Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಮ್ಮ

ಹೇಗೆ ವರ್ಣಿಸಲಿ ಅಮ್ಮಾ
ಜಗದೊಳೆಲ್ಲ ನಿನ್ನದೆ ಮಾಯೆ
ನೀ ಮುಕ್ಕೊಟಿ ದೇವರ ಛಾಯೆ

ನವ ಮಾಸ ಹೊತ್ತು ಕಂದನ
ಏಳು ಬೀಳಿನ ಜೀವನದಲ್ಲಿ
ಜಯವಾಗಲೆಂದು ಹರಸಿ ಭೂಮಿಗೆ ತಂದೆ

ಕಂದ ಅತ್ತಾಗ ಹೊತ್ತು
ಅಂಬರದ ಚಂದ್ರನ ತೋರಿ
ದೇವಲೋಕಕೂ ಮಿಗಿಲಾದ ಮಡಿಲಲಿ ಮಲಗಿಸಿದೆ

ದೇವ ದಾನವರಂದು
ಹಾಲ್ಗಡಲನು ಕಡೆದಾಗ ಅಮೃತ ದೊರೆಯಿತು
ನಾ ನಿನ್ನ ಉದರದಿಂದ ಹೊರ ಬಂದೊಡನೆ
ನಿನ್ನ ಎದೆಹಾಲೆಂಬ ಪಂಚಾಮೃತ ದೊರೆಯಿತು

ಅದೇನಿಹುದೆ ತಾಯಿ
ನಿನ್ನ ಕರೆವ ಪದದಲಿ
ಅಮ್ಮಾ ಎಂದೊಡನೆ ಮನ ಧನ್ಯಾ
ಜೀವದ ನರ ನಾಡಿಗಳಲೆಲ್ಲ
ನವ ಚೈತನ್ಯಾ

ಮೌನಿ
9739651101

- ಮೌನಿ

28 Apr 2017, 07:06 pm

ಮೊಟ್ಟೆಯಿಡುವ ಮೊಡವೆ

ಅವಳ ಚಹರೆಯಲ್ಲಿ ಮೊಡವೆ
ಮೊಟ್ಟೆಯಿಡುವಾಗ
ನಾಚಿಕೆ ಸೆರಗ ಸುತ್ತುತ್ತದೆ
ನನ್ನ ಕನಸುಗಳಿಗೆ ಜಾಮೀನು ರಹಿತ ಸಜೆ ಸಿಗುವುದು ಆವಾಗಲೇ

ಅರಶಿನ ಮುತ್ತುವ ಕೆನ್ನೆ ನನ್ನ
ಕುರುಚಲು ಗಡ್ಡವನ್ನು ಲೇವಡಿ ಮಾಡಲೆಂದೇ ಶೋಭಿಸುತ್ತದೆ
ಹುರಿ ಮೀಸೆ ಕಪ್ಪು ಹುಡುಗ
ಸುರುಮ ಹಚ್ಚುವ ಖಯಾಲಿ ಶುರು
ಮಾಡೋಕೆ ಕಾರಣ ಅವಳೇ

ಪ್ರಣಯದಾಟದಲ್ಲಿ ನಾನೆಂದೂ ಹಾವಾಗಿರಲು ಇಚ್ಚಿಸುತ್ತೇನೆ
ಅವಳೊಂದು ಏಣಿ ಏರಿದಂತೆ
ಇಳಿಸುತ್ತಾಳೆ
ಪುನಾಃ ಅಮಲು ಹತ್ತಿಸುವ ಉಮೇದಿನವಳು ಘಳಿಗೆಗೊಮ್ಮೆ
ಕಾಡುತ್ತಾಳೆ

ಎದೆಯೂರಿನ ಪರಿಚಾರಕಿ ಕಣ್ಣಾಲೆಲ್ಲಿ ಕಥೆ ಹೇಳುತ್ತಾಳೆ
ಮುಗಿಲ ಬಿಟ್ಟ ಉಲ್ಕೆ ನಾನು ಉದುರಬೇಕೆಂದಿರುವೆ ಅವಳೊಳಗೆ
ಅಂತಿಮ ಹಪಹಪಿಗೆ ಹಸಿರು ನಿಶಾನೆ
ಇನ್ನು ಸಿಗಬೇಕಷ್ಟೆ

ಅವಿಜ್ಞಾನಿ

- ಅವಿಜ್ಞಾನಿ

28 Apr 2017, 05:38 pm

ಚಿಂತಿಸದಿಡಿ

ಬರುವೆನೆಂದು ಹೇಳಿ ಹೋದವಳು ಬರಲಿಲ್ಲವೇಕೆ?
ನನ್ನ ಹೃದಯದಲ್ಲಿ ಮನೆಮಾಡಿಕೊಂಡಿದ್ದಳು
ಈಗ ನಾಪತ್ತೆ.
ಹೋಗಲಿ ಬಿಡಿ ನಮಗೇಕೆ ಅವಳ ಚಿಂತೆ
ಬರಿಯುವ ಒಂದು ಕವನವ
ಅವಳ ಕನವರಿಕೆಯಲ್ಲೇ
ನೀವು ರೋಧಿಸಬೇಡಿ
ಸಾಯುವ ಹೇಡಿ ನಾನಲ್ಲ ಬಿಡಿ
ಅವಳ ಕಾಡುವ ನೆನಪುಗಳನ್ನು
ಹಾಡು ಮಾಡಿ ಹೇಳುವ ಕವಿ
ನನ್ನೀ ಕವನವ ಕೇಳಿ ಮುಗುಳ್ನಕ್ಕನಂತೆ ರವಿ...

- HarshaHL

28 Apr 2017, 05:29 pm

ಎನ್ನಯ್ಯಾ

ನಿನ್ನ ಜ್ಞಾನದೊಳಗಿನ ದೇಗುಲದಲ್ಲಿ
ನನ್ನ ಅಜ್ಞಾನದ ಗವಿಯೊಳಗೆ
ಕತ್ತಲೆಯು ಕವಿದಿದೆಯಯ್ಯಾ
ನಿನ್ನ ಕರುಣಿಯ ಕಡಲೆಂಬ ಭಕ್ತಿಯನ್ನು
ಪಸರಿಸಿ ಸುಜ್ಞಾನವ ನೀಡಿ
ನನ್ನ ಪವಿತ್ರನನ್ನಾಗಿ ಮಾಡು ಎನ್ನಯ್ಯಾ ಬಸವಯ್ಯಾ

- gtr

28 Apr 2017, 02:56 pm

ಗುಲಾಬಿ ಹೂದೋಟ

ಗುಲಾಬಿ ಹೂದೋಟದ ಮಾಲಿಕ
ಗುಲಾಬಿಯ ನೋಡಿ ಆನಂದಿಸುತ್ತಾನೆ
ಕೈ ಕೆಸರು ಮಾಡಿಕೊಳ್ಳುವ ಮನಸ್ಸಿಲ್ಲ ಅವನಿಗೆ
ಗುಲಾಬಿ ಹೂದೋಟದ ಮಾಲಿ
ಗುಲಾಬಿ ಗಿಡಗಳಿಗೆ ನೀರು ಗೊಬ್ಬರ ಉನ್ನಿಸುತ್ತಾನೆ
ಗುಲಾಬಿಗೆ ಎಲ್ಲಿಲ್ಲದ ಪ್ರೀತಿ ಅವನೆಂದರೆ...

- HarshaHL

28 Apr 2017, 01:24 pm

ಕನಸುಗಳು ಕಳುವಾಗಿವೆ

ಕನಸುಗಳು ಕಳುವಾಗಿವೆ
ಕಣ್ ರೆಪ್ಪೆಯ ಕಣ್ತಪ್ಪಿಸಿ
ಕದ್ದೊಯ್ದವರು ಯಾರು?
ನಮ್ಮ ಕನಸುಗಳು ಕಳುವಾಗಿವೆ
ದೂರು ತೆಗೆದುಕೊಳ್ಳುವವರಾರು?

- HarshaHL

28 Apr 2017, 01:17 pm

@ರೋಧನೆ@

ಹೂವು ಅರಳುವಾಗ ಮರಕ್ಕೆ ಆನಂದ,
ಆದರೆ ಅದೇ ಹೂವು ಹಣ್ಣಾಗಿ ಉದುರುವಾಗ ರೋಧನೆ.

ಹೆಣ್ಣು ಮಗು ಉದರಿಸುವಾಗ ತಾಯಿಗೆ ಅತ್ಯಾನಂದ,
ಆದರೆ ಅದೇ ಮಗಳು ಬೇರೆ ಮನೆಗೆ ಹೋಗುವಾಗ ರೋಧನೆ.

ಮೂರು ದಿನ ಇದ್ದು ಹೋಗುವ ನೆಂಟರು ಬರುವಾಗ ಆನಂದ,
ಆದರೆ ಅದೇ ನೆಂಟರು ಮರಳಿ ಹೋಗುವಾಗ ರೋಧನೆ.

ಹಾಗಿದ್ದ ಮೇಲೆ......

ಅಪರಿಚಿತರಾಗಿ ಸೇರಿ,ನಲಿದು,ಮರೆಯಲಾಗದ ನೆನಪುಗಳ ಸರಮಾಲೆ ನೀಡಿದ ನೀವು ತೊರೆದು ಹೋಗುವಾಗ ಈ ರೋಧನೆಯಷ್ಟೇ ಸಾಕಾ ಗೆಳೆಯರೆ...........
..................ಶರಣು................

- sharanu

28 Apr 2017, 09:52 am

ಒಲವೇ

ಒಂದು ನಕ್ಷತ್ರವನ್ನು ತಂದು ಕೊಡು....
ಸಾವಿರ ಮುತ್ತುಗಳನ್ನು ಕೊಡುವೆ ಅಂದೆಯಲ್ಲ
ಗೆಳತಿ.......
?????
ಸಾವಿರ ನೆನಪುಗಳ ನಕ್ಷತ್ರಗಳನ್ನು ಭೊಗಸೆಯೊಡ್ದಿ
ಹಿಡಿದು ತಂದಿದೇನೆ ಬಾ ನೊಡು....
ನನ್ನ ಪ್ರೀತಿಯ ಹುಡುಗಿ ಎಲ್ಲಿರುವೆ ನೀ ಹೇಗಿರುವೆ
ನನ್ನ ಪ್ರೀತಿಯ ಹುಡುಗಿ ನೀ ಇರದೆ ನಾ
ನೋಂದಿರುವೆ
ಒಲವೇ ನೀನೆಲ್ಲಿರುವೇ

- Nagaraja A

28 Apr 2017, 09:29 am

ಕನಾಸೆ

ಕಂಗಳಲಿ ತುಂಬಿ ಕಡಲಾದ ಕನಸುಗಳ
ಹಂಚಲು ಹಿಡಿ ಬೊಗಸೆಯೇ ಸಾಕೆ ?
ಕಟ್ಟಿ ಕೆತ್ತಿದ ಕನಸುಗಳು
 ಕಳೆದು ಹೋದೀತು ಜೋಕೆ !!!

 ಆಗಸದಂತೆ ಹರಡಿದ ಆಸೆಗಳ
 ಅರಿಯಲು ತಿಳಿ ಮನವೊಂದೇ  ಸಾಕೆ ?
 ಅರಿವಿಲ್ಲದೆ ಅರಳಿದ ಆಮಿಷಗಳು
 ವಿಷವಾದೀತು ಜೋಕೆ !!!!

- Prabhath

28 Apr 2017, 08:49 am

ತಿಳಿದವರು ತಿಳುವಳಿಕೆಹೀನರಾದಾಗ

ಮರುಕೋತಿ ಮನುಜನಗೆ ಬಣ್ಣದುಂಬಿದ ಹಾಳೆಮೇಲೆ
ಜಾಸ್ತಿ ವ್ಯಾಮೋಹ
ಸುಟ್ಟೋಗೋ ಸುಡುಗಾಡು ಹಾಳೆ

ಜಾಸ್ತಿ ಕರುಣೆ ಮನುಷತ್ವನೆ ಕಳಚೊ ಖೇರಾ ಈ ಗುಲಾಬಿಹಾಳೆ ಹಾಳೆ ಹಾಳೆ ..
ಹಾಳೆ ಇಂದಾಚೆ ಸುಳ್ಳಿನ ಸರಮಾಲೆ
ನಂಬಿಕೆಯ ನಿರಲ್ಲಿ ಮುಳುಗಿಸುವಾಲೆ

ತಿಳಿದವನ ತಿಳುವಳಿಯ ತನುವ್ ತಿಳಿನೀರಾಗೆ ದಡ ಸೇರಿಸಿದಾ(ಹಾ)ಳೆ
ಮನುಜನ ನಿಜ ಕುಲವ್ ಕಟಕಟೇಗೆ
ನಿಲಸೋದೆ ಈ ಹಾಳೆ.
ನಿಯತ್ತಿಗೂ ನೀತಿಗೆಡಿಸೋದು ಈ ಹಾಳೆ .

ನಂಬಿದವನು ನಂಬದಿರುವಾಗೆ
ನಸಿಸೋ ನಾಲ್ಕುಮೂಲೆಯ ಹಾಳೆ..
ಒಟ್ನಲ್ಲಿ ಮನುಜನ ಮನುಷತ್ವವಹಿನ ಒಡಕಿನ ಒಡೆಯನೆ ಹಾಳೆ ಹಾಳೆ.......

ವಿಧಿ ಬರಹ ಕಾಲಿ ಹಾಳೆ

✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

28 Apr 2017, 04:02 am