Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪದಗಳಲ್ಲಿ ನಾನು ಬೆರೆತೆ

ಅವಳು ಬರೆದ ಕವಿತೆ ಓದಿ
ನಾನು ಬರೆಯಲು ಕಲಿತೆನು!!
ಮೊದಲ ಸಾಲಿನಲ್ಲೇ ಸಾಗಿತು
ಮೊದಲ ಪ್ರೇಮ ಪಯಣವು!!

ಕಣ್ಣ ಭಾಷೆಯ ಅರಿತ ಮೇಲೆ
ಎದೆಯ ಒಳಗೆ ಅವಳ ಲೀಲೆ!!
ಹಗಲು ಇರುಳು ಕಣ್ಣ ಒಳಗೆ
ಅವಳೇ ಬಂದು ಸುಳಿದ ಹಾಗೆ!!

ಬರೆವ ನನ್ನ ಕೈ ನಡುಗುತಿರಲು
ಅವಳೇ ಬಂದು ತಿದ್ದಿಸಿದ ಹಾಗೆ!!
ಅಕ್ಷರವ ಎಣಿಸಿ ಪದವ ಕೂಡಿಸಿ
ಬರೆದೆ ಸಾಲದು ಕವಿತೆಯಾಯ್ತು!!

ಅವಳಿಗಾಗೇ ನಾನು ಬರೆದಿಹ
ಮೊದಲ ಕವಿತೆ ಪ್ರೇಮ ಕವಿತೆ!!
ಅವಳು ಓದುವ ಮುನ್ನ ಹೋಗಿ
ಆ ಪದಗಳಲ್ಲಿ ನಾನು ಬೆರೆತೆ!!

- ಪಿ.ಜಿ.ಜ್ಯೋತಿ

12 Jun 2019, 10:07 am

ಜಾರುವ ಕಣ್ಣೀರಿಗೆ

ಜಾರುವ ಕಣ್ಣೀರಿಗೂ
ಆರುವ ವರವಂತೆ!!
ಕಳೆದಿಹುದು ಆ ನೋವು
ಯಾಕಿನ್ನು ಚಿಂತೆ!!

ಇರುಳು ಕಳೆದ ಮೇಲೆ
ಹಗಲೊಂದು ಮೂಡಿಹುದು!!
ಬೆಳಕಲ್ಲೂ ಭಯವೇಕೆ
ಓ ನನ್ನಯ ಕಾಂತೆ!!

ಬೆರಳ ಬೆಸೆಯಲು ಒಂದು
ಅಂಗೈಯು ದೊರೆತಿಹುದು!!
ನೆರಳ ಜೊತೆ ನೆರಳೊಂದು
ಏಕಾಂತ ಮರೆತಿಹುದು!!

ನೀನಿಲ್ಲಿ ಕುಳಿತಿರಲು
ಸಂಗಾತಿ ದೊರೆತಿಹನು!!
ಒಂಟಿ ನೀನಲ್ಲವೇ ಗೆಳತಿ
ಎಂದು ಅವನು ನುಡಿದಿಹನು!!

ಮನವು ಮುಗಿಲು ಮುಟ್ಟುವ
ಕಾಲವು ಬಂದಿಹುದು!!
ನೀ ಬೇಸರವನು ಮರೆತು
ಆ ನೇಸರನನು ಸೇರು!!

ಶುಭವಾಗುವ ಬದುಕಿಗೆ
ಶುಭಕಾಲವೇ ಎಲ್ಲ!!
ಈ ಶುಭಕ್ಷಣವೇ ಕೊನೆಯಾಗಲಿ
ನಿನ್ನ ಎಲ್ಲ ನೋವು!!

- ಪಿ.ಜಿ.ಜ್ಯೋತಿ

12 Jun 2019, 09:42 am

ಮೌನ

ಪ್ರೀತಿಗೆ ಕಾರಣವಿಲ್ಲದೆ ಕಾಣುವ ಕನಸುಗಳ‌ ಏರಿ
ಆಸೆಯ ಉತ್ತುಂಗ ದಿಂದ ಜಾರಿದ ಮೇಲೆ
ಖಾಲಿಯಾದ ಮನಸಿನಲ್ಲಿ
ಪದೇ ಪದೇ ನೆನಪಾಗುವ ನೆನಪುಗಳಿಗೆ
ಮೌನವೇ ಆಭರಣ

- ಎ ಜಿ ಶರಣ್

12 Jun 2019, 08:17 am

ನಾನು ಏಕಾಂಗಿ....!

ನಾನು ಏಕಾಂಗಿ 

ಒಬ್ಬಂಟಿ ಯಾನದ ಏಕಾಂಗಿ ಪ್ರಯಾಣಿಕ ನಾನು,....!
ಉತ್ತರ ವಿಲ್ಲದ ಪ್ರಶ್ನೆಗಳಿಗೆ ಮಾಲೀಕ ನಾನು,...!

ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು,....!
ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು,....!

ಜೇವನದ ಮುಂದಿನ ದಾರಿ ತಿಳಿಯದ ಅನ್ವೇಷಣೆಗಾರ ನಾನು, ಎಲ್ಲವನ್ನೂ ಮೂಢವಾಗಿ ನಂಬುವ ಅಜ್ಞಾನಿ ನಾನು,....!
ಈ ಜೀವನದ ಪಾಠ ಕಲಿಯಲಾಗದ ವಿದ್ಯಾರ್ಥಿ ನಾನು,.....!

ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳುವ ಹುಚ್ಚ ನಾನು,.....!
ನಿನ್ನ ಸಂಚಿಗೆ ಬಲಿಯಾಗಿ ಶಿಕ್ಷೆ ಅನುಭವಿಸುತ್ತಿರುವವನು ನಾನು,....!

ಯಾವುದನ್ನು ಅರಿಯದೆ ನಿನ್ನಿಂದ ಮೋಸಹೋದವನು ನಾನು,....!
ಏನು ತಪ್ಪು ಮಾಡದಿದ್ದರು ಅಪರಾಧಿ ಸ್ಥಾನದಲ್ಲಿರುವವನು ನಾನು,....!

ಯಾರ ಮನಸ್ಸಿಗೂ ನೋವು ನೀಡದ್ದಿದರು ಕೆಟ್ಟವನು ಎಂಬ ಪಟ್ಟ ಪಡೆದವನು ನಾನು,....!
ಯಾರಿಗೂ ಮೋಸ ಮಾಡದಿದ್ದರು ಮೋಸಗಾರ ನಾನು,....!

ಬಂಧು ಬಳಗದಿಂದ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿರುವವನು ನಾನು,.......!
ನಿನ್ನಿಂದಾಗಿ ಎಲ್ಲವನ್ನು ಕಳೆದುಕೊಂಡು ಅನಾಥನಾಗಿರುವವನು ನಾನು,......!

ಸಮಾಜದಿಂದ ದೂರವಾಗಿ ಏಕಾಂಗಿಯಾಗಿರುವವನು ನಾನು,.....!
ನಾನು ಯಾರೆಂದು ಗುರುತಿಸಿಕೊಳ್ಳಲಾಗದ ಅನಾಮಿಕ ನಾನು,....!

ಏಕಾಂಗಿ ಯಾನದ ಒಬ್ಬಂಟಿ ಪ್ರಯಾಣಿಕ ನಾನು,
ಉತ್ತರ ವಿಲ್ಲದ ಪ್ರಶ್ನೆಗಳಿಗೆ ಮಾಲೀಕ ನಾನು,.....!

       - ಹೆಚ್.ಎಸ್.ಶಶಾಂಕ್

- ShashankHS

09 Jun 2019, 01:10 pm

ವಿಜಯಪುರದ ಕುವರಿ

ನೋಡು ನೋಡಲ್ಲಿ ಕಣ್ಣಾರೆ ಬರುತಿಹಳು
ನಗು ನಗುತಾ ಹೆಜ್ಜೆ ಹಾಕುತಿಹಳು
ಅವಳ ಮನಸು ಅಂದ
ಅವಳ ಹೃದಯ ಚೆಂದ
ಬಾ ಇಲ್ಲಿ ಓ ಗೆಳೆಯ ಎನುತಿಹಳು
ಕೈಬೀಸಿ ಬಳಿಗೆ ನನ್ನ ಕರೆದಿಹಳು

ವಿಜಯಪುರ ಪೂರದ ಕುವರಿಯು ಅವಳು
ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ಅವಳೆ
ಸರಸ್ವತಿ ರೂಪಿಣಿ ಮಾತೃ ಸ್ವರೂಪಿಣಿ
ರಜನೀಶನ ರಾಣಿಗೆ ಹೂಗಳ ಮಾಲೆ

ನಂಬಿರುವ ನನ್ನಯ ಸ್ನೇಹಕ್ಕಾಗಿ
ನಾ ಪ್ರೀತಿಸಿದ ಪ್ರೀತಿಯ ಪ್ರೀತಿಗಾಗಿ
ಕಾಯುತಿಹಳು ನೋಡಲ್ಲಿ ಮನುಜೆಯಾಗಿ
ರಜನೀಶ ನ ಕನಸಿನ ರಾಣಿಯಾಗಿ

ಕಲ್ಮಶವೇ ಕಾಣಿಸದ ಅವಳ ನಗೆ
ಸುತ್ತು ಸುಳೆಯೋ ತಂಗಾಳಿ ಅವಳುಸಿರು
ಅವಳ ಒಳ್ಳೆಯ ನಡತೆಯೆ ಅವಳುಡುಗೆ
ನಮ್ ಹುಡುಗಿಯ ರೂಪವೇ ಚೆಂದದ ಗೊಂಬೆ
##ಮೌನಿ##

- RajaneeshNandikolmath

06 Jun 2019, 10:46 am

ಮಾಯದ ರಂಭೆ

ಆವಳೊಂದು ಮಾಯದ ರಂಭೆ
ಬೀಡುವಳೇ ರಮೀಸದೆ

ಹುಣ್ಣಿಮೆಯ ಬೆಳಕೀಗು ಅಮುವಾಸೆಯ ಕತ್ತಲಿಗು ಮುಂಜಾನೆಯ ರವಿಗು
ತಂಪಿನ ಶಶಿಗು ಆಸೆ ಹುಟ್ಟಿಸಿದ
ಮರದ ರಂಭೆಯೇ ಅವಳು

ಹರನೀಗು ಹರಿಗು ದೇವರೀಗು ದೇವ್ವಾಗು
ಸೋರ್ಯನೀಗು ಶಶಿಗು ಇಂದ್ರನೀಗು
ಚಂದ್ರನೀಗು ಬಿಡದೆ ಕಾಡಿದವಳು
ಮೋಹದ ಮಡದಿ ಅವಳು

ರಾಮನೀಗು ರಹಿಃಮನೀಗು ಏಸುವಿಗು ಶ್ರೀ
ಕೃಷ್ಣನೀಗು ಅರ್ಜುನೀಗು ಬಲರಾಮಗು
ಬೀಡದೇ ಗೇಜ್ಜೆಕಟ್ಟಿ ಆಡೀಸಿದವಳು
ಕ್ಷಣ ಕ್ಷಣವೂ ಕಾಡುವ ರಂಭೆ

ದೇವ್ವಾಗು ದೇವರೀಗು ಆಥಿರಥ ಮಹರಥ
ರೀಗು ಬೀಡದೆ ಕಾಡಿದವಳು ಇನ್ನು
ನರಮಾನವರೀಗು ಬೀಡುವಳೇ
ಆ ಮಾಯಾಂಗೀಣಿಯ ರಂಭೆ

ರಾಜ್ಯಕ್ಕೂ ರಾಜನೀಗು ಭೂಮಿಯ ಮೇಲೆ
ಹುಟ್ಟಿದ ದೈವಾಂಶಸಂಬೂತರನ್ನು ಬೀಡದ
ಈ ಮಾಯಾಂಗೀಣಿಯ ರಂಭೆ ಇನ್ನು
ನಾನ್ನನು ಬೀಡುವಳೇ ಈ ರಂಭೆ

ಇವಳ ಮಾಯದಾಟದ ಬಲೆಯಲ್ಲಿ
ಸಿಲುಕಿರುವ ಇಲಿಯಂತಾದೆ ಆದರು
ಬೀಡದವಳು ಈ ಮಾಯದ ರಂಭೆ

ಆವಳೊಂದು ಮಾಯದ ರಂಭೆ
ಬೀಡುವಳೇ ರಮೀಸದೆ

- Vinod Naik Vinod Naik

05 Jun 2019, 07:24 pm

ಕಾಣಿಸದಿರು ಇನ್ನೆ0ನೆಂದು...

ಕಾಣದ ಆಸೆಯನ್ನುಟಿಸಿ ಮನದಲ್ಲಿ
ಕಣ್ಣಂಚಿಗು ನಿಲುಕದೆ ಮಾಯವಾದೆಯೆಲ್ಲಿ
ಹೃದಯದದಲ್ಲಿ ಕಟ್ಟಿದ ಪ್ರೀತಿಯ
ಅರಮನೆಗೆ ನೋವಿನ ಕಿಚ್ಚು ಹಚ್ಚಿ
ನಾ ಕಂಡ ಸುಂದರ ಕನಸಿನ ಕನ್ನಡಿ
ಮಬ್ಬಾಯಿತು ಇಂದು ನಿನ್ನಿಂದ
ಬೆಳಕಿನ ಪುಂಜದಂತ ಈ ಬದುಕಿಗೆ
ಕತ್ತಲ ಹೊದಿಕೆ ಹೊದಿಸಿ
ಶಾಂತ ಸಾಗರದ ತಿಳಿನೀರಿನಂತ ಮನಸ್ಸಿಗೆ
ಭೂಕಂಪ ಬಂದು ಬಡಿದಿದೆಯಿ0ದು
....... ನಿನ್ನಿಂದ

ಇನ್ನೆಂನೆಂದು ನನ್ನಿ ನಯನದ ದೃಷ್ಟಿಗೆ
ಬೀಳದಿರು ದಯಮಾಡಿ

---- ಮಂಜು

- ಮಂಜು

04 Jun 2019, 03:15 pm

"ಹಕ್ಕಿಯ ತೆರದಲಿ"

ಹಕ್ಕಿ ಹಾರುತಿದೆ ಗಗನದಂಚಿನಲ್ಲಿ
ಗರಿ ಬಿಚ್ಚಿ ಹೊಲಗದ್ದೆಗಳ ಬಯಲಿನಲ್ಲಿ
ರವಿಯ ಸಂಧಿಸುವ ಬಯಕೆಯಲ್ಲಿ
ಬೇಸಗೆಯ ಉರಿ ಬಿಸಿಲ ಧಗೆಯಲ್ಲಿ
ಉಲ್ಕಾಪಾತಗಳ ಆಸುಪಾಸಿನಲ್ಲಿ
ಗಿರಿವನಗಳ ಹಸಿರು ಕೊಂಬೆ ರೆಂಬೆಯಲ್ಲಿ
ಪರ್ವತ ಶ್ರೇಣಿಗಳ ಕಣಿವೆಗಳಲ್ಲಿ
ಹೂದೋಟಗಳ ಕಂಪು ಇಂಪಿನಲ್ಲಿ
ನಿರ್ಜನ ಹಾದಿಯ ಮರಳುಗಾಡಿನಲ್ಲಿ
ಕೆರೆ,ನದಿ, ಸಾಗರಗಳ ದಡದಲ್ಲಿ
ಜಲಪಾತಗಳ ಸಂದುಗೊಂದಿನಲ್ಲಿ
ಗವಿಗಹ್ವರಗಳ ಮಂಕುಬೆಳಕಿನಲ್ಲಿ
ಹಳ್ಲಿದಿಳ್ಳಿಗಳ ರಸ್ತೆಬದಿಯಲ್ಲಿ
ಜನಜಂಗುಳಿಯ ಗದ್ದಲದ ನಡುವಿನಲ್ಲಿ
ಕನಸ ನನಸಾಗಿಸುವ ತವಕದಲ್ಲಿ
ಪ್ರೀತಿ ಹಕ್ಕಿ ಹಾರುತಿದೆ ಜಗದಹೃದಯದಲ್ಲಿ

#ringformpoetry
© ೨೦೧೯ ಬಿ.ಎಸ್.ಸರೋಜ
೦೩/೦೬/೨೦೧೯

- Saroja BS

03 Jun 2019, 05:01 pm

ವೃಕ್ಷ ಮಾತೆ

ನಾ ಭೂತಾಯಿಯನ್ನು ಬಿಗಿದಪ್ಪಿಲು
ಕಾಂಕ್ರೀಟು ರೋಡ್ ಗಳು ಕಟ್ಟಿಯಾಗಿವೆ ಬೇರುಗಳಿಗೆ ನಿಲ್ಲಲು ಶಕ್ತಿ ಇಲ್ಲದೆ
ಬಲಹೀನವಾಗಿ ಧರೆಗೆ ಉರುಳುತ್ತಿರುವೇ
ತುಸು ಗಾಳಿಯ ರಭಸಕ್ಕೆ

ವರುಣನ ಸಿಂಚನದಲ್ಲಿ ಜಳಕವ ಮಾಡಿ
ನಾ ಹೇಗೆ ದಾಹ ತೀರಿಸಿಕೊಂಡು
ಬೆಳೆದು ನಿನಗೆ ಉಸಿರನ್ನು ನೀಡಲಿ
ನೀ ಹೇಳು ನಗರ ಮಾನವ ??

ತುಸು ತಾಪ ಹೆಚ್ಚಾದರೆ ಗೊಣಗುತ್ತಿಯ ಸುಮ್ಮನೆ
ಹನಿ ನೀರು ಸಿಗದಿದ್ದಾಗ ಕುದಿಯುತ್ತಿರುವೇ ಮೆಲ್ಲನೆ

ರೆಂಬೆ ಕೊಂಬೆ ಕಡಿದು ಮನೆ ಕಟ್ಟಿ ಮರೆತುಬಿಟ್ಟೆಯಾ
ನಾ ಮರೆತರೆ ನಿನಗೆ ಉಳಿಗಾಲ ಇದೆಯಾ
ನಿನ್ನ ಸಂಗಡ ಬೆಳೆಸು ನನ್ನ ಸಂಸಾರ..

ಎ ಜಿ ಶರಣ್

- ಎ ಜಿ ಶರಣ್

03 Jun 2019, 10:23 am

ವಿದಾಯ

ಅಂದು ಅದೇ ಮುಸ್ಸಂಜೆ ಹೊತ್ತಿನಲ್ಲಿ
ನದಿಯ ತೀರದಲ್ಲಿ ಸೋಮಾರಿಯಂತೆ
ಏನನ್ನೋ ಯೋಚಿಸುತ್ತ ಅಲೆಯುತ್ತಿರುವಾಗ
ನನಗೆ ಎದುರಾಗಿದ್ದಳು
ನೋಡಲು ಅಷ್ಟೇನು ಆಕಷ೯ಕವಾಗಿಲ್ಲದಿದ್ದರು
ಒಂದು ಕ್ಷಣ ನಿಂತು ನೋಡುವಂತಿದ್ದಳು
ಎಲ್ಲೋ ನೋಡಿದಂತೆ ಯಾವುದೋ ನೆನಪಿನಾಳದಲ್ಲಿ
ಹುದುಗಿ ಹೋಗಿದ್ದವಳು ಒಡಮೂಡಿದOತಿದ್ದಳು

ಧರೆಗೆ ತಂಪೆರೆಯಲೇನೋ ಎಂಬಂತೆ ಮೋಡ ಹೇಗೆ
ತನ್ನೋಡಲನ್ನೆಲ್ಲ ಬರಿದು ಮಾಡಿಕೊಂಡು
ಪ್ರೀತಿಯ ಮಳೆಗೆರೆವುದೋ
ಅದೇ ಭಾವ ಅವಳು ನನ್ನೆಡೆಗೆ ನೋಡಿದಾಗಿನ
ನೋಟದಲ್ಲಿತ್ತು

ಪ್ರೀತಿಯೆಂಬುದು ಅದ್ಭುತವೋ ?
ಅದ್ಭುತವೆಂಬುದೇ ಪ್ರೀತಿಯೋ ?
ಮೊದಲ ಪರಿಚಯದಲ್ಲೆe ಒಲವಿನಸಿರಿ
ಚಿಗರೊಡೆದಿತ್ತು ಸ್ನೇಹ ಸಲುಗೆಗೆ ತಿರುಗಿ
ಒಬ್ಬರನ್ನೋಬ್ಬರು ಪ್ರೀತಿಸತೊಡಗಿದೆವು

ಆನೇಕ ವಿಷಯಗಳಲ್ಲಿ ಸಮಾನ ಆಸಕ್ತಿ
ಸಮಾನ ಮನಸ್ಕರಾಗಿದ್ದೆವು
ಸುಶ್ರಾವ್ಯವಾಗಿ ಹಾಡಲು ಬರುವ ಬಾವಗೀತೆಗಳಂತಿರದೆ
ಸ೦ಗೀತಗುಣ ಲವಶೇಷವೂ ಇರದ
ಪದ್ಯ ರೂಪದ ಗದ್ಯಗಳೋ ಗದ್ಯ ರೂಪದ ಪದ್ಯಗಳೋ
ಓಟ್ಟಾರೆ ಅಸಂಬದ್ಧ ಪದಗುಚ್ಚಗಳಂತೆ ಕಾಣುವ
ನನ್ನ ಕೆಲ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಳು

ವಾಸ್ತವದ ವಸ್ತು ಸ್ಥಿತಿ - ಗತಿ ಸಮಸ್ಯೆ ಪರಿಹಾರಗಳನ್ನು ವಿವರಿಸುವ ಕಥೆ ಕವನ ಕವಿತೆಗಳನ್ನು ಬರೆಯುವುದು ಬಿಟ್ಟು
ಬರೀ ಪ್ರೀತಿ ಪ್ರೇಮಗಳ ನೆಲೆಗಟ್ಟುಗಳಲ್ಲಿ ಬರೆಯುವ
ಹುಟ್ಟು ಪಲಾಯಾನವಾದಿಯೆ೦ದು ಜರಿಯುತ್ತಿದ್ದಳು
ನನ್ನ ಸ್ಥಿತಿ ಗತಿ ಇತಿ ಮಿತಿಗಳ ಅರಿವಿದ್ಧಿದರಿಂದ ನಕ್ಕುಸುಮ್ಮನಾಗುತ್ತಿದೆ

ಬದುಕಿನ ವಿವಿಧ ಮಜುಲುಗಳ ಜಿeವನಾನ್ವೇಷನೆಗೆ ಹೊರಟ ನಮ್ಮಪ್ರೇಮ ವಿಸ್ಮಯವೆಂಬ ದಟ್ಟ ಕಾನನದ ಹಸಿರನ್ನು ಆಗಾಗ ಜಡಿ - ಮಳೆ -ಬಿರು-ಮಳೆ ಹನಿ -ಮಳೆ ಸೋನೆ ಮಳೆಗಳು ಸುರಿದು ಕಾಪಿಡುವ ಪ್ರಯತ್ನ ಮಾಡಿದವು
ಬರ ಬರುತ್ತ ಕಾಡು ಬೆಂಗಾಡಾಗಿ ಮರುಭೂಮಿಯಾಗತೊಡಗಿತು

ಇದಕಿದ್ದಂತೆ ಒಂದು ದಿನ ಹಲವು ಕಾರಣಗಳ ಹೇಳಿ
ಹೊರಟು ಹೋದಳು
ನಾನು ಅವಳು ಹೋದ ದಿಕ್ಕನ್ನೇ ನೋಡುತ್ತ ಸುಮ್ಮನೆ ಕುಳಿತುಕೊಂಡೆನು
ಸುತ್ತ ಮೌನ ಆವರಿಸಿ ಅಸಹನೀಯವೆನಿಸಿತು ನೀರವತೆ ಭೀಕರವೆನಿಸತೊಡಗಿತು ಮನಸ್ಸು ವಿಕ್ಷಿಪ್ತಗೊಂಡಿತು

ಅವಳಾಡಿದ ಮಾತುಕತೆ ಚೆರ್ಚೆ ಹಾವ- ಭಾವ ಭಂಗಿ ನೆಡುವಳಿಕೆಗಳಲ್ಲಿ ಮತ್ತೆ ತಿರುಗಿ ಬರುವ ಸುಳಿವುನ್ನೇನಾದರು ಬಿಟ್ಟುಹೋಗಿರಬಹುದೇನೋ ಎಂದು ನೆನಪಿಸಿಕೊಳ್ಳುತ್ತ
ನನ್ನೂರಿನ ಬೆಟ್ಟಗಳ ಮೇಲಿರುವ ಪಾಳು ಕೋಟೆಯ ಕೃತ್ರಿಮ ವತು೯ಲಗಳಲ್ಲಿ ಅಲೆಯತೊಡಗಿದೆ

- ಶಶಿಧರ ಹೆಚ್ ಎನ್

31 May 2019, 10:32 pm