Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆತ್ಮಾವಲೋಕನ

ಗೆದ್ದವರ ನೋಡಿ
ಚಡಪಡಿಸುವೆ
ಗೆಲ್ಲಲಾಗದೆ ಕಣ್ಣೀರು
ಸುರಿಸುವೆ
ಸಾಕು ಮಾಡು ಮನವೆ!

ಅಡಿ ಮುಂದಿಡದೆ
ಅಂಬಾರಿ ಏರುವಾಸೆ
ಕಷ್ಟಪಡದೆ ಕನಸಿನ
ಕೋಟೆಯಲಿ ಮೆರೆಯುವಾಸೆ
ಎದ್ದೇಳು ಮನವೆ!

ಸಣ್ಣ ತೂತು ಸಾಕು
ಉರಿ ಶಮನಗೊಳ್ಳಲು
ದೊಡ್ಡ ಪ್ರಯತ್ನ ಬೇಕು
ಸಾಧನೆಯ ಶಿಖರವೇರಲು
ಮುನ್ನುಗ್ಗು ಮನವೆ!

ಕಾಣದ ಗುಡಿಯಲಿ
ಕಣ್ಮುಚ್ಚಿ ಕುಳಿತಿರುವೆ
ಕಣ್ಣೀರ ಕಡಲಲಿ
ನಮ್ಮೆಲ್ಲರ ತೇಲಿಸುವೆ
ಏನು, ನಿನ್ನ ಲೀಲೆ ವಿಧಿಯೆ!


ಶಾರಧ

- ಶಕುಂತಲಾ

18 Apr 2017, 02:51 pm

ಅವನ ಒಲವು

ಅವನ ಒಲವ ಸಿರಿಗೆ
ಸವಿ ಮಾತ ಪರಿಗೆ
ಮನಸೋತ ನಲ್ಲೆ ನಾನು!!

ಆ ನೀಳ ನಿಲುವ
ಹೊದ್ದಿರುವ ತನುವ
ಬಯಸಿಹುದು ನನ್ನ ಮನವು!!

ಕುಡಿ ನೋಟದಲ್ಲೇ ನಾ ಸೆಳೆವೆ ಅವನ
ಎಂದು ನುಡಿದ ನನ್ನ ಕಣ್ಣು
ನಾಚಿಹುದು ಅವನ ಕಂಡು!!

ಅವನೆದುರು ನಿಂದು
ಮೂಕಾಗಿ ಹೋದ
ಮಾತಿನ ಮಲ್ಲಿ ನಾನು!!

ತೆರೆದಿರುವ ಮನದ
ಈ ಖಾಲಿ ಪುಟದಿ
ಅವನ ಹೆಸರ ಬರೆದೆ ನಾನು!!

- ಪಿ.ಜಿ.ಜ್ಯೋತಿ

18 Apr 2017, 11:52 am

ಮಂಜಿನ ಶಿಲ್ಪ

ಕಲೆಗಾರನ ಕಲ್ಪನೆಯ ಕೆತ್ತನೆ
ಅಪರೂಪದ ಆ ಮಂಜಿನ ಶಿಲ್ಪ!!
ಚಂದ್ರನ ಚೂರೊಂದು ಭೂಮಿಗೆ
ಬಿದ್ದು ಜನಿಸಿದಂತೆ ಆ ಶಿಲ್ಪದ ರೂಪ!!

ಅಪೂರ್ವ ಸುಂದರಿಯಾದ
ಹೆಣ್ಣಿನ ರೂಪವು ಆ ಮಂಜಿನ ಶಿಲ್ಪ!!
ಪರ್ವತ ಶ್ರೇಣಿಯ ಮಡಿಲಲಿ
ಜನನವಾಯಿತು ಆ ಸುಂದರ ಶಿಲ್ಪ!!

ಕಲೆಗಾರ ಮನಸೋತನು ಆ
ಅಪರೂಪದ ಮಂಜಿನ ಚೆಲುವೆಗೆ!!
ಮನಸೋತು ಹಂಬಲಿಸಿ
ಬಯಸಿದನು ಅವಳ ಒಲವಿನ ಸಲಿಗೆ!!

ಕಣ್ಮುಚ್ಚಿ ಸಾವಿರ ಕಲ್ಪನೆಗಳ
ಹೆಣೆಯುತ್ತ ಆ ಕಲೆಗಾರ ಮೈಮರೆತ!!
ಕಣ್ತೆರೆದು ನೋಡಲು ಆ ಶಿಲ್ಪವು
ಕರಗಿ ನೀರಾಗಿ ಹರಿದಿತ್ತು ಅವನ ಸುತ್ತ!!

- ಪಿ.ಜಿ.ಜ್ಯೋತಿ

18 Apr 2017, 11:10 am

ಗೆಳೆಯ....

ಪ್ರತಿ ಉಸಿರು ಕಾಯುತಿದೆ‌
ನೀ ಬರುವ ದಾರಿಯ...
ನಿನ್ನ ಹೆಜ್ಜೆಯ ನೆರಳನ್ನು ಸೋಕಲು ಕಾಯುತಿದೆ
ಎಂದು ಬರುವೆಯೋ ಇನಿಯ...
ಚಿನ್ನಿ....

- chinmayi.....chinni

18 Apr 2017, 08:35 am

ಅಂದಗಾತಿ

ಅಂಗದಲ್ಲಿ ಅಡಗಿದೆ ಅಂದ
ಅಂದಗಾತಿ ನೀ ಬಲು ಚೆಂದ!!
ಕಂಡು ನಿನ್ನ ಈ ಬಿನ್ನಾಣ
ಶಿರ ಬಾಗಿತು ಹೂವಿನ ಬಾಣ!!

ಮನಸೋತನೇ ಆ ದೇವ ಮದನ
ಕಂಡು ನಿನ್ನಯ ಮೋಹಕ ವದನ!!
ನುಡಿಯಲು ನೀ ಮಾದಕ ನುಡಿಯ
ಸರಿಸಿದ ಆ ಸಾಗರ ತೆರೆಯ!!

ನಿನ್ನ ತನುವ ಬೆವರ ಅಳಿಸಲು
ಸುರಿದನು ಆ ಮೇಘ ಮಳೆಯನು!!
ನೆನೆದ ನಿನ್ನ ತೇವ ಕಳೆಯಲು
ಚೆಲ್ಲಿದ ಆ ಸೂರ್ಯ ಕಿರಣವ!!

ನಿನ್ನ ಕಂಡ ಇಂದ್ರ ಚಂದ್ರರು
ತಪವಗೈದರು ನಿನ್ನ ಪಡೆಯಲು!!
ನಿನ್ನ ತನುವನು ಒಮ್ಮೆ ಸೋಕಲು
ಹೊತ್ತು ಬಂದನು ವಾಯು ತಂಪನು!!

ನಿನ್ನ ಅಂದಕೆ ಸೋಲದೇ ಇರುವ
ಪುರುಷನಿಲ್ಲ ಚಂದ ಚೆಲುವೆಯೇ!!
ನನ್ನ ಕಾಡಿದ ಸ್ವಪ್ನ ಸುಂದರಿ
ಬೆಳಗ ಬಂದೆಯಾ ನನ್ನ ಬದುಕನು!!

- ಪಿ.ಜಿ.ಜ್ಯೋತಿ

18 Apr 2017, 08:10 am

ಸೋತು ಹೋಗುವೆ ಗೆಳತಿ....

ಯಾರಿಗೆ ಹೊಲಿಸಲಿ ಗೆಳತಿ ನಾ ನಿನ್ನನ್ನು..,
ಆಕಾಶವೆಂದರೆ ನೀ ನನ್ನಿಂದಾ ದೂರಗುವೆ,
ತಾರೆ ಎಂದರೆ ನನಗೆ ಸಿಗದೇ ಹೋಗುವೆ..,
ಮುತ್ತೆಂದರೆ ನೀರಲ್ಲಿ ಮುಳುಗಿ ಹೋಗುವೆ
ಕೊನೆಗೆ ಕೊನೆಗೆ ನಿನ್ನ ವರ್ಣಿಸಲು ನಾನೇ
ಸೋತು ಹೋಗುವೆ ಗೆಳತಿ....

- Kanakamurthi

18 Apr 2017, 07:35 am

(ಸವಿ ನೆನಪು)

ಸುರಿವ ಮಳೆಯಲ್ಲಿ ಕಳೆದ ದಿನಗಳ ಹರುಷ.....

ಮತ್ತೆ, ಮತ್ತೇ ನೆನಪಾಗುವುದು ಪ್ರತಿ ನಿಮಿಷ,ನಿಮಿಷ......

ಕೃಷ್ಣ .....

- krishna Billadi melbailu

18 Apr 2017, 07:28 am

ಕನಸು

ಕಪ್ಪು ಗಗನದ ಆಗಮನ
ನಿದ್ರಾದೇವಿಯ ಆಹ್ವಾನ
ನಿದ್ರದೇವಿಯ ಮಡಿಲೊಳಗೆ ಜಾರಿರಲು‌ ಸೋಪಾನ ಇಲ್ಲದಿದ್ದರೇನು
ಎಲ್ಲವು‌ ಸುಖದ ಸೋಂಪಾನ
ನಿನಗಾಗಿ ಕಾದಿಹುದು ಸಿಹಿಗನಸಿನ ಝೇಂಕಾರ
ನನಸಾಗದಿದ್ದರೇನು‌‌ ಕನಸು
ಕಟ್ಟು ಕನಸೊಳಗೊಂದು ಕನಸು
ನಾಳೆಗಿನ ಬದುಕಿಗಾಗಿ ಕನಸು
ಸುಖ ಸಂತೋಷ ನೆಮ್ಮದಿಯ ಕನಸು
ಕನಸೇ ನನಸೆಂದು ಬೀಗದಿರು
ಆ ಕನಸಲೇ ಕಾಲ ಕಳೆಯದಿರು
ಕನಸೊಂದೆ ಕಟ್ಟದು‌ ಬದುಕು
ಕನಸೇನಿದ್ದರು ನಾಳಿನ ಬದುಕಿಗೆ ಬೆಳಕು

- ಶ್ರೀಕಾವ್ಯ

17 Apr 2017, 09:24 pm

.... ಯಾರು ಉಸಿರು....

ನಾವು ಸುಮ್ನೆ ಹೇಳತಿವಿ...?
ಯಾರ ಯಾರಿಗೊ
ನಿನೇ ನನ್ನ ಉಸಿರು ಅಂಥ..!

ನಮ್ಗೆ ಗೊತ್ತಿಲ್ಲ ನಾವು
ಪ್ರತಿದಿನ ಉಸಿರು ಕೊಡೊ
ಎಷ್ಟೋ ಮರಗಿಡಗಳನ್ನ
ಕಡಿತಿವಿ ಅಂಥ.....!!!

.... ಪಿ ಅನಿ....

- ಪಿ ಅನಿ...

17 Apr 2017, 08:24 pm

ರಚ್ಚೆ -ರಗಳೆ....

ರಚ್ಚೆ ಹಿಡಿಯುವ ಮಗ
ಮಗುವಾಗಿದ್ದಾಗ..
ತಾಯಿಯ ನೋಟ
ತನ್ನತ್ತ ಸೆಳೆಯಲು....

ರಗಳೆ ಮಾಡುವಳು ತಾಯಿ
ವಯಸ್ಸಾದಾಗ..
ಮಗನ ನೋಟ
ತನ್ನತ್ತ ಸೆಳೆಯಲು....

ಈ ಎರಡರ ಅರ್ಥ
ಅರಿತ ಮಗ..
ಪರಿಸ್ಥಿತಿ ನಿಭಾಯಿಸುವನು
ಜಾಣನಾದಾಗ....

- KR Sreekamala

17 Apr 2017, 08:18 pm