ಮನಸು ನಿನ್ನ ಕಂಡೊಡನೆ ನನ್ನ ಮೈಯ ಮರೆತೋಯ್ತು
ನಿನ್ನ ಒಂದು ಮಾತು ಕೇಳದಲೇ ನನ್ನ ಜೀವ ಸೇರೋಯ್ತು
ನಿನ್ನ ಒಂದು ನಗೆಯೊಳಗೆ ನನ್ನ ತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದಲೇ ಹೃದಯ ಅದಲು ಬದಲಾಯ್ತು
ನೀ ಮಳೆಯ ಹನಿಯೊಳಗೆ ಅವಿತಿದ್ದರು
ಮಿಂಚುಗಳ ಏರಿ ಮಳೆ ಬಿಲ್ಲ ಮೈ ಗೂಡಿಸುವೇ
ಭೂಮಿ ಆಕಾಶದ ಆಚೆಗೂ ನಿನ್ನ ನೆನಪಲ್ಲೇ ನಾ ಬದುಕುವೆ...
ಕವಿ ಮಾಡುವುದು ಕಲ್ಪನೆ
ಕವಿ ಶಾಶ್ವತ ಅಲ್ಲ
ಕವಿತೆ ಶಾಶ್ವತ..
ಶಿಲ್ಪಿ ಮಾಡುವುದು ಕೆತ್ತನೆ
ಶಿಲ್ಪಿ ಶಾಶ್ವತ ಅಲ್ಲ
ಶಿಲೆ ಶಾಶ್ವತ..
ನಾವು ಮಾಡಬೇಕು ಸಾಧನೆ
ನಾವು ಶಾಶ್ವತ ಅಲ್ಲ
ನಮ್ಮ ಸಾದನೆ ಶಾಶ್ವತ..
ಚೆಲ್ಲಿ ಬಿಡಿ ಅಳಿದುಳಿದ್ದದ್ದನ್ನೆಲ್ಲ
ಮನೆಯಲಿ ತಿನ್ನದೆ ಕೊಳೆತದ್ದು
ಹೆಚ್ಚಾಗಿ ಬೇಯಿಸಿ ಉಳಿದದ್ದು
ಚೆಂದವಿಲ್ಲವೆಂದು ಮೂಲೆಯಲಿ ಬಿದ್ದದ್ದು
ಎಲ್ಲವನ್ನು ಚೆಲ್ಲಿಬಿಡಿ ಹೊರಗೆ
ಹೇಳಿ ತೀರಲಾಗದಂತ ಹಸಿವು
ಪುಟ್ಟ ಹೊಟ್ಟೆ ಬೆನ್ನಿಗಂಟಿದೆ
ಹಿಡಿ ಮಾಂಸವೂ ಇರದೆ ಹೊರಬಂದ
ಎದೆಯೆಲುಬು ಹಾಳು ಜಗವ ನೋಡಿ ನಗುತಿದೆ
ತಾಳಲಾರೆನಿನ್ನು ಚೆಲ್ಲಿಬಿಡಿ ಹಳಸಿದ್ದಿದ್ದರು ಹೊರಗೆ
ಚೆಲ್ಲುವುದ ನಿಲ್ಲಿಸಿ ಬಿಟ್ಟೀರಿ ಕಸದತೊಟ್ಟಿಗೆ
ಈ ಪಾಪಿ ಜನರು ತಿಂದು ಬದುಕಿಬಿಟ್ಟಾರೆಂದು
ತಿರುಗಿ ಮನೆ ಮನೆ ಬೇಡಿ ಬಂದರೂ
ಮುಷ್ಟಿಯಷ್ಟು ತಿನ್ನಲು ಏನು ನೀಡಲಾಗದವರು ನೀವು
ಎಂಜಲು ಹಳಸಿ ಅಳಿದುಳಿದ್ದದ್ದು ಎಲ್ಲವ ಚೆಲ್ಲಿಬಿಡಿ ಹೊರಗೆ
ನೀ ನಡೆದ ದಾರಿಯಲ್ಲಿ
ನೂರಾರು ಬಾರಿ ನಡೆದಿರುವೆ
ನೀ ಹಿಂತಿರುಗಿ ನೋಡುವವರೆಗೂ
ತಿಳಿಯಲೇ ಇಲ್ಲ ನಿನ್ನ ಹೆಜ್ಜೆಗುರುತು
ನನ್ನ ಪಾದವನ್ನು ಮುದ್ದಾಡುತಿರುವುದು
ನಿನ್ನ ಉಸಿರು ನನ್ನನು ನಿನ್ನೆಡೆಗೆ ಸೆಳೆಯುತಿರುವುದು ❤️