Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಂಗವೆಲ್ಲ ನಷ್ಟವಾಗುವ ಮುನ್ನ

ಕಣ್ಣುಗಳು ಹಿಂಗಿವ ಮುನ್ನ
ಬೆನ್ನು ಬಾಗಿವ ಮುನ್ನ
ಕೈ ಕಾಲು ಬಿದ್ದು ಹೋಗುವ ಮುನ್ನ
ನೆನಪು ಅರುವು ಮರೆವು ಹಿಡಿವ ಮುನ್ನ
ಚರ್ಮ ಸುಕ್ಕುಗಟ್ಟಿವ ಮುನ್ನ
ಅಂಗವೆಲ್ಲ ನಷ್ಟವಾಗಿ ಅಂತ್ಯದೆಡೆಗೆ ಸಾಗುವ ಮುನ್ನ
ಒಮ್ಮೆಯಾದರೂ ನೆನೆ
ಗುರು ಬಸವ ಪ್ರಿಯ ರೇವಣಸಿದ್ದೇಶ್ವರರನ್ನ, ಅವರೊಬ್ಬರೇ ಮುಕ್ತಿಯ ದಾರಿ ತೋರಿಸುವರು ನೋಡಾ!.

ಕೃಪೆ:ಎಲ್ಲ ಶರಣರು.

- Siddugouda

13 Feb 2020, 01:38 pm

ನಾನವಳಲ್ಲ

ನೀ ನನ್ನ ನೋಡಿ ಮುಗುಳ್ನಕ್ಕೂ...
ಮುಖದಲ್ಲಿ ಮಂದಹಾಸವ ಬೀರಿ...
ನನ್ನ ಮನದಲ್ಲಿ ನಿನ್ನ ಒಲವ ಹರಿಸಿ...
ನಾ ನಿನ್ನ ಬಳಿ ಬಂದು...
ಒಲವ ತಿಳಿಸಬೇಕೆನ್ನುವಷ್ಟರಲ್ಲಿ ನಾನವಳಲ್ಲ ಎಂದು ದೂರ ಸರಿದವಳಲ್ಲವೇ ನೀ...✍️ಮಲ್ಲ....

- Mallesh

13 Feb 2020, 11:42 am

ಅಡಕತ್ತರಿಯಲ್ಲಿ ಸಿಲುಕಿಕೊಂಡಿತು

ಅಡಕತ್ತರಿಯಲ್ಲಿ ಸಿಲುಕಿಕೊಂಡಿತು
ಅಲೆಮಾರಿಯ ಈ ಹೃದಯ!!
ಯಾಮಾರಿ ಮೋಸ ಹೂಯಿತು
ಬಡಪಾಯಿಯ ಈ ಹೃದಯ!!

ಹರೆಯದಲಿ ಅರಳಿದ ಒಲವೊಂದು
ಘಮಿಸುತಲೇ ವಿಷವ ಉಣಿಸಿತು!!
ಮಂತ್ರಮುಗ್ಧನಂತೆ ನಾ ಬಂದೆ
ಮಾಯದ ಹೂವಿಗೆ ಮನಸೋತು!!

ಕತ್ತಲೆ ಕಾಡಿನಲಿ ಕಣ್ಣಿಗೆ ಬಟ್ಟೆ ಕಟ್ಟಿ
ಒಬ್ಬಂಟಿ ಮಾಡಿ ಹೋದೆ ಯಾಕಾಗಿ ನೀ!!
ಎತ್ತ ಓಡಿದರೂನೂ ದಾರಿಯೇ ಕಾಣದು
ಮುತ್ತಿದೆ ಬರೀ ಕತ್ತಲು ನನ್ನ ಸುತ್ತಲೂ!!

ಉರುಲು ಇಲ್ಲದೇ ಕೊರಳು ಬಿಯಾಗಿದೆ
ಕಂಠ ಹರಿದು ಅಳಬೇಕು ಧನಿ ಬಾರದು!!
ಕಂಬನಿಯೇ ವರವಾದ ನನ್ನಯ ಕಣ್ಣಿಗೆ
ಕಾಣುವ ಲೋಕವೆಲ್ಲ ಮಂಜಾಗಿದೆ!!

ಸೂಜಿಗೊಂದು ದಾರವಂತೆ
ಕೂಡಿ ಹೊಲಿಯುವ ಆಟವಂತೆ!!
ನನ್ನ ನಿನ್ನನು ಒಂದು ಮಾಡಿ ಬೆಸೆಯುವ
ಬಂಧವು ಎಲ್ಲೋ ಮರೆಯಾಗಿದೆ!!

- ಪಿ.ಜಿ.ಜ್ಯೋತಿ

13 Feb 2020, 11:41 am

ನಿನ್ನನು ನೋಡುವ ಆಸೆ ಹೊತ್ತ ಕಣ್ಣಲಿ

ನಿನ್ನನು ನೋಡುವ
ಆಸೆ ಹೊತ್ತ ಕಣ್ಣಲಿ
ಬೇರೆ ಜಗವನು
ನಾ ಹೇಗೆ ಕಾಣಲಿ!!
ಎದೆಯ ಗುಡಿಯ
ಒಳಗೆ ನಲ್ಲ ನಿನ್ನನು
ಹೊರತು ಪಡಿಸಿ ನಾ
ಬೇರೆ ದೈವವ ಕಾಣೆನು!!

ಸುಮ್ಮನೆ ಇದ್ದರೂ
ನಿನ್ನದೆ ಯೋಚನೆ
ಕಾಣುವ ಕನಸದು
ಕಾಯದು ಇರುಳನು!!
ಆಗೊಮ್ಮೆ ಈಗೊಮ್ಮೆ
ತುಟಿಯಲ್ಲಿ ನಗು ಚಿಮ್ಮಿ
ನೀ ಬರುವೆ ನೆನಪಾಗಿ
ಹಗಲಿರುಳು ನನಗಾಗಿ!!

ಕಾಯುತ್ತ ನಾ ಇರುವೆ
ಕಾಡಲೆಂದೇ ನೀ ಬರುವೆ
ಕಣ್ಣೆದಿರು ಬಣ್ಣ ಬಣ್ಣ
ಬದುಕಲ್ಲಿ ನೂರು ಬಣ್ಣ!!
ಮುಗಿಲ ಎತ್ತರಕ್ಕೂ
ಮಿಗಿಲಾದ ಒಲವು
ಮಡಿಯುವ ಮುನ್ನ
ನೀ ಸಿಗಲು ಗೆಲುವು!!

ಆ ಚುಕ್ಕಿ ತಾರೆಯು
ಆ ಬಾನ ಏರಿದೆ
ನೀ ನನ್ನ ತಾರೆಯು
ನನ್ನ ಬಾಳ ಏರು ಬಾ!!
ನಿನ್ನಯ ತೋಳಲಿ
ನಾ ಪುಟ್ಟ ಮಗುವಾಗಿ
ಜಗ ಮರೆತು ಇರಬೇಕು
ಸದಾ ಹಾಯಾಗಿ!!

- ಪಿ.ಜಿ.ಜ್ಯೋತಿ

13 Feb 2020, 11:27 am

ಮನಸು-ಕನಸು

ಮರೆಯಲಾರೆ
ಅಮ್ಮನ
ಕೊನೆಯ ಮುತ್ತು
ನನ್ನವಳ
ಮೊದಲ ಮುತ್ತು,
ಅಮ್ಮನ ಮುತ್ತಿನಲಿ
ನಿಸ್ವಾರ್ಥ ಮನಸಿತ್ತು.!
ಇವಳ ಮುತ್ತಿನಲಿ
ನೂರಾರು ಕನಸಿತ್ತು.!
- ಸಿದ್ದು ಕನ್ನಡಿಗ

ಹ್ಯಾಪಿ ಕಿಸ್ ಡೇ..

- - ಸಿದ್ದು ಕನ್ನಡಿಗ

13 Feb 2020, 09:54 am

ಹ್ಯಾಪಿ ಕಿಸ್ ಡೇ...

ಪ್ರಿಯೇ..
ನೀ ತುಟಿಗೆ ಬಣ್ಣ
ಹಚ್ಚಿದರೇ ಏನು..!
ಅದ ಅಳಿಸಿ
ಕಚ್ಚದಿರುವೆನೇ ನಾನು.!

- - ಸಿದ್ದು ಕನ್ನಡಿಗ

13 Feb 2020, 09:38 am

ನೀ ಮರಿಯಬೇಡ...

ನೂರಾರು ಹುಡುಗರ ಮಧ್ಯ ನಡುವೆ
ನಿನ್ನ ನೋಡಿ ನನ್ನ ಮನ ಸೋತಿತು
ನೀ ಸೇರಿದೆ ನನ್ನ ಪುಟ್ಟು
ಹೃದಯವೆಂಬ ಅರಮನೆಯ ಮಡಿಲು.....

ನನ್ನ ಕಣ್ಣುಗಳಲ್ಲೂ,ಮನಸ್ಸಲ್ಲೂ,
ಅವನ ಆ ನೋಟದೆ ಧ್ಯಾನ
ಅವನ ಆ ನಗು ನಂಗೆ ದೇವ್ರು ಕೊಟ್ಟ ವರದಾನ
ಅವನೇ ನನ್ನ ಮನದ ಸಾಹುಕಾರ....

ಎಷ್ಟುಂತಾ ನಾ ಹೇಳುತ್ತಾ
ಹೋಗಲ್ಲಿ ಅವನ ಗುಣಗಳ.
ಅವನು ಒಳಿಯದೆ ಹೋದರೆ
ಅಗೋದ್ಯಾಗೆ ನನ್ನ ಪ್ರೀತಿ ಪಾವನ...

ಹೇ ಗೆಳಯನೇ
ನೀ ಯಾಕ್ ಈಗೆ ಸತಾಯಿಸುವೆ
ನಿನಗಾಗಿ ಕಾಯುತ್ತಿದೆ
ಇಲ್ಲೊಂದು ಪುಟ್ಟ ಮನಸ್ಸುವೆಂಬುವುದನ್ನ
ನೀ ಮರೆಯಬೇಡ....

- Ajay

12 Feb 2020, 10:39 pm

ಹೆಣ್ಣೆಂದರೆ...

ಜರಿಯಬೇಡಿರಿ ನನ್ನ ಹೆಣ್ಣೆಂದು,
ಸಮಾಜದಿ ನಾನು ಹುಣ್ಣೆಂದು..!

ನಿನ್ನ ಹೆತ್ತವಳು ಹೆಣ್ಣು
ಹೊತ್ತವಳೂ ಹೆಣ್ಣು
ಅಷ್ಟೇ ಏಕೆ...
ಹುತ್ತು ಬಿತ್ತು ಬದುಕಲು
ತಿನ್ನುವ ಅನ್ನ ಅದೂ ಹೆಣ್ಣು..!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!

ನಿಮ್ಮ ಬೆನ್ನಿಗೆ ಹುಟ್ಟಿದ
ಸಹೋದರಿಯು ಹೆಣ್ಣು,
ನಿಮ್ಮ ಬೆನ್ನ ತಟ್ಟುವ
ಅರ್ಧಾಂಗಿಯು ಹೆಣ್ಣು,
ನಿನ್ನ ರಕುತವನೇ
ಹಂಚಿಕೊಂಡ ಮಗಳೂ ಹೆಣ್ಣು...!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!

ಸೌಂದರ್ಯವತಿ ಪಕೃತಿಯನೇ
ಹೋಲಿಸಿರುವಿರಿ ಹೆಣ್ಣಿಗೆ,
ಲಕ್ಮೀ-ಸರಸ್ವತಿಯರೆಂಬ ಹೆಣ್ಣೆ
ಒಡತಿಯರೆಂದು ಬಣ್ಣಿಸಿರುವಿರಿ
ಧನ-ಕನಕ-ವಿದ್ಯೆಗೆ,
ಅಷ್ಟೇ ಏಕೆ..
ಭರತಖಂಡದ ಮೂಲಪುರುಷ
ಭರತ ಮಹಾರಾಜನು
ಆದರೂ ಪೂಜಿಪಿರಿ ಹೆಣ್ಣಾದ
ಭರತಮಾತೆಯೆಂಬ ಹೆಸರಿಗೆ..!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Feb 2020, 08:35 pm

"ಶೋಧ"

ಬದುಕಬೇಕೆಂಬ ಮಾನವ
ಆಸೆಗೆಕೆ ಮಾಡುವೆ ಸಜೀವ ಸಮಾದಿ !
ಹೋರಾಡಲು ಬಿಡು ಜೀವನದ ಕಣಕ್ಕೆ
ಹೋರಾಡಲಿ ಬಡಿದಾಡಲಿ
ಬದುಕಿನಾಳವ ತಿಳಿಯಲಿ
ಕಾಲ ಅನುಭವಗಳ ತಿಳಿದು
ಬದುಕಿನ ನಗ್ನತೆಯನ್ನರಿತು
ಅನುಭವ ಶಿಲ್ಪಿಯಾಗಲಿ !!

-ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 07:25 pm

ಪ್ರತಿ ಬಾರಿ ಸೋತ ಹೃದಯ ಸುಮ್ಮನಾಗಿದೆ

ಪ್ರತಿ ಬಾರಿ ಸೋತ ಹೃದಯ
ಸುಮ್ಮನಾಗಿದೆ....
ಮನಸ್ಸಿನ ಪ್ರತಿ ನೋವುಗಳ ಮೌನ
ತಾಳಿದೆ....
ಹೃದಯದಲ್ಲಿ ಅವಳ ಪ್ರೀತಿ
ಅಚ್ಚೆಯಂತೆ ಉಳಿದಿದೆ....
ಕಣ್ಣೆರಡು ಮೋಸ ಹೋಗಿವೆ......
ಕನಸುಗಳು ಮಾಸುತ್ತಿವೆ.. ....
ದಿಕ್ಕು ತೋಚದಾಗಿದೆ ಬದುಕು.....

✍️ನಿಮ್ಮ ಪವನ

- Pavankumar Honawad

12 Feb 2020, 05:41 pm