ಮಂದಸ್ಮಿತ ಮುಗುಳು ನಗೆ.
ಕ್ಷಣ ಮಾತ್ರದಲ್ಲೆ ಮರೆಯಾಯಿತಲ್ಲ
ಧರೆಗೆ ಎರೆಯಾಯಿತಲ್ಲ.
ಬಿರುಗಾಳಿ ಸಹಿತ ಬೀಸಿದ ಆ ಮಳೆಗೆ.
ಮಂಜಾಗಿ ಬಿಸಿಲಿಗೆ ಸುಂದರವಾಗಿ ಹೊಳೆದ ಆ ಭಾನು
ಕ್ಷಣ ಮಾತ್ರಕ್ಕೆ ಕತ್ತಲಾಯಿತಲ್ಲ ಈ ದಿನ.
ಆ ಭಾನ ಚಂದಿರನ ಅಳಲು ಹನಿಯಾಗಿ ಧರೆಸೊಕಿ ಕೊನೆಗೆ ಮರೆಯಾಯಿತಲ್ಲ
ಮಾತು ತಪ್ಪಿ ಬಂದ ಪದಗಳ ಉಚ್ಚಾರಣೆ ಮನಸ ನೋಯಿಸುವ ರೀತಿಯಾಯಿತಲ್ಲ
ಮನನೊಂದ ಮನಸ್ಸು ಕ್ಷಮೆಯಾಚಿಸಿದಂತೆ
ನನಗೆ ಭಾಸವಾಗುತಿದೆಯಲ್ಲ.
ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ ...
ನಾ ಹೇಗೆ ವರ್ಣಿಸಲಿ .....
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ ......
ನಾ ಹೇಗೆ ಮರಿಯಲಿ .....
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ ....
ನಾ ಹೇಗೆ ತಿಳಿಸಲಿ ....
ನಿನ್ನಿಲ್ಲದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು..
ನಾ ಹೇಗೆ ಜೀವಿಸಲಿ ....
ನೀ ಇಲ್ಲದೆ ನಾ ಹೇಗೆ ಇರಲಿ ....
ನೀನು ಇಲ್ಲದೆ ನಾನು ಇಲ್ಲ ....
ಈ ನನ್ನ ಪ್ರೀತಿಯೇ ಇಂದು ನಿನಗೆ ಹುಸಿಯಯೆನಿಸಿತೇ ಗೆಳೆಯ ..
ನಾ ಎಷ್ಟೋ ಬಾರಿ ಹೇಳಿದೆ ,ನಾ ನಿನಗೆ ಸರಿಜೋಡಿಯಲ್ಲಯೆಂದು ..
ನೀ ಅದ ಅರಿಯದೆ ಹುಚ್ಚು ಪ್ರೀತಿಯ ನನ್ನೆದೆಯಲ್ಲಿ ಹುಟ್ಟಿಸಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿ ..
ಇಂದು ನನ್ನ,ನನ್ನಲ್ಲಿ ಹುಟ್ಟಿದ ಪ್ರೀತಿಯ ಬಿಟ್ಟು ಹೋಗುವ ಹುಚ್ಚು ಸಾಹಸ ಏಕೋ ಮಾಡುತಿರುವೆ ,
ತಾಳಲಾಗುತಿಲ್ಲ ಈ ವೇದನೆಯ ,ಸಹಿಸಿದಷ್ಟು ಹೆಚ್ಚು ನೋವು ಕಣ್ಣಿನ ನೀರಿನ ಹಾಗೆ ಹರಿಯಲಾರಂಭಿಸುತ್ತಿದೆ ಗೆಳೆಯಾ..
ಒಮ್ಮೆಯಾದರೂ ಹೇಳು ನಾ ನಿನ್ನ ಎಂದು ಬಿಟ್ಟು ಹೋಗಲಾರೆ ಎಂಬ ಮಾತು ...
ಹೃದಯ ನಿನ್ನೆ ಬೇಕು ಬೇಕು ಎಂದು ಅಂಬಲಿಸುತ್ತಿದೆ , ಹೃದಯದ ಬಡಿತ ಒಮ್ಮೆ ಕೇಳೋ ನನ್ ಗೆಳೆಯ ..
ಯಾವುದೋ ಒಂದು ಕಾರಣಕ್ಕೆ ನನ್ನ ಮುಗ್ದ ಪ್ರೀತಿಯಾ ಬಲಿ ಮಾಡುವುದು ಸರಿಯೇ ನಿನಗೆ .....
ನೀ ದುರಾಗುವ ಮಾತುಗಳು ಆಡಿದಾಗಳೆಲ್ಲ ,ನನ್ನ ಮನಸ್ಥಿತಿಯ ಬಗ್ಗೆ ಒಂದು ಬಾರಿಯಾದರೂ ಯೋಚಿಸೋ ....
ಯಾಕೋ ನನ್ನ ಜೀವನಕ್ಕೆ ಬಂದೆ
ಯಾಕೋ ನನಗೆ ಪೀತಿಯನ್ನು ಕೊಟ್ಟೆ
ಯಾಕೋ ನಾ ಸಾಯುವಷ್ಟು ನಿನ್ನ ಪೀತಿ ಮಾಡಿದೆ
ಯಾಕೋ ನನ್ನ ನೋವು, ನನ್ನ ಮಾತು ,
ನನ್ನ ಪೀತಿ , ನನ್ನ ಕಾಳಜಿ , ನನಗೆ ನಾಟಕದ ತರ ಕಾಣಿಸುತ್ತೆ
ಯಾಕೋ ನನ್ನ ಮೇಲೆ ಪೀತಿ ಇಲ್ವ ???
ಯಾಕೋ ನನ್ನ ಕಣ್ಣಲ್ಲಿ ನೀರು ನಿಲುತ್ತಿಲ್ಲ
ಅಂದು ತುಂಬಾ ಪೀತಿ ಕೊಟ್ಟೆ
ಇಂದು ಅದೇ ಪೀತಿನಾ ಕಾಲಿನಲ್ಲಿ ಒದ್ದು ಹೊಗಿರುವೆ
ನಾ ಮಾಡಿದ ತಪ್ಪು ಎನು ??
ನಾ ನಿನ್ನ ಪೀತಿ ಮಾಡಿದ್ದೆ ತಪ್ಪ ??
ಯಾವ ತಪ್ಪಿಗೆ ನನಗೆ ಈ ಶಿಕ್ಷೆ ??