Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆಗಾಲ

ಅಂಬರದ ತುಂಬೆಲ್ಲ ನೆರೆದಾವು ಕರಿ ಮೋಡ
ದಿಗಂಬರದ ಭುವಿ ಮೇಲ ಸುರಿದಾವು ಮಳೆ ನೋಡ
ಪಳ್ಳನೆ ಹೊಳೆದ ಮಿಂಚು ಸುಳಿಯ ಕಳ್ಳಾಟ
ಜಳ್ಳನೆ ನೊರೆಯುಕ್ಕಿ ಹರಿದ ಹಳ್ಳದ ಹಸಿ ನೋಟ..

ಕಲ್ಲಡಿಗೆ ಮಲಗಿದ್ದ ಕಪ್ಪೆಗಳು ಕುಮುಟಿ ಎದ್ದು
ಗಂಟಲ ಒರಟು ಗಾಯನದ ಕಿವಿಗವಡುಚ್ಚಿದ ಸದ್ದು
ಕುಮುಸಲು ಮಟ್ಟಿಯ ಪೊದೆಯ ಒಳಗೆ
ಹುದುಗಿದ್ದ ವರಲೆಯ ಹುತ್ತದಿಂದೆದ್ದ
ಹೆಗ್ಗಾಲಣಬೆಯ ಬಿಳಿ ಮೊಟ್ಟೆ ಮೊಗ್ಗು.

ಗಂಡು ಹೆಣ್ಣು ಮೀನು ಕೂಡಿ
ಮಳೆಯ ಹೊಳೆಗೆ ನಲಿದು ಆಡಿ
ಮೊಟ್ಟೆಯಿಟ್ಟು ಮರಿಯ ಮಾಡಿ
ಬಿಡಲು ಗುಂಪುಗೂಡಿ ಹೊರಟ ಮೋಡಿ.

ಕಂಬಳಿ ಕೊಪ್ಪೆ ಹಾಕಿಕೊಂಡು,
ಕೈಲಿ ಹುಲ್ಲುಗತ್ತಿ ಹಿಡಿದುಕೊಂಡು
ಸೊಪ್ಪು ಸದೆಯ ತರುವೆನೆಂದು
ಹೊರಟಿರುವ ಹಳ್ಳಿ ಹೈದ.

ನೆಲವ ನೆನೆಸಿ, ಹೊಲವ ತೋಯಿಸಿ
ಉತ್ತು ಬಿತ್ತು ಬೆಳೆವ ರೈತನೊಲವ ಗಳಿಸಿ
ಸುರಿವ ಮಳೆಯೇ, ಸಲಿಲ ಸಿರಿಯೇ
ಸುರಿಯೆ ಹರಿಯೆ ಇಳೆಯ ಪೊರೆಯೆ !

- ಶ್ರೀಗೋ.

20 May 2018, 06:28 am

ತಂಗಿಗಾಗಿ

ಒಂಟಿಯಾದ ಜೀವಕ್ಕೆ
ಅಣ್ಣನ ಸ್ಥಾನ ಕೊಟ್ಟು
ಅಪ್ಪ ಅಮ್ಮನ ಪ್ರೀತಿಯ ಮರೆಮಾಚಿದೆ
ನನ್ನ ಮುದ್ದು ತಂಗಿ ನೀ
ನೀ ಇಂದು, ಎಂದೆಂದಿಗೂ
ನನ್ನ ಪುಟ್ಟ ತಂಗಿಯಾಗಿರು
ಮುಂದಿನ ಜನ್ಮ ಇದ್ದರೆ
ನಿನ್ನ ಮಡಿಲ ಕಂದನಾಗಿ ಹುಟ್ಟಿ
ನಿನ್ನ ಋಣವ ತೀರಿಸುವೇ
ಈ ಸಂಬಂಧ ಅನುಬಂಧ
ಚಿರಕಾಲ ಸಾಗಲಿ

ರಾಜು ‌ಹಾಸನ

- ರಾಜು ಹಾಸನ

19 May 2018, 03:55 pm

ಗಜಲ್

ಹೇಳಲಾಗದೆ ಉಳಿದ ಮಾತು ಮೌನದ ಅರಮನೆಯೊಳಗೆ ಬಂದಿಯಾಗಿದೆ ಚಂದಿರ
ಮಾತಾಗದ ಮೌನ‌ ಕೊರಳೊಳಗಿನ ಉಸಿರ ಕದಿಯುತಿದೆ ಚಂದಿರ

ಹಸಿ ಕನಸು ಹುಸಿ ನನಸಿನಾಟಕೆ ಮರುಳಾಗಿ ರೆಕ್ಕೆ ಬಿಚ್ಚಿ ಮೇಲೆ ಹಾರಿ ಹಾರಿ ಸೋತು ಕೆಳಗೆ ಬೀಳುತಿದೆ ಚಂದಿರ

ಜಗದ ಬೆಳಗೊಳಗೂ ಮನದೊಳಗೆ ಮಬ್ಬುಗತ್ತಲು
ಎದೆಗಣ್ಣಿಗೆ ಕತ್ತಲಾವರಿಸಿ ದಾರಿ ತೋರಿಸಿರೆಂದು ಕೇಳಲಾಗದೆ ಹೆಜ್ಜೆ ತಪ್ಪಿದೆ ಚಂದಿರ

ಸೆರೆ ಸಿಕ್ಕ ಮಾತು ಬಿಡುಗಡೆಯ ಬಯಸಿ ಸೆರೆಮನೆಯ
ಆಚೆಯ ಬೆಳಕ ಕಣ್ತುಂಬಿ ಹಗುರಾಗಿ‌ ಹಾರಲು ಹವಣಿಸುತಿದೆ ಚಂದಿರ

ಮಾತು ಗಲ್ಲಿಗೇರಿ ನೇಣಿನ‌ ಕುಣಿಕೆಯೊಳಗೆ ವಿಲವಿಲನೆ ಒದ್ದಾಡಿ
ಶ್ರೀಕಾವ್ಯಳ ಜೀವವನೆ ಹೊತ್ತೊಯ್ಯುವ ಮುನ್ನ ನೀನಾದರು ಮಾತಿಗೆ ಧ್ವನಿಯಾಗಬೇಕಿದೆ ಚಂದಿರ

- ಶ್ರೀಕಾವ್ಯ

18 May 2018, 06:13 pm

ಮುಂಜಾನೆ

ಮುಂಜಾನೆ ರಂಗೇರೊ ಬಾನ
ನೋಡಿ ಪಿಳ್ಳೆ ಹಾಡೈತೆ ಗಾನ
ಎತ್ತಲೊ ಸರಿಸಿ ಬೆಳ್ಳಿ ಚಂದಿರಾನ
ಅವರಸದಾಗ ನೇಸರ ಬರುತಿರುವಾನ

ಹಾರಾಡಿ ಹಾಡ್ಯಾವ ಬಾನಾಡಿ
ನಲಿಯಾಕ ತನ್ನವರ ಒಡಗೂಡಿ
ಕತ್ತಲಾಗ ಅಳ್ತಿದ್ದ ಹೂವು ಮುದುಡಿ
ಕಿಲಕಿಲ ನಕ್ಕೈತೆ ಸುಗಂಧಾವ ಹರಡಿ

ಮಂಜಿನ್ ಹನಿ ಹನಿಯ ಮಾಲೆ
ಎಲ್ಲೆಲ್ಲೂ ಚೆಲ್ಲೈತೆ ಎಲೆ ಮ್ಯಾಲೆ
ಕಾದು ಕುಂತವ್ನೆ ಬಿಸಿಲ ಜವರಾಯ
ಹೊತ್ತೋಗಲು ಎಲೆಮ್ಯಾಗಲ ಹನಿಯ

ಹೊಂಬಣ್ಣ‌ ರವಿ ಕಿರಣಗಳ ರಾಶಿ
ಚುಂಬಿಸ್ಯಾವ ಭುವಿಯ ರಮಿಸಿ
ಇರುಳು ತಂದ ವಿರಹ ಮರೆಸಿ
ಅಪ್ಪಿ ಮುದ್ದಿಸಿ ಅವಳ ಪ್ರೇಮಿಸಿ

- ಶ್ರೀಕಾವ್ಯ

17 May 2018, 07:21 pm

ಜೂಜಾಟ

ಪಾಂಚಾಲಿಯ ಸೀರೆಯ
ಸೆಳೆದರದು ಅಂದಿನ ಮಹಾಭಾರತ
ನಾಯಕರಿಗೆ ಆಮಿಷ ಒಡ್ಡಿ
ಸೆಳೆಯುತಿಹರು ಇದು ಇಂದಿನ ಭಾರತ

ತಿಳಿದು ತಿಳಿಯದಂತೆ ಕೂತಿದೆ
ನಮ್ಮ ಈ ಕಾರ್ಯಂಗ
ಸರ್ವಾಧಿಕಾರ- ಪ್ರಜಾಪ್ರಭುತ್ವ
ಎರಡು ಒಂದೆ ಅಂಗ
ಭಯೋತ್ಪಾದಕರಿಗು-
ಭಾರತದ ನಾಯಕರಿಗು-
ಇಲ್ಲ ಅಣುವಷ್ಟು ವತ್ಯಾಸ

ತ್ಯಾಜ್ಯ ತೆಗೆಯುವವರೆ
ತ್ಯಾಜ್ಯದ ನಿಮ್ರಾತೃಗಳಾದರೆ
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದವರೆ ಭ್ರಷ್ಟಾಚಾರಿಗಳಾದರೆ
ಬೇಲಿಯೆ ಎದ್ದು ಹೊಲ ಮೇಯ್ದರೆ
ರಕ್ಷಿಸುವರಾರು ಭಾರತಮಾತೆಯ

ಹಣ ಪಡೆದು ಮತ ನೀಡದಿರಿ
ಎನ್ನುವರು ನಮ್ಮ ನಾಯಕರು
ಹಣ ಪಡೆದು ಮತ ನೀಡಿದರೆ
ಅದು ಭ್ರಷ್ಟಾಚಾರ
ಕೋಟಿ- ಕೋಟಿ ನೀಡಿ
ಕೊಂಡರೆ ಇದು ಯಾವ ಆಚಾರ?

ಶಕುಂತಲಾ

- ಶಕುಂತಲಾ

17 May 2018, 10:40 am

ಕಾದಿರುವೆ....

ಪರಿತಪಿಸುವ ಪ್ರೇಮಕ್ಕೆ ಕಾರಣ ಹೇಳಲಾರೆ,
ನೀ ಅರಿಯುವವರೆಗೆ‌ ನಾ ಕಾಯಲಾರೆ,
ಕಣ್ ಭೇಟಿಗೆ ಕಾದು ಕುಳಿತ್ತಿರುವೆ,
ಹಾಗೆ ಹಿಂದಿರುಗಿ ನೋಡಬಾರದೆ ಮೆಲ್ಲನೆ...‌

- MEENAKSHI KS

14 May 2018, 09:49 pm

ಮತ್ತೆ ಮೋಡ ಕವಿಯಾಗಲಿಲ್ಲ

ಮಕರಂದ ಹೀರಲು ಪತಂಗ ಹಾರಿ ಬಂತು
ಆದರೆ ಹೂ ಸುವಾಸನೆ ಬೀರಲಿಲ್ಲ
ಭುವಿಯ ತಂಪಾಗಿಸಲು ಸಿಡಿಲು ಆರ್ಭಟಿಸಿತು
ಆದರೆ ಮಳೆ ಬರಲಿಲ್ಲ
ಸಂಗಾತಿಯ ಮೆಚ್ಚಿಸಲು ಹೃದಯ ಹಾಡಿತು
ಆದರೆ ಸಂಗಾತಿ ಲೆಕ್ಕಿಸಲಿಲ್ಲ
ನಾಟ್ಯವ ಸವಿಯಲು ಮೋಡ ಕವಿದಿತ್ತು
ಆದರೆ ನವಿಲು ನರ್ತಿಸಲಿಲ್ಲ
ಕೊನೆಗೊಮ್ಮೆ ಬೇಸರಗೊಂಡು
ಪತಂಗ ಹಾರಿ ಬರಲಿಲ್ಲ
ಸಿಡಿಲು ಆರ್ಭಟಿಸಲಿಲ್ಲ
ಹೃದಯ ಹಾಡಲಿಲ್ಲ
ಮೋಡ ಕವಿಯಲಿಲ್ಲ
*ಮತ್ತೆ ಮೋಡ ಕವಿಯಾಗಲಿಲ್ಲ*

- ಬೊಳ್ಳಿ ಬೊಲ್ಪು

13 May 2018, 10:50 am

ಮತ್ತೆ ಮತ್ತೇ...

ನಂಬದಂಥವರನ್ನೂ ನಂಬಿಬಿಡುವೆ....

ನನ್ನ ಮೇಲೆ ನನಗಿರುವ ಅತಿಯಾದ ನಂಬಿಕೆಯೊಂದಿಗೆ
ಪೆಟ್ಟು ತಿಂದ ಮೇಲೂ ಅವರಿಂದ...........

ನೆಟ್ಟಗೆ ಇರದೇ ಮನಸ್ಸು

ನಷ್ಟಕೆ ರೆಡಿಯಾಗಿಬಿಡುವುದು
ಮೆತ್ತಗೆ
ಮತ್ತೆ ಮತ್ತೇ.......

- ಅಜೀತ್

11 May 2018, 09:56 pm

ನೆನಪು

ಬೆರೆತಿರುವ ನೆನಪುಗಳು
ಉಸಿರಿರುವವರೆಗೂ ಕಾಡುವಂತಿರಳು
ಮರೆವೆಂಬ ಮದ್ದು ಯಾತಕ್ಕಾಗಿ...?

ಕನಸಲೆಲ್ಲ ಕಾಡುತ್ತಿರಳು
ಮನಸ್ಸಿಂದ ದೂರವಾಗದಿರಳು
ಮರೆವೆಂಬ ಮದ್ದು ಯಾತಕ್ಕಾಗಿ...?

ಕಣ್ಣೀರೇ ನೀನಾಗಿರಲು
ಕಾರಣವೇ ಇಲ್ಲದೆ ದೂರವಾಗಿರಲು
ಮರೆವೆಂಬ ಮದ್ದು ಯಾತಕ್ಕಾಗಿ...?

- ಎಸ್.ಬಿ

11 May 2018, 05:33 pm

ಓಟ್ ಮಾಡಿ

ಮಾರುವಂತಾಗದಿರಲಿ ನಿನ್ನ ಮತ
ನೀ ಹಾಕುವ,ಒಂದು ಮತ....
ಪ್ರಜಾಪ್ರಭುತ್ವಕ್ಕಾಗಲಿ ಹಿತ
ಅದಕ್ಕಾಗಿಯೇ

ನಡೆ ನೀ ಮತಕಟ್ಟೆಯ ಕಡೆ
ಉತ್ತಮ ಅಭ್ಯರ್ಥಿಯೇ ಆಗಿರಲಿ ನಿನ್ನ ಆಯ್ಕೆ
ನಿನ್ನ ಮತ ಬಲಿಯಾಗದಿರಲಿ ಹೆಣ-ಹೆಂಡಕ್ಕೆ
ಬದಲಾಗು ಮತದಾರ
ಚಲಾಯಿಸು ಮತದಾನ

- ಎಸ್.ಬಿ

11 May 2018, 03:05 pm