Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮಾ....

  ಓ ಮಮಕಾರದ ಅಕ್ಷಯ ನಿಧಿಯೇ
  ನಿನಗೆ ಕೋಟಿ ವಂದನೆ..!
  ಓ ಸ್ನೇಹದ ಮೂರ್ತ ರೂಪವೇ
  ನಿನಗೆ ಕೋಟಿ ವಂದನೆ..!

  ನಡು ರಾತ್ರಿಯಲು ನನ್ನ ಅಳುವಿಗೆ
  ಎದೆ ಹಾಲಿನ ಸಾಂತ್ವನ ನೀಡಿ..
  ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು..
  ಅತ್ತಾಗ ಕಣ್ಣೊರೆಸಿ ,ನಕ್ಕಾಗ ಕಣ್ಣರಳಿಸಿ..
ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ
ತೋರಿಸಿ
 
ಬೆಳೆಸಿದಳು ನನ್ನ ತಾಯಿ…
 ಓ ಜನನೀ.. ನಿನಗೆ ಕೋಟಿ ವಂದನೆ…!

 ತೆವಳಿ ಬರಲು ಕೈ ನೀಡಿಡಳು..
 ತೊದಲು ನುಡಿಯಲು ತಿದ್ದಿ ಹೇಳಿದಳು..
 ಚಂದ ಮಾಮನ ತೋರಿಸಿ ತುತ್ತು ಕೊಟ್ಟು
 ಹಸಿವ ನೀಗಿಸಿದಳು..
 ತನ್ನ ಬಸಿರೊಳಗೂ ನನಗೆ ಉಸಿರಾದಳು..
 ಓ ದಿವ್ಯ ಚೇತನವೇ.. ನಿನಗೆ ಕೋಟಿ
ವಂದನೆ..!

ತನ್ನ ಬೇಸರವ ಮರೆತು ನನಗೆ
  ಸಾಂತ್ವನವಾದಳು..
  ನನ್ನ ಸಂತೋಷದಲಿ ನಗೆಯ ಕಂಡಳು..
  ಗೆಲುವಿಗೆ ಸ್ಪೂರ್ತಿಯಾದಳು…
  ಬದುಕಿದೆ ದಾರಿದೀಪವಾದಳು..
  ಓ ಸ್ಪೂರ್ತಿಯ ಚಿಲುಮೆಯೇ.. ನಿನಗೆ
ಕೋಟಿ ವಂದನೆ..!

- Halesh S

12 Jan 2018, 07:10 pm

ಕನ್ನಡ ಕೇಸರಿ

ಕನ್ನಡ ನನ್ನುಸಿರು
ಕನ್ನಡಿಗ ನನ್ನೆಸರು

ಕರುನಾಡ ಕೇಸರಿಗಳು ನಾವು
ನೆನಪಿಡಿ ನೀವು ಇಂದು
ನೆಲ ಜಲ ಭಾಷಾ ಉಳಿವಿಗೆ
ಕಟಿ ಬದ್ದರು ನಾವು
ಅದು ನಿಮಗೂ ಗೊತ್ತು
ನಮ್ಮ ನಿಲುವಿನಲಿ
ನಮಗಿದೆ ನಿಯತ್ತು
ಗರ್ವದಿಂದ ನಡೆವೆವು
ಕನ್ನಡಾಂಬೆಯನು ಹೊತ್ತು
ನಮ್ಮೊಂದಿಗೆ ನೀವಿರೆ
ಹೆಚ್ಚುವುದು ನಮ್ಮ ತಾಕತ್ತು
ಕನ್ನಡತನವೇ ನಮಗೆ
ಗತ್ತು ಗೈರತ್ತು
ಓ!! ಹೊರಗಿನವರೇ
ತೋರದಿರಿ ನಮ್ಮೆದುರು
ನಿಮ್ಮ ದೌಲತ್ತು
ಯಾರೇ ಎದುರಾಗಿ ಬಂದರು
ಸೋಲಲಾರೆವು ನಾವು ಯಾವತ್ತೂ.

- Manjunath C

12 Jan 2018, 02:55 pm

ಸಂಕ್ರಾಂತಿ ಹಬ್ಬದ ರಂಗು......

ಸಂಕ್ರಾಂತಿ ಬಂತು
ಸುಗ್ಗಿಯ ಒಲವ ತಂತು
ಎಲ್ಲೆಲೂ ರಾಶಿ ರಾಶಿ ಧಾನ್ಯಗಳ ಸಿಂಗಾರ
ಹೊಲದ ಬಣವೆಗಳ ಬಂಗಾರ
ನೋಡಲದುವೆ ಸಾಂಕ್ರಾಂತಿ ಸುಗಡು
ದನಕರುಗಳ ಅಲಂಕಾರ
ಅವುಗಳಿಗದುವೆ ಆಕಾರ
ಕುಣಿದು ಕುಪ್ಪಳೀಸುವ ಹೈಕಳು
ಬೆಂಕಿ ಒಳಗೆ ನುಗ್ಗಿ ಬರುವ ಧನಗಳು
ಅವುಗಳಾಡಿಸುವ ಹಳ್ಳಿ ಹೈದರು
ನೋಡುವ ಕಣ್ಣಿಗದುವೆ ಸುಗ್ಗಿಯ ಸೊಬಗು
ಎಳ್ಳು ಬೆಲ್ಲವ ತಿಂದು ಒಳ್ಳೆ
ಮಾತಾಡಬೇಕು ಎಳ್ಳೆಂದು ಕಹಿಯೆ
ಇದ್ದರು ಬಾಳಿಗದುವೆ ಸಿಹಿಬೆಲ್ಲದ ಅಚ್ಚಿನ
ಅರ್ಥ ನಿಡುವ ಸಂಕ್ರಾಂತಿ........
ಸಿಹಿ ಕಹಿಯ ಸಂಕ್ರಾಂತಿ..........
ಬಣ್ಣ ಬಣ್ಣದ ಲಂಗರವಿಕೆ ತೊಟ್ಟು ಪುಟ್ಟ ಕಂದಮ್ಮಗಳು ಎಳ್ಳು ಬಿರುವ ಹಬ್ಬ........
ಅವರ ಮನದಂತೆ ಮುಗ್ದ ವಾಗಿರಲಿ ಎಲ್ಲರ ಬದುಕು ಎನ್ನುವ ಅರ್ಥ ನಿಡುವ ಹಬ್ಬ
ಎಲ್ಲೆಲ್ಲು ಹಬ್ಬವೋ ಹಬ್ಬ ಎಲ್ಲರ ಮನೆಯಂಗಳವ ರಂಗು ರಂಗಾಗಿಸುವ ಹಬ್ಬ ಮನೆ ಮನಗಳ ತುಂಬಿಸುವ ಹಬ್ಬ ಸಂಕ್ರಾಂತಿ ಹಬ್ಬ .............
ಎಳ್ಳು ಬೆಲ್ಲದ ನಡುವಿನ ಜೊತೆ ಬದುಕಿನ
ಸಂಕ್ರಾಂತಿ ಹಬ್ಬ........
ಶುಭಾಶಯಗಳು........

- ರಾಗಸಿರಿ....

12 Jan 2018, 12:26 pm

ತ್ಯಾಗಮಯಿ ನನ್ನಮ್ಮ

ನವ ಮಾಸ ಹೆತ್ತು ಹೊತ್ತು ಸಾಕಿ ಸಲುಗಿದ ನಿನಗೆ ಕೋಟಿ ನಮನಗಳು ತಾಯಿ......

ನೀ ತಿನ್ನದೆ ಹಸಿವಿದ್ದರು,ಹೊಟ್ಟೆ ತುಂಬುವಂತೆ ಉಣಿಸಿದವಳು ನೀ ಎನಗೆ....

ನೀ ಬೆಂಕಿಯಲ್ಲಿ ಮಿಂದು ನರಳುತ್ತಿದ್ದರು,
ಎನಗೆ ಹೂವಿನ ಹಾಸಿಗೆಯಲ್ಲಿ ಆಡ ಬಿಟ್ಟವಳು ನೀ ಎನಗೆ.....

ಈ ಕಣ್ಣೀರಿನ ಜಗದಲ್ಲಿ ನೀನಿದ್ದು , ನಗುವ ಜಗವ ತೋರಿಸಿದವಳು ನೀ ಎನಗೆ .....

ತನ್ನೆಲ್ಲ ಸುಖಗಳನ್ನು ಎನ್ನ ಕಂದನಿಗಿರಲಿ ಎಂದು ಸದಾ ಆರೈಸುವವಳು ನೀ ತಾಯಿ .....

"""ತ್ಯಾಗಮಯಿ ನನ್ನಮ್ಮ"""

- Acchu love

11 Jan 2018, 09:00 pm

ಆ.. ಕ್ರಾಂತಿಯ ಸ್ಫೂತಿ೯

ಪರತಂತ್ರದ ಅಂಧಕಾರದಲ್ಲಿ ಮುಳುಗಿದ್ದ
ಭಾರತೀಯರಲ್ಲಿತ್ತು ಭೀತಿ|
ಆ ಭೀತಿ ನೀಗಿಸಲು ಭಾರತಿ
ಪಡೆದಳೊಂದು ಜ್ಯೋತಿ
ಆ ಜ್ಯೋತಿ ತನ್ನನ್ನೇ ತಾನು ಸುಟ್ಟುಕೊಂಡು
ಹೋಮ್ಮಿಸಿತು ಯುವ ಶಕ್ತಿಯಲ್ಲಿ ಆಗಾಧವಾದ ಕಾಂತಿ|

ಸುಭಾಷ್ ಮೂಡಿಸಿದರು ಜನರ ಮನದಾಳದಲ್ಲಿ ರಾಷ್ಟೀಯತೆಯ ಪ್ರೀತಿ|
ಆ ಪ್ರೀತಿಯ ಕಿಡಿಕಂಡು ನಡುಗಿತು
ಕೆಂಪು ಮೂತಿಯ ಕೋತಿ|
ವಿಷ ಜಂತುಗಳ ಹುಟ್ಟಡಗಿಸಲು ಸಾರಿದರು
ಸುಭಾಷ್ ದೇಶದ ಹಿತಕ್ಕಾಗಿ ಮಾಡಬೇಕು
ಕ್ರಾಂತಿ|
ಬ್ರೀಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದರು ಬೋಸ್ ..ಈಸ್ಟ್ ಇಂಡಿಯಾ ಕಂಪನಿಯೇ ಬೆಚ್ಚಿ ಬೀಳುವ ರೀತಿ|

ದೇಶ ವಿದೇಶಗಳಲ್ಲಿ ಖೈದಿಗಳಾಗಿದ್ದ
ಭಾರತಿಯ ಸೈನಿಕರ ಒಗ್ಗೂಡಿಸಿ ರಣತಂತ್ರ
ರೂಪಿಸಿದ ನೇತಾಜೀಯ ನೀತಿ|
ಸಾಬೀತಾಯಿತು ತಾಯಿ ನೆಲದ ಮೇಲೆ ಅವರಿಗಿದ್ದ ಅಪಾರವಾದ ಪ್ರೀತಿ|
ದೇಶದ ಬಂಧನ ಮುಕ್ತಿಗಾಗಿ ವೀರಾವೇಶದಿಂದ ಹೋರಾಡಿ
ತಮ್ಮ ಜೀವನವನ್ನೇ ತ್ಯಾಗ ಮಾಡಿದರು
ದೇಶದ ಸ್ವಾತಂತ್ರ್ಯಕ್ಕಾಗಿ ಪೂತಿ೯|

ಆಶಿಸೋಣ ಸದಾ ನಾವು..ಆ ಮಹಾತ್ಮನ
ಆತ್ಮಕ್ಕೆ ದೋರೆಯಲೆಂದು ಶಾಂತಿ|
ಭಾರತಿಯರ ಮನದಾಳದಲ್ಲಿ ಮೂಡಿ
ಚಿರಾಯುವಾಗಲಿ ನಮ್ಮ ನೇತಾಜೀಯ
ದಿವ್ಯ ಮೂತಿ೯|
ಆ ಮೂತಿ೯ಯ ಸ್ಪೂತಿ೯|

- Bhagya Girish

11 Jan 2018, 12:45 pm

ಲೇಖನಿ....

ತಂಪು ತುಂಬಿಧ ಮುಂಜಾನೆ
ಎಲ್ಲೆಲ್ಲು ಇಬ್ಬನಿ

ಇಂಪು ತುಂಬಿ ಕೇಳಲು
ಹಕ್ಕಿ ದನಿ

ರವಿಯ ನೋಟದಿ ಕರಗಿತು....
ಮಂಜಿನ ಹನಿ

ಕವಿಯು ಮೈ ಮರೆಯಲು
ಪದಗಳ ಹುಡುಕಿತು ಲೇಖನಿ.....

ಕುಶಿ...

- sharin rao

11 Jan 2018, 11:43 am

ಕನಸಲ್ಲಿ ಬಂದ ಪ್ರೀತಿ

ಮುಂಜಾನೆಯ ಹೊತ್ತಲ್ಲಿ ಕೈಬಿಸಿ ಕರಿತ ಇತ್ತು
ಕಲ್ಪನೆಯ ಪ್ರೀತಿ

ಸುಂದವದ ಬದುಕಿನ ಮಧ್ಯದಲ್ಲಿ ಕುಳಿತು ಪ್ರಯಾಣ ಮಾಡುತ್ತ ಇದ್ದೆ

ವರ್ಷಗಳೇ ಕಳೆದರು ಮುಗಿಯಲಿಲ್ಲ ನನ್ನ ಪ್ರಯಾಣದ ಹಾದಿ

ಕಣ್ಣು ತೆರೆದು ನೋಡಿದೆ ಬೆಳಗಿನ ಜವಾದ ಹೊತ್ತು ಹಾಗಿತ್ತು ಇದೊಂದು ಕನಸೆಂದು ತಿಳಿತು ಆದ್ರೂ ನಿಜಅಂತ ನಂಬಿದ ಹೃದಯ ಪ್ರೀತಿಗಗಿ ಕಾದು ಕುಳಿತಿತ್ತು...

- ಅಂಜಲಿ

11 Jan 2018, 09:51 am

ಆ ಸಂಜೆಯ ನೆನಪುಗಳು...

ಯಾಕೋ ನಿನ್ನ ನೋಡುವ ಹಸಿವು
ಇನ್ನೂ ಹಿಂಗಲಿಲ್ಲ ನೋಡುತ್ತ ನಿಂತುಬಿಡಲೇ
ಆದರೇನು ನಿಲ್ಲುವ ಹಾಗಿಲ್ಲವೇ
ನನ್ನ ವೇಳೆಯಿಂದು ಸಮೀಪಿಸುತ್ತಿದೆ
ಯಾರಲ್ಲಿ ಹೇಳಲಿಂದು
ನನ್ನೆದೆಯಲಿ ಬಚ್ಚಿಟ್ಟ ವೇದನೆಯನು
ಕಣ್ಣ ತುಂಬಾ ನಿನ್ನ ನೋಡಿ
ಮುತ್ತಿಕ್ಕು ಬಯಕೆಯಾಗಿದೆ
ಆದರೇನು ಕಣ್ಣೀರು ಜಾರಿ
ಸಂಭ್ರಮಿಸುತ್ತಿದೆ ಕೆನ್ನೆಯ ಸೇರಲು,
ಜಾರುವ ಕಣ್ಣೀರನು ತಡೆಯಲಾರದೆ
ಸೋತು ಸಾಗರದತ್ತ ಕಾಲೋಡುತ್ತಿದೆ
ಆದರೆ ಎಲ್ಲೂ ಕಾಣೆನೂ ನಾನು
ಆ ಬಂಡೆ, ಆ ಸಂಪಿಗೆ ಮರ, ಆ ದೋಣಿ
ನಿನ್ನ ಆ ಹುಸಿನಗುವಲ್ಲಿ ನಾ ಕಂಡ ಕನಸು
ಎಲ್ಲಾ ಕಳೆದೋಗಿದೆ ಇಂದು
ಈ ಸಮಯದಲ್ಲೀಗ ಜೊತೆಯಾಗಿರುವುದು ನೀನಲ್ಲ
ಆ ಸಂಜೆಯ ನಿನ್ನೊಂದಿಗೆ ಕಳೆದ ನೆನಪುಗಳು
ಎಂದಷ್ಟೇ ಹೇಳುವೆನು!

- ಪ್ರಿಯಾಂಕ

10 Jan 2018, 10:31 pm

ಮರದೆಲೆಯ ಹಾದಿಯಲ್ಲಿ

ಮರದೆಲೆಯ ಹಾದಿಯಲ್ಲಿ
ಅರೆಗಿಣಿಯ ಕಂಡೆನಲ್ಲಿ!!
ಮನದಾಸೆ ಹೇಳೋ ತವಕ
ಎದೆಯಲ್ಲಿ ಏನೋ ಪುಳಕ!!

ಚಿಲಿ ಪಿಲಿಯ ಗಾನವೊಂದು
ಕರೆದಂತೆ ನನ್ನ ಅಲ್ಲಿ!!
ನಾ ಮಂತ್ರ ಮುಗ್ಧನಂತೆ
ಓ ಗೊಟ್ಟು ಹೆಜ್ಜೆ ಕಿತ್ತೆ!!

ಆ ಒಂಟಿ ಮರದ ಮೇಲೆ
ನಾ ಒಂಟಿ ಎಂಬ ಧನಿಯು!!
ನನ್ನ ಕೂಗಿ ಕರೆದ ಹಾಗೆ
ನಾ ಓಡಿ ಹೋದೆ ಬಳಿಗೆ!!

- ಪಿ.ಜಿ.ಜ್ಯೋತಿ

10 Jan 2018, 09:27 pm

ನಾನು ವೇಶ್ಯೆ....!!

ಇವತ್ತು ನಾನು ಸಾಕಷ್ಟು
ಸಿಂಗರಿಸಿಕೂಂಡಿದ್ದೇನೆ
ಸುಂದರವಾಗಿ ಕಾಣಲು
ಒಂದೆರಡು ಗಿರಾಕಿ ಹೆಚ್ಚಾಗಲು..!

ತುಟಿಗೆ ನಸುಗೆಂಪು
ಕಣ್ಣುಗಳಿಗೆ ತುಸು ಮಿಂಚು
ಹುಬ್ಬುಗಳಿಗೆ ಗಾಢ ಕಪ್ಪು ಕಾಡಿಗೆ
ಮುಡಿಗೆ ಮಲ್ಲಿಗೆ ಹೂವು..!

ಅವರಿಗೆ ಇವೆಲ್ಲ ಬೇಕಿಲ್ಲ
ಕತ್ತಲಲ್ಲಿ ಸಿಗುವ ಆ
ಹತ್ತು ನಿಮಿಷ ಸಾಕಾಗಲ್ಲ
ವ್ಯವಹಾರ ಕುದುರಿಸುವಾಗ
ಸುಂದರ ಮುಖ
ನಂತರ ಬೇಕಾದದ್ದು
ಕೇವಲ ದೇಹ ಸುಖ..!

ಮೃಗದಂತೆ ಎರಗಿದರೂ
ಕೊನೆಗೆ ಶಾಂತ ಸ್ವರೂಪಿ
ನನಗೆ ಚೆನ್ನಾಗಿ ಗೊತ್ತು
ಇವೆಲ್ಲ ಉಳಿಯವುದಿಲ್ಲ
ಆದರೂ ಸಿಂಗರಿಸಿಕೊಳ್ಳಬೇಕು
ಅವರ ತೀಟೆಗಾಗಿ ನನ್ನ ಹೊಟ್ಟೆಗಾಗಿ..!

ಹಣ ಕೊಡುವ ಅವರು
ದೇವರ ರೂಪವಂತೆ
ಆ ದೇವರಿಗೆ ದೇಹ
ಮಾರಿದರೆ ನಾ ಸೂಳೆಯಂತೆ..
ದೇವನು ಗಿರಾಕಿಯಾಗಿದ್ದು
ಇವರಿಗೆ ಕಾಣಲಿಲ್ಲ
ನನ್ನಂತವರುಇವರ
ನಡುವೆ ಬೇಕಾಗಿಲ್ಲ..!

ಕತ್ತಲ್ಲಲ್ಲಿ ಅವರು
ಅರಚಿದರೂ, ಪರಚಿದರೂ
ಕಚ್ಚಿದರೂ ಸುಮ್ಮನಿರಬೇಕು
ಹಗಲಲ್ಲಿ ಸೂಳೆ.. ಸೂಳೆಯೆಂದು
ಚುಚ್ಚಿದರೂ ಸುಮ್ಮನಿರಬೇಕು..!

ಮನೆಯಲ್ಲಿ ಶ್ರೀರಾಮನಂತೆ
ಇರುವ ಇವರು
ಮನದಲ್ಲಿ ಸೂಳೆಯ ಸಂಗದ
ಕನಸು ಕಾಣುವರು
ಪತಿವ್ರತೆಯ ಗುಣಗಾನ
ಬರೀ ಹೆಣ್ಣಿಗಲ್ಲವೋ ದಡ್ಡ
ಗಂಡಾದರೂ
ಲಕ್ಷ್ಮಣರೇಖೆಯನು ದಾಟಬಾರದು..!

ಹೊಟ್ಟೆಯನ್ನು ಹೊರೆಯಲು
ದೇಹ ಮಾರಿದವಳಿಗಿಂತ
ದೇಹದ ತೀಟೆಗೆ ಮನ
ಮಾರಿಕೊಳ್ಳುವವನೇ ಮಹಾಪಾಪಿ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

10 Jan 2018, 07:43 pm