Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಿ ಮನ

ಮನಸ್ಸೆನೆಂಬ ಭೂಮಿಯನ್ನು ಹದ ಮಾಡಿ,
ಕನಸು ಎಂಬ ಬೀಜವನ್ನು ಬಿತ್ತಿ,
ಭರವಸೆ ಎಂಬ ಗೊಬ್ಬರ ಹಾಕಿ,
ಚಿಂತೆ ಎಂಬ ಕಸವನ್ನು ಕೀಳಿ,
ವಿಶ್ವಾಸ ಎಂಬ ಮಳೆಯ ಸುರಿಸಿ
ನನಸು ಎಂಬ ಫಸಲಿಗೆ ಕಾತೋರೆಯುತ್ತಿದೆ
ಈ ನನ್ನ ಮನ,
ವೀಣಾ ಲಿಂಗಣ್ಣ

- Veena

29 Sep 2019, 09:09 am

ಪ್ರೀತಿ ಎಂಬ ಬುಟ್ಟಿಯ ತುಂಬ

ಪ್ರೀತಿ ಎಂಬ ಬುಟ್ಟಿಯ ತುಂಬ
ವಿಧ ವಿಧವಾದ ಹಣ್ಣು!!
ಅಕ್ಕರೆ ಮಮತೆ ಸ್ನೇಹಾನುರಾಗದ
ರುಚಿಗೆ ಇಲ್ಲ ಕೊರತೆ!!

ಪ್ರೀತಿ ನಿಸರ್ಗ ಸುಂದರ ಸ್ವರ್ಗ
ಬಾಳಲಿ ಬೇಕಿನ್ನೇನು!!
ನೋವಲೂ ನಲಿವಲೂ
ಜೊತೆಜೊತೆಯಾಗಿ ಇರುವ ನಾವಿನ್ನು!!

ಬಡವ ಬಲ್ಲಿದ ಎನ್ನುವ ಭಾವನೆ
ನಮ್ಮೆಡೆ ಸುಳಿಯುವುದಿಲ್ಲ!!
ಕಷ್ಟಕೆ ಹೆಗಲ ನೀಡುವ ಬಳಗದಿ
ಜಾತಿಯ ಮಾತು ಇಲ್ಲಿ!!

ಅಂತರ ಸೃಷ್ಟಿಸೋ ಮಂತ್ರದ
ಹೂವಿನ ಮೋಹವು ನಮಗಿಲ್ಲ!!
ಚೆಂದದಿ ಬಾಳಲು
ಪ್ರೀತಿಯ ಬುಟ್ಟಿಯ ಆಸರೆ ನಮಗೆಲ್ಲ!!

- ಪಿ.ಜಿ.ಜ್ಯೋತಿ

28 Sep 2019, 04:30 pm

"ಮುಖ ಪುಸ್ತಕ"

ಕರೆದರೆ ಬರುವ
ಕೊರೆಯುತಲಿರುವ
ತೆರೆದರೆ ಇರುವ
ಮರೆಯದೆ ಮೆರೆವ
ಮುಖ ಪುಸ್ತಕವ
ನೋಡಲು ಬಲು ಜೀವ
ಬಾಳ ಪುಟದ ಭಾವ

"ಇಂತಿ ನಿಮ್ಮ ಕನ್ನಡಿಗ ಪುನೀತ್"

- Punith Gym

28 Sep 2019, 08:48 am

ಕಣ್ಣು

ಬರೆಯಬೇಕೆಂಬ ಹುಚ್ಚುತನವಿಲ್ಲ
ಬಾಳಬೇಕೆಂದೂ ಅನ್ನಿಸುವುದಿಲ್ಲ.
ಬರೆಯದಿದ್ದರೇನು,
ಬಾಳದಿದ್ದರೇನು,
ಬಚ್ಚಿಟ್ಟ ಪ್ರೀತಿ ಸುಳ್ಳಾಗುವುದೇನು ?
ಇರಬೇಕೆಂದೂ ಅನ್ನಿಸುವುದಿಲ್ಲ,
ಇರಬಾರದೆಂಬ ಹಠವೂ ಇಲ್ಲ.
ಇದ್ದೂ ಇಲ್ಲದಂತಿರುವುದ ಕಲಿತ ಮೇಲೆ
ಯಾರ ಹಂಗಿನ ಮಾತೇನು ?

#ಪುನೀತ್ ಗೌಡ

- Punith Gym

27 Sep 2019, 04:17 pm

ಮರಗುವ ಮನ

ಮರಗುವ ಮನ ಮರಗುತಿರುವಾಗ
ನಿನ್ನ ಬರಹಗಳೇ ನನ್ನ ಬದುಕಿನ ಸ್ಫೂರ್ತಿ

ಬದುಕಿರುವೆ ನನ್ನ ಉಳಿವು ಆಗದಿರಲಿ ನಮ್ಮಿಬ್ಬರ ಹೃದಯದ ಅಳಿವು ನನ್ನೆದೆಯ ಬಡಿತವು
ಆಲಿಸಿಹುದು ನಿನ್ನ ತೋಳುಗಳ ಪ್ರೀತಿ
ಎಂದಿಗೂ ಆಗದಿರಲಿ
ನಿನ್ನ ಅಪ್ಪುಗೆ ನನಗೆ ಭೀತಿ

ಮರಗುವ ಮನ ಮರಗುತಿರುವಾಗ
ನಿನ್ನ ಬರಹಗಳೇ ನನ್ನ ಬದುಕಿನ ಸ್ಫೂರ್ತಿ

ಬಾಳೊಂದು ಬಾಯಾರಿಕೆಯ ಧಣಿವು
ನಿನ್ನ ಪ್ರೀತಿಯನ್ನು ಕಾಣಲು ನಾನೇಧೆಯ ಅಳಲು
ಕಾಯುತಿದೆ ನನ್ನ, ನಿನ್ನ ನೆರಳು, ನಾ ಸೇರುವೆ ನಿನ್ನ ಮಡಿಲು


ಮರಗುವ ಮನ ಮರಗುತಿರುವಾಗ
ನಿನ್ನ ಬರಹಗಳೇ ನನ್ನ ಬದುಕಿನ ಸ್ಫೂರ್ತಿ

- Prasad shet

27 Sep 2019, 09:23 am

ಮಗನ ಪ್ರೀತಿಯ ಅಳಲು

ಕಾಣದೆ ಕಾಣದೆ ಕಾದಿರುವೆ ಕಣ್ಣ ರೆಪ್ಪೆಯಲ್ಲಿ ಕರಗಬಹುದೇ ನನ್ನ ನೋವು ಕಣ್ಣೀರಿನಲ್ಲಿ

ಕಾಣಲು ಬಹುದೇ ನಿನ್ನೊಡನೆ ಕಳೆದಿರುವ ಕ್ಷಣಗಳ ಮಾಲೆಯಲ್ಲಿ


ಕಂಡರೂ ಕಾಣದೆ ಮರುಗಿಹೆನು ನನ್ನ ಪುಟ್ಟ ಗೂಡಿನಲ್ಲಿ

ಪೂಜಿಸುವೆ, ಸಾದಾ ನೆನೆಯುವೆ, ನೀ ಸಿಗದಿರುವ ಈ ಲೋಕದಲ್ಲಿ ನಾನಾದೆ ಒಂಟಿ
ಬದುಕುತಿರುವೆ ನಿನ್ನ ನೆನಪಲ್ಲೇ ನಾವಿಬ್ಬರು ಜಂಟ್ಟಿ

ಕಾಣದೆ ಕಾಣದೆ ಕಾದಿರುವೆ ಕಣ್ಣ ರೆಪ್ಪೆಯಲ್ಲಿ ಕರಗಬಹುದೇ ನನ್ನ ನೋವು ಕಣ್ಣೀರಿನಲ್ಲಿ.....

ಲವ್ ಯು ಅಪ್ಪ

- Prasad shet

27 Sep 2019, 08:24 am

ಗಮ್ಯ

ನಾನಾರು ನಾನಾರು
ಎಂದು ಹುಡುಕುತ
ಕಳೆಯುತಿಹುದೀ ಕಾಲ

ಕೇಳಿಹೆನು ಪರಶಿವನ
ಎತ್ತಲೀ ಪಯಣ
ಏನ ಮಾಡಿಸೆ ಕೊಟ್ಟೆ
ಈ ನನ್ನ ಜನ್ಮ

ಬಾಲ್ಯದಲಿ ಅನಿಸಿತ್ತು
ಆಟವೇ ಬದುಕೆಂದು

ಯೌವ್ವನದಿ ಪ್ರೇಮವು
ಬೇರೇನು ಬೇಡೆಂದು

ಮಧ್ಯ ವಯಸಸಿನಲಿ
ಐಶ್ವರ್ಯಗಳಿಸೆಂದು

ಇಳಿವಯಸಿನಲ್ಲೀಗ
ತಿಯುತ್ತಲಿದೆಯೆಲ್ಲ
ಶೂನ್ಯವೆಲ್ಲವು ಎಂದು!!

ನೊಂದ ಜೀವಕ್ಕಾಗದೀ
ನಶ್ವರದ ಬದುಕು
ಏಕಿರುವುದೆಂದು

ಬೇಡಿದೆನು ಪರಶಿವನ
ಇಳೆಯೊಳೀ ದೀನರಿರುವನಕ
ಕರುಣಿಸೆನಗೆ ಮರುಜನ್ಮ

ಕೊಡು ನನಗೆ ಶಕ್ತಿಯನು
ದೀನರಾ ಸೇವೆಯನು ಗೈಯೆ
ಅದಲ್ಲವೆ ನನ ಗಮ್ಯ?

- ಜೈಮಿನಿ

27 Sep 2019, 06:43 am

ಅವನಾರು ?

ಯಾರು ಅವನಾರು
ಬಿಗು ಪಂಜರದಿ
ಡವ ಡವ ಗುಬ್ಬಚ್ಚಿಯ
ಬಚ್ಚಿಟ್ಟವನಾರು ?

ಹೇಳು ಅವನ್ಯಾರು
ನೀ ಕಾಣದ ನಿನ್ನೊಳಗೆ
ನವ ರಸ ಭಾವನೆಗಳ
ತುರುಕಿಸಿದ ಅವನಾರು ?

ಯಾರು ಅವನಾರು
ತನಗಾಗಿ ಎಂದೆನುತ
ನಿನಗಾಗಿ ದಂಡಿಸುವವ
ಒಡೆಯನಲ್ಲದೆ ಇನ್ಯಾರು ?

- basheer

26 Sep 2019, 07:06 pm

ತಾಯ ಅಳಲಿನ ಕೂಗು

ಉರಿ ಬಿಸಿಲ ತಾಪದಲಿ
ತಿರುತಿರುಗಿ ನಾ ಅಲೆದೆ!!
ಚೂರು ನೆರಳ ನೀಡಲು
ನನಗೆ ಸೂರು ಇರದೇ!!

ಹಸಿದು ಬಳಲಿದ ನನಗೆ
ತಲೆಯು ತಿರುಗುತಲಿಹುದು!!
ಹಿಡಿಯಷ್ಟು ಉಣ ಬಡಿಸೋ
ಕರವು ಕಾಣದೇ ಇಹುದು!!

ಆರು ಮಕ್ಕಳ ಹಡೆದು
ಹಾಲುಣಿಸಿ ನಾ ದಣಿದೆ!!
ಪಿತನು ಎನಿಸಿದವನು
ತೊರೆದ ಹೊಣೆಯ ಹೊತ್ತೆ!!

ಕಿಳಾಗಿ ಕಾಣುವವರ
ಸೇವೆಯನು ನಾ ಗೈದೆ!!
ಪುಡಿಗಾಸ ಕೂಡಿಡದೇ
ಕರುಳ ಬಳ್ಳಿಗೆ ಸುರಿದೆ!!

ಹರಿದ ಸೀರೆಯ ಹೊಲಿದು
ಯವ್ವನವ ನಾ ಕಳೆದೆ!!
ಮುಪ್ಪಿನಲಿ ಉಪ್ಪೆರೆಯಲು
ಮಕ್ಕಳಿರುವರು ಎಂದು!!

ಹಡೆದಿರುವ ಮಕ್ಕಳಿಗೆ
ಯವ್ವನವು ತುಂಬಿಹುದು!!
ತಡಬಿಡದೇ ಜೊತೆ ನೀಡಿ
ಸಂಭ್ರಮಿಸಿ ನಾ ನಲಿದೆ!!

ಅವರವರ ದಾರಿ ಹಿಡಿದು
ಸಾಗಿದರು ನನ್ನ ತೊರೆದು!!
ಹೆತ್ತವಳಿಗೆ ಆಸರೆಯ
ನೀಡುವುದ ಮರೆತು!!

ಮಡಿಯದಿಹ ಮಮತೆಯ
ಸೆರಗಿನಲಿ ಗಂಟಿಟ್ಟೆ!!
ತಿರುಗಿಯೂ ನೋಡದ
ಮಕ್ಕಳಿಗಾಗಿ ಕಣ್ಣೀರಿಟ್ಟೆ!!

ಹೊದ್ದಿಹರು ಎಲ್ಲರೂ
ಸ್ವಾರ್ಥ ಮೋಹದ ಸೋಗು!!
ಕೇಳುವವರು ಯಾರಿಲ್ಲಿ
ತಾಯ ಅಳಲಿನ ಕೂಗು!!

- ಪಿ.ಜಿ.ಜ್ಯೋತಿ

26 Sep 2019, 05:36 pm

ತಡೆಯದಿರು ನೀ ನನ್ನ

ಪ್ರಾಣ: ತಡೆಯದಿರು ನೀ ನನ್ನನು
ಓ ನನ್ನ ಜೊತೆಗಾರನೇ
ನಿನ್ನಿಂದ ಅಗಲುವ
ಕ್ಷಣವೊಂದು ಬಂದಿದೆ!!
ತನು: ತೊರೆಯದಿರು ನನ್ನನು
ಓ ನನ್ನ ಪ್ರಾಣವೇ
ನೀನಿರದೇ ನಾನಿರಲು
ಅದು ಹೇಗೆ ಸಾಧ್ಯವೇ!!

ಪ್ರಾಣ: ಇಷ್ಟು ದಿನ ನಿನ್ನೊಳಗೆ
ಜೊತೆಯಾಗಿ ನಾನಿದ್ದೆ
ಮರಣದ ಪ್ರೇರಣೆ ಇರಲು
ಹೊರಡಲು ಅಣಿಯಾದೆ!!
ತನು: ಬೆಳಕು ಇರದ ದೀಪಕೆ
ಬೆಲೆ ಇರಲು ಸಾಧ್ಯವೇ
ಪ್ರಾಣ ಇರದ ತನುವಿಗೆ
ನೆಲೆ ಇರಲು ಸಾಧ್ಯವೇ!!

ಪ್ರಾಣ: ಯಾರೋ ಇಟ್ಟ ಸಮ್ಮತಿಯು
ಈ ಜನುಮ ಜೊತೆ ಇದ್ದೆ
ಮತ್ತೆ ಹುಟ್ಟಿ ಬರುವೆ ನಾನು
ನಿನ್ನ ಜೊತೆ ನಡೆಯಲು!!
ತನು: ನೀ ಬರುವ ದಾರಿಯನ್ನು
ಕಾಯುತ ಕುಳಿತರೆ ನಾನು
ಕೊಳೆತು ನಾರಿ ಮಣ್ಣು ಸೇರಿ
ಮರೆ ಆಗುವೆ ಪ್ರಾಣವೇ!!

ಪ್ರಾಣ: ಏನೇ ಇರಲಿ ಹೇಗೇ ಇರಲಿ
ಹೊರಡಬೇಕು ನಾನೀಗ
ತಡೆಯದೇ ಕಳುಹು ನನ್ನ
ಓ ನನ್ನ ಜೊತೆಗಾರ!!
ತನು: ಎದೆಯ ಭಾರ ಸಹಿಸಲದಾದೆ
ಕೊರಳ ನೋವ ದಹಿಸದಾದೆ
ಹೊರಡಲಣಿಯಾಗಿ ನಿಂತ
ನಿನ್ನ ನಾನು ತಡೆಯಲಾರೆ!!

ಪ್ರಾಣ: ಇಷ್ಟು ಕಾಲ ಜೊತೆಗೆ ಬಂದೆ
ಕಷ್ಟ ಸುಖದಿ ಸೇರಿ ಬೆರೆತೆ
ಕ್ಷಮಿಸಿಬಿಡು ನನ್ನ ಇಂದು
ಹೊಗಬೇಕು ನಾನು ನೊಂದು!!
ತನು: ಉಸಿರು ಹೊರಗೆ ಬರದ ಹಾಗೆ
ಉಸಿರ ಕಟ್ಟಿಕೊಳ್ಳುವೆ ನಾನು
ಪ್ರಾಣವೆಂಬ ಚಿಟ್ಟೆ ನೀನು
ಹಾರಿ ಹೋಗು ನನ್ನ ಬಿಟ್ಟು!!

- ಪಿ.ಜಿ.ಜ್ಯೋತಿ

26 Sep 2019, 12:44 pm