ತುತ್ತು ಕೊಡದ ತುಸು ಕರುಣೆ ಇಲ್ಲದ
ಕಟುಕರ ಅನ್ನಕ್ಕೆ ಕೈ ಹಾಕಿದ್ದೆ ಅವ
ಮಾಡಿದ ಮಹಾಪರಾಧ!
ದೇವರ ಹೆಸರಲ್ಲಿ ರಾಶಿ ರಾಶಿ ಹಾಲು ಬೆಣ್ಣೆ
ಕೊಂಡೊಯ್ದು ಕಲ್ಲ ಮೇಲೆ ಸುರಿವ
ಕಲ್ಲು ಹೃದಯದ ಮೂಡ ಜನಗಳಿಗೆ
ಎಲ್ಲಿಂದ ತಿಳಿಯಬೇಕು ಹಸಿದ ಹೊಟ್ಟೆಯ ನೋವು.
ಕೋಟಿ ಕೋಟಿ ಮೂಟೆ ಕಟ್ಟಿ ವಿದೇಶಕ್ಕೆ
ಹಾರುತಿಹರು ಸೂಟು ಬೂಟಿನ ಮಂದಿ.
ಮಣ ಭಾರದ ಬಂಗಾರ ಹೊತ್ತು ತಿರುಗುವ
ಮಾನಗೆಟ್ಟ ಸಿರಿವಂತಿಕೆಯ ಮಂಗಳೆಯರು.
ನಿಮ್ಮ ಸಿರಿವಂತಿಕೆಯ ಅಣು ಅಣುವಿನಲ್ಲೂ
ಅಡಗಿಹುದು ಯಾವುದೋ ಬಡವನ ಬೆವರು.
ತುತ್ತು ಕದ್ದವನು ಕಳ್ಳನಲ್ಲ,
ಸುಳ್ಳು ಹೇಳಿ, ಜನರ ವಂಚಿಸಿ ಬದುಕುವ
ರಾಜಕಾರಣಿಗಳು, ಜೊತೆಗೆ ಅಧಿಕಾರಿಗಳು
ಇವರಲ್ಲವೇ ಕಳ್ಳರು? ದೇಶ ಲೂಟಿ ಮಾಡುವ
ದೇಶದ್ರೋಹಿ ಉದ್ಯಮಿಗಳ ಯಾಕೆ
ಯಾರೂ ಬಡಿದು ಕೊಲ್ಲಲೊಲ್ಲರು ?
ಹೆಣೆಯುತಿದೆ ಬಲೆಯೊಂದು ಅಂತರ್ಜಾಲ
ಯುವ ಮನಸುಗಳ ಸಂಗಮ ಮೋಹಜಾಲ
ಸುಳಿಗೆ ಸಿಲುಕಿ ನಲುಗುತಿರೆ ಇಂದ್ರಜಾಲ
ದಾರಿ ತಪ್ಪಿಸಿ ಬಲೆಯ ಹಿಡಿದಿಹರು ಮೋಸಜಾಲ...
ಅರಿಯಬೇಕಿಲ್ಲಿ ಯುವ ಮನಸುಗಳು
ಹೆತ್ತವರ ಮಮಕಾರದ ವಾಂಛಲ್ಯದ ಕನಸುಗಳು
ಸೆಳೆಯುತಿದೆ ಅಂತರ್ಜಾಲದ ಜಾಹೀರಾತುಗಳು
ಸರಿದಾರಿಯ ತೋರಬೇಕಿದೆ ಹಿತ ಬಂಧುಗಳು...
ಸ್ನೇಹಿತರು ಸಿಗುವರು ನೂರು ಮಂದಿ ಬಾಳಿನಲ್ಲಿ
ಹೆತ್ತವರ ಕನಸು ಹೊಸಕಿ ಭ್ರಮೆಯರಸುವ ಕನಸಿನಲ್ಲಿ
ಸುಭದ್ರ ನಾಳೆಗಳು ಕಮರಿ ಬದುಕು ಘೋರ ನರಕದಲ್ಲಿ
ಬುಧ್ದಿ ಕಲಿತು ಬರುವ ದಾರಿ ಮರೆತು ಕಾಣದ ಲೋಕದಲ್ಲಿ...
ಕತ್ತಲೊಂದು ಒಡಿ
ಬೆಳಕೊಂದು ಬಂದಾಯ್ತು
ಕನಸೊಂದು ಬಿದ್ದು
ಕಣ್ ತುಂಬಿ ಬಂದಾಯ್ತು
ಬದುಕಿನ ಶಾಲೆ ಶುರೂವಾಯ್ತು
ಪಾಠವ ಕಲಿಯುವ ಮನಸುಗಳು
ಎದ್ದು ಹೊಗುವ ಗಳಿಗೆ ಬಂದಯ್ತು
ಬೆಳಕೊಂದು ಬಂದಾಗ ಕಣ್ಮುಚ್ಚಿ
ಮಲಗಿದರೆ ಆ ಬೆಳಕು ನಮ್ಮನ್ನ
ನೊಡಿ ನಕ್ಕಿಬಿಟ್ಟಿತ್ತು ಎಳಿ ಬೆಳಗಾಯ್ತು
ಎಲ್ಲ.................
ಮನವು ಇಂದು ಬಯಸಿದೆ
ನೀನು ಬೇಕೆಂದು.
ಕಂಗಳು ಕನಸು ಕಾಣುತ್ತಿದೆ
ನೀನ್ನ ನೋಡಲೆಂದು.
ಕಿವಿಗಳು ಬಯಸುತ್ತಿದೆ
ನಿನ್ನ ದ್ವನಿಗೆಂದು.
ಈ ಹೃದಯ ಬಯಸುತ್ತಿದೆ
ನಿನ್ನ ಪ್ರೀತಿಗೆಂದು
ಮಾಡಲೇನು ತಿಳಿಯದಾಗಿದೆ
ನೀನು ದೂರ ಇರುವೆ ಇಂದು.
ಇಲ್ಲಿ ನಾ ಒಬ್ಬೋಂಟಿಯಾಗಿರುವೆ
ಎಂದೆಂದೂ....
ಯಾಕೆ ದುಡ್ಡು ದುಡ್ಡು ಅಂತ ಸಾಯ್ತಿಯಾ
ಸತ್ತಾಗ ಎಲ್ಲಾ ಹೊತ್ತುಕೊಂಡು ಹೋಗ್ತಿಯೇನಯ್ಯ..
ಮಣ್ಣಿನೊಳಗೆ ಸಂಪತ್ತು ದುಡ್ಡು ಇಟ್ಟು ಮುಚ್ಚುವರೇನಯ್ಯ..
ಅಧಿಕಾರ ಅಹಂಕಾರ ಬಂಗಾರ ಬಡಿವಾರ
ಏಕಯ್ಯ..
ಲೋಕದೊಳಗೆ ನಾಲ್ಕು ಜನ ಮೆಚ್ಚುವಂತೆ
ಬಾಳಬೇಕಯ್ಯ.. " ಪ "
ಹುಟ್ಟು ಪಡೆದ ಮೇಲೆ
ಸಾವು ಬರಲೇಬೇಕಯ್ಯ...
ಅಡ್ಡದಾರಿ ತುಳಿದ ಮೇಲೆ
ತಲೆದಂಡ ಕಟ್ಟಲೇ ಬೇಕಯ್ಯ..
ದುರಾಸೆ ಎಂಬ ಭೂತ ಹಿಡಿದ ಮೇಲೆ
ಸಂತಸ ಎಂಬ ಸ್ನೇಹಿತ ನಿನಗೆ ಸಿಗೋದಿಲ್ಲಯ್ಯ..
ನಾನು ಎಂಬ ಜಂಭ ನೆತ್ತಿಗೇರಿದ ಮೇಲೆ
ನಗು ಎಂಬ ಹಬ್ಬ ನಿನ್ನ ಬಾಳಿಗೆ ಇಲ್ಲಯ್ಯ..
ಅನ್ಯರ ಕಾಸಿಗೆ ಕನ್ನ ಹಾಕಿದ ಮೇಲೆ
ಪುಣ್ಯದ ಜೋಳಿಗೆ ನಿನ್ನ ಜೊತೆಗೆ ಬರೋದಿಲ್ಲಯ್ಯ
ಮಾನವನಾಗಿ ಹುಟ್ಟಿದ ಮೇಲೆ
ಸಕಲ ಪ್ರಾಣಿಗಳಲ್ಲಿ ದಯೆ ಇರಬೇಕಯ್ಯ..
ಬದುಕಿನ ಬಂಡಿ ಏರಿದ ಮೇಲೆ
ಶಾಂತಿ ಸಹನೆಯ ದಾರಿ ಹಿಡಿಯಬೇಕಯ್ಯ..
ಮೇಲುಕೀಳು ಅನ್ನದೆ ನಗುತ ಬಾಳಿದ ಮೇಲೆ
ಎಲ್ಲೆಲ್ಲೂ ನಿನಗೆ ಭಗವಂತ ಕಾಣುವನಯ್ಯ..
ನಾಡು ಹೋಗು ಅನ್ನುವ ಮೊದಲೇ
ಪ್ರೀತಿಸ್ನೇಹದ ಕೋಟೆ ಕಟ್ಟಿ ಹೋಗಬೇಕಯ್ಯ..
ಕಾಡು ಬಾ ಎಂದು ಕರೆಯುವ ಮೊದಲೇ
ದ್ವೇಷ ಮೋಸದ ಮೂಟೆ ಸುಟ್ಟು ಹಾಕಬೇಕಯ್ಯ..