Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನವರಾತ್ರಿ ಹಾದಿಯಲ್ಲಿ

ನವರಾತ್ರಿ ಹಾದಿಯಲ್ಲಿ
ನವ ಮಾಸ ತುಂಬಿರಲು!!
ಹರಕೆಯ ಕೂಸೊಂದು
ಉದರದಿ ಹೊರಬರಲು!!

ನವ ಧುರ್ಗೆ ಹರಸಿರುವ
ನವಜಾತ ಶಿಶು ಇವಳು!!
ಆ ದೈವ ಕರುಣಿಸಿದ
ವರದಾನ ನನ್ನ ಮಗಳು!!

ಹೆಣ್ಣು ಎಂಬ ಅಲಂಕಾರ
ಹುಣ್ಣಿಮೆಯ ಕರೆತರಲು!!
ಹೊನ್ನಿನ ಗಣಿಯೊಂದು
ನನ್ನ ಮಡಿಲ ಸೇರಿಹುದು!!

ಚಂದ್ರಿಕೆಯು ಈ ಬಾಲೆ
ಬೆಳದಿಂಗಳ ಮಾಲೆ!!
ಈ ತಾಯಿಯ ಸುವ್ವಾಲಿ
ಕಂದನಿಗೆ ಜೋ ಲಾಲಿ!!

- ಪಿ.ಜಿ.ಜ್ಯೋತಿ

13 Oct 2018, 05:00 pm

ಮನದಲ್ಲಿ ಇರುವವಳು

ಮನದಲ್ಲಿ ಇರುವವಳು
ಕಣ್ಣೆದುರು ಕಾಣದಿದ್ದರೂ
ನಾನವಳ ಅಭಿಮಾನಿ
ದಯಮಾಡಿ ಬಾ ಪ್ರೇಮಿ!!

ತಂತ್ರಕೆ ಒಲಿಯದಿರುವ
ಮಂತ್ರದ ಹೂ ಅವಳು
ಸಂತೆಯ ಬೀದಿಯಲ್ಲಿ
ಕಾಣದೇ ಹೋದವಳು!!

ಕರಗುವ ಚಂದ್ರನಿಗೂ
ಆರತಿ ಎತ್ತಿದವಳು
ಮುಗಿಲಲ್ಲಿ ಮನೆ ಮಾಡಿ
ಬೀಗ ಜಡಿದು ಕುಳಿತಿರುವಳು!!

- ಪಿ.ಜಿ.ಜ್ಯೋತಿ

13 Oct 2018, 04:46 pm

ಉಪಕರಿಸು

ಹಸಿದವನಿಗೆ ಅನ್ನ
ದಣಿದವನಿಗೆ ನೀರು
ನೀಡದಿದ್ದ ಮೇಲೆ
ಈ ಬದುಕೇ ಏರು ಪೇರು!!

ಸೂರಿಲ್ಲದ ಮನಕೆ
ಸೂರಾಗುವ ಬಯಕೆ
ನೂರಾರಿದೆ ಒಳಗೆ
ಸಾಕಾಗದು ಹೊರಗೆ!!

ನೊಂದವನೇ ನನ್ನ ಬಂಧು
ಆದರಿಸುವೆ ನಾ ಬಂದು
ಉಪಚರಿಸುವ ಮುನ್ನ
ಸಹಕರಿಸು ಮನದುಂಬಿ!!

ಈ ರೋದನೆ ಸಾಕು
ವಿರೋಧವ ಬಿಟ್ಟು ಹಾಕು
ಸಾಕಾರವು ಈ ಬದುಕು
ಮನದುಂಬಿ ಉಪಕರಿಸು!!

- ಪಿ.ಜಿ.ಜ್ಯೋತಿ

13 Oct 2018, 04:39 pm

ಅದಲು ಬದಲು

ಗುಡು ಗುಡುಗುವ ಮೋಡ
ಓಡುತಿದೆ ನೋಡ!!
ಮಳೆ ಸುರಿಸುವ ಮುನ್ನ
ಮರೆ ಮಾಡಿತೇ ಗಗನ!!

ನಡು ನಡುಗುವ ಚಳಿಗೆ
ಉರಿ ಬಿಸಿಲಿನ ಕೊಡುಗೆ!!
ಬಿಳಿ ಹಾಳೆಯ ಮೇಲೆ
ನೀ ಹಾದು ಹೋದ ನಡಿಗೆ!!

ಕಣ ಕಣದಲೂ ನಿನ್ನ
ಸವಿ ಪ್ರೀತಿಯ ತೊದಲು!!
ಮನ ಸೇರುವ ಮುನ್ನ
ಆಯಿತು ಅದಲು ಬದಲು!!

- ಪಿ.ಜಿ.ಜ್ಯೋತಿ

13 Oct 2018, 04:20 pm

ಮತ್ತೆ ಮಾಮರದಲ್ಲಿ

ಮತ್ತೆ ಮಾಮರದಲ್ಲಿ
ಒಂಟಿ ಕೋಗಿಲೆ ಗಾನ!!
ನನ್ನ ಈ ಮನದಲ್ಲಿ
ನಿನ್ನ ನೆನಪಿನ ಧ್ಯಾನ!!

ಮಲ್ಲೆ ಮೊಗ್ಗಿಗೂ ಏಕೋ
ಅರಳಲು ಅನುಮಾನ!!
ಪುಟ್ಟ ದುಂಬಿಯ ಕೊರಳ
ಬಳಸಿಹುದು ಮೌನ!!

ಹುಟ್ಟೋ ಸೂರ್ಯನೂ
ಇರುಳ ತಂದನು ಜಗಕೆ!!
ಕರಗೋ ಚಂದ್ರಗೂ ಇಂದು‌
ಏತಕೋ ಹಿಂಜರಿಕೆ!!

ದಟ್ಟ ಕಾನನದಲ್ಲೂ
ನಟ್ಟ ನಡುವಿನ ಹಾದಿ!!
ಬಟ್ಟು ಹೋದೆಯಾ ನನ್ನ
ಒಬ್ಬಂಟಿಯನ್ನಾಗಿ ಮಾಡಿ!!

ಕಡಲ ತೀರದಿ ನಡೆದ
ಹೆಜ್ಜೆ ಗುರುತದು ಮಾಸಿ!!
ಉಳಿದು ಹೋಗಿದೆ ನನ್ನ
ಎದೆಯಲ್ಲಿ ನೀನಿತ್ತ ಗಾಸಿ!!

- ಪಿ.ಜಿ.ಜ್ಯೋತಿ

13 Oct 2018, 03:55 pm

ಬಿಟ್ಟು ಹೋದೆಯ ಅಮ್ಮಾ..

ನೀ ಬಿಟ್ಟು ಹೋದ ಕಡೆಯ ತುತ್ತೊಂದು
ಇನ್ನೂ ನಿನಗಾಗಿ ಕಾಯುತ್ತಿದೆ,
ನೀ ಮರೆತ ಸಾವಿರಾರು ಮಾತು
ನೀನಿಲ್ಲದೆ ಮೌನವಾಗಿವೆ,
ಕೊಟ್ಟ ಭಾಷೆಗಳು ಕೊಡದ ಮುತ್ತುಗಳು
ಹೃದಯ ಕೇಳಬಯಸಿದ ನಿನ್ನ ಹೃದಯ ಸದ್ದು
ಎಲ್ಲಾವೂ ಅಸಂಪೂರ್ಣವಾಗಿವೆ
ನೀನಿಲ್ಲದೆ ಅಮ್ಮ.

ನಿನ್ನ ಮಾತಿಲ್ಲದೆ ದಿನ ಶುರುವಾಗದು
ನಿನ್ನ ಮುನಿಸಿಲ್ಲದೆ ದಿನ ಅಂತ್ಯವಾಗದು
ನಿನ್ನ ಕರೆಗಾಗಿ ಕಾದು ನೋಡುವ ನನ್ನ ಕಿವಿಗಳು
ಕೇಳುವುದೆಂದು ನಿನ್ನ ಧ್ವನಿ
ಮತ್ತೆ ನಿಲುಕಿಲ್ಲದ ಮಾತುಗಳೊಂದಿಗೆ ಅಮ್ಮ.

- ಚುಕ್ಕಿ

13 Oct 2018, 11:07 am

ನಾ ಹೇಳಲೇ ಬೇಕು,,!

ಯಾವ ಭಾವನೆಗಳಿಲ್ಲ,
ನಾನಿಂದು ಬರೆಯಲು.
ಆದರೂ ನಾ ಬರೆಯಬೇಕು,
ನಾ ನನ್ನ ಉಳಿಸಿಕೊಳ್ಳಲು.
ಯಾವ ಆಸೆಗಳಿಲ್ಲ,
ನಾ ನಿನ್ನ ಸೇರಲು.
ಆದರೂ ಒಂದಾಗಲೇ ಬೇಕು,
ನೆನಪುಗಳ ಉಳಿಸಿಕೊಳ್ಳಲು.
ಯಾವ ಚಂಚಲವಿಲ್ಲ,
ನಾ ಸಂಚು ಹೂಡಲು.
ಆದರೂ ಮಿಂಚಲೇ ಬೇಕು,
ಕೊಂಚ ಬೆಳಕಾಗಲು.
ಯಾವ ಆಡಂಬರವಿಲ್ಲ,
ನಾ ಅಣಿಯಾಗಲು.
ಆದರೂ ತಯಾರಾಗಬೇಕು,
ಬಲ್ಲವರಿಂದ ನಿನ್ನನ್ನುಳಿಸಿಕೊಳ್ಳಲು.
ಯಾವ ನೂವುಗಳಿಲ್ಲ,
ನಾ ಹಂಚಿಕೊಳ್ಳಲು.
ಆದರೂ ನಾ ಹೇಳಲೇ ಬೇಕು,
ನನ್ನ ತನವನ್ನ ನಾನಿನ್ನೂ ಉಳಿಸಿಕೊಳ್ಳಲು.

- vasu

13 Oct 2018, 10:24 am

ನನ್ನ ಪದ್ಯಕ್ಕೆ ಶೀರ್ಷಿಕೆ ಇಲ್ಲ

ಸಹ್ಯವಾಗಿಸುತ್ತೇನೆ ಬದುಕಿದ್ದನ್ನು
ಉದುರಿಹೋದ ಕಾಲದ
ತರೆಗೆಲೆಯ ಮೇಲೆ
ನೀ ಹಚ್ಚಿಟ್ಟ ನೋವಿನ
ಮೆಹಂದಿ ನೋಡುತ್ತಲೇ

ಎದೆಬಿರಿವ ಸದ್ಧು ನಿನಗೆಂದಿಗೂ
ಕೇಳಿಸುವುದಿಲ್ಲವೆಂಬೋದು
ನಾನು ತಿಳಿದುಕೊಂಡಿದ್ದೇನೆ
ಈ ಯಾತನೆ ಇನಿತೂ ಮುಗಿಯ
ಲಾರದ್ದೇ ಬಿಡು ಹೂರೀ

ಮುಂಗುರಳ ಸುತ್ತ ನನ್ನ ನೋಟಗಳೇ
ಕೆನೆಯುತ್ತಿರುತ್ತವೆ
ಉಡುದಾರವಿಲ್ಲದ ನನ್ನ ಅತೃಪ್ತ
ಆಕಾಂಕ್ಷೆಗಳಿಗೆಲ್ಲ ಸುತ್ತಸುತ್ತುವ
ಚಾಳಿ ಹೀಗೆಲ್ಲ ನಿನ್ನಾ

ಒಂಟಿದಾರಿಯಲ್ಲಿ ನಡೆದಾಗ
ನೀ ಮುಳ್ಳುಚುಚ್ಚಿಸಿಕೊಂಡು
ಮುಮ್ಮಲಿಸಿದ ಕೀರಲು ಧ್ವನಿ
ಹಿಂದಿರಿಗುವ ಸಮಯಕ್ಕೆಲ್ಲ
ಹಣೆಚಚ್ಚಿಕೊಳ್ಳುತ್ತೇನೆ
ನನ್ನದೇ ಭ್ರಾಂತಿಯ ಸಲುವಾಗಿ

ನಾಜೂಕತನದ ಜಗತ್ತಿನ
ಕುರುಹಾಗಿಯೇ
ಉಳಿದುಬಿಡುತ್ತೇನೆ
ಕಣ್ಣಬಿಂಬ ನೋಡಿ
ಉರಿದುಕೊಳ್ಳುತ್ತಾ
ನನ್ನ ನೋವಿನ ನೆತ್ತರ
ಅತ್ತರು ನಿನ್ನ ನಗುವಿನ
ಬಟ್ಟೆಗೆ ಮೆತ್ತದಿರಲಿಯೆಂಬ
ಪ್ರಾರ್ಥನೆಯಿದೆ ಇವಳೇ.!

-ಅವಿಜ್ಞಾನಿ

- ಅವಿಜ್ಞಾನಿ

11 Oct 2018, 08:56 pm

ಎಲೆಕ್ಷನ್

ಬಂದೆಬಿಟ್ಟಿತು ನೋಡಿ ರಂಗಿನ Election.
ಪುಂಡ-ಪುಡಾರಿಗಳಿಗೆ ಸುಗ್ಗಿಯ Collection..
ಬಾಟ್ಲು-ಬಾಡೂಟ ಕೊಟ್ಟವನಿಗೆ ನಲುವಿನ Injection..
ಕೊನೆಗೇ ಕಾಂಚಾಣ ಚೆಲ್ಲಿದವನಿಗೆ ಗೆಲುವಿನ Selection

ಬಡವರ ಬಂಧು-ಧೀನ ದಲಿತರ ಉದ್ದಾರಕವೆನ್ನುವ equation.
ಯಾವ ಬಡ್ಡಿ ಮಗನು ಕೊಟ್ಟ ನೆಡಿಸೋದಿಲ್ಲ ನಮ್ಮನೆಯ Ration.
ಯಾವ ಅತಿ ಬುದ್ಧಿವಂತನಿಗೂ ಅರ್ಥವಾಗದ ಈ Motion..
ವ್ಯವಸ್ಥೆ ಸರಿಹೋಗುವದೆನ್ನುವುದೇ ಅತಿ ದೊಡ್ಡ Quetion..

ತಿಳಿ-ಬಿಳಿ ಬಟ್ಟೆಯ ಸೊಗಲಾಡಿಗೆ ಬಂಪರ್ ಲಾಟರಿ Creation
ಜಾತಿ ಮುಖವಾಡದ ಬಂಡವಾಳವೇ ಇಲ್ಲಿ ಕ್ಲಿಷ್ಟ Emotion..
ಗುಡಿ-ಮಸೀದಿಗಳ ಗೋಪುರಗಳೇ ಓಟಿನ Sensation..
ಯಾವ ಹರಿ-ಬ್ರಹ್ಮ ಮಾಡ್ತಾನೆ ಇಂಥ ಅನಿಸ್ಟದ Correction
ಸುಗ್ಗಿ..

- ಆರ್ ಎಸ್ ಸುಗ್ಗಿ.

11 Oct 2018, 11:17 am

ಓ ಪ್ರಿಯತಮಾ..

ಪ್ರಿಯತಮಾ..

ಅಗಣಿತ ಪಾತ್ರಗಳೊಳಗೆ
ಬಾಲ್ಯ ಕಳೆಯುವ ಮೊದಲೆ
ತಾಯಾಗಿ ಭಡ್ತಿಯಾದವಳಿಗೆ ಮತ್ತೆ ಪ್ರಿಯತಮೆಯ ಪಾತ್ರವೊಂದಿಲ್ಲ

ಅವಳಿಗೆಷ್ಟು ವಯಸ್ಸಾಗಿರಬೇಕು? ಹೊಸಲ ಮೇಲೆ ಕೂತು ಬೈಯಿಸಿಕೊಳ್ಳುತ್ತಿದ್ದವಳೀಗ ಜಗುಲಿಯಲಿ ಕೂರತೊಡಗಿದ್ದಾಳೆಂದ ಮೇಲೆ ಅವಳಿಗಷ್ಟು ವಯಸ್ಸಾಗಿರಬೇಕು ಒಂದು ಅಂದಾಜು ಅವಳ ನೆತ್ತಿಯಲೆಷ್ಟು ನೆರೆಗೂದಲಿವೆಯೋ ಅಷ್ಟು ಇನ್ನೊಂದಂದಾಜು ಅವಳ ಮೈದೊಗಲಲಿ ಸುಕ್ಕೆಷ್ಟಿವೆಯೋ ಅಷ್ಟು ಅಷ್ಟಾದರೂ
ನೆರೆತ ಮುಂಗುರುಳು ಈಗಲೂ ಲಾಸ್ಯವಾಡುವುದು ಗಲ್ಲದ ಮೇಲೇಳುವುದೊಂದು ಮೊಡವೆ

ಗಂಡನ ಮನೆಯ ಹಾದಿ
ಗಂಡನ ಗಮನಾಗಮನದ ಹಾದಿ
ತವರಿಂದ ಅಪ್ಪ, ಅಣ್ಣನ ಹಾದಿ ಮನದೊಳಗೆ ಹಾದರವನಾಡುವ ಆ ಹರನಹಾದಿ ಮಗನೆಂಬೋ ಮೋಹದ ಹಾದಿ ಮೊಮ್ಮಗನೆನುವ ಮುದ್ದಿನ ಹಾದಿ ಕಾದೂ ಕಾದೂ ಕಾದೂ...
ಹಾದಿಗೀಗಲೂ ಕಣ್ಣು ಕೀಲಿಸಿ ಕೂತವಳ ಸಂಚಿಯ ತುಂಬ
ಒಡಕು ಕನ್ನಡಿ ಚೂರು
ದೊರಗು ಕೈಯ ಕತ್ತರಿಸುವುದಿಲ್ಲವೀಗ ಸುಕ್ಕು ಮೊಗವ ನೋಡಿಕೊಳ್ಳಬೇಕೆನಿಸುವುದೂ ಇಲ್ಲ

ಅದ ಬದಿಗೆ ಸರಿಸಿ ತಡಕಾಡಿದರೆ ನಡುವೆಯಷ್ಟು
ಅವನ ನೆನಪಿನ ಎಲೆಯಡಕೆ
ಜಗಿದೇ ಜಗಿಯುತ್ತಾಳೆ ಜಗಿದಷ್ಟೂ ಬಲಿವ ನೆನಪಿನ ಪೀಕು ಉಗಿದಷ್ಟೂ ಕಳೆಯದ ನೋವಿನ ಪೀಕು

ಪ್ರಿಯತಮನ ಪಾತ್ರವಾದರೋ ಅದೆನಿತು ನೈಜ, ನಿಚ್ಚ ನಿಪ್ಪೊಸತು ಬಗಲಲಿ ಇನಿಯಳು ಬದಲಾದಂತೆಲ್ಲ ಬರುವುದೊಂದೊಂದು ಚೈತ್ರವಾತು

ಆ ಅನಾಪ್ತಳ ಕಣ್ಣು ಅಡುಗೆಯರಮನೆಯಿಂದ ಮಸಿಗಸಿಯ ಹೊಗೆಯ ನಿಚುಲಕದಿಂದ ಆ ಬೆಳಕಿಂಡಿಯಿಂದ
ಆ ನಡುಮನೆಯ ಕಿಟಕಿಯಿಂದ
ಆ ದಾರಂದದ ಮರೆಯಿಂದ
ಆ ಜಗುಲಿಯವರೆಗೂ
ತೆವಳುತ್ತಾ ಬವಳುತ್ತಾ ತಲುಪುವಲ್ಲಿ ಮುಪ್ಪಡರುತ್ತಾ ಅಡರುತ್ತಾ ಅವಳು ಮುದಿಯಳಾದಂತೆಲ್ಲ
ಅವನು ಕಿರಿಯನಾಗುತ್ತ ಪ್ರಿಯತಮೆಯರ ಕೂಡ ಅವನ ಮೆರವಣಿಗೆ ಸಾಗುವುದು
ಚೈತ್ರನ ಜೈತಯಾತ್ರೆಯ ಪುನರಾವರ್ತನದ ಹಾಗೆ

ಆ ತನಕವೂ
ಪ್ರಿಯನ ಹಾವುಗೆಯ ಚುಂಬಿಸುವ ಸವತಿಗಂಧವಾರಣೆಯ ಅಧರಗಳೀಗ ಇರಿವ ಕೋಟಿ ಈಟಿಯಾಗಿ
ಅವಳ ಮಂದಗಣ್ಣು ಕಾಲಾಗ್ನಿ ಕಿಡಿ ಕಿಡಿ ಸುಡುಸುಯ್ಲೀಗ ಸಿಡಿವ ದುಃಖದ ಬಿಕ್ಕು ರೌದ್ರಾವೇಶವೇರಿ ಬಿಗಿಮುಷ್ಟಿ ಬಿಚ್ಚಿ ನಿಗುರಿ ಸೆಟೆದ ಬೆರಳುಗಳಿಗೆಲ್ಲ ನಖಗಳು ಬಿರಬಿರನೆ ಬೆಳೆಯುತ್ತಾ ಬೆಳೆಯುತ್ತಾ ಆ ತರತಮದ ವಿಷದ ಬೇರುಗಳ ಬುಡಮಟ್ಟ ಕಿತ್ತೊಗೆಯೆ ನೆಲದಾಳ ಬಗೆಯುತ್ತಾ ಬಗೆಯುತ್ತಾ

ನೋಡಿದೆಯಾ ಪ್ರಿಯಾ ಅವಳೊಳಗಿನ್ನೂ ಪ್ರಿಯತಮಳ ಪಾತ್ರ ಹೇಗೆ ಹಸಿಯಾಗಿದೆ ಹಸಿರಾಗಿದೆ ಅಭಿಸಾರಿಕೆಯ ಪಾತ್ರವದು ಬರಿದೆ ಅಭಿನಯಕ್ಕಲ್ಲ ಪ್ರಿಯಾ ಅನುಭಾವಕೆ
- ಕಾದಂಬಿನಿ

- ಕಾದಂಬಿನಿ

10 Oct 2018, 09:44 pm