Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನದ ಅಂಗಳ

ಕವನದ ಅಂಗಳ
ನಿನ್ನಯ ಈ ಕಂಗಳು!!
ನಿನ್ನನು ನಾ ನೋಡಿದ
ಆ ದಿನವೇ ಬೆಳದಿಂಗಳು!!

ನಕ್ಷತ್ರದ ಊರಿನಿಂದ
ನೀ ಭುಮಿಗೆ ಜಾರಿ ಬಂದೆ!!
ಅಂಗೈಯ ಬೊಗಸೆ ತುಂಬ
ಒಲವನ್ನು ತುಂಬಿ ತಂದೆ!!

ಹೂದೋಟದಲ್ಲಿ ನೀ ಅರಳಿ
ಸೌಗಂಧ ಸೂಸಿ ನಿಂತಿರುವೆ!!
ನನ್ನೆದೆಯ ಮಿಡಿತ ನೀನಾಗಿ
ನವ ರಾಗವನು ಮೀಟಿರುವೆ!!

ಸಾಗರದ ಅಲೆಗೆ ಮುತ್ತಿಟ್ಟು
ಚಿಪ್ಪಲ್ಲಿ ಅವಿತು ನಕ್ಕಿರುವೆ!!
ಪರ್ವತದ ಶಿರವ ನೀ ಏರಿ
ಆಗಸಕೆ ಕೈ ಚಾಚಿರುವೆ!!

ಒಲವೆಂಬ ಮಳೆಯ ಸುರಿಸಿ
ನೆನೆದಾಗ ನಡುಕವೆ ಚೆಲುವೆ!!
ಬಿಸಿ ಅಪ್ಪುಗೆಗೆ ಇದೆ ಒಪ್ಪಿಗೆ
ಎದೆಯಾಳ ಸೇರಿಕೋ ಒಲವೇ!!

- ಪಿ.ಜಿ.ಜ್ಯೋತಿ

02 Feb 2020, 11:38 am

ಮನಸೇ....

ಪ್ರೀತಿಯ ಗಾಳಿಯೇ ಬೀಸದ ಹೃದಯಕ್ಕೆ ಇಂದು ಒಲವಿನ ಗಾಳಿ ಬೀಸಿದೆ...
ಮನಸು ಅರಿವಿಲ್ಲದೆ ಅವಳೆಡೆಗೆ ಜಾರಿದೆ...
ಅವಳ ಮುಂಗುರುಳ ನೋಡಿದ ಕ್ಷಣದಿಂದ ಮನಸು ಹಿಡಿತಕ್ಕೆ ಸಿಗದೇ ಓಡುತಿದೆ...
ಅವಳು ಕೊಟ್ಟ ಆ ಒಂದು ಮುಗುಳುನಗೆ ನನ್ನ ಬೆಂಬಿಡದೆ ಕಾಡುತಿದೆ...
ಮನಸೇ... ನಿನಗೇಕೆ ಇಷ್ಟೊಂದು ಹಠ ನನಗೆ ತಿಳಿಯದಾಗಿದೆ... ಅಂದರೆ...ಮನಸೇ... ನಿನಗೆ ಪ್ರೇಮಾಂಕುರವಾಗಿದೆ... ✍️ಮಲ್ಲ...

- Mallesh

01 Feb 2020, 06:39 pm

ಬಚ್ಚಿಟ್ಟ ಪ್ರೀತಿ (ಕವಿತೆ)

ಬಚ್ಚಿಟ್ಟ ಪ್ರೀತಿ
------------------

ನಿನ್ನ ಮೌನ , ನನಗೆ ಎಲ್ಲವನ್ನೂ ಹೇಳುತ್ತಿದೆ,
ರೇಶ್ಮೆಯ ಹುಳು ತನ್ನ ಮೈಸುತ್ತಿಕೊಂಡಂತೆ
ದಣಿದ‌‌ ನಿನ್ನ ಆಯಾಸದ ರೀತಿ .

ಇನ್ನಾದರೂ ನಿನ್ನ ಮಲ್ಲಿಗೆಯ ಪ್ರೀತಿ ತೋರು
ನನ್ನನ್ನು ಮುನ್ನಡೆಸಲು ನಿನ್ನಲ್ಲಿರುವ
ಆ ಪದ ಮೃದಂಗವೇ ಸಾಕು.

ಇಂದಾದರೂ ನೀನು ನೆನಪಿಸಿಕೊಳ್ಳಬಹುದಲ್ಲವೇ?
ನನ್ನೆದೆಯ ಗೋಡೆಯ ಮೇಲೆ ಬರೆದಿಟ್ಟ
ಆ ನಿನ್ನ ಹೂ ಬಾಣದ ಗುರುತು.

ಕಣ್ಣು ಸನ್ನೆಗೆ ನಾನಿನ್ನೂ ದೂರ..ಬಹು ದೂರ..!
ನನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟ ಪ್ರೀತಿ
ಅದು ನಾನು ಮಾಡಿದ ,ಮೊದಲ ತಪ್ಪು.

ಹೃದಯವನ್ನು ಹಿಂಡಿದಾಗಲೊಮ್ಮೆ
ಪ್ರೀತಿಸುವುದು ನನ್ನ ಕರ್ತವ್ಯವಲ್ಲವೆಂದರೆ
ಎಲ್ಲರನ್ನೂ ನಾನು ತಪ್ಪಿತಸ್ಥರೆಂದು ಭಾವಿಸುತ್ತೇನೆ!

ನಾನು ಮೊದಲೇ ಎಚ್ಚರಿಕೆ ನೀಡಿದ್ದೇನೆ,
ಭಾವನೆಗಳನ್ನು ಮರೆಮಾಡಲು ತುಂಬಾ ಶ್ರಮಿಸುವ
ವ್ಯಕ್ತಿಗೆ ಪ್ರೀತಿಯ ಅಭಿವ್ಯಕ್ತಿ ಏಕೆ? ..

ನನ್ನ ಕಣ್ಣುಗಳಿಗೆ ನೋಡಲು
ಸಾಧ್ಯವಿರದ ಪ್ರೀತಿಯನ್ನು ಕಲಿಸಿರುವೆ
ಸೂಚಿಸಲು ಪ್ರಯತ್ನಿಸುವ ನಿಖರತೆಯ ನಗೆ ನಿನಗೆ !

ವಿದಾಯ ಹೇಳಲು ಸಮಯ ಎಂದು ..?
ನಿನ್ನಲ್ಲಿ ಈ ನಿರ್ದಯೆ ಹೇಗೆ ಬಂತು ?
ಹೂವಿನ ಹಿಂದೆ ಇರುವ ಮುಳ್ಳು ನನಗೆ ತೋರಿಸಲು.

"ಮೀರಿದ್ದೀರಿ" ಎಂಬುದರ ಬಗ್ಗೆ ಮಾತನಾಡುತ್ತಾ,
ನೀನು ಮನೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ...
ನಾನು ಸ್ವಾಗತ ಎಂದು ಬರೆದು ಕೊಂಡಿದ್ದೇನೆ.

ಇಷ್ಟಪಡುವುದನ್ನು ನಾನು ದ್ವೇಷಿಸುತ್ತೇನೆ
ದುರ್ಬಲ ಮತ್ತು ತೆರೆದ ಹೃದಯದಲ್ಲಿ ಹೂಬಾನವನ್ನೇ ಬಿಟ್ಟಿರುವೆ
ಆದರೆ ನಿನ್ನನ್ನು ಇಷ್ಟಪಡುವ ರೀತಿಯಲ್ಲಿ ನಾನು ಪ್ರೀತಿಸಲಾರೆ,

ನಿನಗೆ ಸಾಧ್ಯವಾದ ಏಕೈಕ ಮಾರ್ಗವನ್ನು ನಾನು ಪ್ರೀತಿಸುತ್ತೇನೆ ..
ನಾನು ಖಂಡಿತವಾಗಿ ರೋಮಿಯೋ ,
ಆದರೆ ನೀನು ಜೂಲಿಯೆಟ್ ಅಲ್ಲ.

ಏಕೆಂದರೆ
ಈ ಪ್ರೀತಿಯ ಕಥೆಯಲ್ಲಿ ನಾನು
ಬುಲೆಟ್ ಅನ್ನು ಚಿತ್ರೀಕರಿಸಿದವನು.

ನಾನು ಈಗಾಗಲೇ ತಿರುಚಿದ ನನ್ನ ಈ ಮನಸ್ಸಿನಲ್ಲಿ ನಿನ್ನನ್ನು
ಅನುಮತಿಸುತ್ತೇನೆ,
ಮುರಿದುಹೋಗುವ ಶೀರೋಭಾಗ
ಸಮಾಧಾನವನ್ನು ಕಂಡುಕೊಳ್ಳುವ ಹಾಗೆ.

ತೊಂದರೆಯಲ್ಲೂ ಒಂದು ಸುಂದರ ಮೂರ್ತಿ ನಾನು
ಒಡೆದು ಹೋದ ಈ ಅವ್ಯವಸ್ಥೆ ಮೂಡಿಸಿದವರು ಯಾರು?

--- ಸುರೇಶ ಜಕಾತಿ. ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

01 Feb 2020, 04:25 pm

ಕಳೆದು ಹೋದೆನು

ಅರಿಯದೇ ಹೋದೆನು ನಾ ಬಯಸಿದ್ದದಾದರೂ ಏನು,
ತಿಳಿಯದೆ ಎಡವಿದೆನು ನನ್ನ ಕನಸಿನ ಲೋಕ ನೀನೆಂದು,
ಮಂಕಾದೆನು ಈ ಕಲ್ಪನೆಯ ಲೋಕದ ತಿಳಿವನ್ನರಿಯದೆ,
ಬಿಗಿಯುತ್ತಿರಲು ಉಸಿರು , ಕಳೆದು ಹೋದೆನು ನಿನ್ನ ನೆನಪಲ್ಲಿ.

- maheshganpur

01 Feb 2020, 02:42 pm

ತೀರದು ಈ ಮನದ ಅತಿಶಯ

ಕಡಲ ತೀರದಲಿ ಮೊಳಗಿಹುದು
ಅಲೆಯ ಬೋರ್ಗರೆತದ ಸಂಗೀತ!!
ದೂರದ ದಿಕ್ಕಿನಲಿ ಮೂಡಿಹುದು
ಕಡಲು ಮುಗಿಲಿನ ಸುಂದರ ದಿಗಂತ!!

ತೆರೆದಿರುವ ಬಾನಿನ ಅಂಗಳದಿ
ಹೊಳೆದಿಹುದು ಚುಕ್ಕಿಯ ಸಾಲು!!
ದೂರದ ಚಂದಿರನ ಊರಿನಿಂದ
ಚೆಲ್ಲಿಹುದು ಬೆಳದಿಂಗಳ ಹಾಲು!!

ಮರಳ ದಿಬ್ಬವ ಕೊರೆಯುವ
ಹಾಲು ಕಡಲಿನ ಜೋರಾದ ರಭಸ!!
ತಂಗಾಳಿಗೂ ತಂಪೆರೆಯುವ
ಆ ಚಂದಿರನ ನವಿರಾದ ಸರಸ!!

ಅಲ್ಲೆಲ್ಲೋ ಅವಿತಿರುವಂತಿದೆ
ಇನ್ನಾವುದೋ ಹೊಸ ಪರಿಚಯ!!
ಅದ ಹುಡುಕಿ ನೋಡಿದರೂ
ತೀರದು ಈ ಮನದ ಅತಿಶಯ!!

- ಪಿ.ಜಿ.ಜ್ಯೋತಿ

01 Feb 2020, 08:35 am

ಮಳೆ

ಕಡು ಬಿಸಿಲ ಬೇಗೆಯಲಿ
ಕರಿ ಮೋಡ ಕವಿದಿದೆ
ನಿನ್ನ ಮನಸಿನ ಮುಗಿಲಿನ್ಯಾಗ
ಮಳೆ ಬೀಳುವ ಮುನ್ಸೂಚನೆ
ಬಿರುಗಾಳಿಯ ರಭಸಕೆ
ಪೂರ್ತಿ ಮೋಡವೆಲ್ಲ ಚದುರಿ ಹೋಗುತ್ತಿವೆ
ಅವಳ ನೆನಪ ಹನಿಯ ಹೊತ್ತುಕೊಂಡು.

ಸಿದ್ದೇಶ್
9538131825

- g.b.siddesh

31 Jan 2020, 06:23 pm

ಹೊಸ ಜೀವನ ಸಾಗಿದೆ

ಈ ಸುಂದರ ಬೆಳದಿಂಗಳು
ಬಾನಿಂದ ಭುವಿಗೆ ಜಾರಿದೆ!!
ನನ್ನಾಸೆಯ ಮೊಗ್ಗೆಲ್ಲವೂ
ಹೂವಾಗಿ ಅರಳಿ ನಿಂತಿದೆ!!

ಋತುಮಾನ ಉರುಳಿ
ಶತಮಾನವು ಮರಳಿದೆ!!
ನಿಂತಿರುವ ಶಿಲೆಯೊಂದು
ಹೆಣ್ಣಾಗಿದೆ ನನ್ನ ಕಣ್ಣಾಗಿದೆ!!

ಅಂಗೈಯ ಬೊಗಸೆಯಲಿ
ನವ ಭಾವನೆಗಳು ತುಂಬಿದೆ!!
ತಂಗಾಳಿಯ ತಂಪಿನಲಿ
ಹೂ ಗಂಧವು ಬೆರೆತಿದೆ!!

ಸೊಗಸಾದ ಬಾನಂಗಳವು
ಹಕ್ಕಿಗಳನು ಕರೆದಿದೆ!!
ಚುಕ್ಕಿಗಳ ಊರಿನಲಿ
ಹೊಸ ಜೀವನ ಸಾಗಿದೆ!!

- ಪಿ.ಜಿ.ಜ್ಯೋತಿ

31 Jan 2020, 04:47 pm

ಬಾಳ ಬೆಟ್ಟವ ಹತ್ತೋಣ

ಬಾ ಗೆಳತಿ ಕೈ ಕೈ ಹಿಡಿದು ಬಾಳ ಬೆಟ್ಟವ ಹತ್ತೋಣ
ಕಲ್ಲು ಮುಳ್ಳಗಳ ಮೆಟ್ಟಿ ನಿಲ್ಲೋಣ
ಬಾಳ ಹಾದಿಯಲಿ ಮುಳ್ಳು ಇಟ್ಟವರಿಗೆ ಹುಡುಕಿ ಗುಲಾಬಿ ಹೂ ಕೊಡೋಣ.
ವಿಷದ ಬಟ್ಟಲು ತಂದವರಿಗೆ ಅಮೃತದ ಪಾಯಸವ ಕುಡಿಸೋಣ.
ಹರಿದ ಪಟದ ಸೂತ್ರವ ಎಳದು ತಂದು ಕಟ್ಟಿ ಮತ್ತೆ ಬಾನಿಗೆ ಪಟವ ಹಾರಿಸೋಣ.
ನಂಜೇರಿದ ಅಚ್ಚಿನಲಿ ಬೆಲ್ಲದ ಪಾಕವ ಸುರಿಯೋಣ
ನೆಲಕೆ ಕಿತ್ತಿ ಬಿದ್ದ ರೆಕ್ಕೆ ಪುಕ್ಕಗಳನು ಹೆಕ್ಕಿ ತಂದು ಅಂಟಿಸಿ ಮತ್ತೆ ರೆಕ್ಕೆ ಬಡೆಯುವಂತೆ ಮಾಡೋಣ.
ಕಣ್ಣಲ್ಲಿ ಕರಗಿದ ಕಣಸುಗಳ ಜಾಗದಲಿ ಹೊಸ ಕನಸುಗಳ ಹೆಣೆಯೋಣ
ನಾವು ನಡೆವ ಹಾದಿಯಲ್ಲಿ ಮುಳ್ಳು ಇಟ್ಟವರನ ತಬ್ಬಿ ಮುಂದೆ ನಡೆಯೋಣ
ಹೃದಯಕೆ ಆದ ಗಾಯಗಳಿಗೆ ಪ್ರೀತಿಯ ಮುಲಾಮ ಹಚ್ಚೋಣ
ಒಣಗಿದ ರೆಂಬೆ ಕೊಂಬೆಗಳಲಿ ಚಿಗರು ಒಡಮೂಡಿ ಬರಲು ಸ್ನೇಹ-ಪ್ರೀತಿಗಳೆಂಬ ನೀರು ಹಾಕೋಣ.
ಅಂದಕಾರ ಕವಿದ ಮನಗಳ ಹೃದಯ ಬಾಗಿಲಲಿ ಸಾಲು ದೀಪಗಳ ಬೆಳಗಿಸೋಣ.
ನಮಗೆರಡು ಬಗೆದವರು ಎಂದೆಂದು ಒಂದಾಗಿ ಬಾಳಲೆಂದು ಹಾರೈಸೋಣ
ಸುಟ್ಟ ಕನಸುಗಳ ಜಾಗದಲಿ ಬರವಸೆಯ ಸಸಿಯ ನೆಡೋಣ‌
ಬಾ ಗೆಳತಿ ಕೈ ಕೈ ಹಿಡಿದು ಬಾಳ ಬೆಟ್ಟವ ಹತ್ತೋಣ
ಮುಲ್ಲು ಕಳ್ಳುಗಳ ನು ಮೆಟ್ಟಿ ನಿಲ್ಲೋಣ.

- Siddugouda

31 Jan 2020, 04:29 pm

ಮುರಿದ ಮನಸು...

ಮುರಿದ ಮನಸು...
ಮುರಿದ ಮನಸುಗಳು ಮಾತನಾಡದೆ ಮನದೊಳಗೆ ನೋವ ಅನುಭವಿಸುವ ಪರಿ ಅನುಭವಿಗಳಿಗೆ ಮಾತ್ರ ತಿಳಿದಿರುವುದು ಅದರ ಅರಿವು...
ಹೇಳಲೂ ಆಗದೆ ಕೇಳಲೂ ಆಗದೆ ಕಣ್ಗಳಲ್ಲಿ ಕಂಬನಿಯ ಹೊಳೆ ಹರಿಸಿ... ಒಂದೊಂದು ಹನಿಗಳಲ್ಲೂ ಹೊರಲಾರದ ನೋವುಗಳು ಅಡಗಿರುವ ಪರಿ ವಿವರಿಸಲಾಗದು... ✍️ಮಲ್ಲ....

- Mallesh

31 Jan 2020, 03:33 pm

ಬಾಯಿ ಎಂಬುದೊಂದು ಗಡಗಿ

ಭಗವಂತನಿಗೆ ಈಗಿಗ ಹೋಮ್ ಗಾರ್ಡ ಕೆಲಸ ಜೋರ.
ಡ್ರೆಸ್ ಇಲ್ಲ, ಪಗಾರ ಇಲ್ಲ, ರೆಸ್ಟ್ ಅಂತೂ ಬೇಕಾಗೇ ಇಲ್ಲ.
ಮನೆ ಕಂಪೌಡ ಗೋಡೆಗೆ ಆನಿಸಿ ಕೂಡಿಸಿದರೆ ಸಾಕ.
ಬಾಯ ಗಡಗಿ ಕಿಡ್ನಿ ಗಡಗಿ ತುಂಬಕೊಂಡ ಸನಿಹ ಬಂದವರಿಗೆ ಹಲ್ಲ ಕಿರಿದು ಕೈ ಮುಗಿದ ಮುಂದಕೆ ಕಳಸ್ತಾನೆ.
ಭಗವಂತನಿಗೆ ಈಗಿಗ ರಸ್ತೆಗೆ ಜಾಗ ಹೋಗದಂತೆ ಕಾಯೋ ಕೆಲಸ ಜೋರು.
ಆ ಜಾಗದಲ್ಲಿ ಸಣ್ಣದೊಂದು ಗುಡಿ ಕಟ್ಟಿ
ಹಣೆಗೆ ಒ‌ಂದಿಷ್ಟು ಕೂಕಮಾ ಇಬತ್ತಿ ಬಳಿದು ಊದಕಡ್ಡಿ ಬೇಳಗಿಸಿ ಇಟ್ರ ಸಾಕ.
ಯಾವ ಕೋರ್ಟ ಕಛೇರಿಯಂದ ಆರ್ಡರ ತಂದ್ರು ಅಳಗಾಡಂಗಿಲ್ಲ ಒಂದೈವತ್ತವರ್ಷ.

- Siddugouda

31 Jan 2020, 02:55 pm