ಪ್ರೀತಿ ಮಾಡುವ ಹೊತ್ತಿನಲ್ಲಿ
ದ್ವೇಷ ಕಾರುವಿರೇಕೆ?
ಸ್ನೇಹ ಹರಡುವ ಕಾಲದಲ್ಲಿ
ಕ್ರೋಧಗೊಲ್ಲುವಿರೇಕೆ?
ಗೋಡೆ ಉರಿಳಿಸುವ ಕಾಲದಲ್ಲಿ
ಮರಳಿ ಕಟ್ಟುವ ಪ್ರಯತ್ನವೇಕೆ?
ಪ್ರೇಮವ ನಾಟಿ ಮಾಡುವಾಗ
ಕಾಟಕೊಡುವಿರೇಕೆ?
ಟೀ ಎಂಬ ಅಮಲಿನಲ್ಲಿ ಎದ್ದೆ
ಬ್ರೇಕ್ಫಾಸ್ಟ್ ಎಂಬ ಆಹಾರದಲ್ಲಿ ಕುಂತೆ
ಆಫೀಸ್ ಅನ್ನೋ ಬೇಸರದಲಿ ತಯಾರಾದೆ
ಕೆಲಸ ಎಂಬ ಒತ್ತಡದಲ್ಲಿ ಬೇಸತ್ತೆ ಮಧ್ಯಾನದ ಊಟಕೆ ಹೋದೆ
ಆದ ಒತ್ತಡ ನೆನದು ಊಟವ ಮರೆತೇ
ಸಂಜೆಯೋಳು ಟೀ ಗೆ ಹೋದೆ ಅಲ್ಲಿ ಜನರ ಸರದಿ ನೋಡಿ ವಾಪಾಸ್ ಅದೇ
ರಾತ್ರಿ ಮನೆಗೆ ಹೋರಟೇ
ಆಗ ಎಲ್ಲವನ್ನು ಹೇಳಿತು ನನ್ನ ಕಣ್ಣ
ಹನೀ ಒಂದು ಅಳಬೇಡ ಕಷ್ಟ ಕ್ಕೆ
ಫಲ ಮುಂದೆ ಒಂದು ಸಿಗುತ್ತೆ ಎಂಬ ಭರವಸೆಯನು.
ನಾನು ಬಂದೇ ಸಮುದ್ರ ದ ಅಲೆಗಳ
ಹಾಗೆ ನಗು ನಗುತಾ
ಅದ್ರೆ ಮತ್ತೆ ವಾಪಾಸ್ ಹೋಗುವಾಗ
ನಿರಾಸೆ ಆಗಿ
ದುಃಖದ ಜೊತೆ ಕಲ್ಮಶ ಎಲ್ಲ ಹೋತು
ಓವೈದೇ
ಆಗ ಗೊತ್ತಾಯಿತು ನನಗೆ
ಖುಷಿ ಇಂದ ಅಳ್ಳುವುದು ಸುಲಭ
ಆದ್ರೆ
ದುಃಖ ಇಂದ ನಗು ವುದು ಕಷ್ಟವೆಂದು .
ಏರಿಳಿಯುತಿರುವೆ ನನ್ನ ಭಾವನೆಲಯೇ
ಒಮ್ಮೋಮ್ಮೆ ಸದ್ದಾಗಿ ದಡಕ್ಕೆ ಬಡಿಯುವೇ
ಮತ್ತೊಮ್ಮೆ ಮೌನದಿ ಹಿಂದೆ ಸರಿಯುವೇ
ತಣ್ಣನೆ ಗಾಳಿಯೇ ನಿನ್ನಯ ಮುದ್ದಿಗೆ
ನನ್ನ ಆಸೆಯ ಬಹುದೂರ ಹಾರಿಸಲೆ
ಇಲ್ಲದೆ ಉಸಿರೆಳೆದು ಎದೆಯೊಳಗೆ ಬಂದಿಸಲೆ
ಮುಳುಗುತಿರುವೆ ಒ ರವಿಯೇ
ನನ್ನ ಕಲ್ಪನೆಗೆ ಬಣ್ಣ ತುಂಬಿರುವೆ
ಮತ್ತೊಮ್ಮೆ ಬರುವೆಯೆಂದು ನಂಬಿರುವೆ
ಇರುಳು ಸರಿಯುವ ಮುನ್ನ.....
ನೆನಪಲ್ಲೇ ಬಂದು ನೆನಪಾಗುತ್ತೀಯ ನೀನು...........
ನೆನಪನ್ನೇ ಇನ್ನೂ ನೆನಪಾಗಿಸುತ್ತಿಯ ನೀನು..........
ನಿನ್ನ ಪ್ರತಿ ನೆನಪಲ್ಲಿ ಒಂದು ಮಾತು ಇರುತ್ತೆ............
ಆದರೆ ನನ್ನ ಪ್ರತಿ ಮಾತಲ್ಲಿ ನಿನ್ನ ನೆನಪಿರುತ್ತೆ..........