Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸು ಮನಸಿನಾ ಬೆಸುಗೆ...

ಬರೆಯಲು ಕುಳಿತಿರುವೆ ಕವನವೊಂದು
ನಿನ್ನ ನೆನಸಿ ಬರೆಯಲು
ಪದಗಳ ಸಾಲು ಸಾಲದು
ಏನೆಂದು ಬರೆಯಲಿ,
ಕನವರಿಸಿ ನಾ ಕೊರಗುತಿರುವೆ,
ನನ್ನಿಂದ ನೀ ಇರುವೆ ದೂರ
ನಾ ಬಯಸಿದರೆ ಸನಿಹ ನಿನ್ನ...
ಕ್ಷಣದಲಿ ಬರುವೆ ನೀ
ನನ್ನ ಕಣ್ಣ ಹನಿಗಳಾಲಿ..
ಹಗಲಾದರೆನು ಇರುಳಾದರೆನು
ನಿನ್ನ ನೆನಪುಗಳಿಗೆ ಕೊನೆಯಿಲ್ಲ
ನಿನ್ನ ಕನಸುಗಳಿಗೆ ಬರವಿಲ್ಲ
ಮನಸು ಮನಸಿನಾ ಬೆಸುಗೆಗೆ 
ಮೌನದ ಮಾತಗಳೆಲ್ಲ
ಕಣ್ಣ ಹನಿಗಳಾಗಿ ಜಾರಿ ಮೌನದಲಿ
ನಿನ್ನ ನೆನಪಿಸುತಿದೆ ಈ ಹೃದಯ
ಮನದಲ್ಲಿ ನೆನಪಿನಾ, ಪುಟಗಳನು
ಬಚ್ಚಿಡಲಾಗದೆ ಬಚ್ಚಿಟ್ಟ ಮಾತುಗಳು
ನನಗೆ ಅರಿವಿಲ್ಲದೆ ಪದಗಳಲ್ಲಿ
ಬೆರತು ಕವನವಾಗಿ, ಮತ್ತೆ ನೀ ಬಂದೆ
ಮನಸಿನ ಪುಟಗಳನು ತೆರೆದಿಡಲು...!!!

- Pb

16 Mar 2017, 08:01 pm

ಕನ್ನಡತಿ

ಕನ್ನಡತಿ ನನ್ನೊಡತಿ
ನೀ ಮೀಟುವ ಈ ಪ್ರೀತಿ
ಏಳೇಳು ಜನುಮಕೂ
ನನ್ನ ಬಾಳಿನ ಸಂಗಾತಿ||ಪ||

ನೀನಿರುವ ತನಕ
ನನ್ನಲಿ ಈ ಪ್ರೀತಿಯ ತವಕ|
ನಿನ್ನಯ ಶರಣ ಲೋಕಕ
ಆನಂದವೇ ಮನಕ||೧||

ಕನ್ನಡ ಭಾಷೆ
ನಮ್ಮಯ ಹೃದಯದ ಘೋಷ|
ನೀ ಸೂಸುವ ಈ ಪರಿಮಳ
ನಮ್ಮಯ ಮನದಲಿ ತಳಮಳ||೨||

ವಂದನೆ ನಿನಗೆ
ನೀ ಸಂತೋಷ ತರು ನಮಗೆ|
ಜನ್ಮ-ಜನ್ಮ ಎನಗೆ
ನೀಡು ನಿನ್ನ ಸೇವೆಗೆ||೩||

ಹಾಡುವೆ ಹಾಡೊಂದನ್ನು
ಕನ್ನಡ ನುಡಿಯಲ್ಲಿ|
ನಾ ಕುಣಿದಾಡುವೆ
ನಿನ್ನಯ ಸೇವೆಯು ನಾ ಮಾಡುವೆ||೪||

ಕುವೆಂಪುರಿಂದ ಪುಳಕಿತ ನೀ
ವಿಶ್ವೇಶ್ವರಯ್ಯರಿಂದ ಧನ್ಯವಿ ನೀ|
ಮುಡುಪಾಗಿಡುವೆ ಈ ಜೀವನ
ಮಾಡು ನನ್ನಯ ಬಾಳನು ಪಾವನ||೫||

ನಾಡಿಗೆ ನಾನು ಬೆಳಕಾಗುವೆ
ನಿನ್ನಯ ಸೇವೆಯು ನಾ ಮಾಡುವೆ|
ತೋರು ನೀ ಎನಗೆ ಮಾರ್ಗವ
ನಾ ಚರಿತ್ರೆಯ ಪುಟದಿ ಮೆರೆವ ||೬||

ಕವಿಗಳು ಬರೆದ ಕವಿತೆಯ ಸಾಲು
ನೀ ನನ್ನ ಬಾಳಲಿ ಇರುವೆ ಬಹುಪಾಲು |
ಕವಿ ಕೋಗಿಲೆಗಳು ಹಾಡಿದವು
ಕನ್ನಡ ನೆಲದಲಿ ಕುಣಿದಾಡಿದವು ||೭||

ನಿನ್ನಯ ಶರಣಕೆ
ಶ್ರಮಿಸುವೆನು ನಾನೆಂದಿಗೂ |
ನೀಡು ಬಾ ಅನುಗ್ರಹ
ನೀ ಧೈರ್ಯವ ನನ್ನಲಿ ತುಂಬು ಬಾ||೮||

ಕನ್ನಡಕ್ಕಾಗಿಯೇ ಈ ಜನುಮ
ಕನ್ನಡವೇ ನಮ್ಮಮ್ಮ|
ಕನ್ನಡ ನುಡಿಯೇ ನಾ ಹಾಡುವ ಹಾಡು
ಹಾಡುವೆನು ನನ್ನಯ ಮನ ತುಂಬಾ||೯||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Mar 2017, 06:59 pm

ಚೆಲುವೆಯ ಹಗಲು

ಚೆಲುವೆ ನಿನ್ನನು ಕಂಡ ಮೇಲೆ
ಸೂರ್ಯ ಭೂಮಿಗೆ ಬಂದ ಬಾಲೆ!!
ಹೊನ್ನಿನ ಬೆಳಕ ಮಾಲೆ
ನಿನ್ನ ಸುತ್ತಲು ದಿನವೂ ಹಗಲೇ!!

ಕಳೆಯಲು ಬಾಳ ಇರುಳ
ತಾ ಸುರಿದನು ಹೊನ್ನ ಕಿರಣ!!
ನಗುತಿರೆ ನೀನು ದಿನವು
ಈ ಹಗಲಲೂ ಬಣ್ಣದ ಒಲವು!!

ನಿನ್ನ ಗೆಜ್ಜೆಯ ದನಿಯ ಕೇಳಿ
ತಾ ನಾಚಿ ಕರಗಿದ ಮೇಘ!!
ನಿನ್ನ ಹೆಜ್ಜೆಯ ಗುರುತ ಮೋಡಿ
ಕಾಮನ ಬಿಲ್ಲ ಮೇಲೆ!!

ನಿನ್ನ ಅಂದವ ಕಂಡು ಕರಗಿ
ಆ ಚಂದ್ರನು ಬರದೇ ಹೋದ!!
ಇರುಳೇ ಇರದ ಬದುಕು
ನಿನದೆಂದು ಹರಸಿ ಹೋದ!!

- ಪಿ.ಜಿ.ಜ್ಯೋತಿ

16 Mar 2017, 05:19 pm

ಎಲೆ ಮರೆಯ ಹೂವು

ಎಲೆ ಮರೆಯಲಿ‌ ಹೂವು ಅಡಗಿರುವಂತೆ
ಅದು ಯಾರ ಕಣ್ಣಿಗೂ ಕಾಣದಂತೆ
ತನ್ನ ಕಂಪಿನ ಗಂಧ ಬೀರುವಂತೆ!!

ಮನದ ಮರೆಯಲಿ ನೀ ಅಡಗಿ ಕುಂತೆ!!
ಅದು ಯಾರ ಕಣ್ಣಗೂ ಕಾಣದಂತೆ
ಅದರ ಜೊತೆಯಲಿ ಕನಸುಗಳ ಕಂತೆ!!

ಹೃದಯದ ಊರಲಿ ಪ್ರೀತಿಯ ಸಂತೆ
ಅದ ನೋಡಲು ನೀ ಎದಿರುಬಂದು ನಿಂತೆ
ಸ್ವಾಗತಿಸಿತು ಹೃದಯ ಒಳಗೆ ಬರುವಂತೆ!!

ಹಗಲಲ್ಲೂ ಇರುಳಲ್ಲೂ ನಿನ್ನಯ ಚಿಂತೆ
ಕಾದಿರುಳು ಕಳೆದಿರಲು ಕನಸು ಕರಗಿದಂತೆ
ನಿನ್ನಿಂದ ದೂರಾದ ನಾ ಒಬ್ಬಂಟಿಯಂತೆ!!

ನೀ ಇರದೇ ಬದುಕಲ್ಲಿ ಏಕಾಂತ ಬಂತೆ
ಮನದಲ್ಲಿ ಪ್ರಶ್ನೆಗಳ ಸಾಲು ಮೂಡಿರುವಂತೆ
ಮನವು ಆಯಿತು ಎಲೆ ಮರೆಯ ಹೂವಿನಂತೆ!!

- ಪಿ.ಜಿ.ಜ್ಯೋತಿ

16 Mar 2017, 04:53 pm

ಓ ಮಳೆಯೇ

ಓ ಮಳೆಯೇ ಇಳಿದು ಬಾ ಭುವಿಗೆ
ಭೂಮಿಗೆ ಬಂದು ಅವತರಿಸಿ ಸದಾ ಹರಿಸು ಜೇನಿನಾ ಹೊಳೆ.
ಓ ಮಳೆಯೇ.........

ನೆಲದೊಳಗೆ ನೇಗಿಲಯೋಗಿಯ ಕಣ್ಣೊಳಗೆ
ಬಿತ್ತಿದ ಕನಸು ಸಾವಿರಾರು
ಕೇಳದೇ ಈ ಪ್ರಾರ್ಥನೆ ನೊಂದ ಮನದಾ ಯಾಚನೆ ಇನ್ನು ಏಕೀ ಶೋಧನೆ
ಓ ಮಳೆಯೇ.........

ಒಡಲೊಳಗೆ ಹಸಿವಿನ ಮಡಿಲೊಳಗೆ ಕಣ್ಮುಚ್ಚಿದ ಕಂದನಾ ಕಣ್ತಿರೆಸುವೆಯಾ
ಕಾರ್ಮುಗಿಲಿನ ನಡುವೆ ಕೇಳಲಿ ಗುಡುಗಿನ ಗಾನ, ತುಂಬಿಹರಿಯಲೀ ಜೀವಸೆಲೆ
ಓ ಮಳೆಯೇ........

ಮಣ್ಣೊಳಗೆ ಅನ್ನವನುಬೆಳೆಸಿ ಹಸಿದ ಜೀವಸಂಕುಲವಾ ತಣಿಸಲಿ
ಸಾಲು ಗಿಡಗಳನಡುವೆ ಸಾಗಲಿ ಕೋಗಿಲೆ ಕವನ, ಸಂತಸ ಚಿಮ್ಮಲಿ ಬಾನಿಗೆ
ಓ ಮಳೆಯೇ.........

ಹಂಸಿನಿ

- ವಿಸ್ಮಯ

16 Mar 2017, 04:28 pm

ಬಡವನಾದರೆ ಏನು ಪ್ರಿಯೆ

ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ

ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ

ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
ರೆಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ

ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು ತೋಳುಬಂಧಿ ತೊಡಿಸುವೆ

ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ

- basavarajsirnayakpreethu

16 Mar 2017, 04:07 pm

ಬದುಕಿಸೊ ಬದುಕು ಅವಳಾಗತ್ತಾಳಾ -----------------/---/--

ಬದುಕು ಗೊತ್ತಿಲ್ಲದ ಈ ಫಕಿರನಿಗೆ
ಬದುಕಿನ ಬವಣೇಯಲಿ ಬದುಕಾಗಿ ಬರುತಾಳಾ?

ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲು 
ಜೊತೆಯಾಗಿ ಬರುತ್ತಾಳಾ?

ಬದುಕೇ ಬೆಡೆನಿಸಿದಾಗ ಬಂದವಳೇ ನನ್ನವಳು
ಆ ಕ್ಷಣದಿಂದ ಬದುಕು ಬೇಕೆನಿಸಿದೆ.
ಬದುಕಿಸೋ ಬದುಕು ಅವಳಾಗತ್ತಾಳಾ?

ಬದುಕಿನ ಪಯಣದಲ್ಲಿ ಜೊತೆಯಾಗಿ 
ಪಯಣಿಸೂತ್ತಾಳಾ?

ಬದುಕಿದ್ದು ಸತ್ತ ಹಾಗೆ ಇರೋ ಬದುಕಿಗೆ 
ಬದುಕಿಸೋ ಬದುಕಾಗಿ ಬರುತ್ತಾಳಾ?

ಬದುಕಿನ ಹೃದಯವೆಂಬ ಗಡಿಯಾರದಲ್ಲಿ
ಪ್ರತಿ ಸೆಕೆಂಡು,ನಿಮಿಷ,ಗಂಟೆಯಲು
ನನ್ನ ಬದುಕಿನ ಗಡಿಯಾರ ಅವಳಾಗತ್ತಾಳಾ?

ಬದುಕಿನ ಆಸೆಗಳ ಸರಮಾಲೆಯಲ್ಲಿ
ಆ ಆಸೆಯ ತುಂಬಾ ತುಂಬಾ 
ಜೀವ ತುಂಬಿಸೋ ಜೀವಂತ ಸರಮಾಲೆ 
ಅವಳಾಗತ್ತಾಳಾ?

ಬದುಕಿನ ದಡದಲ್ಲಿ ಅಲೆಗಳ ಜೊತೆ 
ಅಲೆಮಾರಿಯಂತೆ  ಅಲೆದಾಡುವ ಅಲೆಮಾರಿಗೆ 
ಕೈ ಹಿಡಿದು ಅಲೆಯುವ ಸಂಗಾತಿಯಾಗತ್ತಾಳಾ?

- ಪ್ರದೀಪ.ಮ.ಪಾಡಮುಖೆ

16 Mar 2017, 12:50 pm

ಮಳೆಯ ಬಗ್ಗೆ....

" ಈ ಮಳೆಗೆ ಏನೋ ಸೆಳೆತ ಇದೆ "
"ಅದೇನೆಂದು ತಿಳಿಯಲು ಹೋದರೆ......
"ಒಮ್ಮೇಲೆ ನೆನಪಾಗುತ್ತವೆ
ನಿನ್ನ ಸಾವಿರಾರು ನೆನಪುಗಳು !!
ಆ ನೆನಪುಗಳಲ್ಲಿ ನಿನ್ನ ನೆನಪೇ ಪ್ರಥಮ..
ನಿನ್ನ ನೆನಪುಗಳೆ ಅಂತಿಮ....................... Feel my Love...
ಅನು...

- Anu...

16 Mar 2017, 09:11 am

ಓ ಸೌಂದರ್ಯ ಮಾಲಿಕೆ

ನಿನ್ನ ಕಾಲ್ಗೆಜ್ಜೆಯ ತಾಳಕೆ ನನ್ನ ಕವಿತೆಯ
ಸಾಲುಗಳೆ ಮಂಕಾಗಿವೆ

ನಿನ್ನ ನಗುವಿನ ಹೂದೋಟದಲ್ಲಿ
ನನ್ನ ಮಾತುಗಳೆ ದುಂಬಿಗಳಾಗಿವೆ

ನಿನ್ನ ಬಳಕು ವಯ್ಯಾರದ ನಡುಗೆಗೆ
ನಾಟ್ಯ ಮಯೂರಿ ನರ್ತನವೆ ಬೆರಗಾಗಿದೆ

ನಿನ್ನ ಸೌಂದರ್ಯ ಲಹರಿಯ ಸೊಬಗಿನಲ್ಲಿ
ಸ್ವರ್ಗವೆ ಕಣ್ಣೆದುರು ಬಂದಂತಾಗಿದೆ

ನಿನ್ನ ಸಿಹಿಯಾದ ಮಾತಿಗೆ ನನ್ನ ಹೃದಯವೆ
ಸೋತು ಸೊರಗಿ ಶರಣಾಗಿದೆ...

- Irayya Mathad

15 Mar 2017, 09:23 pm

ಹೊತ್ತಿಲ್ಲದ ಸಮಯದಲಿ....

ಹೊತ್ತಿಲ್ಲದ ಸಮಯದಲಿ....
ಗೊತ್ತಾಗದ ವೇಳೆಯಲಿ....
ದುತ್ತೆಂದು ಸುರಿಯುವಲೀ !
ಏನಾನಂದವೋ ನಮಗಿಲ್ಲೀ !!
ಏನು ಚಂದವೋ ಬಾನಿನಲ್ಲೀ !!

ಅಡಗಿರುವ ಧೂಳಿನಲ್ಲೀ...
ಎಲ್ಲಿಲ್ಲದಾ ಕಳೆ ....
ಕಟ್ಟುವನು ಛತ್ರಿರಾಯನು !
ಅವನ ಕರೆದೊಯ್ಯುವುದು ...
ಹರುಷದಾ ಆಟವದು ...

ಓಣಿಯಲೀ ಹರಿಯುತಿಹ...
ನೀರಿನ ಕಾಲುವೆಯಲ್ಲೀ...
ಇಳಿಬಿಟ್ಟಿಹ ದೋಣಿಗಳ -
ಸಾಲು..ತೇಲುತಿವೆ..ಮುಳುಗುತಿವೆ..
ಮಕ್ಕಳ ಚೆಲ್ಲಾಟದಲೀ !!

ಪಳಪಳನೆ ಹೊಳೆಯುವ...
ಮಿಂಚಿನಾ ನೋಟವು !
ಒಮ್ಮೊಮ್ಮೆ ಹೆದರಿಸುವಾ ...
ಸಿಡಿಲಿನಾ ಆರ್ಭಟವು !
ಆಚೀಚೆ ತೊಯ್ದ ಬಟ್ಟೆಯಲೀ..

ಚಳಿಚಳಿ ಎಂದೆನುತಲೀ...
ಮೊಣಕಾಲ ನೀರಿನಲ್ಲಿ...
ಕೆಸರಲ್ಲಿ ನಡೆಯುತಲೀ...
ಗೆಳೆಯರ ಜೊತೆ ಹರಟುತಲೀ...
ತೂತಾದ ಕೊಡೆಯಿಂದ ಬಿದ್ದ...

ಹನಿಗಳಿಂದ- ಚುಮುಚುಮು..
ಎನಿಸುವ ಕೆನ್ನೆಗಳ ಸುಖಾನುಭವಗಳ..
ಚಿತ್ರ....ಕಣ್ಮುಂದೆ ಬಂದರೇ....
ಆಹಾ!! ಜಗವೆಲ್ಲಾ ವಿಸ್ಮಯಾ !!
ಮೈಮರೆಸುವಾ ಆನಂದಮಯಾ !!

ಅನು....

- Anu...

15 Mar 2017, 07:57 pm