Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದಯದ ಸಂಗಾತಿ

ಹಣೆಯ ಮೇಲೆ ಮುತ್ತಿಟ್ಟು ಮೋದಲ ಬಾರಿ ತಿಳಿಸಲೇ ರೇಖಾ ಹುಟ್ಟು ಹಬ್ಬದ ಶುಭಾಶಯಗಳೆಂದು .......

ಹೇಗೆ ಬಣ್ಣಿಸಲಿ ನನ್ನೆದೆಯಾಳದ ಪ್ರೀತಿಯನ್ನ ಬಚ್ಚಿಡಲಾಗುತ್ತಿಲ್ಲ ನಿನ್ನೆದುರು ನನ್ನ ಪ್ರೀತಿಯನ್ನ......

ಒಂದು ಬಾರೀ ಅಪ್ಪಿ ಬಿಡಲೇನು ನಿನ್ನ ಮನಸಲ್ಲೀನ ಪ್ರೀತಿ ಕಾಣಲು ಬಿಸಿ ಉಸಿರ ತಾಪದಲ್ಲಿ ......

ನಿನ್ನ ಆ ನೋಟ ನನ್ನನ್ನೇ ನುಂಗಿ ಮುದ್ದಿಸುತ್ತಿತ್ತು, ಉಸಿರಿಗೆ ಜೀವವಾಗಿ ನಿನ್ನ ಉಸಿರು ನಿಂತಿತು ನನ್ನಲ್ಲಿ.......

ಕಣ್ಣಂಚಿನಲ್ಲಿ ಕುಳಿತ ಪ್ರೀತಿ ಕೈ ರೇಖೆಯಲ್ಲಿ ಬೆರೆತು ನಿನ್ನ ಸ್ಪರ್ಶಿಸಲು ಕಾಯುತಿಹುದು ಓ ನನ್ನ ಒಲವೇ......

ನನ್ನ ತೋಳ್ಬಲದಲ್ಲಿ ನಿನ್ನ ಬಿಗಿದಪ್ಪಿ ನನ್ನ ಹೃದಯದ ಪ್ರೀತಿಯನ್ನು ನಿನ್ನ ಹೃದಯಕ್ಕೇ ತಿಳಿಸುವೇ......

ಕರಗಿ ಹೋಗದಿರು ನನ್ನ ಪ್ರೀತಿಯ ಮಳೆಯಲಿ ಜೀವಿಸುತ್ತಿರು ನನ್ನ ಹ್ರುದಯದ ಅರಮನೇಯಲಿ ಎಂದಿಗೂ ನನ್ನಲ್ಲಿ ಉಸಿರಾಗಿ ಸಂಗಾತಿ..........

ನಿನ್ನ ಸಿಹಿ ಮುತ್ತಿನ ಮತ್ತಲ್ಲೆ ನಿನ್ನ ನೇನೆದು ನನ್ನ ಕನಸಿನ ರೆಪ್ಪೆಯಾಗಿ ನೀನಿರಲೂ ನನ್ನ ಜೀವವೇ ಸುಂದರ......

ನಿನ್ನ ಬಲಗಾಲ ಮೇಲೆ ಮುತ್ತಿಟ್ಟು ,ಎಡಗಾಲ
ಕಿರು ಬೆರಳಿಗೊOದು ಚುಕ್ಕಿಯನಿಟ್ಟು ದ್ರುಷ್ಟಿ ತೆಗೆಯಳೆ ಮುದ್ದು ಗೆಳತಿ .........

ಪ್ರತಿದಿನ ನನ್ನ ಪ್ರೀತಿಯ ನಿನಗೆ ತಿಳಿಸದೇ ಇರಬಹುದು .
ಆದರೇ ನನ್ನ ಮಾತಲ್ಲೂ ,ಮನಸಲ್ಲೂ ನೀನೆ
ಕನಸಲ್ಲೂ, ಕಣ್ಣಲ್ಲೂ ನೀನೆ ನನ್ನಲ್ಲೂ ನೀನೇ ...................

- ಚುಕ್ಕಿ

18 Mar 2017, 06:54 pm

ಪ್ರೀತಿಯ ಉಡುಗೊರೆ::;

ಪ್ರತಿಯೊಂದು ನಿಜವಾದ
"ಪ್ರೀತಿಗೆ"
ದೇವರು ಕೊಡೊ ಉಡುಗೊರೆ
"ಕಣ್ಣೀರು"
*RS*

- *RS*

18 Mar 2017, 06:24 pm

ಸ್ನೇಹದ ಗಿಡ,

ಜೀವನ ಅನ್ನೋದು ಒಂದು "ಬಳ್ಳಿ"
ನಗುವೇ ಅದರ "ಹೂವು"
ಕಷ್ಟವೇ ಅದರ "ಮುಳ್ಳು"
ಪ್ರೀತಿಯೇ ಅದರ "ಪರಿಮಳ"
ಆ ಪರಿಮಳವೇ "ಸ್ನೇಹ"
*RS*

- *RS*

18 Mar 2017, 06:06 pm

ಕಾರಣ

ಕಾರಣ ಇಲ್ಲದೇನೆ ಕೆಲವರು "ಇಷ್ಟ ಆಗ್ತಾರೆ"
ಕಾರಣ ಹೇಳದೇನೆ ಕೆಲವರು "ದೂರ ಆಗ್ತಾರೆ"
ಪ್ರೀತಿ ಮಾಡೋದಕ್ಕೆ ಕಾರಣ 'ಇರಲ್ಲ'
ದೂರ ಆಗೋದಕ್ಕೆ ಕಾರಣ 'ಇರಲ್ವಾ'?
*RS*

- *RS*

18 Mar 2017, 05:52 pm

#ಪ್ರೀತಿ #

ಮನದಾಳದ ಮಾತೇ 'ಪ್ರೀತಿ'
ಮೌನದ ಆಳವೇ 'ಪ್ರೀತಿ'
ವಿಶ್ವಾಸದ ಮರವೇ 'ಪ್ರೀತಿ'
ಸ್ನೇಹದ ಹೂವೇ 'ಪ್ರೀತಿ'
ಮರೆಯದ ನೆನಪೇ 'ಪ್ರೀತಿ'
ಸುಂದರ ಕವನವೇ 'ಪ್ರೀತಿ'
ದಡವಿಲ್ಲದ ಸಮುದ್ರವೇ 'ಪ್ರೀತಿ'
ಮುಗಿಯದ ಕಥೆಯೇ 'ಪ್ರೀತಿ'

"ಪ್ರೀತಿ ಪ್ರೀತಿಗಾಗಿ ಪ್ರೀತಿಸುತ್ತದೆ
ಪ್ರೀತಿಗೆ ಪ್ರೀತಿಯು ಪ್ರೀತಿಸುತ್ತದೆ
ಪ್ರೀತಿಗೆ ಪ್ರೀತಿಸೋ ಪ್ರೀತಿ ಪ್ರೀತಿಯು ಪ್ರೀತಿಯನ್ನು ಪ್ರೀತಿಸುತ್ತೆ"
*RS*

- *RS*

18 Mar 2017, 05:38 pm

ಹಿಂತಿರುಗಿ ಬಾ ನೀನು

ಪ್ರೀತಿಯ ಮೇಣದ ಬತ್ತಿ ಕರಗುವ ಮುನ್ನ
ಮುಗಿಲ ಹೆಗಲ ಏರಿ ಕುಳಿತೆ ನೀನು!!
ನನ್ನ ಕಣ್ಣೀರಿನ ಹನಿ ಹುಡುಕುತ್ತಿದೆ ನಿನ್ನ
ಮುಗಿಲಿಂದ ಜಾರಿ ಒಮ್ಮೆ ಎದಿರು ಬಾ ಸಾಕು!!

ಬರಡಾಗುತ್ತ‌ಲಿ ಇರುವ ಈ ಬದುಕಿನಲ್ಲಿ
ಮತ್ತೊಮ್ಮೆ ನೀ ಬಲಗಾಲಿಟ್ಟು ಒಳಗೆ ಬಾ!!
ಹಿಂದೆ ಆಗಿರುವ ತಪ್ಪು ಮತ್ತೆಂದೂ ಆಗದೆಂದು
ಭರವಸೆಯ ನೀಡಿ ನಿನ್ನ ಬರಮಾಡುತ್ತೇನೆ!!

ಮುಂಜಾವಿನ ಇಬ್ಬನಿಯಂತೆ ನೀ ಬಾ
ಬರದಿದ್ದರೆ ಸಂಜೆಯಲಿ ತುಂತುರುವಾಗಿ ಬಾ!!
ಮರುಭೂಮಿಯಲ್ಲಿ ನೀರಿನ ಹನಿಗಾಗಿ
ಅಲೆಯುತ್ತಿರುವ ಬದುಕಲ್ಲಿ ಹನಿ ನೀರಾಗು ಬಾ!!

ಚಳಿಯೇ ಇರದೇ ನನ್ನಲ್ಲಿ ಏಕೆ ಈ ನಡುಕ
ನೀನು ಇರದೇ ನಾ ಒಬ್ಬಂಟಿ ಈ ಬದುಕು ನರಕ!!
ಎದೆಯ ವಳಗೆ ಏಕಾಂತದ ಅಳಲು ಸಾಕು
ಸಂಗಾತಿ ನೀ ದಯಮಾಡಿ ಹಿಂತಿರಿಗಿ ಬಾ ಸಾಕು!!

- ಪಿ.ಜಿ.ಜ್ಯೋತಿ

18 Mar 2017, 11:26 am

ಕವಿಗಾರ ನಾನಲ್ಲ...,

'ಕಲೆಗಾರ ನಾನಲ್ಲ'
'ಕವಿಗಾರ ನಾನಲ್ಲ'
'ಭಾವನೆಗಳೊಂದಿಗೆ ಬದುಕುತ್ತಿರುವುದನ್ನು ಬಿಟ್ಟು ಬೇರೇನು ಗೋತ್ತಿಲ್ಲ'
'ಆಸ್ತಿಯೂ ನನಗಿಲ್ಲ'
'ಆಸೆಯೂ ನನಗಿಲ್ಲ'
*ನಿಮ್ಮ ಸ್ನೇಹ - ಪ್ರೀತಿ ಬಿಟ್ಟು
ಬೇರೇನು ಬೇಕಿಲ್ಲ*:
(RS)

- *RS*

18 Mar 2017, 06:58 am

ಈಗಿನ ಹುಡುಗಿಯರು

ಈಗಿನ
ಕಾಲದ ಹುಡುಗಿಯರ
ಬಗ್ಗೆ ಬಣ್ಣಿಸಲು
ನಿಂತರೆ ಬಿಳಿ
ಹಾಳೆಯು ವಣಗಿ
ಲೇಖನಿ ಇಕ್ಕುವ
ಮುನ್ನವೇ
ಪದ ಕಿಚ್ಚು ಹತ್ತಿ
ಹಾಳ್ಗಚ್ಚಿಗೆ
ಬುದಿಯು ಸಿಕ್ಕದಾಗಿತು,,,

ಹುಡುಗಿಯರ
ಹಿಂದೆ ಬಿದ್ದಾ
ಮನಸು
ನಿಲ ನಕನದ
ಮರು ಭೂಮಿಯಲ್ಲಿ
ಮೌನ ಪದಗಳೊಂದಿಗೆ
ಬಿಕ್ಕಳಿಸಿ
ಅತ್ತತ್ತು ಸೊರಗಿತು,,,,,


ಪ್ರವೀಣ್ ಯಾದವ್

- ಪ್ರವೀಣ್ ಯಾದವ್

17 Mar 2017, 11:24 pm

ಹುಡುಕಲೇ ...........

ಏನನ್ನೊ ಕಳೆದುಕೊOಡ ಭಾವನೆ ನನ್ನಲಿ.
ಅನಿಸುತ್ತಿದೆ ನನ್ನನ್ನೇ ನಾ ನಿನ್ನಲ್ಲಿ
ಕಳೆದುಕೊOಡೆನಾ ಎಂದು .

ಹುಡುಕಲೇ ನನ್ನನ್ನು ನಾ ನಿನ್ನ
ಉಸಿರಲ್ಲಿ ....ಸಿಗಬಹುದೇನೊ
ನನ್ನ ಬಿOಬವಾದರೂ ನಿನ್ನ ಕಣ್ಣಲ್ಲಿ .

ಯಾರಿಗೆ ಗೊತ್ತು ನೀನೇ ನನ್ನ
ನಿನ್ನ ಹ್ರುದಯದಲ್ಲಿ ಬಚ್ಚಿಟ್ಟು
ನಗುತಿರುವೆಯೆನೊ ..........******

- ಚುಕ್ಕಿ

17 Mar 2017, 08:55 pm

ಬರಹ ರಾಗ

ಮನಸಿನ ತುಂಬ ನೀನೇ ನೀನೇ
ಗೀಚಿದೆ ಪ್ರೀತಿಯ ಬರಹದ ಸಾಲು!!
ಹೃದಯದ ತುಂಬಾ ನೀನೇ ನೀನೇ
ನುಡಿಸಿದೆ ಪ್ರೀತಿಯ ರಾಗದ ಹಾಡು!!

ಗೀಚಿದ ಆ ಸಾಲಿಗೆ
ಬೆರೆಯಿತು ಈ ರಾಗ!!
ಹಾಡಿದ ಆ ಹಾಡಿಗೆ
ಮಿಡಿಯಿತು ಅನುರಾಗ!!

ಇಂದು ನಿನ್ನ ಸೇರೋ
ಬಯಕೆಯಿಂದ ಬರೆದ ಸಾಲು!!
ನಿನ್ನ ವಿನಹ ಬೇರೆ ಇಲ್ಲ
ಎಂದೂ ನುಡಿದ ರಾಗ!!

ನಿನ್ನ ಹೆಸರು ಗೀಚಿ
ಕಲ್ಪನೆಗಳ ಬರೆದು ನುಡಿದಮೇಲೆ
ಆಗಿ ಹೋಯ್ತು ಬರಹ
ಸ್ವರದಿ ಬೆರೆತು ಪ್ರೇಮ ರಾಗ!!

- ಪಿ.ಜಿ.ಜ್ಯೋತಿ

17 Mar 2017, 06:34 pm