Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನು ಇರದ ಬದುಕು

ನೀನು ಇರದ ಬದುಕಿಗೆ
ಕಣ್ಣ ಹನಿಯ ಕಾಣಿಕೆ
ನೀನಿತ್ತು ದೂರ ಸರಿದೆ
ಮತ್ತೆಂದು ಬಾರದೇ!!

ನಿನ್ನ ನೆನಪೊಂದಿಗೆ
ಇರಲು ಈ ನನ್ನ ಬದುಕು
ಬೆರೇನು ಬಯಸದೇ
ಒಂಟಿ ತಾನೆಂದಿದೆ!!

ನಾ ಕಂಡ ಕನಸಿಗೆ
ಬೆಳಕನು ನೀ ಚೆಲ್ಲದೇ
ಮರೆಯಾಗಿ ನಿಂತೆ ನೀನು
ಕಣ್ಣೆದುರು ಬಾರದೆ!!

ಸಣ್ಣ ಹಠದೊಂದಿಗೆ
ನನ್ನ ಈ ಹೃದಯವು
ನಿನ್ನಯ ಬರ ಕಾಯುತ
ಮರಳಿ ಬಾ ಎಂದಿದೆ!!

- ಪಿ.ಜಿ.ಜ್ಯೋತಿ

08 Dec 2018, 07:36 pm

ಪಲ್ಲವಿ

*ಪಲ್ಲವಿ*
ಪದ ಪದಗಳು ಸೇರಿ ಹಾಡಲು ಪಲ್ಲವಿ
ಕಣ್ಣ ನೋಟವಿದು ಹಂಚಿ ಪ್ರೀತಿ ಮನವಿ
ನಯನ ನಾಚಿ ಬರೆದು ಒಲವ ಮುನ್ನುಡಿ
ಅನು ಪಲ್ಲವಿಯ ರಾಗ ಪ್ರೇಮಕೆ ಕೈಗನ್ನಡಿ
ಒಲಿದ ಒಲವಿನಲಿ ಸಾಗಿಹ ಪಯಣ
ಸವಿಯಲು ಸವಿಯಾದ ಸಿಹಿ ಹೂರಣ
ಕಷ್ಟವಿಲ್ಲವು ಜೀವಕೆ ನೋವಿನ ಚಾರಣ
ಮೆಚ್ಚಿದ ಮನವು ಜೊತೆಯಿರುವ ಕಾರಣ
ಹಾಡುವ ಹಾಡಿಗೆ ಶೃತಿ ಜೊತೆ ಸೇರದಿರೆ
ಮೂಡುವ ಚರಣಗಳಲಿ ಇಂಪಿಲ್ಲ
ಪದಗಳು ಹದಮೀರಿ ಲಯ ತಪ್ಪಿದರೆ
ಹೃದಯದ ಭಾವಗೀತೆಯು ಸೊಗಸಿಲ್ಲ
ಬೆರೆತ ಉಸಿರಿನದು ಮಧುರವಾದ ಗಾನ
ನಲಿದು ಒಲಿದಿಹ ಸುಲಲಿತ ಯಾನ
ಸಪ್ತಸ್ವರಗಳ ಅರಿತ ಅನುರಾಗದ ಹೂಬನ
ತಾಳ ತಪ್ಪದ ಗೆಜ್ಜೆಯ ಸದ್ದಿಗೆ ಹೆಜ್ಜೆಹಾಕಿದ ನರ್ತನ
*ರತ್ನಾ ಬಡವನಹಳ್ಳಿ*

- ರತ್ನಾಬಡವನಹಳ್ಳಿ

08 Dec 2018, 05:53 am

ನಾ ಕೈಗೊಂಡ ಪ್ರವಾಸ

ನಾ ಕಂಡ ನಾಡು
ಸಕ್ಕರೆಯ ಬೀಡು
ಕಲ್ಪನೆಯ ಕಡಲು
ಕಾವೇರಿ ತಾಯಿಯ ಮಡಿಲು

ವನದೇವತೆ,ಜಲದೇವತೆಯ
ಸಂಗಮ ಈ ಬಯಲು
ಭರಚುಕ್ಕಿ ,ಗಗನಚುಕ್ಕಿಯು
ಬರಿಸಿತು ನಮಗೆಲ್ಲ ಅಮಲು

ತಲಕಾಡಿನೆಡೆಗೆ ನಮ್ಮೆಲ್ಲರ ಓಟ
ಮರಳಿನೊಂದಿಗಿನ ಸೆಣಸಾಟ
ಪಂಚಲಿಂಗಗಳ ದರ್ಶನದ ಆಟ
ಮರೆಯಾಯಿತು ಅರ್ಕೆಶ್ವರನ ನೋಟ

ಕಷ್ಣರಾಜ ಒಡೆಯರ ಕೊಡುಗೆ
ಕಾವೇರಿ ಉಳಿದಳು ಕರುನಾಡಿಗೆ
ವಿಶ್ವೆಶ್ವರಯ್ಯನವರ ಜಾಣ್ಮೆಗೆ
ನವ ವಿಜ್ಞಾನಿಗಳ ಮೆರವಣಿಗೆ

ಹಸಿರು ಮಡಿಲಲ್ಲಿ
ಮುಡುಕುತೊರೆಯಲ್ಲಿ
ಕೊರಕಲಲ್ಲಿ ಸಾಗಿ
ಗಿರಿಗಳಲ್ಲಿ ಬಾಗಿ
ಕೊಳಕ ತೊಳೆಯುತಿಹಳು
ತ್ಯಾಗಮಯಿ ಕಾವೇರಿತಾಯಿ

ಸಾಂಸ್ಕ್ರತ ನಗರಿಯ ರಾಣಿ
ಮಹಿಷಾಸುರನ ಸಂಹಾರಿಣಿ
ಅರಮನೆಗೆ ನಮ್ಮ ಬೇಟಿ
ಮೃಗಾಲಯವ ದಾಟಿ

ರಸ್ತೆಯ ಇಕ್ಕೆಲಗಳಲ್ಲಿ
ಹಸುರಿನ ಮೆರವಣಿಗೆಯಲ್ಲಿ
ಸಾಗಿದೆವು ಶ್ರೀರಂಗಪಟ್ಟಣದೆಡೆಗೆ
ಶ್ರೀರಂಗ, ನಿಮಿಷಾಂಬನ ದರ್ಶನಕೆ

ಸಂಭ್ರಮದ ವಾತಾವರಣ
ನೀಡಿದ ಕಾಲನು ಆಮಂತ್ರಣ
ಅಂದು ಸಕ್ಕರೆ ನಾಡಿಗೆ
ಯಮರಾಜನ ನಡಿಗೆ
ಮುವತ್ತು ಮಂದಿಯ ಮರಣ
ಹೃತಾತ್ಮರ ಕೂಡಿತು ಅಂಬಿಯ ಪ್ರಾಣ
ದು:ಖ ಮಡುಗಟ್ಟಿತು ಎಲ್ಲೆಲ್ಲು
ಹನಿಗಟ್ಟಿತು ಎಲ್ಲರ ಕಣ್ಣಲ್ಲು
ಜಗ್ಗದ-ಕುಗ್ಗದ ಸರದಾರ
ಮರಳಿ ಬಾ ಹಮ್ಮೀರ



ಶಾರಧ

- ಶಕುಂತಲಾ

06 Dec 2018, 06:46 pm

ಹಿಂದಿರುಗಿ ಬಿಡು ಚಂದಿರ

ನಿನ್ನ ಕಂಡೊಡನೆ
ಅದೇನೊ ಹೊಸ ಹುರುಪು
ಅದಮ್ಯ ಚೈತನ್ಯ ಎನ್ನೊಳಗೆ
ಚಿಗುರೊಡೆದು ಬಿಡುತ್ತಿತ್ತು

ಅದೆಲ್ಲಿರುತ್ತಿದ್ದವೊ ಪದಗಳು
ಅದೆಲ್ಲಿಂದ ಹರಿದು ಬರುತ್ತಿತ್ತು
ಮನದುಂಬಿ ಭಾವ ಲಹರಿ
ಬರೆದಷ್ಟು ನವ ನವೀನನಾಗಿ

ಮಡುಗಟ್ಟಿದ ಮೌನ
ಅದೇಗೆ ನಿನ್ನ ಕಂಡೊಡನೆ
ಸಂಭಾಷಣೆ ಆಗಿಬಿಡುತ್ತಿತ್ತೊ
ಎದೆಭಾರ ಮಂಜಿನಂತಾಗಿಬಿಡುತ್ತಿತ್ತೊ

ಹೋ ಅದೆಷ್ಟು ಮಾತು
ಅದೆಷ್ಟು ಸರಸ, ವಿರಸ‌
ಮನಸಿಗೆ ಬುದ್ಧಿಗೆ ದಕ್ಕಿದ್ದೆಲ್ಲ
ನಿನ್ನ ಕಾಂತಿಯೊಳಗೆ ಸೆರೆ

ಎಷ್ಟು ಜನ ಹೇಳಿದ್ದಿಲ್ಲ ಕಾಡಿಸಿದ್ದಿಲ್ಲ
ಇನಿಯನಿಗಾಗಿಯೇ ಇದನ್ನೆಲ್ಲ
ಬರೆದದ್ದೆಂದು ಯಾರವನು
ಮನಸ ಕದ್ದವನೆಂದೆಲ್ಲ

ನಿನ್ನ ಪುಟ್ಟ ಪುಟ್ಟ ಅಗಣಿತ
ಗೆಳೆಯರೆಲ್ಲ ಅದೆಷ್ಟು
ಮುನಿದಿದ್ದರೊ ನೊಂದಿದ್ದರೊ
ನನ್ನ ನಿನ್ನ ಮುಗಿಯದ ಮಾತು ನೋಡಿ

ಅದೆಷ್ಟು ಕೋಪ ತೋರಿರುವೆನೊ
ಮಗುವಿನಂತೆ ಮುದ್ದಿಸಿರುವೆನೊ
ನಾನೆ ಮಗುವಿನಂತೆ ಅತ್ತಿರುವೆನೊ
ನಿನ್ನ ಶಾಂತ ಮೌನ ಕಾಂತಿ ನಗು
ಆಗೆಲ್ಲ ಸಂತೈಸಿದಷ್ಟು ಯಾವುದಿಲ್ಲ

ಅದೇನಾಯಿತೀಗ ಮುಗಿಯದ ಮಾತು
ಹೊರ ಬರದೆ ಬಂಧಿಯಾಗಿಬಿಟ್ಟಿದೆ
ನೀನೆ ಬದಲಾದೆಯೋ ಇಲ್ಲ
ನಾನೇ ಬದಲಾದೇನೊ ತಿಳಿಯದು

ಮತ್ತೊಮ್ಮೆ ಆ ದಿನಗಳು ಬೇಕಿದೆ
ಬಯಲಲ್ಲಿ ಕಲ್ಲು ಬೆಂಚಿನ ಮೇಲೆ
ಕುಳಿತು ನೀಲಾಗಸವ ದಿಟ್ಟಿಸುತ್ತ
ನನ್ನೊಳಗು ನನಗರಿವಿಲ್ಲದಂತೆ
ಬಯಲಾಗಬೇಕಿದೆ

ಮೌನವನ್ನೆಲ್ಲ ನಿನ್ನ ಮಡಿಲೊಳಗಿರಿಸಿ
ನಿನ್ನ ಕಾಂತಿಯ ಪ್ರಶಾಂತತೆಯ
ನನ್ನ ಮನದೊಳಗೆ ಭದ್ರ ಪಡಿಸಿ
ಮುಗುಳ್ನಗುವ ಹೊತ್ತು ನಲಿವ‌
ಕ್ಷಣಗಳು ಮತ್ತೆ ಬೇಕಿವೆ ಚಂದಿರ

- ಶ್ರೀಕಾವ್ಯ

05 Dec 2018, 09:32 pm

ಬಾಳಲ್ಲಿ ನೀ ಬಂದೆ

ಬಾಳಲ್ಲಿ ನೀ ಬಂದೆ‌
ಓ ನನ್ನಯ ಕಂದ!!
ನೀ ತಂದೆ‌ ಈ ಬಂಧ
ಬಲು ಸಂತೋಷದಿಂದ!!
ಮಡಿಲಲ್ಲಿ ನೀ ಇರಲು
ಏನೋ ಆನಂದ!!
ಕರುಳ ಬಳ್ಳಿ‌ಯೇ ಇದು
ಬಿಡಿಸದ ಸಂಬಂಧ!!

ಸಾಟಿ ಇಲ್ಲದ ಹಾಡು
ಸ್ವಾರ್ಥವಿಲ್ಲದ ಗೂಡು!!
ಜೋ ಲಾಲಿ ಜೋಕಾಲಿ
ನಿನಗೇನೇ ಓ ಕಂದ!!
ಈ ಸ್ವರ್ಗ ನಿಸರ್ಗ
ಎಲ್ಲಾನೂ ಭುವಿಯಲ್ಲಿ!!
ನೀ ಆಡಿ ನಗುತಿರಲು
ಬಾಳೆಲ್ಲ ಸಿಹಿ ಕಡಲು!!

ಈ ಪರಿಯ ವಾತ್ಸಲ್ಯ
ನನ್ನೊಳಗೆ ಇದೇ ಮೊದಲು!!
ನಾ ಕೇಳೇ ಉಲ್ಲಸ
ಮೊದಲನೇ ನಿನ್ನ ತೊದಲು!!
ನೀ ಹೆಜ್ಜೆ ಇಟ್ಟಲ್ಲಿ
ಚೆಂದಾದ ರಂಗೋಲಿ!!
ನೀ ತಂದ ಸಂಭ್ರಮಕೆ
ಇರದು ಯಾವ ಬೇಲಿ!!

- ಪಿ.ಜಿ.ಜ್ಯೋತಿ

05 Dec 2018, 11:28 am

ಓ ವಿಧಿಯೇ

ಬಾಯಾರಿ ನಾ ಬಳಲಿ
ನೀರಿನ ಬಳಿ ಹೋದೆ
ಬಿಸಿಲು ಕುದುರೆಯೇ
ನೀ ನೀರ ಮರೆಸಿದೆಯೇ!!

ದಣಿದಿರುವ ಈ ತನುವು
ನೆರಳ ಬಯಸಿದರಿಲ್ಲಿ
ಮರವಿಲ್ಲ ಸೂರಿಲ್ಲ
ನೆರಳಿಗೂ ಬಂತು ಬರವು!!

ಹಸಿದಿರಲು ನಾ ಬಹಳ
ತುತ್ತು ನೀಡುವರಿಲ್ಲ
ಹಣ್ಣಿಲ್ಲ ಕಾಯಿಲ್ಲ
ಹಸಿವಿಗೂ ಸಿರಿತನವು!!

ಗೆಳೆತನಕೂ ಯಾರಿಲ್ಲ
ಒಡೆತನಕೂ ಯಾರಿಲ್ಲ
ಬಂಧ ಬಯಸಿದರಿಲ್ಲ
ಅಂಧು ಬಂಧುಗಳೇ ಇಲ್ಲ!!

ಅಳಬೇಕು ಎಂದೆನಗೆ
ಅನಿಸಿದರೂ ಅಳದಾದೆ
ಕಣ್ಣ ನೀರದು ಬತ್ತಿ
ಅಳದಾದೆನು ಓ ವಿಧಿಯೇ!!

- ಪಿ.ಜಿ.ಜ್ಯೋತಿ

05 Dec 2018, 11:14 am

ವಧು ಪ್ರದರ್ಶನ

ನಡೆಯಿಂದ ನುಡಿಯವರೆಗೂ
ಅಡಿಯಿಂದ ಮುಡಿಯವರೆಗೂ
ಹೆಚ್ಚು ಕಡಿಮೆಗಳ ಲೆಕ್ಕಹಾಕುವ
ಸಂಪ್ರದಾಯಬದ್ಧ ಆರಚರಣೆ
ವಧು ಪ್ರದರ್ಶನೆ.

ಧ್ವನಿ ಪರಿಶೀಲನೆಗೆ
ಹಾಡೊಂದು ನೆಪ
ನಡೆ ಪರಿಶೀಲನೆಗೆ ನೃತ್ಯವೊಂದು ನೆಪ
ಕೈರುಚಿಯ ತಿಳಿಯಲು ಉಪಹಾರವೊಂದು ನೆಪ
ಹೆಚ್ಚು ಮಾತನಾಡಿದರೆ ಮಾತಾಳಿ
ಕಡಿಮೆ ಮಾತನಾಡಿದರೆ ಸೌಮ್ಯಸ್ವಭಾವಿ.

ಮೆಲ್ಲನಡೆವ ಹೆಜ್ಜೆ ಭಾರ ಹಿಡಿದು
ಗೆಜ್ಜೆ ಬೆಲೆ ಎಣಿಸುವರು,
ಉಟ್ಟ ಸೀರೆಯ ಅಂಚಿನ ನುಣುಪು ನೋಡಿ ರೇಷ್ಮೆಯ ನಾಣ್ಯತೆ ಅರಿವರು.

ಮನೆಯ ಕೋಣೆಗಳ ಸುತ್ತಿನೊಡಿ ಆಸ್ತಿಪಾಸ್ತಿಯ ಅಳೆವರು,
ಕುಂಟು ನೆಪಗಳು ಹೇಳಿ ಇಲ್ಲಸಲ್ಲದ ಗುಣಗಾನ
ಮಾಡಿ ಮಗನ ಮಾರಿಕೊಳ್ಳುವರು,
ಹೆಣ್ಣು ನೋಡುವ ಕಾರ್ಯದಲ್ಲಿ
ವರದಕ್ಷಿಣೆಯ ಲಂಚಪಡೆದು ಹೆತ್ತವರು.

ಮಗಳೆಂದರೆ ಖರ್ಚುವೆಚ್ಚ
ಮಗನೆಂದರೆ ಕೂಡಿದದ ಸ್ವತ್ತು,
ಗಗನತಾರೆಯ ಮುಟ್ಟಲೆತ್ನಿಸುವ ಶಕ್ತಿ ಇದ್ದರೂ ಹೆಣ್ಣು
ಪರಕೀಯಳು
ಸತ್ತ ವೇಳೆಗೆ ತೊಟ್ಟು ನೀರು ಕೊಡದ ಮಗ ತಮ್ಮವನು.

ಸಂತೆಯಲ್ಲಿ ವಸ್ತುಪ್ರದರ್ಶನ ಮನೆಗಳಲ್ಲಿ ವಧುವಿನ ಪ್ರದರ್ಶನ ಒಂದೇ ಆಗಿಹೋಗಿದೆ ಮಗಳ ಬೆಲೆ ತಿಳಿಯದ ಮೂರ್ಖರಿಗಿಂದು.
ವಸ್ತುಗಳ ಹಣ ಕೊಟ್ಟು ಕೊಳ್ಳುವರು ಮಗಳ ಹಣ ಕೊಟ್ಟು ಮಾರಿಕೊಳ್ಳುವರು.

- ಚುಕ್ಕಿ

05 Dec 2018, 06:42 am

ಕಾಲ ಚಕ್ರದ ಅಡಿಯಲ್ಲಿ....

ಕಾಲಗಳ ಕೆಳಗೆ ನಡಿಯುತಿದೆ
ಜೀವನದ ಚಕ್ರ
ಬಹುದೂರ ಕ್ರಮಿಸದೆ ನಡುವೆ ನಿರ್ಗಮಿಸಿದವರೆಸ್ಟೋ
ಕಾಲಡಿಯ ಕೆಳಗೆ ಕಾಲು ಸಿಲುಕಿಸಿಕೊಂಡಿರುವವರೆಸ್ಟೋ
ತಿಳಿಯದೆ ಮಬ್ಬರು ಹುಬ್ಬೇರುಸುವಂತೆ ಕೊನೆ ಕಂಡವರೆಸ್ಟೋ ನಾ ಕಾಣೆ.....

ಅಸಲಿಗೆ ತಿಳಿದವರು ತಿಳಿಯದಂತೆ ನಟಿಸುತ್ತಿರುವರೊ
ತಿಳಿಯದೇನೋ ತಿಳಿದಿದೆ ಎಂದು ನಮ್ಮನ್ನು ಮಬ್ಬರಾಗಿಸುತ್ತಿರುವರೇನೋ ಒಂದು ಅರಿಯೇನು ನಾನು
ಹೀಗಿಯು ಇರಬಹೋದೆ ಕಾಲ ಚಕ್ರದ ಪಾಠ
ಇನ್ನೆಷ್ಟು ಇರಬಹುದು ನಮ್ಮ ಪಾತ್ರದ ಕಲಿಯುವಿಕೆಯ ಪುಟಗಳ ಲೆಕ್ಕದ ಆಟ

- ishwar

03 Dec 2018, 06:24 pm

ಗರ್ಭಪಾತ!

ಅಂಗೈಯಗಲದ ದೇಹ ರೂಪುಗೊಂಡಿದೆ ನನ್ನೊಡಲಲ್ಲಿ ಉಳಿಸಿಕೊಳ್ಳುವ ಶಕ್ತಿ ಇದ್ದರೂ ತಲೆ ಬಾಗಿ ನಿಂತೆ ನೀನೊಂದು ಹೆಣ್ಣೆಂದು ಗರ್ಭಪಾತಕೆ ಶರಣಾಗಿ.

ಸೂಜಿಮೊನೆಯಷ್ಟು ಕಣ್ಣು ,ಆಕಾರ ಪಡೆಯದ ಮೂಗು
ಕಿರುಬೆರಳಿಗೂ ಕಿರಿದಾದ ಕೈ ,ಮುಷ್ಟಿಯಷ್ಟು ಇರದ ಮುದ್ದಾದ ಮುಖ ಈಗತಾನೆ ಹಿಮ್ಮಡಿ ಮೂಡುತ್ತಿರುವ ಪಾದ.

ಕೊಲೆಗೈಯದೆ ಕೊಲೆಗಾರ್ತಿಯಾದೆ
ಜನ್ಮ ನೀಡದೆ ತಾಯಿಯಾದೆ ಇದು ಶಾಪವೋ ನಾನು ಮಾಡಿದ ಪಾಪವೋ ನಾನರಿಯೇ ಮಗುವೇ.

ಪುಟ್ಟ ಹೃದಯದ ಸದ್ದು ಕೇಳಲಿಲ್ಲ ನಾನು,
ನಿನ್ನುಸಿರು ನಿಲ್ಲಿಸಿದ ಕೈಗಳಲ್ಲಿ ನನ್ನದೂ ಒಂದು ಸಹಿ ಬಿದ್ದಿದೆ.

- ಚುಕ್ಕಿ

02 Dec 2018, 10:43 am

ನನ್ನದೋಂದು ಕೋರಿಕೆ....

ನೀನಿಲ್ಲದ ಊರಲ್ಲಿ ನಾ ಒಬಂಟ್ಟಿಯಾಗಿರುವೆ,
ಓಡಿಬಂದೋಮ್ಮೆ ನನ್ನ ಅಪಿಕೋಳಬಾರದೆ?
ಮಗುವಾಗುವಾಸೆ ನೀನ್ನ ಮಡಿಲಲ್ಲಿ ಒಂದು ಕ್ಷಣ..
ಮರು ಘಳಿಗೆಯೇ ಹಾರಿಹೋಗಲಿ ನನ್ನೀ ಪ್ರಾಣ..

ಸದಾ ಕಾಯುತ್ತಿರುವೇ ಆ ಕ್ಷಣಕಾಗಿ..
ಒಮ್ಮೆಯಾದರೂ ಬರುವೇಯಾ ನೀ ನನ್ನಗಾಗಿ?
ಅದೆಷ್ಟೋ ಮಾತುಗಳು ಹೇಳದೆ ಉಳಿದಿವೆ..
ನೂರಾರು ಪದಗಳು ತುಟಿ ಅಂಚಲ್ಲಿ ಕಾದಿವೆ..

ದಿನಗಳುರುಳಿ ಮಾಸಗಳು ಕಳೆದಷ್ಟು,
ನನ್ನ ಪ್ರೀತಿ ಇಮ್ಮಡಿಯಾಗುತ್ತಿದೆ..
ಉಸಿರಾರುವ ಮುನ್ನ ಬಂದೋಮ್ಮೆ ಸಂತೈಸು ನನ್ನ..
ಮುಂದೆಂದು ನಾ ಪಿಡಿಸುವುದಿಲ್ಲ ನೀನ್ನ...!!

- ಜ್ಯೋತಿ

30 Nov 2018, 04:46 am