರೀಕಾವ್ಯ

28 Apr 2017, 08:54 pm

ಕವನ

ಪದ ಪದವನ್ನು
ಹಾಡುಮಾಡಿ ಹಾಡುವವನು ನಾನು
ಆದರೂ ಕಾಡುತ್ತಿದೆ ಈಗೇಕೋ
ಪದಗಳ ಅಭಾವ
ಕವನದಲ್ಲಿ ಹಿಂದಿನಂತೆ
ಹೊರಹಾಕಲಾಗುತ್ತಿಲ್ಲ ಭಾವ
ಭಾವನೆಗಳೇ ಸತ್ತ ಮೇಲೆ
ನಾವು ಜೀವಂತ ಶವ
ರಕ್ತ ಬತ್ತಿದ ಹೃದಯದಲ್ಲೂ
ಪ್ರೀತಿಯ ಕಾರಂಜಿ ಉಕ್ಕಿಸಬೇಕೆಂಬ
ಆಸೆ ಒಂದೇ ನನಗೆ
ಅದಕ್ಕಾಗೆ ಗೀಚುತ್ತೇನೆ
ಆಗೊಮ್ಮೆ ಈಗೊಮ್ಮೆ ಕವನ...

- HarshaHL

28 Apr 2017, 07:33 pm