ಸುಂದರವಾದ ಮನೆಯ ಕಟ್ಟಿ
ಅದಕೆ ನಿನ್ನೆಸರಿಟ್ಟು
ಬಡವರಿಗೊಂದು ಧರ್ಮಶಾಲೆಯ
ತೆರೆದು ಅದಕೂ ಕೂಡ ನಿನ್ನೆಸರಿಟ್ಟು
ಅನಾಥರಿಗೊಂದು ಆಶ್ರಮ ತೆಗೆದು
ಅದಕೂ ಕೂಡ ನಿನ್ನೆಸರಿಟ್ಟು
ದೊಡ್ಡದಾದ ಆಸ್ಪತ್ರೆಯ ಕಟ್ಟಿಸಿ
ಅದಕೂ ಕೂಡ ನಿನ್ನೆಸರಿಟ್ಟು
ನಿನ್ನ ನೆನಪಿಗೆ ಒಂದು...
ಪ್ರೇಮ ಮಹಲ ಕಟ್ಟಿಸುವೆ
ದುಡಿದು ತಂದ ಸಂಬಳವೆಲ್ಲ
ನಿನ್ನ ಮಡಿಲಿಗೆ ಹಾಕಿ
ಸರ್ವವು ನಿನಗೆ ಅರ್ಪಣೆ ಮಾಡಿ
ನಿನ್ನ ಕೈಯಾಳಾಗುವ ಕನಸು ನನ್ನದು
## ರಜನೀಶ ##
ಪರಿಸರ ಈ ಪರಿಸರ ಸೌಂದರ್ಯದ ಆಗರ
ಹಸಿರು ಉಸಿರಿನ ಪರಿವಾರ
ಜೀವ ಸಂಕುಲದ ಉಳಿವಿಗೆ ಇರಲು
ಮನುಕುಲಕೆ ಮುದವನು ಕೊಡಲು
ಈ ಪ್ರಕೃತಿ ಮಾತೆಯು..." ಪ "
ಪರ್ವತ ಸಾಗರ ತೇಗ ಶ್ರೀಗಂಧವನು
ಹೂವು ಮಾವು ಹುಲಿ ಸಿಂಹವನು
ವಿಸ್ಮಯದಿ ಹರುಷದಲಿ ನೀ ನೋಡಲು
ಬನವಿಲ್ಲದೆ ಬಾಳು ಇಲ್ಲವೆಂಬ ನಿಜವ ನೀ ತಿಳಿದರೆ
ಈ ಪ್ರಕೃತಿ ಮಾತೆಯ ಪೂಜಿಸುವೆ ನೀ
ಆ ಸ್ವರ್ಗ ವೇ ಧರೆಗಿಳಿದಂತೆ ಭಾಸವಾಗುವೆ
ಈ ನಿಸರ್ಗವ ಈ ನಿಸರ್ಗವ....
ಹರಿಯುವ ನದಿಯಲಿ ಹರುಷದಲಿ ಈಜಾಡುತ ನೀ
ಚಿಲಿಪಿಲಿ ಹಕ್ಕಿಗಳ ನಿನಾದವ ಆಲಿಸುತ ನೀ..
ಈ ಪ್ರಕೃತಿ ಮಾತೆಯ ಸೌಂದರ್ಯಕೆ ಕರಗಿಹೋಗವೆ ,ಧನ್ಯನಾಗುವೆ..
ಖಗವೇ ಮೃಗವೇ ಇರಲಿ
ಗಿಡವೇ ಮರವೇ ಇರಲಿ..
ಈ ಪ್ರಕೃತಿ ಮಾತೆಯ ಮಡಿಲಲಿ ಬಾಳಿ ಬೆಳಗಲು
ಕರುಣೆ ತೋರು ನೀ
ಅದುವೇ ಸೃಷ್ಟಿಯ ನಿಯಮ ಎಂಬುದು ನೀ ಅರಿತುಕೋ.....
ಸೊಗಸಾದ ಈ ಜೀವ
ಧರೆಗಿಳಿದ ಪ್ರೇಮ
ಹೊಸದೊಂದು ಭಾವ
ಹಸಿರು ಕ್ರಾಂತಿಯ ಹೊಳಪು
ಮರ ಗಿಡ ಹೂವುಗಳ ಸೊಬಗು
ಸರಿಯದಿರು ಎಂದೆಂದಿಗೂ
ನನ್ನ ಅಂತರಂಗದ ಕಲ್ಪನೆಗಳ ಚೈತ್ರ
ನನ್ನ ಓಡಲ ಬೀತಿಯ ತೊರೆದು
ಶೃಂಗಾರ ಸಾಹಿತ್ಯ ಬರೆದು
ಮತ್ತೆ ಯಾವ ಪ್ರೀತಿಗೆ ನಾದ
ಬಾ ಬೇಗ ಒಂದಾಗು
ಬರದೆ ಹೋದರೆ ನನ್ನ ಮೇಲಾಣೆ
ಕಾಯುತಿರುವೆ ನಿನ್ನ ಅಂಬಲಿಸುತ
ಹೊಂಗೆಯ ಮರದಡಿ
ಕಣ್ಣಸನ್ನೆಯ ಬೆಡಗಿ
ನಿನ್ನ ಅಂದ ಚಂದಕೆ
ಮರುಳಾದ ನನ್ನಂತರಂಗ
ಕೆಲವದು ಸತ್ಯ ಅಸತ್ಯ
ನಡುವಿನ ಜಿಗುಪ್ಸೆ
ನೀ ಬಯಸಿದರು
ನಾ ಬರುವ ಮನಸಿಲ್ಲ
ಯಾಕೆಂದರೆ ಕಳೆದು ಹೋದಪ್ರೀತಿ
ಸಿಗಲಾರದು ಎಂಬ ಭ್ರಮೆ
ಈಗೇ ಇರಲಿ ನಮ್ಮಿಬ್ಬರ
ದೂರದೂರದಿ
ಕಣ್ಣಸನ್ನೆ
ಕೆನ್ನೆನಗೆಯ ಮುನ್ಸೂಚನೆ
ನೀ ಬಾ ಏಂದರು
ನಾ ದೂರ ಸರಿಯುತಲಿರುವೆ
ಪ್ರೀತಿ ಪ್ರೇಮ ವಿಶ್ವಾಸ
ಬೇಸರದಿ ಕಾಣುತಿಹ
ಅಪ್ಪಿಕೊಳ್ಳುವ ಮನಸ್ಸಿಲ್ಲ
ಕಳೆದು ಹೋದ ಸಂಬಂದ
ನೀ ಅಲ್ಲೇ ಇರು ಬಯಸುವುದ್ದಿಲ್ಲ
ಕಣ್ಣಸನ್ನೆ
ಮಳೆ ಹನಿಗಳ ಮೇಲೆ
ನಿಂತು ನೀ ಇಳಿದು ಬಾ ಬಾಲೆ...
ಬೆಳದಿಂಗಳ ಮಾಲೆ
ನಾ ಹಿಡಿದು ಕಾದಿರುವೆ ನಲ್ಲೆ...
ಸಾಗರದ ಅಲೆಗಳ ಮೇಲೆ
ನರ್ತಿಸುವ ಸುಂದರ ಊರೇ...
ನಡುವಲ್ಲಿ ಪರ್ವತದ ಸಾಲೇ
ನಾ ಕಾದಿರುವೆ ಗೆಳತಿ ಮನಸಾರೆ...