Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀಲಿ ಕುರಿಂಜಿ

ಕೋಲು ದೀಪ ಹಿಡಿದು ನೀಲಿ ಕುರಿಂಜಿ
ಮುಡಿದು,ಮುಂಜಾವು ಮಂಜು ಸರಿಸುತ್ತಾ
ಮಿಂಚು ಕಂಗಳ ಮಡದಿ ಕಂಬಳಿ ಕುಪ್ಪೆ
ಹೊದ್ದು ನಡೆದಿಹಳು ನಾಜೂಕು ಪಾದಕ್ಕೆ
ಕೆಮ್ಮಣ್ಣ ಸವರುತ್ತ.

ಹಗಲಿರುಲೆನ್ನದೆ ಅಡಿಕೆ ಒಲೆಯಡಿಯಲ್ಲಿ
ಮಸಿಯಾಗಿ ದುಡಿವ ಗಂಡನ ಹಬ್ಬದಂದಾದರು
ಮನೆಗೆ ಕರೆತರಲು ಹೊರೆಟಿಹಳು ಯಜಮಾನ್ತಿ
ನೆರಿಗೆ ಬಿಗಿ ಹಿಡಿದು ದಾರಿಹೋಕರಿಗೆಲ್ಲ
ದೂರು ನೀಡುತ್ತಾ.

ಎಲ್ಲಿಹನೋ ನನ್ನವನು ಯುಗ ಕಳೆದು
ಹೋಯ್ತು ಮತ್ತೆ ಯುಗಾದಿ ಬಂದಾಯ್ತು
ಒಮ್ಮೆಯಾದರೂ ಕಂಡುಬಾರೋ
ಮನದೊಡೆಯನೇ ಮನೆಗೆ ಹೋಗುವ
ಎನ್ನುತಲಿ ನಡೆದಿಹಳು ಸರಸತಿ ಹಾಡ ಕಟ್ಟುತ್ತಾ.

ಕೇಸು ಗಂಟಿನ ಪಲ್ಯ, ಕಡ್ಬು ಕೋಳಿತುಂಡು
ಅನ್ನ ಅಪ್ಪೆಕಾಯಿಸಾರು, ಕೋಸಂಬರಿ ಕೊನೆಗೊಂಚೂರು ವಿಳೆದೆಲೆ ಸವಿಯುವಂತೆ
ಒಮ್ಮೆ ಕಂಡುಬಾರೋ ಕಿವಿಹಿಂಡಿ
ಎಳೆದೊಯ್ಯುವೆ ಮಾರು ಮಾತನಾಡದಿರು
ಮತ್ತೆ ಕೋಪಗೊಳ್ಳುವೆನೆಂದು ತನ್ನಲ್ಲೇ
ಅಂದುಳ್ಳುತ್ತಾ.

- ಚುಕ್ಕಿ

15 Jun 2019, 04:12 pm

ಅಪ್ಪ

ಜೀವನದ ಏಣಿ ಸಲೀಸಾಗಿ ಹತ್ತುವ ವೀರ
ಏಣಿಯ ತೊಡಕು ಬಿಡಿಸಿ ಮುನ್ನುಗ್ಗುವ ಧೀರ
ಸವಾಲು ಎದುರಿಸಿ ಜಯಿಸುವ ಮಹಾವೀರ
ಕುಟುಂಬ ಜಗತ್ತಿನ ಕಾವಲುಗಾರ

ತನ್ನ ಮಕ್ಕಳ ಪೋಷಿಸಿ ಮುನ್ನಡೆಸುವ ಗುಣವಂತ
ವಿದ್ಯೆಯ ನೀಡಿ ಸಲುಹಿದ ಹೃದಯವಂತ
ಜಗತ್ತಿನ ಎದುರು ನಿರ್ಭಯವಾಗಿ ಓಡಾಡುವಂತೇ ಮಾಡಿದ ಉಪಕಾರವಂತ
ತನ್ನೊಡಲಲ್ಲಿ ವ್ಯಥೆಯ ತನ್ನಲ್ಲಿ ನೀಗಿಸಿ ನಗುವಿನ ಅಲೇ ಹರಿಸುವ ಉದಾರವಂತ,
ಅಪ್ಪ
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.

- Pradeep Malabadi

15 Jun 2019, 01:34 pm

ಮನಕ್ಕೊಂದು ಮನವಿ

ನನ್ನವರನ್ನೆಲ್ಲ
ಇಂದು ನಡೆಸಿಕೊಂಡು
ಹೋಗಲು, ನಾ ನನ್ನ
ಬಲಿ ಕೊಡುತ್ತಲಿರಬೇಕು.

ಅಲ್ಪ ಕಾಲದ ಬುದ್ದಿಗೆ
ಅಧಿಕವಾಡಬೇಡ
ಆತ್ಮ ಗೌರವವೊಂದು ಸಾಕು
ನನ್ನ ನಾ ಉಳಿಸಿಕೊಳ್ಳಲು.

ನನಗಾದ ನೂವು
ನನ್ನವರಿಗೆ ಹೂವಾಗಿ
ಮಾರ್ಪಡುವುದಾದರೆ
ನಾನನುಭವಿಸುವೆ ನೂವುಗಳನ್ನೆಲ್ಲ.

ನನ್ನಲ್ಲಿ ಸಹಿಸಿಕೊಳ್ಳುವ
ಶಕ್ತಿ ಇರುವವರೆಗೂ
ನನ್ನನ್ನ ನನ್ನ ಬಿಟ್ಟು ಬೇರಾರು
ಗೆಲ್ಲಲು ಅಸಾಧ್ಯವಿಲ್ಲಿ !.

- ನಾಗರಾಜ ಬಾಕೆ೯ರ್

15 Jun 2019, 08:03 am

ಊರು-ಉಸಾಬರಿ

ಊರು-ಕೇರೆಂದು ಮೈಮ್ಯಾಲೆ ಹಾಕೋತಿವ್ರಿ.
ಹಾದಿ-ಬೀದ್ಯಾಗ ಬಿದ್ದಿದ್ದು ಅಂಗಳಕ್ಕ ಚಲ್ಲತಿವ್ರಿ.
ಮನೆ-ಮಠದ್ದು ತಲ್ಯಾಗ ಹಾಕೊಂಡು ನಿದ್ದಿಗೆಟ್ಟಿವ್ರಿ.
ಮಕ್ಕಳು-ಮರಿದು ಚಿಂತಿ ಮಾಡಿ ಸ್ವರಗಕತ್ತಿವ್ರಿ!

ಅವನು ಹಂಗ್ ಅದಾನ ಮಂಗ್ಯಾ ಅಂತೆವ್ರಿ.
ಇವನು ಹಿಂಗ್ ಅದಾನ ಸಂಗ್ಯಾ ಅಂತೆವ್ರಿ.
ಒಟ್ಟು ಹೆಂಗ್ ಇದ್ದರೂ ಹಂಗಾ ಅಂತೆವ್ರಿ.
ಮತ್ತೆ ಮ್ಯಾಲ ಮಂದಿದ ನಮಗ್ಯಾಕ ಆಂತಿವ್ರಿ.

ಮುಂದೆ ಇದ್ದಾಗ ಮರ-ಮರ ಮರಗತಿವ್ರಿ.
ಹಿಂದೆ ಇದ್ದಾಗ ಗುಸು-ಗುಸು ಗುರ್ರ್ಗರಿತಿವ್ರಿ.
ಯಾರು ಇಲ್ಲದಾಗ ಪಿಸು-ಪಿಸು ಪಿನ್ ಮಾಡತೆವ್ರಿ
ಹೆಂಗದ್ದಿರು ಊರು-ಉಸಾಬರಿ ಮಾಡತೆವ್ರಿ..

ಸುಗ್ಗಿ..

- ಆರ್ ಎಸ್ ಸುಗ್ಗಿ.

14 Jun 2019, 07:34 pm

ಭರವಸೆ "ಭರವಸೆ"

ಸಗ್ಗದಿಂದ
ಧರೆಗಿಳಿದ
ಮುತ್ತಿನ ಹನಿಗಳು
ಮೆಲ್ನಗೆ ಅರಳಿಸುವುದು
ಅವಳ ಮೊಗದಲ್ಲಿ

ಅವಳ
ಸುಂದರ ನಗೆ
ನನ್ನ ಮನದೊಳಗೆ
ಹಿಗ್ಗಿಸುವುದು
ಚೈತನ್ಯವನು

ಒಂದು ಕಿರುನಗೆ
ಒಂದು ನಲ್ಮೆಯ ಸ್ಪರ್ಶ
ಒಂದು ಸೌಶೀಲ್ಯದ ನುಡಿ
ಒಂದು ಭರವಸೆ ಸಾಕು
ರಮ್ಯವದು ಜೀವನ

© ೨೦೧೯ ಬಿ.ಎಸ್.ಸರೋಜ
೧೪/೦೬/೨೦೧೯

- Saroja BS

14 Jun 2019, 12:28 pm

ವಿಜ್ಞಾನ

ಜ್ಞಾನವೆಂಬ ಬೆಳಕಿನೆಡೆಗೆ
ಅಜ್ಞಾನವೆಂಬ ಕತ್ತಲೆಡೇಗೇ
ಕತ್ತಲಳಿಸುವ ಸುಜ್ಞಾನದೇಡೇಗೇ ನಡೇದು
ವಿಜ್ಞಾನವ ಮುಟ್ಟಿದಂತಾಯಿತು,

ವಿಜ್ಞಾನಿಗಳ ಜೀವವಾಯಿತು
ಸುಜ್ಞಾನದ ಈ ವಿಜ್ಞಾನ ಜೀವಂತವಾಯಿತು
ಅಜ್ಞಾನಿ ಸುಜ್ಞಾನಿಯಾದ
ಸುಜ್ಞಾನಿ ವಿಜ್ಞಾನಿಯಾದ
ಎಲ್ಲರೊಂದಾಗಿ ವಿಜ್ಞಾನವ ಕಾಣುವಂತಾಯಿತು,

ನಿಸರ್ಗವೇ ತಲೆ ಬಾಗಿತು ವಿಜ್ಞಾನಕ್ಕೆ
ಮಾನವನ ಸುಜ್ಞಾನಕೇ
ವಿಜ್ಞಾನದಿಂದರಿಯಿತು ಈ ಮನುಕುಲ
ನಿಸರ್ಗ ದಲ್ಲಿರುವ ಈ ಜೀವಸಂಕುಲವ
ಈ ರೀತಿ ವಿಜ್ಞಾನವ ನೋಡಿದಂತಾಯಿತು,

ವಿಜ್ಞಾನ ಎಂದರೆ ಪರಿಶ್ರಮದ ಫಲ
ಸುಜ್ಞಾನವೇಂದರೇ ಅರಿವಿನ ಫಲ
ವಿಜ್ಞಾನವ ಎಂಬುದು ಅಜ್ಞಾನವೆಂಬ ಕತ್ತಲ ತ್ಯಜಿಸಿ
ಜ್ಞಾನವೆಂಬ ಬೆಳಕು ಚೆಲ್ಲಿಸಿ
ಸುಜ್ಞಾನದ ಬಾಗಿಲು ತೆರೆಸಿದೇ.

- Pradeep Malabadi

13 Jun 2019, 10:42 am

ತಾಯಿಯ ಋಣ.

ಎಲ್ಲರನು ಹೊತ್ತ ತಾಯಿ ಭೂ ತಾಯಿ
ಕರುಣೆಯು ಅಪಾರ ಈ ಭೂ ತಾಯಿಗೆ
ಭೂ ತಾಯಿಗಿಂತಲು ಮಿಗಿಲು ಹೆತ್ತ ತಾಯಿ
ನಮ್ಮ ,ನಿಮ್ಮೆಲ್ಲರನು ಹೆತ್ತ ತಾಯಿ,

ಹೆತ್ತ ತಾಯಿಯ ಪ್ರೀತಿ ಸ್ವರ್ಗಕ್ಕಿಂತಲೂ ಮಿಗಿಲು
ಅವಳ ಋಣ ತೀರಿಸಲು ಏಳು ಜನುಮ ಸಾಲದು
ಹೆತ್ತ ತಾಯಿ ದೇವರಿಗೆ ಸಮಾನ
ಈ ತಾಯಿಗೊಂದು ನನ್ನ ನಮನ,

ಹೆತ್ತ ತಾಯಿಯೇ ಮಕ್ಕಳ ಪಾಲಿನ ದೇವರು
ಎಂದೂ ಮೋಸವ ಮಾಡದಿರಿ ಈ ತಾಯಿಗೆ
ಹೆತ್ತ ತಾಯಿಯ ಆಶಿರ್ವಾದ ಮುಕ್ಕೋಟಿ ದೇವರಿಗೆ ಸಮಾನ
ಈ ಆಶಿರ್ವಾದವೇ ಮಕ್ಕಳ ಪಾಲಿನ ಮುಂದಿನ ಆಶಾ ಕಿರಣ,

ಹೆತ್ತ ತಂದೆ-ತಾಯಿಯರನು ಕಡೆಗಣಿಸದಿರಿ
ಕಡೆಗಣಿಸಿ ಮುಂದೆ ಕಷ್ಟವ ಅನುಭವಿಸದಿರಿ
ಹೆತ್ತ ತಂದೆ-ತಾಯಿಯರನು ಪೂಜಿಸಿ
ಅವರ ಜೀವನವನು ಪಾವನಗೊಳಿಸಿ.

- Pradeep Malabadi

12 Jun 2019, 03:54 pm

ನನ್ನಾಸೆ.

ಮುನ್ನಡೆಯಬೇಕು;ಏನಾದರೂ ಸಾಧನೆ ಮಾಡಬೇಕು,
ಗಡಿ ಕಾಯಬೇಕು,
ದೇಶದ ಶತ್ರುಗಳನ್ನು ಹೊದೆದುರುಳಿಸಿ ವೀರಯೋಧನಾಗಬೇಕು.

ಕ್ಷಣಕ್ಷಣಕ್ಕೂ ಕಾರ್ಯೋನ್ಮುಖವಾಗಿರುವ ಗಡಿಯಾರದ ಮುಳ್ಳು ನಾನಾಗ ಬೇಕು,

ಲೇಖನವೆಂಬ ಖಡ್ಗ ಹಿಡಿಯಬೇಕು;
ರಾಷ್ಟ್ರ ಕವಿಗಳ ಸಾಲಿನಲಿ ನಾನಿರಬೇಕು,

ಸುತನೂಜನಾಗಬೇಕು;
ಭರತಖಂಡದ ಸಾಧನೆಯ ಜಗತ್ತಿನೆಲ್ಲೆಡೆ ಮೊಳಗಿಸಬೇಕು,

ಭಾರವನ್ನು ಎತ್ತಬೇಕು;
ಸರ್ವಭಾರ ಹೊತ್ತುಕೊಂಡ ಧರಣಿ ನಾನಾಗಬೇಕು,

ವಿವೇಕ ಮಹಾತ್ಮರನ್ನು ಸ್ಮರಿಸಬೇಕು,
ಅವರು ನಡೆದಾಡುವ ಧೂಳಿನ ಕಣ ನಾನಾಗಬೇಕು,

ಒಂದು ದಿನ ಪಯಣ ಮುಗಿಸಬೇಕು,
ಸರ್ವಜನಾಂಗದಲ್ಲಿ ಚಿರಂಜೀವಿಯಾಗಬೇಕು.

- Pradeep Malabadi

12 Jun 2019, 03:37 pm

ಕನ್ನಡವು ಹಿಮಾಲಯ ಗಿರಿಶಿಖರತನಕ.

ಕರ್ನಾಟಕದಿಂದಡಿಗಡಿಗೆ ಕನ್ನಡವೆ ತುತ್ತತುದಿಗೆ ಕನ್ನಡದ ಹಿರಿಮೆ ಸದಾ ಮೇಲು ಮೇಲಕೆ
ಕನ್ನಡವೇ ಎಂದಿಗೂ ನನ್ನ ಮನಕೆ ಎಲ್ಲೆ ಇದ್ದರು ಕನ್ನಡವೇ ನನ್ನ ಬಾಯ ಮೆಲುಕು,

ಕನ್ನಡ ವೆಂದರೆ ಸದಾ ಕಮಲ ಅರಳುವ೦ತೆ ಕನ್ನಡವೆ೦ದರೆ ಸದಾ ನಿರ್ಮಲ ಮನಸ್ಸಿನ೦ತೆ ಕನ್ನಡವಿದ್ದಲಿೢ ಕನ್ನಡಿಗರ ಸದಾ ಗೆಲುವಿದ್ದ೦ತೆ ಯಾರೆ ಆದರೂ ಕನ್ನಡ ನುಡಿಯಲು ಸರಳ ಸಂಜೀವಿನಿಯಿದ್ದ೦ತೆ,

ಕರ್ನಾಟಕದ ನೆಲ ಸದಾ ಕನ್ನಡಮಯ ಕನ್ನಡ ಭಾಷೆ ಸದಾ ಸ್ಮರಣೀಯ ಕನ್ನಡ ನುಡಿಗಳನ್ನಾಡಲು ಬಂಗಾರ ಸುರಿಮಳೆಯು ಏನೆ ಆದರು ಕನ್ನಡನಾಡು ನುಡಿ ನಮ್ಮೆಲೢರ ಕಣ್ಮಣಿಯು,

ಕನ್ನಡವ ಕಲ್ತು,ಸದಾ ಎಲ್ಲರಲ್ಲೂ ಕನ್ನಡವ ಬಿತ್ತು ಕನ್ನಡವೆಂಬುದು ಹಲವು ಕೋಗಿಲೆಯ ಕಂಠದ ರಾಗದ ಗತ್ತು
ಕನ್ನಡವಂಬುದು ಹಲವು ಕವಿಗಳ ಕಾವ್ಯದ ಗಮ್ಮತ್ತು ಕನ್ನಡ ಸದಾ ನಮ್ಮ ಬಾಯಲ್ಲಿ ಹೊಮ್ಮುವ ವಜ್ರದ ಕೀರಿಟಕ್ಕಿರುವ ಕಿಮ್ಮತ್ತು,

ಕನ್ನಡ ನದಿ ಜಲಗಳ ಪ್ರತಿ ಹರಿವಿನಲೢು ಕನ್ನಡ ಸಾಲು ಕರ್ನಾಟಕದ ಪ್ರತಿ ಮಣ್ಣಲೢು ಕನ್ನಡ ಚರಿತ್ರೆಯ ಸಾಲು ಕರ್ನಾಟಕದ ಪ್ರತಿ ಕನ್ನಡಿಗ ಕನ್ನಡದ ಕಾವಲು ಕರ್ನಾಟಕದ ಪ್ರತಿ ಹಸಿರಾದ ಗಿಡ-ಮರಗಳ ಎಲೆಗಳಲೢು ಕನ್ನಡವೇ ಪಿಟೀಲು,

ಕನ್ನಡವೆಂಬುದು ಪ್ರತಿ ಕವಿಗಳ ಲೇಖನ ಶಕ್ತಿ, ಅದುವೇ ನಮ್ಮ ಕವಿಗಳ ಯುಕ್ತಿ, ಕನ್ನಡ ನೆಲದಲ್ಲಿರುವ ನಮಗೆ ಕನ್ನಡವೇ ಮುಕ್ತಿ, ಬೆಳಗಿಸೋಣ ಕನ್ನಡದೀಪ ಹಚ್ಚುವ ಮೂಲಕ ಸಾವಿರ, ಕನ್ನಡ ಭಾಷೆಯೆಂಬ ಪಣತಿ,

ಕನ್ನಡ ನೆಲ,ಜಲ,ಪರಿಸರ ಸದಾ ಶಾಂತಿ ಕನ್ನಡ ಭಾಷೆಯೆಂಬುದು ಸದಾ ಹೊಳೆಯುವ ಕಾಂತಿ ಕನ್ನಡವೆಂಬುದು ಕರ್ನಾಟಕ ನೆಲದ ಒಗ್ಗಟ್ಟಿನ ಪ್ರತೀತಿ ಕನ್ನಡವೆಂಬ ಮ್ರೃದು ಮನಸ್ಸು ಎಂದೂ ಅಳುಕದು ಎಂಬುದೆ ನಮ್ಮ ವದಂತಿ,

ಕನ್ನಡ ಭಾಷೆಯ ಸಾರೋಣ ಎಲೢರ ಕಿವಿಗೆ ಮುಟ್ಟುವ ತನಕ
ಕನ್ನಡ ಭಾಷೆಯ ಸಾರೋಣ ಎಲೢರೂ ಪ್ರೀತಿಸುವ ತನಕ ಕನ್ನಡ ಭಾಷೆಯ ಮೊಳಗಿಸೋಣ ಎಲೢರಿಗಿದು ಬೇಕೆನುವ ತನಕ
ಕನ್ನಡವ ಮುನ್ನಡೆಸೋಣ ಹಿಮಾಲಯ ಗಿರಿಶಿಖರ ತನಕ.

- Pradeep Malabadi

12 Jun 2019, 03:16 pm

ಮತ್ತೆ ಚಿಗುರದ ಮಾಮರ

ಮತ್ತೆ ಚಿಗುರದ
ಮಾಮರವು ಅಳುತಲಿ
ತಾ ಬಯಸಿದೆ
ಕೋಗಿಲೆಯ ಧನಿಯ!!
ಮಾಮರದಿ ಮೈ ಮರೆತು
ಹಾಡುವ ಕೋಗಿಲೆಯ
ಕೊರಳಲ್ಲೂ
ಯಾವುದೋ ನೋವು!!

ತಾ ಹೆತ್ತ ಕೂಸನು
ಮುದ್ದಿಸುವ ಹಾಗಿಲ್ಲ
ಅಕ್ಕರೆಯ ತುತ್ತಿಕ್ಕಿ
ಅಪ್ಪುವ ಸಲಿಗೆ ಇಲ್ಲಿ!!
ಒಣ ಮರಕೆ ನೀರಿತ್ತು
ಸಲಹುವರು ಯಾರಿಲ್ಲ
ಒಣ ಮರದಿ ಗೂಡು ಕಟ್ಟಿ
ಆಡುವ ಹಕ್ಕಿಗಳೂ ಇಲ್ಲ!!

ಯಾರಿತ್ತ ಶಾಪವೋ
ಪ್ರಕೃತಿಯ ನಿಯಮವೂ
ಬದಲಿಸಿ ಬಾಳಲೂ
ಯಾರಿಂದಲೂ ಆಗಿಲ್ಲ!!
ತನ್ನ ಮನದ ಆ ನೋವ
ಎದೆಯೊಳಗೆ ಬಚ್ಚಿಟ್ಟು
ಇದುವರೆಗೂ ಕೊರಗುತಿದೆ
ನೂರಾರು ಜೀವ!!

- ಪಿ.ಜಿ.ಜ್ಯೋತಿ

12 Jun 2019, 10:23 am