Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸಲ್ಲಿ ಕನಸೊಂದ ಕಂಡೆ

ಕನಸಲ್ಲಿ ಕನಸೊಂದ ಕಂಡೆ
ಯಾರಿಲ್ಲದ ಊರಲ್ಲಿ
ಮನನೊಂದು ನಾನು ಮೌನವಾಗಿ ಕುಳಿತಾಗ
ಗೆಳೆಯರಂತೆ ದೇವತೆಗಳು ಬಂದು ಸಮಾಧಾನ ಮಾಡುವಹಾಗೆ,
ಒಂಟಿಯಾಗಿ ಅಳುವಾಗ ಕಣ್ಣೀರ ವರಿಸಲೂ
ಜೊತೆಗೇ ಮಳೆರಾಯ ಬಂದಹಾಗೆ ,
ಕನಸಲ್ಲಿ ಕನಸೊಂದ ಕಂಡೆ.

ಆ ಕನಸನಲ್ಲಿ ಒಂದು ಸುಂದರ ಲೋಕ ಕಂಡೆ
ಸುಂದರ ಸ್ವರ್ಗವೇ ನಾಚುವಂತೆ
ಆ ಹಸಿರು ಮರಗಳು,ಆ ಸುಂದರ ಸರೋವರಗಳು,
ಕೈ ಬಿಸಿ ಕರೆಯುವಹಾಗೆ ಆ ಮಿನುಗುವ ನಕ್ಷತ್ರಗಳು
ಅಬ್ಬಾ..! ಮೋಡದ ಮೇಲೆ ತೇಲಾಡುವ ನಾನು ಚಂದಮಾಮನ ಬಿಗಿದಪ್ಪಿ ಮುದ್ದೀಸುವ ಹಾಗೇ
ಕನಸಲ್ಲಿ ಕನಸೊಂದು ಕಂಡೆ.
..ಹನು.ಮ್..

- hanumesh.m

05 May 2019, 01:58 pm

ಮುತ್ತಿನ ಕೊಯ್ಲು..

ಮುತ್ತಿನ ಕೊಯ್ಲು ನೆಡೆಯುತ್ತಿದೆ
ತುಟಿಯ ಅಂಚಲಿ, ಮೀಸೆ ಚುಚ್ಚಿದರೆ
ಕೋಪಿಸಿಕೊಳ್ಳುವೇ ಮುದ್ದಿಸು
ಮೆದುವಾಗಿ ಉಸಿರ ಬಿಸಿಯಲಿ,
ಸೋತು ನಿನ್ನವಳಾಗುವೆ ಮೆಲ್ಲ
ಕರಗಿ ಚಂದಿರನ ಕಣ್ತಪ್ಪಿಸಿ ನಡುರಾತ್ರಿಯಲಿ.

ಕೊರಳ ಇಳಿಜಾರಿಗೆ ತುಸು ಹೆಚ್ಚಿಗೆ
ನಿನ್ನ ಸನಿಹ ಬೇಕೆನಿಸಿದೆ,
ಸಾವಿನಾಚೆಗಿರುವ ಸುಖವ
ಸವಿವರವಾಗಿ ತಿಳಿಸು ಅದಕೆ
ತಡವರಿಸದೆ ನನ್ನವನಾಗಿ.

ಬಯಕೆಗಳಿಗೆ ಮಿತಿಯೊಡ್ಡಿ
ಮೌನದ ಮುಸುಕು ತೊಡಿಸಿ
ಸಾಕಾಗಿದೆ, ನೂರಾರು ಕವನದ
ಸಾಲು ನೀನಾಗಿ ನನ್ನ ಸೇರಬೇಕಿದೆ.

ಅಧರ ಸುಧೆಯ ಸಿಹಿ ಹೆಚ್ಚಾಗಿದೆ,
ಒಲವುಣಿಸಿ ನಿನ್ನ ತುಟಿಗೆ
ಮತ್ತೆ ಸಿಹಿಯ ತುಂಬಿಕೊಳ್ಳಬೇಕಿದೆ.
ಕದ್ದು ಕೊಡುವ ಮುತ್ತುಗಳು ಸಾಲದಾಗಿವೆ
ಸಾಲವಾಗಿ ಪಡೆದ ಕನಸಿಗೆ ನಿನ್ನ ಜೊತೆ
ಸೇರಿ ಜೀವ ತುಂಬಬೇಕಿದೆ.

- ಚುಕ್ಕಿ

04 May 2019, 10:15 pm

ಸ್ವಚ್ಛ ಮನಸಿನ ಹುಚ್ಚು ಆಸೆಗಳು...

ಸ್ವಚ್ಛ ಮನಸಿನ ಹುಚ್ಚು ಆಸೆ ನನ್ನದು..
ಹೆಚ್ಚಾಗಿ ಹೇಳುವೆ ಯಾರೂ ನನ್ನ ದೂರಬೇಡಿ...!

ಜಗ ಬೆಳಗೊ ಸೂರ್ಯ ನಾನಾಗಬೇಕು..
ವಿಶ್ವದ ಸೃಷ್ಟಿಕರ್ತ ನನಗೆನ್ನಬೇಕು...!
ಜಗದ ನಿಯಂತ್ರಣ ನನ್ನಲ್ಲಿರಬೇಕು..
ಈ ಜಗಕೆ ಸಾರಥಿ ನಾನಾಗಬೇಕು....!

ಸ್ವಚ್ಛ ಮನಸಿನ ಹುಚ್ಚು ಆಸೆ ನನ್ನದು..
ಹೆಚ್ಚಾಗಿ ಹೇಳುವೆ ಯಾರೂ ನನ್ನ ದೂರಬೇಡಿ...!

ನೃತ್ಯಕ್ಕೆ ಸ್ಫೂರ್ತಿ ನಾನಾಗಬೇಕು..
ಸಂಗೀತ ನಾದಬ್ರಹ್ಮ ನನಗೆನ್ನಬೇಕು....!
ಸರ್ವಕಲೆ ಚಕ್ರವರ್ತಿ ನಾನಾಗಬೇಕು..
ಎಲ್ಲರೂ ನನಗೆ ಸೈ ಎನ್ನಬೇಕು, ಜೈ ಅನ್ನಬೇಕು..!

ಸ್ವಚ್ಛ ಮನಸಿನ ಹುಚ್ಚು ಆಸೆ ನನ್ನದು..
ಹೆಚ್ಚಾಗಿ ಹೇಳುವೆ ಯಾರೂ ನನ್ನ ದೂರಬೇಡಿ...!

ಶ್ರೀರಾಮಚಂದ್ರನ ಗುಣದವನಾಗಬೇಕು..
ಹತ್ತುತಲೆ ರಾವಣನ ಬುದ್ಧಿ ನನಗಿರಬೇಕು...!
ತ್ರಿಲೋಕದ ಅಧಿಪತಿ ನಾನಾಗಬೇಕು..
ಚತುರ್ಮುಖ ಬ್ರಹ್ಮನ ಮೀರಿಸಬೇಕು....!

ಸ್ವಚ್ಛ ಮನಸಿನ ಹುಚ್ಚು ಆಸೆ ನನ್ನದು..
ಹೆಚ್ಚಾಗಿ ಹೇಳುವೆ ಯಾರೂ ನನ್ನ ದೂರಬೇಡಿ...!

--- S Anju Doddmani
9741442810

- S Anju Doddmani

03 May 2019, 05:10 pm

ಮೃದು ನೆರಳ ಮೌನ


ಬೆವರ ಹನಿಯ ಮಿಂಚಲಿ ನನ್ನ
ನಗುವನು ಕೊಂಡು ತರುವನು,
ಕರೆ ಕರೆದು ಕಂದಾ ಎಂದು ಪ್ರೀತಿಯಿಂದ
ತುತ್ತನಿಡುವನು, ಎದೆಯ ಮೇಲಿನ
ಹೃದಯದಾಸಿಗೆಯಲ್ಲಿ ಬೆರಳ ತುದಿಯಲಿ
ಲಾಲಿ ಹಾಡುತ್ತಾ ಗಾಳಿಗೆ ತಂಪು ಕಲಿಸುವನು,
ನಿದ್ದೆಯ ಮಡಿಲಲಿ ನನ್ನ ಮಲಗಿಸುವವನು.

ಬೇರೊಂದು ಹೆಸರುಬೇಕೇನು ಅಪ್ಪ
ಎಂಬ ಆತ್ಮೀಯತೆ ಸಾಲುವುದಿಲ್ಲವೇ!
ಜೀವ ಮಿಡಿಯಲು ಅವನ ಒಂದು ಕರೆಗೆ.
ಗಡಸು ಧ್ವನಿಯಲ್ಲಿ ತುಸು ಕೋಪ ಹೆಚ್ಚಾದರೂನು
ಭುಜಕ್ಕೆ ಒರಗಿ ಕುಂತ ಕ್ಷಣ ಮೃಧು ನೆರಳ ಮೌನ ಸಾಕಾಗುವಷ್ಟುಂಟು ನನ್ನ ನೋವ ಹಂಚಿಕೊಳ್ಳಲು.

ಜೀವ ನೀಡಿದರೂ ಜೋಕಾಲಿ ಜೀಕುತಿರಳು
ಪುಟ್ಟ ಮಗು ತಾನಗುವನು, ಕಣ್ಣ ಮುಚ್ಚಿ ಕದ್ದು
ಮುಚ್ಚಿ ಓಡಿ ಬಂದು ಬಿಗಿದಪ್ಪಿ ಮುದ್ದಾಡುವನು,
ಹೇಳಲೆಷ್ಟು ಚಂದ ನೋಡುವ ನಾಯನಗಳಿಗೆ
ಆನಂದ ಅಪ್ಪನ ಪ್ರೀತಿ ಅವನೊಬ್ಬನಿಗೆ ತಿಳಿದ ರೀತಿ.

- ಚುಕ್ಕಿ

01 May 2019, 09:08 pm

ಕಲಿಕೆಯ ಮಜಲುಗಳು

ತಾಯ ಒಡಲಿನಿಂದ
ಮಡಿಲ ಸೇರಿದಂದಿನಿಂದ
ಕಲಿಕೆಯು ಕವಲೊಡೆಯುವುದು
ಹಲವು ಮಜಲುಗಳ ಪಡೆದು

ತೊದಲು ನುಡಿಗಳಲ್ಲಿ
ಮಧುರ ಧ್ವನಿಯಲ್ಲಿ
ಅಕ್ಷರಗಳ ಮಂತ್ರ ಪಠಿಸುತ್ತ
ಬೆಳೆವೆವು ಸೆಳೆಯುತ್ತ ಸರ್ವರ ಚಿತ್ತ

ಮೂರು ವರುಷವ ದಾಟಿ
ಆರಂಭ ವಿದ್ಯೆಯ ಮೇಟಿ
ಮಾಡುವರು ನಾಟಿ ;
ಶಿಕ್ಷಕರು ಬೀಸುತ ಚಾಟಿ

ಬೆಳೆಯುವುದು ಗೆಳೆಯರ ಬಳಗ
ಪಡೆಯುತ ಹಂತಹಂತಗಳಲ್ಲಿ ವರ್ಗ
ಮುನ್ನೆಲೆಗಾಗಿ ಸೆಣಸಾಟ
ಸಹಪಾಟಿಗಳೊಂದಿಗೆ ಹೋರಾಟ

ಉತ್ತಮ ಅಂಕಗಳ ಗಳಿಸಿ
ವಿದ್ಯಾರ್ಥಿ ಜೀವನ ಮುಗಿಸಿ
ಪ್ರಾರಂಭ ಪ್ರಾಯೋಗಿಕ ಜೀವನ
ಅನುಭವದ ಅಸಲಿ ತಾಣ



ಶಾರದ

- ಶಕುಂತಲಾ

30 Apr 2019, 06:05 pm

ಓ ಮನಸೇ...

ಓ ಮನಸೇ....
ನೀ ಖಾಲಿಯಾದಾಗ..!
ನೀನೇನೊ ತುಂಬಿಕೊಂಡೆ..
ನೂರು ನೆನಪುಗಳ..!
ಕೋಟಿ ಕನಸುಗಳ...!!
ಆದರೆ...
ನನ್ನ ಹೃದಯ ಖಾಲಿಯಾದಾಗ..!
ನೂರು ಕೈ ಒರೆಸಿದರೂ,
ನಿಲ್ಲುತ್ತಿಲ್ಲ ಕಣ್ಣೀರು.....
ಭಾರವಾಗಿ ಹೋಗಿದೆ,
ಈ ಮನದ ಉಸಿರು...
ಒಮ್ಮಯಾದರೂ ಕೇಳಲಿಲ್ಲ...!
ನೀ ನನ್ನ ಒಪ್ಪಿಗೆ......
ನೋವಲ್ಲೇ ಸಾಗುತಿರುವೆ...!
ನೀ ಮಾಡಿದ ತಪ್ಪಿಗೆ.....

S Abhi Doddmani
9741442810

- S Anju Doddmani

30 Apr 2019, 01:25 pm

ಮಳೆರಾಯ

ಮೋಡ ಮುತ್ತಿನ ಬಾನು
ಬೂಮಿಗೆ ಬೀಳುತಿರೆ ತಾನು
ಪಸಲಿಗೆ ಎಲ್ಲೇಲ್ಲೂ ಹಸಿಇನ್ನು
ರೈತನ ಮೊಗದಿ ಸವಿಜೇನು..!

- Guru Guru

29 Apr 2019, 11:36 pm

ನಿನ್ನ ಬರುವಿಕೆಗಾಗಿ

ನಿನ್ನ ಬರುವಿಕೆಗಾಗಿ
ಕಾಯ್ದುಕುಳಿತಿರುವ
ಈ ನನ್ನ ಕೊಲ್ಲಲು
ಬೇರಾವ ಆಯುಧಗಳ
ಜರೂರತ್ತಿದೆ ಹೇಳು ಹುಡುಗಿ|
ನೀನೊಮ್ಮೆ ತಿರುಗಿ
ನೋಡದೆ ಹೋದರಾಯ್ತು.
ಸಣ್ಣ ನಗುವೊಂದ
ಬೀರದೆ ಇದ್ದರಾಯ್ತು.
ಮೌನದ ಅಸ್ತ್ರ ಎಸೆದರಾಯ್ತು.
ಆ ಕ್ಷಣವೆ
ಈ ನಾನು
ಸತ್ತಂತಲ್ಲವೇನೆ ಹುಚ್ಚು ಹುಡುಗಿ.

- Nandu

26 Apr 2019, 12:25 pm

ಇವಳಿಗ್ಯಾಕೀ ಶಿಕ್ಷೆ

ಕನಸಲೂ ನೆನೆಸದ
ಭಯಂಕರ ಸಾವು
ಇವಳದಾದಾಗ
ಕಾಣಲೇ ಇಲ್ಲ ಯಾವ
ಕ್ಯಾಮೆರಾಗಳ ಕಣ್ಣಿಗೆ ಇವಳು.

ಕರುಣೆ ಪ್ರೀತಿಯಲ್ಲಿ
ಆಸೆ ಕನಸುಗಳು
ರಾಕ್ಷಸರಿಂದ ಚಿದ್ರವಾದಾಗ
ಕಾಯಲೇ ಇಲ್ಲ ಇವಳನ್ನ
ಇಲ್ಲಿ ಯಾವ ಕಾನೂನುಗಳು.

ರಾಜಕೀಯವೆಂಬ
ಮೋಸದ ಚದುರಂಗದಲ್ಲಿ
ನಿರತರಾದ ಎಲ್ಲ ನಾ....ಗಳು
ಹಣಕ್ಕೆ ಬಾಯಿತೆರೆದರೇ ವಿನಃ
ಕರಗಲಿಲ್ಲವಿಲ್ಲಿ ಯಾರ ಮನಗಳು.

ಇಂದು ಇವಳಿಗೆ ಇಲ್ಲಿ
ನ್ಯಾಯ ಸಿಗದೇ ಹೋದರೆ
ಸಮಾನತೆ ಸಹೋದರತೆ ಎಂಬ
ಪದಗಳನ್ನ ಅಳಿಸಿ ಹಾಕಬೇಕು
ಬದುಕಿಯೂ ಸಾಯುತ್ತಿರುವ
ನಮ್ಮೀ ಸಂವಿಧಾನದಲ್ಲಿ ನಾವುಗಳು

- ನಾಗರಾಜ ಬಾಕೆ೯ರ್

22 Apr 2019, 10:59 am

ನಿನ್ನ ಸ್ಪರ್ಶ

ಹನಿ ಹನಿಯ ಬೆವರ ತೊಯ್ದು
ಬೆಳೆದು ನಿಂತಂತಿದೆ ಬೆಟ್ಟದಷ್ಟು
ಆಸೆ ನಿನ್ನ ಸ್ಪರ್ಶೆಗಾಗಿ,
ಕೈಬೆರಳ ಆಲಿಂಗನ ಬದಲಿಸ
ಬಹುದೇನೋ ಹಸ್ತರೇಖೆಯನ್ನು
ನಿನ್ನೊಟ್ಟಿಗೆ ಹೆಜ್ಜೆ ಹಾಕುವ ದಿಕ್ಕಿಗೆ.

ಮಂಜು ಮುಂಜಾನೆಯನ್ನು ತಬ್ಬಿದಂತೆ,
ಸಂಜೆ ಕೆಂಪನ್ನು ತನ್ನೊಳಗೆ ತುಂಬಿಕೊಂಡಂತೆ,
ಮಳೆಯು ತಂಗಾಳಿಯ ಅಪ್ಪುವಂತೆ
ನಿನ್ನಲಿ ಸೇರುವ ಆಸೆ ಮತ್ತೆ ನಿನ್ನ ಸ್ಪರ್ಶೆಗಾಗಿ ಹಾತೊರೆಯದಂತೆ.

ಜಾಜಿಮಲ್ಲಿಗೆ ಸುಗಂಧವ ತನ್ನಲ್ಲೇ
ಕಟ್ಟಿಹಾಕಿದಂತೆ, ಕಾರಿರುಳ ಕಡುಗಪ್ಪು
ಬೇರ್ಪಡಿಸಿದರೂ ಬೇರಾಗದಂತೆ,
ನನ್ನುಸಿರ ಬಿಸಿಯು ನೀನಾಗಿ ಪ್ರತಿಕ್ಷಣವೂ
ನನ್ನ ಬೆಚ್ಚಗಿರಿಸುವಂತೆ, ಅವಿಭಾಜ್ಯವಾಗಿ
ಅವಿತುಕೊಳ್ಳುವ ಆಸೆ ನಿನ್ನಲ್ಲಿ ಬೆಳಕಿನ ಹೊನಲು ನನ್ನೆದೆಯಲಿ ನಿನ್ನ ಚಿತ್ತಾರವ ಬಿಡಿಸಿದಂತೆ.

- ಚುಕ್ಕಿ

19 Apr 2019, 09:10 pm