ಸೃಷ್ಟಿಯ ಸದೃಶ್ಯ ದಲ್ಲಿ ನಕ್ಷತ್ರದಂತೆ ಹೊಳೆಯುವ ಮನಸ್ಸು ಚಂದ ಮಿಂಚಂತೆ ಸಂಚರಿಸಿ ಕಂದನ ಅಪ್ಪುಗೆ ಯಂತೆ ಮನದೊಳಗೆ ಬೆಸೆದ ಮನಸ್ಸು ಎಂತ ಚೆಂದ ಮಮತೆಯ ಮಡಿಲಲ್ಲಿ ಮುಳುಗಿರುವ ಮನಗಳ ನಡುವೆ ಮೂಡಿತು ಮುಗ್ಧತೆಯ ಹೃದಯ ಸಂಬಂಧ ಸ್ಪಷ್ಟತೆಯ ಬದುಕಿನಲ್ಲಿ ಕಾಲಚಕ್ರದ ಸುರುಳಿಯಲ್ಲಿ ಸೃಷ್ಟಿಯಾಗಿದೆ ಸುಂದರ ಮನಸ್ಸುಗಳ ನಡುವೆ ಬಿಡಿಸಲಾರದ ಅನುಬಂಧ ನಂಬಿಕೆಯ ದೋಣಿಯಲ್ಲಿ ಪ್ರಯಾಣಿಸುವ ಭಾವನೆಗಳು ನೀಡಿವೆ ಮನಕೆ ಮಹದಾನಂದ ಭರವಸೆಯ ಭಾವದಲ್ಲಿ ವಿಶ್ವಾಸದ ಊರಿನಲ್ಲಿ ಮಧು ತುಂಬಿದ ಹೂವು ದುಂಬಿಯಂತೆ ಎರಡು ಹೃದಯಗಳ ಸಂಬಂಧ ಸ್ಥಿರವಾಗಿ ಚಿರವಾಗಿ ಕರುಣೆ ಪ್ರೀತಿ ಸಹನೆಯಲ್ಲಿ ಸದಾ ಹಸಿರಾಗಿರಲಿ ಸುಮಧುರ ಸ್ನೇಹಸಂಬಂಧ ಅನಿರೀಕ್ಷಿತ ಭಾವನೆಗಳ ಬೇಸಿಗೆ ಪ್ರಣತಿಯ ಜ್ಯೋತಿಯಂತೆ ಪ್ರಜ್ವಲಿಸಿ ಮುದ ನೀಡಿದ ಸ್ನೇಹ ಅನುರಾಗದ ಸಂಬಂಧ
ನಿನಗೇನು ಗೊತ್ತು ನೀ ಯಾರೆಂದು
ನಿನಗೇನು ಗೊತ್ತು ನಿನ್ನೊಳಗೆ ಏನಿದೆ ಎಂದು
ಲೇಖನಿ ಎನ್ನುವ ನೇಗಿಲ ಹಿಡಿದವಳು ನೀನು
ಹಾಳೆ ಎನ್ನುವ ಹೊಲವ ಉಳುವವಳು ನೀನು
ವಿದ್ಯಾರ್ಥಿ ಎನ್ನುವ ಬೀಜ ಬಿತ್ತುವವಳು ನೀನು
ಬೋಧನೆ ಎನ್ನುವ ನೀರೆರೆವವಳು ನೀನು
ಮನೆ ಕೆಲಸ ಎನ್ನುವ ಕೆಲಸವ ನೀಡಿ
ವಿದ್ಯಾರ್ಥಿ ಸಸ್ಯವ ಸದೃಢಗೊಳಿಸುವವಳು ನೀನು
ಫಲಕ್ಕೆ ಬಂದ ವಿದ್ಯಾರ್ಥಿ ಸಸ್ಯಕ್ಕೆ ಪದಕ ನೀಡುವವಳು ನೀನು
ಪದಕ ಪಡೆದ ವಿದ್ಯಾರ್ಥಿ ಸಸ್ಯವನ್ನು ನೋಡಿ ಗರ್ವ ಪಡುವವಳು ನೀನು