ಮೌನ ಹೊಸತೇನಲ್ಲ
ಮಾತು ಬರಿ ಶಬ್ದವಲ್ಲ
ಇರುಳು ಹಗಲು ಶಾಶ್ವತವಲ್ಲ
ಮಾತು ಬಿಡುಗಡೆ ಅಲ್ಲ
ಮೌನ ಬಂಧನವಲ್ಲ
ಅಲೆಗಳ ಮೌನ ಗಾಳಿಗೆ ತಿಳಿದಿಲ್ಲ
ಗಾಳಿ ಸುಳಿವ ಸದ್ದು ಕಡಲಿಗೂ ತಲುಪಲಿಲ್ಲ
ಕಡಲ ದಡದ ಮೌನ
ಪರ್ವತ ಶಿಖರಕ್ಕೆ ತಲುಪಲಿಲ್ಲ
ಮೌನದಲ್ಲಿ ಮಾತಿನ ಹುಡುಕಾಟವೇಕೆ?
ಸಾಂಸ್ಕೃತಿಕ ನಗರ ಮೈಸೂರು
ಚಾಮುಂಡೇಶ್ವರಿಯ ತವರೂರು
ಮಹಿಷಾಸುರನ ಮರ್ದಿಸಿದಳು
ಬೆಟ್ಟದ ಮೇಲೆ ನೆಲೆಸಿದಳು
ನಾಡನು ಕಾಯುವ ಸಲುವಾಗಿ!
ಇದ್ದಕ್ಕಿದ್ದಂತೆ ಬೆಟ್ಟವನೇರುವ
ಬಯಕೆಯು ತುಂಬಿತು
ನನ್ನೀಮನವ
ಎಲ್ಲರ ಸಂಗಡ ನನ್ನ ಪಯಣ
ಸಾಗಿತು ನಾಲ್ಕುಚಕ್ರದ
ವಾಹನದಲಿ
ಬೆಟ್ಟದ ಬಳಿ ಬಳಿ ಸಾಗುತಲಿರಲು
ಬೆಟ್ಟವು ಕಂಡಿತು
ಗಗನದ ಅಂಗಳದ ಅಂಚಿನ
ಮೋಡದ ಮಡಿಲಿನಲಿ
ಗುರು ನಿನ್ನ ಚರಣಕೆ ಶಿರಬಾಗಿ ನಮಿಸುವೆನು
ಕನಿಕರಿಸಿ ಹರಸೆನ್ನನು
ಮನದ ಕತ್ತಲೆ ಕಳೆದು ಜ್ಞಾನ ದೀಪ್ತಿಯ ಬೆಳಗಿ
ಅರಿವಿನ ಸಿರಿದೀಪವಾಗಿ ಉರಿಸೆನ್ನನು
ನನ್ನ ಅರಿವಿನ ಹೊಳೆಯು
ಉಕ್ಕಿ ಹರಿಯಲಿ ನಿನ್ನ ಕರುಣೆಯಿಂದ
ನನ್ನ ಮನಸಿನ ಕೊಳೆಯು
ತೊಳೆದು ಹೋಗಲಿ ನಿನ್ನ ಒಲುಮೆಯಿಂದ
ನಾ ದೀಪವಾಗಲೆಂಬ ನನ್ನ ಒಡಲಾಸೆ ನಡೆಸು
ನಿನ್ನ ಅರಿವಿನ ಜ್ಯೋತಿಯಿಂದ ದೀಪ ಉರಿಸು
ಜ್ಞಾನದರಿವನು ಹರಿಸು ಕಳೆದು ಹೋಗಲಿ ತಮಸು
ಸುಜ್ಞಾನದೆಡೆಗೆನ್ನ ಸತತ ನಡೆಸು
ನಿನ್ನ ಕರುಣೆಯ ಬೆಳಕಿನಲಿ ನನ್ನಂತರಂಗದ ಚಕ್ಷು
ತೆರೆಸಿ ನೀಡೆನಗೆ ಅರಿವಿನ ಭಿಕ್ಷೆ
ಪರಮ ಜ್ಞಾನಿಯು ನೀನು ಅಜ್ಞಾನಿಯು ನಾನು
ನೀಡೆನಗೆ ಅಪಾರ ಜ್ಞಾನದ ದೀಕ್ಷೆ
ಅಂತರಂಗದ ತೆರೆದು ಬೇಡುತಿರುವೆನು ಗುರುವೇ
ಮನದ ಕಾರಿರುಳ ಬಲು ದೂರ ಸರಿಸು
ನನ್ನದೆಯ ಗುಡಿಯಲ್ಲಿ ನಂದಾದೀಪವ ಉರಿಸು
ಆ ದೀಪದ ಕುಡಿಯೆ ನಾನಾಗಲೆಂದು ಹರಸು
ನಾ ಕಂಡ ಕನಸು ನನಸಾಗದೆ
ಜೀವನ ಕತ್ತಲಾಗಿ
ಮನಸ್ಸು ಮೌನವಾಗಿ
ಹೃದಯ ಚೂರಗಿ
ಹೇಳದೆ ಹೊದ ಆ ಪ್ರೀತಿ ಹೃದಯಕ್ಕೆ
ಅವಳ ನೆನಪೆ ಉಸಿರಾಗಿ
ನೋವು ಮನದಲ್ಲಿದೆ
ನಿನ್ನ ಬಳಿ ಹೇಳಲ್ಲ ಇಲ್ಲ ಮೌನಿಯಗಿ ಹೋಗಲ್ಲ
ಹೇಳಿ ಬಿಡು ಹುಡುಗಿ.........