ರೈತ ಈ ಮಣ್ಣಿನ ಮೊದಲ ಸುತ
ಜಗವೇ ಸಾಗದು ಇವನ ನಿಮಿತ್ತ..
ಜೀವಕೋಟಿಗೆ ಇವನೇ ಅನ್ನದಾತ
ಮುಕ್ಕೋಟಿ ದೇವರಿಗಿಂತ ಹೆಸರಾಂತ..
ಸ್ನೇಹಪ್ರೀತಿ ಉಸಿರಾಗಿಸಿಕೊಂಡ ಸಿರಿವಂತ
ದೇಶದ ಶಕ್ತಿ ಎನಿಸಿಕೊಂಡ ಮಹಾಸಂತ .. "ಪ"
ಈ ಭೂಮಿಯ ಹಸಿರ ಸಾಗರ ಮಾಡಿದ
ಮನೆಮನೆಯಲಿ ಹರುಷದ ಬಂಗಾರ ಬೆಳಗಿದ..
ಈ ರೈತ ಹುಟ್ಟಿ ಬಂದ ನಮಗಂತ
ಈ ರೈತ ಬಾಳಲಿ ನಗುನಗುತ..
ದುಡಿಮೆಯಲಿ ಸುರಿಯುವ ರೈತನ ಬೆವರು
ಮುಗಿಲೇತ್ತರ ಕುಣಿಯುವ ಹಸಿರಿನ ಪೈರು
ನಮ್ಮ ಬದುಕಿನ ಪ್ರಗತಿಯ ತೇರು..
ಅಸೂರ್ಯನ ಶಕ್ತಿ, ಈ ಭೂತಾಯಿಯ ಪ್ರೀತಿ ತುಂಬುವ ಈ ರೈತನೇ ನಮ್ಮ ನಿಜ ದೇವರು
ನಮಿಸಿರಿ ಈ ದೇವನಿಗೆ ಎಲ್ಲರು..
ಸ್ವರ್ಗಲೋಕ ನಿಜವಾಗಲೂ ಈ ರೈತ ನಡೆದಾಡುವ ಜಾಗ..
ರಾಜವೈಭೋಗ ಎಲ್ಲೆಲ್ಲೂ ಈ ರೈತ ದುಡಿಯಲು ನಿಂತಾಗ..
ಈ ವಿಜ್ಞಾನಿಯ ಯಾಗಕೆ ಆ ರವಿ ಕೂಡ ಸೋಜಿಗ
ತಂತ್ರಜ್ಞಾನದ ಓಟದಲಿ ಬೇಸಾಯ ಬಿಟ್ಟರೆ ಈ
ರೈತ
ಅವಸಾನ ಹತ್ತಿರದಲಿ ಈ ಜಗಕೆ ಖಂಡಿತ..
ಕಣ್ಣೆದುರು ಇದ್ದ ಒಂದೋಂದು
ನಗೆ ಮಲ್ಲಿಗೆಯನ್ನು ಪೊಣಿಸಿ
ಬಿಡು ನಿನ್ನುಸಿರ ದಾರದೋಳಗೆ
ನನ್ನೋಡೆಯ ಆ ಉಸಿರಿನ ಹಾರವ
ಎಂದು ಹರಿದೋಗದ ಹಾಗೆ
ಕಾಪಾಡಿಕೊಂಡು ಬಿಡುವೆ
ನನ್ನುಸಿರು ಇರುವ ವರೆಗೂ
ಒಂದೆ ಒಂದೂ ಮಾತು ಕೊಟ್ಟು
ಬಿಡು ನನ್ನರಸ ಎಳೆಳು ಜನ್ಮಕ್ಕು
ಜೊತೆಜೊತೆಗೆ ಹುಟ್ಟಿ ಬದುಕಿ
ಬಿಡೋಣ ಜಗವೆ ನಾಚುವ ಹಾಗೆ...........
ಪ್ರತಿಫಲ ಏನೇ ಬಂದರೂ
ನಗುತ ಬದುಕಿನ ಬಂಡಿ ನಡೆಸುವನಿವನು..
ದುಡಿಮೆಯೇ ನಿಜ ದೇವರು
ಎಂಬ ಜೀವನ ನುಡಿ ಸಾರುವನಿವನು..
ಏನಾಗಲಿ ಎಲ್ಲರಿಗಾಗಿ ಬೆವರು
ಸುರಿಸಿ ದುಡಿದು ಹಸಿವ ನೀಗುವನಿವನು..
ಎಂದೂ ಸುಖವಾಗಿರಲಿ ಸರ್ವಜನರು
ಎಂದು ಶಕ್ತಿ ತುಂಬುವ ಮಹಾಸಂತನಿವನು..
ಈ ರೈತ ರೈತ ರೈತ
ಕಣ್ಣ ಹನಿಗಳು ಮರೆತರೂ ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ, ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ, ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು
ನಿನ್ನ ಕನಸುಗಳಿಲ್ಲದೆ ದಿನ ರಾತ್ರಿ ಪೂರ್ತಿ ಆಗುತ್ತಿಲ್ಲ ...
ನಿನ್ನ ನೆನಪುಗಳಿಲ್ಲದೆ ದಿನ ಆರಂಭ ವಾಗುತಿಲ್ಲ .
ಕಣ್ಣ್ಮುಚ್ಚಿ ಕಣ್ಣ ತೆರೆಯುವ ಮುನ್ನ ..
ಕಲ್ಪನೆಗಳಾಗಿ ಬಳಿ ಸುಳಿದು ..
ಕವಿತೆಗಳ ಬರೆಸುವ ನನ್ನವಳೇ ..
ನೀ ನನ್ನೆದುರು ಬರದೆ ಕವಿತೆಯಲ್ಲೆಕೆ ಅಡಗಿ ಕುಳಿತೆ ....!!
ಓ ಮುದ್ದು ಬಾಲಕ
ನೀನಾದೆಯಾ ಬಾಲಕಾರ್ಮಿಕ
ತೊರೆದೆಯಾ ಓದುಬರಹದ ಶಾಲಾ ಕಾಯಕ
ನೀನಾದೆಯಾ ಕೂಲಿಗೆ ದುಡಿಯುವ ಕಾರ್ಮಿಕ "ಪ
ಕಿತ್ತುತಿನ್ನುವ ಬಡತನ ಕಿತ್ತಾಡುವ ಜನಮನಕೆ
ಬಲಿಯಾಯಿತೆ ನಿನ್ನ ಸವಿಯಾದ ಎಳೆತನವೇ
ಆಟವಾಡುವ ಕನಸು ಕಾಣುವ ವಯಸಿಗೆ
ನೋವುನುಂಗುವ ದುಡಿದುಸಾಕುವ ಕೊಡುಗೆಯೇ
ಆಟದ ಕಟ್ಟೆಯಲ್ಲಿ ಕುಣಿಯುವ
ಸಂತಸ ಎದೆಯಂಗಳದಲಿ..
ಊಟದ ತಟ್ಟೆಯಲ್ಲಿ ಅನ್ನ ಇಡುವ
ಕೆಲಸ ಹಸಿವಿನ ಕೊಳದಲಿ..
ಅಕ್ಷರ ಕೋಟೆ ಕಟ್ಟುವ
ತವಕ ಮನದಲಿ..
ಹಸಿದ ಹೊಟ್ಟೆ ತುಂಬಿಸುವ
ಕಾಯಕ ಎದುರಲಿ..
ಪೆನ್ನು ಪುಸ್ತಕ ಗೆಳೆಯರ ಬಳಗ ನೀ ನೋಡಲಿಲ್ಲ..
ಕಿರಾತಕ ಜನರ ಕಾಳಗ ನಿನ್ನ ಬಿಡಲಿಲ್ಲ..