Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಮ‌ಧುರ‌ ಕ್ಷ‌ಣ‌ಗ‌ಳು

ನಿನ್ನ‌ ಜೊತೆ ಕ‌ಳೆದ‌ ಆ ಸುಮ‌ಧುರ‌ ಕ್ಷ‌ಣ‌ಗ‌ಳು
ನ‌ನ್ನ‌ ಮುನ‌ಸ್ಸಿಗೆ ಮುದ‌ ನೀಡುತ್ತ‌ ಸ‌ದಾ ಉಲ್ಲ‌ಸಿತ‌ನಾಗಿರುಸುತ್ತ‌ವೆ.
ಮ‌ತ್ತೆ ನ‌ನ್ನ‌ ಜೊತೆ ಸ್ವ‌ಲ್ಪ‌ ಹೊತ್ತು ಇರುವ‌ ಹಾಗಿದ್ದಿದ್ದ‌ರೆ ಅಲ್ಲಿ ಕುಳಿತು ನಾವು ಹ‌ರ‌ಟೆ ಹೊಡೆಯಬ‌ಹುದಿತ್ತು ಮೊದ‌ಲಿನ‌ ಹಾಗೆ.
ನೀನು ನ‌ನ್ನ‌ ಜೀವ‌ನ‌ದ‌ ಸ್ಪೂರ್ತಿ ಸೆಲೆಯೆ ಆಗಿದ್ದೆ
ಮ‌ತ್ತು ಆಗಿರುತ್ತೀಯ‌.
ನಿಜ‌ ಹೇಳ‌ಲೇ ,ನೀನು ಯಾವಾಗ‌ಲು ನ‌ನ್ನ‌ ಹ‌ೃದ‌ಯ‌ದ‌ಲ್ಲಿರುತ್ತಿಯ‌ ಮ‌ತ್ತೆ ಸಿಗುವ‌ ತ‌ನ‌ಕ‌...
........ ಒಂದು ಅನುವಾದ‌.

- ಶಶಿಧರ ಹೆಚ್ ಎನ್

06 Apr 2017, 10:45 pm

ಅಂದು ಸಂಜೆ.......

ಅಂದು ‌ ಸಂಜೆ............................ .. ಅಂದು ಸಂಜೆ ಕ‌ಡುಗೆಂಪು ಬೆಳ‌ಕಿನ‌ಲಿ
ಅ ದಿಬ್ಬ‌ದ‌ ಮೇಲಿನ‌ ಒಂಟಿ ಮಾವಿನ‌ ಮ‌ರ‌ದ‌ ಕೆಳ‌ಗೆ ಕುಳಿತು ಯೋಚಿಸುತ್ತಿದ್ದೆ ಅವಳ ನೀರೀಕ್ಷೇಯ‌ಲಿ.
ತ‍ಂಗಾಳಿ ಬೀಸುತ್ತಿತ್ತು ಎಲ್ಲೆಡೆ ಚಿಗುರೋಡೆದಿತ್ತು ನ‌ನ್ನ‌ ಮ‌ನ‌ಸ್ಸು ಆರ‌ಳಿತ್ತು.
ನ‌ನ್ನ‌ ಮುಂದೆ ಹಾದು ಹೋಗುವ‌ ಕಾಲುದಾರಿಯನ್ನೆ ನೋಡುತ್ತಿದ್ದೆ ತ‌ದೇಕ‌ ಚಿತ್ತ‌ದಿಂದ‌.
ದೂರ‌ದಿಂದೊಂದು ಆಕಾರ‌ ಸ‌ಕಾರ‌ಗೊಳ್ಳುತ್ತ‌ ಬಂದು ನ‌ನ್ನೆದಿರು ನಿಂತಿತು ಆ ಹುಡುಗಿಯ‌ ರೂಪ‌ದ‌ಲಿ.
ನ‌ನ್ನ‌ನ್ನು ನಾನು ನಂಬ‌ದಾದೆ
ಹೃದ‌ಯ‌ ತ‌ಲ್ಲ‌ಣಿಸಿತ್ತು ತ‌ಳ‌ಮ‌ಳ‌ಗೊಂಡೆ
ಇರ‌ಲಿ ಎಂದು ಬಿಗಿದ‌ಪ್ಪಿ ಮುತ್ತು ಕೊಟ್ಟೆ
ಹಾಗೆಯೇ ಮಾಯ‌ವಾದ‌ಳು ಆ ಹುಡ‌ಗಿ. ಬೆಚ್ಚಿಬಿದ್ದು ಕೂಗಿ ಕ‌ರೆದೆ ಸುತ್ತೆಲ್ಲ‌ ಹುಡುಕಿದೆ
ಸಿಗ‌ಲ್ಲಿಲ್ಲ‌ ,ಕಾಣ‌ಸಲಿಲ್ಲ‌..
ಎಲ್ಲೆಲ್ಲೂ ಅನುರ‌ಣಿಸಿದಂತಾಯಿತು
"ನಾನು ನಿನ್ನ‌ ಕನ‌ಸ‌ಲಿ ಮ‌ನ‌ಸ‌ಲಿ ಮಾತ್ರ‌ ಇರುವೆ
ನಾನು ನಿನ್ನ‌ ನೆನ‌ಪ‌ಲಿ ನೆನಪಾಗಿ ಉಳಿವೆ
ನಾನು ತಿರುಗಿಬಾರ‌ದ‌ ನಾಡ‌ಲ್ಲಿರುವೆ".

- ಶಶಿಧರ ಹೆಚ್ ಎನ್

06 Apr 2017, 10:42 pm

ಪ್ರಿಯ

ಮುಂ ಬೆಳಗು ಕಣ್ಣಲ್ಲಿ ಮಲ್ಲಿಗೆ ಆರಳಲು. ಕಡಲ ಮುತ್ತುಗಳ ಮಾಲೆ ಕಟ್ಟಿ ಹಾಕುವೆನು ಕೊರಳಿಗೆ.
ನಿನ್ನಂದದ ಮೊಗದ ತುಂಬು ಕೆನ್ನೆಯ ಮೇಲಿನ
ಮುಂಗುರುಳ ಉರುಳು ಎದೆಯಲ್ಲಿ ತರಲು ಮರುಳು .
ಹಾರಿತ್ತ ಹಕ್ಕಿ ಚಿಮ್ಮಿ ಮುಗಿಲ್ಲೆತ್ತರಕೆ. ಸೋಕ್ಕಿತ್ತು ಜಿಗಿಯುವಿಕೆಯಲಿ. ಸಿಕ್ಕಿತ್ತು ಮುಕ್ತಿ ಪ್ರೀತಿಗೆ ಅದರಲ್ಲಿ. ಒಮ್ಮೆ ಬರಬಾರದೆ ಪ್ರಿಯಸಖಿ ಆ ತಿರುವಿನಲ್ಲಿ ನಿಂತು ಕಾಯುವೆನು ನಿನಗಾಗಿ.

- ಶಶಿಧರ ಹೆಚ್ ಎನ್

06 Apr 2017, 10:29 pm

ಕಪ್ಪು ಹುಡುಗನ ತುಟಿ

ಬೆಳದಿಂಗಳು ಕತ್ತಲ ನುಂಗುವಾಗ
ಕಪ್ಪು ಕೊಡೆಯ ಮಳೆಯ
ಮುತ್ತುತ್ತವೆ ನನ್ನೊಳಗಿನ
ಇಶ್ಕ್ ನ ರುಜುವಾತಿಸಲು
ಮುಂಗುರಳ ಸರಿಸಿ
ಮುತ್ತಿಟ್ಟದ್ದೇ ಆಗಿದೆ ಹುಡುಗಿ

ಜಡೆ ಮಳೆಗೆ ಪ್ರಣಯದ
ಬಿಸಿ ಏರಲು ನಿನ್ನ
ಸನಿಹ ಬೆಚ್ಚಗಿರಿಸುತ್ತದೆ
ವಯಸ್ಸಿನ ಏಕಾಂತವೂ ದೂರ
ನಿಲ್ಲುವುದೂ ಆಗಲೇ
ಅರ್ಧ ಚಂದ್ರಾಕೃತಿಯ ನೆತ್ತಿ
ಚುಂಬಿಸಲು ಕಪ್ಪು ಹುಡುಗನ
ತುಟಿ ಬೆಳ್ಳಗಾಗುತ್ತದೆ

ಖಾಲಿ ಬೆಂಚು ವಿರಹ
ಗಾನ ಹಾಡುತಿದೆ ಟಾರು
ರೋಡು ಮಳೆಗೆ ಬೆವರಿ ಮುದುಡಿದೆ
ಗಿಡಪೊದೆಯಲ್ಲಿ ಕಾಡ ಹೂವು
ಸದ್ದಿಲ್ಲದೇ ಬಿರಿದು ವಯಸ್ಸಿಗೆ
ಬಂದಿದೆ..

-ಹಲ್ಕಟ್

ಅವಿಜ್ಞಾನಿ

- ಅವಿಜ್ಞಾನಿ

06 Apr 2017, 10:11 pm

ಪರಮ ರಹಸ್ಯ

ಆಕಸ್ಮಾತ್ ನಿನ್ನೊಳಗೆ ಅನಾವಶ್ಯಕ
ನೆನಪೊಂದು ಹುಟ್ಟಿಕೊಂಡರೆ
ನನ್ನ ದೂಷಿಸದೇ ಕಳೆದ ಕಾಲವ
ಮೆಲ್ಲ ಮೆಲುಕು ಹಾಕು ಕಾಡ ಹೂವು ಮುಡಿದ
ಜಡೆಯ ನೀಳ ಮೂಡಿಯೊಂದು ಈಗಲೂ ನಾ
ತೊಟ್ಟ ಬಟ್ಟೆಗೆ ಸಿಕ್ಕಿಕೊಂಡಿದ್ದು ನೀ ಅರಿಯದ ರಹಸ್ಯ

ಗಿಡಗಂಟಿ ಮೆಟ್ಟಿ ಕೀಳುವಾಗ ಸೋರಿದ ರಕ್ತಕ್ಕೆ
ನಾ ಹೇಳಿದ ನೆಪ ಕಿವಿ ಮೇಲಿಟ್ಟ ಹೂವೆಂದ ನೀ
ತಿರುಗಿ ನನಗೆ ಕೊಟ್ಟು ಹೋದದ್ದು
ಶ್ವಾಸಿಸುತ್ತಿರುವ ಘಮಕ್ಕೂ ವ್ಯತ್ಯಾಸ ತಿಳಿಯದಂತೀಗ

ಇನಿಯನ ಜತೆಯಾಗಿ ಕಾಡ ದಾರಿ ಬರುವಾಗ
ನಮ್ಮ ಹೆಜ್ಜೆ ಜಾಡುಗಳ ಒರೆಸುತ್ತಿರು
ಒಂದೊಮ್ಮೆ ಕೂಗಿದ ಹೆಸರು ಬಂಡೆ ಅಂಚಲಿ
ಕೇಳುತ್ತದೆ ನನಗೆ ಅದೂ ನೀ ತಿಳಿಯದ ಪರಮ ವಿಪರ್ಯಾಸ

ಯಾರೋ ಬಿತ್ತಿಟ್ಟ ಬೀಜದೊಳಗಿಂದ
ಮೊಳಕೆ ಒಡೆದ ಚಿಗುರಿನೊಳಗೆ
ಪರಾಗ ಸ್ಪರ್ಶದ ಕ್ರಿಯೆಗೆ ಚಾಲ್ತಿ ಮಾಡಿದ್ದಾದರೂ ನೀ ಹೇಳದೇ ಬಿಟ್ಟು ಹೋದ ಕಠಿಣ ಸತ್ಯ
ನಿನ್ನೆ ನಾಳೆಗಳ ಲೆಕ್ಕ ತಪ್ಪಿದ ಅಲೆಗಳ
ನಡುವೊಂದು ಮೌನ ಹುಟ್ಟೋದು
ಅರ್ಥವಿಲ್ಲದೇ ಕಣ್ಮರೆಯಾಗಿಬಿಡಲಿ

-ಹಲ್ಕಾ ಕವಿತೆ

ಅವಿಜ್ಞಾನಿ

- ಅವಿಜ್ಞಾನಿ

06 Apr 2017, 10:10 pm

ಬಿಳಿ ಹಾಳೆ

ನನ್ನ ಮನಸೆನೆಂಬ ಬಿಳಿ
ಹಾಳೆಯನ್ನು ನಿನ್ನ ಕೈಯಲ್ಲಿ
ಕೊಟ್ಟಿರುವೆ .

ನನ್ನ ನಗೆಯೆಂಬ ಸೊಗಸಾದ
ಪದಗಳಿಂದ ಅದನ್ನು ತುಂಬು
ನಿನ್ನ ಪ್ರೀತಿಯ ಲೇಖನದಿಂದ.

- ಚುಕ್ಕಿ

06 Apr 2017, 09:52 pm

ಕರೆಯೋಲೆ

ಉಸಿರಲ್ಲಿ ಬೆರೆತೊದ ಈ ಮಳೆಯ ಸದ್ದು,
ನಾನು ಇರುವೆನೆಂದು ಹಾಗಾಗೆ ಬರುವ
ಆ ಸಿಡಿಲು ಮುದ್ದು...................!!!

ನನ್ನೆಲ್ಲಿ ಬಿಟ್ಟರೆಂದು ಮರೆಯಾಗದ ಮಿಂಚು
ನಿನ್ನ ಹುಡುಕಿ ಬರುತಿವೇ ಇಲ್ಲಿಂದ ಅಲ್ಲಿಗೆ

ಬಂದಾಗ ನೋಡು ಇವರಲ್ಲಿ ನನ್ನ ಕರೆಯೋಲೆ ಕಳಿಸಿರುವೆ ನಿನಗಾಗಿ ಚಿನ್ನ..........!!!

- ಚುಕ್ಕಿ

06 Apr 2017, 09:37 pm

ನೀನು ನನಗೆ

ನೀನು ನನ್ನ ನೆರಳಾಗಿ ಪರಿಚಯವಾದೆ .....
ನನ್ನ ನೋವನ್ನು ನಿನ್ನ ಕಣ್ಣೀರಲ್ಲಿ
ಹಂಚಿಕೊಂಡೇ ..............
ನಿನ್ನ ನಗುವಿನ ಹಾಗೆ ನನ್ನ ನಗಿಸಿದೆ

ನಾನು ಹೇಳಲಾರೆ ನೀನು ನನ್ನ
ಜೀವನದಲ್ಲಿ ಎಷ್ಟು ಮುಖ್ಯವೆಂದು
ಆದರೆ ಒಂದು ಮಾತ್ರ ತಿಳಿಸಬಲ್ಲೆ
ನೀನಿಲ್ಲದ ನನ್ನ ಜೀವನ ಉಸಿರಿಲ್ಲದೆ
ಬದುಕುವ ಮನಸಿನ ಹಾಗೆ...........

- ಚುಕ್ಕಿ

06 Apr 2017, 08:58 pm

ನಗು

ಪ್ರೀತಿಯ ಎಲ್ಲ ಅದ್ಭುತಗಳನ್ನು
ಒಂದೇ ಕವಿತೆಯಲ್ಲಿ ಸೆರೆ ಹಿಡಿಯೋಣವೆಂದು
ಬರೆಯುತ್ತಾ ಕುಳಿತೆ
ಈ ಇಬ್ಬರು ತಂದ ತಲೆನೋವಿನಿಂದ
ಮೌನದ ಕಗ್ಗತ್ತಲ ಕಾಡಿನಲ್ಲಿ ಬಾವಪೂರ್ಣ
ಅರ್ಥಪೂರ್ಣ ಶಬ್ದಗಳನ್ನ ಹುಡಕದಾದೆ.
ಅಕ್ಷರ ಕಾಣದ ಖಾಲಿ ಹಾಳೆಗಳು ಮೆಲ್ಲನೆ
ತೂರಿ ಬಂದ ಗಾಳಿಗೆ ಹಾರಾಡುತ್ತಾ ಹಾಡಾಗುತ್ತ
ಗುನುಗುಡುತ್ತಾ ಕಿವಿಯಲ್ಲಿ ಮಾತಾದವು
ಮನದ ಸಂವೇದನೆಗಳಿಗೆ ,
ನೆಮ್ಮದಿ ತಂದಿತ್ತು ಶೂನ್ಯ.
ಹೊರಗಡೆ ಹೋಗಿ ತಂಗಾಳಿಗೆ
ಮೈ ಒಡ್ಡಿ ಮೆತ್ತನೆ ಹುಲ್ಲು ಹಾಸಿಗೆ ಒರಗಿ
ಮೇಲೆ ದಿಟ್ಟಿಸಿದೆ
ಕೋಟಿ ಕೋಟಿ ನಕ್ಷತ್ರಗಳು
ಉಲ್ಲಾಸದಿಂದ ನಸು ನಕ್ಕಂತಾಯಿತು .

- ಶಶಿಧರ ಹೆಚ್ ಎನ್

06 Apr 2017, 08:27 pm

ಕಡಲು

ಕ‌ಡ‌ಲ‌ ಒಡ‌ಲೆಲ್ಲ‌ ವಿಷ‌ವೇ ತುಂಬಿಹಿದು
ಪ್ರೀತೀಯ‌ ಅಮೃತ‌ವೆಲ್ಲಿಂದ‌ ತ‌ರ‌ಲಿ?
ಮ‌ನ‌ದ‌ ಬೇಗುದಿಯ‌ ಪ್ರ‌ಶ್ನೆಗೆ
ಉತ್ತ‌ರ‌ ಎಲ್ಲೆಂದು‌ ಹುಡ‌ಕ‌ಲಿ?
ನಿನ್ನ‌ದೇ ಪ್ರ‌ಶ್ನೆಗೆ ನೀನೆ ಉತ್ತ‌ರ‌
ನ‌ನ್ನ‌ದೇನಿದ್ದ‌ರು ಮೌನ‌ ನಿರಂತ‌ರ‌.


- ಶಶಿಧರ ಹೆಚ್ ಎನ್

06 Apr 2017, 08:15 pm