Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮ ತಿರಂಗ

ನಮ್ಮ ತಿರಂಗಾ

ನೋಡು ನಮ್ಮ ತಿರಂಗಾ,
ಜಗದ ತುಂಬ ಸ್ನೇಹ ತರಂಗ...
ಮನದ ತುಂಬ ಪ್ರೇಮಗಂಗ...
ಏರುತಿದೆ,ಹಾರುತಿದೆ ವೀರ ಕೇಸರಿ ಪತಾಂಗ||೧||

ನೋಡು ನಮ್ಮ ತಿರಂಗಾ
ಕೇಸರಿ,ಬಿಳಿ,ಹಸಿರು ನಡುವೆ ನೀಲಿ ಚಕ್ರ ತರಂಗ
ಜಗದ ಪ್ರಗತಿಯು ಒಂದಾದಂಗ...
ಏರುತಿಹುದು ಹಾರುತಿಹುದು ವಕ್ರದಂಗ ||೨||

ನೋಡು ನಮ್ಮ ತಿರಂಗಾ
ಬಣ್ಣಗಳು ತೋರುತಿವೇ ಶೌರ್ಯವು ಹಿಂಗ.....
ಕೇಸರಿಯು ತ್ಯಾಗ ಬಿಳಿಯ ಶುದ್ಧತೆಹಸಿರು ಕ್ರಾಂತಿಯಂಗ...
ಏರುತಿಹುದು ಹಾರುತಿಹುದು ನಾವೆಲ್ಲಾ ಒಂದೇ ಎನ್ನೋ ಹಾಂಗ ||೩||

ನೋಡು ನಮ್ಮ ತಿರಂಗಾ
ಹಿಂದೂ ಮುಸ್ಲಿಂ ಕ್ರೈಸ್ತ ಒಂದೇ ಭಾರತ ಮಂದಿರ......
ಮಹಾಕಾವ್ಯ, ಕುರಾನ್ ಬೈಬಲ್ ಒಂದೇ ಹಂದರ....
ಏರುತಿಹುದು ಹಾರುತಿಹುದು ನಾವೆಲ್ಲಾ ಒಂದೇ ಎನ್ನೋ ಚಂದಿರ ||೪||

- dhakappa kumar

23 Aug 2019, 02:41 pm

ನನ್ನ ಸಂಗಾತಿ

ಯಶಸ್ಸಿನ ಹಾದಿಯಲ್ಲಿ ನಾ
ನಡೆಯಬೇಕೆಂದು ಬಯಸುವವಳು
ನನಗೆ ಕಷ್ಟಗಳೆ ಬಾರದಂತೆ
ನೋಡಿಕೊಳ್ಳಲು ಬಯಸುವವಳು
ನನ್ನ ಪ್ರತಿ ಹೆಜ್ಜೆಯಲ್ಲೂ
ಜೊತೆಯಾಗಿ ಸಾಗುವವಳು
ಸದಾ ನನ್ನ ಧ್ಯಾನದಲ್ಲೆ ಬದುಕವವಳು. ನನ್ನ ಮಗುವಂತೆ ಸಾಕುತಿಹಳು
ಅವಳೆ ನನ್ನ ಸಂಗಾತಿ.

✍ವರದರಾಜ್

- ವರದರಾಜ್

19 Aug 2019, 05:57 pm

ಯಾವ ಬಂಧವಿದು

ಸಾವಿರ ವಜ್ರದಮಣಿಗಳ ಮೌಲ್ಯವನ್ನು
ಮಿರಿಸುವಂಥಹ ಮಣಿಯು ನಿನು
ನಿನ್ನನ್ನು ಮಣ್ಣಿನ ಮಡಿಕೆಯಲ್ಲೀಟ್ಟ
ಹಾಲಿನಂತೆ ಸಂರಕ್ಷಿಸಲೇ ಆದು ಆಗದು
ಎಕೆಂದರೆ ತೆರೆದ ಜಗದಲ್ಲಿ ಹುಳಿ
ಹಿಂಡುವ ಜನಗಳು ಜಾಸ್ತಿ.....

ಮೌಲ್ಯ ಭರಿತ ಕೀರಿಟ ಮಾಡಿಸಿ
ಆದರೋಳು ಅಡಗಿಸಲು ಯೊಚಿಸಿದೆ
ಆದು ಸಾದ್ಯವಾಗಲಿಲ್ಲ ಏಕೆಂದರೇ ನೀನ್ನ
ಇನಿಯನು ಒಂದು ದಿನ ಬಂದು ಮದುವೆಯ
ನೇಪಒಡ್ಡಿ ಹೊತ್ತು ಹೋಗುವ ಭಯ ಎನಗೆ

ನಿನ್ನನ್ನು ಘಡಿಗೆಯಲ್ಲಿ ಮಸರಿನಂತೆ ರಕ್ಷಿಸಲು
ಮುಂದಾದೆ ಆದರೆ ಕಿಡಿಗೇಡಿಗಳ ಕಲ್ಲಿನ
ಏಟಿಗೆ ಹೊಡೆದು ಹೋಗುವ ಭಯ ನಾನ್ನದು
ಹೆಳು ಹೇಗೆ ಸಂರಕ್ಷಿಸಿ ಕೊಳ್ಳಲಿ ನಿಮ್ಮನ್ನ

ಜಾಸ್ತಿಯಾಯಿತು ನೀ ನಾನಗೆ ಕೊಟ್ಟ ಸಲುಗೆ
ಇಗಲಾದರು ಮಠಕು ಗೋಳಿಸಿಕೂ ಎಕೆಂದರೆ
ಮುಂದೆ ನೀನ್ನ ನೆನಪುಗಳು ಬಾಣಗಳಂತೆ
ನಾನ್ನನು ಕಾಡಬಾರದು......

ಯಾಕೆಂದರೆ ಮುಂದೆ ಒಂದು ದಿನ ನೀ
ಕಾಣೆಯಾದಾಗ ಹುಡುಕಲಾಖದೆ ಮುಕನಾಗಿ
ದುಃಖದ ಬಡಬಾಗ್ನಿ ಯಲ್ಲಿ ಬೆಯ್ಯತ್ತಿರುವೆ
ನಾನ್ನ ಮನವಿ ಪಾಲಿಸು ನೀನು ನಾನ್ನರಿತಿ
ಯಾಗಬೆಡ ಯಾವ ಭಂಧನದಲ್ಲಿಯು
ಭಂದಿಸಬೇಡ
......ಇಂತಿ ನಿನ್ನ ನತದೃಷ್ಟ ಸಹೋದರ....

- Vinod Naik Vinod Naik

18 Aug 2019, 02:34 am

ಮಲಗೆನ್ನ ಕಂದ

ಜೋ ಜೋ ಜೋ ಜೋ
ಮಲಗೆನ್ನ ಕಂದ!!
ನಿದಿರೆ ಕನಸಲಿ ಬರುವ
ಚಂದಿರನು ಚೆಂದಾ!!

ಅಳುವ ತುಟಿ ಮೇಲೆ
ಕೆನೆ ಹಾಲ ಹನಿ ಲೀಲೆ!!
ನೀ ನಗಲು ಹೊಳೆದಿಹುದು
ನವರತ್ನದ ಮಾಲೆ!!

ಕಡಲ ಗರ್ಭದಲಿ
ಮಲಗಿರುವ ಭಗವಂತ!!
ಭೂಮಿಗೆ ಬಂದಿಹನು
ಮಗುವಾಗಿ ನನಗಂತ!!

ಇರುಳ ಈ ಬದುಕಲ್ಲಿ
ನೀನಾಗಿ ಬಂದೆ ಹಗಲು!!
ನೀನಿರಲು ಈ ಮನೆಯು
ಆ ಸ್ವರ್ಗಕೂ ಮಿಗಿಲು!!

- ಪಿ.ಜಿ.ಜ್ಯೋತಿ

17 Aug 2019, 10:25 pm

ಅವ್ವನ ಹುಡುಕಾಟ

ಅವ್ವನ ಹುಡುಕಾಟ

ಅವ್ವಾ ಕಡಲ ತೀರದಲ್ಲಿ ಕುಳಿತಾಳೆ
ಒಡಲೊಳಗೆ ಕೂಸು ಕಟ್ಟಿಕೊಂಡು
ಹರಿದು ಬರುವ ತೊರೆಗಳೆಲ್ಲವನ್ನು ನೋಡುತ್ತಾ
ಮುಗಿಲೊಳಗೆ ಸುರಿವ ಮಳೆಹನಿಯು ನೋಡುತ್ತಿರುವಳು ಅವ್ವಾ

ಒಡಲೊಳಗಿನ ಕೂಸು ಕೇಳುತ್ತಿದೆ
ಅವ್ವಾ ಮಳೆ ಭರದಿ ಸುರಿವ ಸಾಗರಕ್ಕೆ ಅಪ್ಪಳಿಸಿ ಬರುವುದು ನನಗೆ ಕೇಳುತ್ತಿರುವಾಗ
ನಿನಗೆ ಭಯವಿಲ್ಲದೆ ಕುಳಿತಿರುವೇಕೆ ?

ಮಗಾ ಕೃಷ್ಣಾ ನದಿಯು ಅಪ್ಪಳಿಸಿ ನನ್ನವರನ್ನು ಹೊತ್ತು ತರುತ್ತಿದೆ ತೊರೆಯ ಅಲೆಗಳಲ್ಲಿ ನಿನ್ನಣ್ಣ ನಿನ್ನಕ್ಕಂದಿರು
ಹರಿವ ನೀರಿನ ಸುಳಿಯಲ್ಲಿ ತೊರೆ ಹೊತ್ತು ಬರುತ್ತಿದೆ ಈ ಕಡಲ ತೀರಕ್ಕೆ ಸಾಗಿಸೆ ಬರುವುದ ಕಾಯುತ್ತಿರುವೆ

ತಡಿಮಗುವೆ ನವ ಮಾಸದೊಳಗೆ ಹೆತ್ತು ಹೊತ್ತು ಸಾಕಿ ಸಲಹಿದ ನನ್ನ ಕರುಳಿನ ಕುಡಿಗಳು ಯಮನ ಹಗ್ಗದೊಳಗೆ ಸಿಲುಕಿ ಒದ್ದಾಡುವ ನನ್ನ ಕರುಳಿನ ಬಳ್ಳಿ ಹರಿದು ತುಂಡಾಗಿ ನೀರೊಳಗೆ ಮುಳುಗಿವೆ ಮಗಾ

ಹೇಗೆ ಸಹಿಸಲಿ ಎದೆಯೊಳಗಿನ ದುಃಖ
ಸುರಿಸುತ್ತಿದೆ ರಕ್ತಕಣ್ಣೀರ ಅವ್ವನ ಕಣ್ಣಲ್ಲಿ
ಕರುಣೆ ಇಲ್ಲವೆ ಅವ್ವನ ದುಃಖವ ಕಂಡು
ಮುಗಿಲ ಮಳೆರಾಯ ಯಮನ ಹಗ್ಗದಂತೆ ಬೀಸಿರುವ

ಒಡಲೊಳಗೆ ಉರಿ ಹೊತ್ತಿ ಧರೆಯೊಳಗೆ ಸುರಿದಿದೆ
ಕರುಳು ಬಳ್ಳಿಯ ಕಳೆದುಕೊಂಡು ಹೇಗಿರಲಿ
ನಿನ್ನಪ್ಪನು ಹುಡುಕುತ್ತಿರುವ ಕೃಷ್ಣನದಿಯ ತೊರೆಯಲ್ಲಿ
ಅವ್ವನ ಮನಸ್ಸು ಅದೆಂತಹ ಅದ್ಭುತ ಅನುಭವ

ಹರಿದು ಬರುವ ತೊರೆಗಳೆಲ್ಲ ಕಡಲ ಸೇರಲು ಬರುವುದು ಅದಕ್ಕೆ ಕಾಯುತ್ತಿರುವೆ
ನನ್ನ ಕುಡಿಯ ದೇಹವಾದರು ಸಿಗಬಹುದೆಂದು
ಅಲೆಗಳಿಗೆ ಬಲೆಯಾಕಿ ಕುಳಿತಿರುವೆ ಮಗು

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- Gtramachandrappa Ramachandrappa

17 Aug 2019, 11:12 am

ಸ್ವಪ್ನ

ಹುಣ್ಣಿಮೆಯ ಚಂದಿರನ ಬೆಳಕಲ್ಲಿ
ಜಗವೆಲ್ಲಾ ಮಲಗಿರಲು
ಕಡಲತೀರದ ತಂಗಾಳಿಯ ತಿರುವಿನಲ್ಲಿ
ಕಾದು ಕುಳಿತಿರುವೆ ಅವಳ ದನಿಗಾಗಿ
ಸದ್ದು ಮಾಡದೆ ಸಾಗರದ ಅಲೆಗಳು ಹೊರಟವು ಹಂಸದಾ ನಡಿಗೆಯಲ್ಲಿ
ಕಂಡಳು ಬೆಳದಿಂಗಳ ಬಾಲೆಯಾಗಿ
ಮಾತನಾಡಿಸಲು ಅಂಜಿಕೆ
ನಿಂತು ಹೊರಟರೆ
ಮತ್ತೆ ಕಾಣಿಸಲಿಲ್ಲ ಸ್ವಪ್ನದಲ್ಲಿ

ಎ ಜಿ ಶರಣ್

- ಎ ಜಿ ಶರಣ್

16 Aug 2019, 08:19 am

ಸ್ನೇಹಿತರ ಹಿರಿಮೆ

ಒಂದು ದಟ್ಟವಾದ ಕಾನನದ ನಡಿಗೆಯಲ್ಲಿ
ನಾನ್ನ ಉಸಿರಿನ ಜೊತೆ ನೀ ಹೆಜ್ಜೆ ಹಾಕುವಾಗ
ಪಾಪಿ ಜವರಾಯನ ಯಮಪಾಶಕ್ಕೆ ನಾವುಗಳು
ಸಿಲುಕಿ ಒದ್ದಾಡುವಾಗ ಆ ಸೊರ್ಯಪುತ್ರ......

ಮೈ ನವಿರೇಳೆಸುವ ಆಶೆಯೊಂದನ್ನು ಮೂಡಿಸಲು
ಪ್ರಯತ್ನಿಸಿದ ಆ ಮಾಯದ ಮಾತುಗಳು ಧರ್ಮರಾಯನಿಗೆ ಪೇಳಿದ ಮಾತುಗಳತ್ತೆ ಇತ್ತು
ನೀಮ್ಮಿಬ್ಬರಲ್ಲಿ ಯಾರ ಪ್ರಣ ಬೇಕೆಂದು ಕೆಳಿದ

ನಾನ್ನ ಉಸಿರಾಗಿರುವ ನೀನು ಇಲ್ಲದೆ ನಾ ಇಲ್ಲ
ನಾ ಇಲ್ಲದೆ ನಿ ಇರುವೆ ಎಂದು ನಿನ್ನ ಪ್ರಾಣ ಭಿಕ್ಷೆ
ಕೆಳಿದೆ ಆಗ ಯಮಧರ್ಮ ಸಂತಸ ದಿಂದ
ನಾಮ್ಮಿಬ್ಬರ ಸಂಭದಕ್ಕೆ ನಾಂದಿಹಾಡಿ ಹೊಸ

ಸಂಭದದ ಬೆಸುಗೆಯನ್ನ ಬೆಸೆದನು
ಆದುವೆ ಸ್ನೆಹಿತ್ವದ ಕಿರೀಟವನ್ನು ಧರಿಸಿ
ತಾನ್ನ ಓಡ್ಡೋಲಗದಲ್ಲಿ ನೌಕರಿ ಕೊಟ್ಟು
ಜಯ ವಿಜಯರಂಥ ಕಾಮೆ ನಿಡಿದ....

- Vinod Naik Vinod Naik

15 Aug 2019, 11:44 pm

ನಾನ್ಎದೆಯ ಮೃದಂಗ

ಮನುಷ್ಯನ ಆಧಿಯಲ್ಲಿ ಸಂತಸದ ಮೃದಂಗ
ಜೀವನದಲ್ಲಿ ಜೂಜಾಟದ ಮೃದಂಗ
ಮುಪ್ಪಿನಲ್ಲಿ ನೇನಪುಗಳ ಮೃದಂಗ
ಸಾವಿನಲ್ಲಿ ಸಂತಾಪದ ಮೃದಂಗ


ಯೌವ್ವನದಲ್ಲಿ ಸಾಧನೇಯ ಮೃದಂಗ
ದುಂಬಿಗೆ ಮಕರಂದಾಶೆಯ ಮೃದಂಗ
ಯುವಕರಿಗೆ ಪ್ರೇಮದಾಶೆಯ ಮೃದಂಗ
ಒಪ್ಪಿಗೆಯ ಬಳಿಕ ದಾಂಪತ್ಯದ ಮೃದಂಗ

- Vinod Naik Vinod Naik

13 Aug 2019, 08:07 am

ಕಾಡುವ ಹುಡುಗಿ...

ಸಂದೇಶದಿಂದ ಶುರುವಾಗುತ್ತಿದೆ ಪ್ರೀತಿ
ಮನದಲ್ಲೇ ಉತ್ತರಿಸುತ್ತಿದ್ದಾಳೆ ಪ್ರತಿ ಸರತಿ
ಅವಳು ಇನ್ನು ನೀಡಿಲ್ಲ ನನಗೆ ಮಾಹಿತಿ
ಯಾವತ್ತು ಉತ್ತರಿಸುತ್ತಾಳೊ ಕೇಳಿ ಒಂದುಸತಿ......

-ಅಭಿಲಾಷ್ ಟಿ ಎ

- AbhilashTA

11 Aug 2019, 05:23 am

ದಾಂಪತ್ಯ..

ಪುಟ್ಟ ಕಂದನ ಕೂಗಿ ಕೇಳಿತು
ಅಮ್ಮ ಎಂದು ಉಸಿರ ಸದ್ದಲಿ
ಅಮ್ಮನ ನಗುವು ಹೇಳಿತು ಅಪ್ಪ
ನೀನೆಂದು ಕಣ್ಣ ಅಂಚಲಿ.

ತಾಯಿ ನೀನಾಗುವೆಯೆಂದು
ಮಗುವಂತೆ ಲಾಲಿಸಿದೆ
ನನ್ನ ಪುಟ್ಟ ಪುಟ್ಟ ಆಸೆಗಳನ್ನೆಲ್ಲಾ
ವೇಳೆಯ ಪರಿವೆ ಇಲ್ಲದೆ ಈಡೇರಿಸಿದೆ.

ಮುದ್ದು ಗೊಂಬೆಯ ಅಳುವ ಸದ್ದು ಕೇಳಿ
ಹರುಷದಿ ಸಂಭ್ರಮಿಸಿದೆವು ತಂದೆ-ತಾಯಿ
ನಾವೆಂದು ಹೊಸ ಅಥಿತಿಯ ಸ್ವಾಗತಿಸುತ
ಮಮತೆಯ ಮಡಿಲಿಗೆ.

ಸೊಗಸು ಕಂಡ ಚೆಲುವೆ ನಾನು
ಅಮ್ಮನಾಗಲು ನನ್ನ ಸೌಂದರ್ಯ
ಧಾರೆ ಎರೆದೆನು, ಮಗುವಿಗೊಂದು ಪುಟ್ಟ
ಮನೆಯ ಮಾಡಲು ಒಡಲ ಆಸರೆ
ನೀಡಿ ನಲಿದೆನು.

ಖಾಲಿಯಾದ ಮನೆಯಲ್ಲಿ ನಿಶಬ್ದ ತುಂಬಿದೆ
ಮಗುವು ಬಿಟ್ಟು ಹೋದ ಹೆಜ್ಜೆಯ ಗುರುತು
ಅವಳ ನೆನಪಂತೆ ನನ್ನ ದೇಹ ಹರಡಿದೆ.

ಆಡಿಕೊಳ್ಳಬೇಡವೋ ಗಂಡ ಸೌಂದರ್ಯ
ಕಳೆದು ಹೋಯಿತೆಂದು ಜೋತು
ಬಿದ್ದ ಎದೆಯು ನಿನ್ನ ಮಗಳ ಹಸಿವ
ನೀಗಿಸಲು ಊಟವಾಗಿದೆ, ಕಪ್ಪು ಕಳೆಗಳ
ಸುಕ್ಕು ಚರ್ಮವು ಮಗುವಿನ ಮುದ್ದಾದ
ರೂಪಕೆ ಮಾಂಸವಾಗಿದೆ.

ಕಿರುಬೆರಳ ಹಿಡಿದ ಕ್ಷಣವೇ ಸರ್ವಸ್ವ ನೀನಾದೆ
ಕಡೆವರೆಗೂ ನಿನ್ನೊಡನೆ ನಡೆವ ನೆರಳಾಗಿ ನಾ ನಿನ್ನ ಮಡದಿಯಾದೆ.

- ಚುಕ್ಕಿ

11 Aug 2019, 04:37 am