Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅವಳ ಪ್ರೀತಿ ಮಾತು
ಮನಸ ಕದ್ದು ಹೋಯ್ತು
ಹಣೆ ಮೇಲಿಟ್ಟ ಹೂ ಮುತ್ತು
ಕಲ್ಲಿಗೂ ಜೀವ ಹೊತ್ತು ತಂತು
ಸುರಿಸಿದೆ ಕನಸಿನ ವರ್ಷ
ಒಂದು ಮೆಲು ಪ್ರೀತಿ ಸ್ಪರ್ಶ
ಅವಳಿರಲು ಸನಿಹ ಏನೊ ಹರ್ಷ
ಮರೆಯಾಗಲೆನ್ನೊಳಗೆ ಶುರು ಸಂಘರ್ಷ
ಅವಳಿಗೊರಗಿದರೆ ಸುಮ್ಮನೆ ಹಾಗೆ
ಕಣ್ಣೀರು ಕರಗಿಬಿಡುವುದು ತಿಳಿಯದು ಹೇಗೆ
ಅವಳಿರೆ ಕೈ ಹಿಡಿದು ಜೊತೆಜೊತೆಗೆ
ನಡೆದುಬಿಡುವೆ ಕರೆದರು ಜಗದಾಚೆಗೆ
ಬಿರಿದ ಭುವಿಗಿಳಿದ ಮಳೆಹನಿ ಅವಳು
ಪ್ರೀತಿ ತುಂಬಿ ನಿಂತಿದೆ ನನ್ನೆದೆ ಒಡಲು
ಅವಳ ಸ್ವಚ್ಛ ಪ್ರೀತಿಯ ಅಮಲು
ಸಾವು ಬಂದರು ಬಿಡದು ನಾ ಹೋಗಲು
- ಶ್ರೀಕಾವ್ಯ
04 Jan 2018, 09:40 pm
ಹೃದಯಕ್ಕೆ ಚೂರಿ ಹಾಕೋ ಪೋರಿ
ಏನೇ ನಿನ್ನ ಹಠ ಸುಕುಮಾರಿ,
ನಿನ್ನ ಕಣ್ಣ ಕೊಳದಲ್ಲಿ ಈಜುವಾಸೆ ವಯ್ಯಾರಿ.
ತುಟಿಗೆ ಹಚ್ಚಿದ ರಂಗು ಬಿಸಿ ಏರಿಸಿದೆ ನಂಗೂ,
ಅಂಕುಡೊಂಕು ಮೈಮಾಟ ಸೊಗಸಾದ
ಅಂಗಗಳ ಕಣ್ಣಾಮುಚ್ಚಾಲೆ ಆಟ.
ಬಿಳಿ ಕಮಲದಂತ ಪಾದದ ಓಡಾಟ,
ಜಾರಿ ಬಿದ್ದಂತಿದೆ ನನ್ನೆದೆಯ ಉಸಿರಾಟ
ನಿನ್ನ ನಗೆಯಲ್ಲಿ,
ನಿನ್ನ ನೋಡುವುದೇ ಆಗೋಯ್ತು
ನನಗೆ ಪ್ರತಿ ದಿನದ ಚಟ.
ಅಂದವ ಮುಚ್ಚಿಡುವ
ಚೆಲುವು ಚಿತ್ತಾರದ ವಸ್ತ್ರಗಳು,
ಉಡುಪಿಲ್ಲದ ಮನಸ ರಮಿಸಲು
ಹಾತೊರೆಯುತ್ತಿವೆ ನನ್ನ ಕಣ್ಣಲ್ಲಿನ
ಕನಸುಗಳ ಸಾಲುಗಳು.
ದಿಕ್ಕು ತೋಚದೆ ನನ್ನ ಹುಡುಕುತಿರುವ
ಸುಕೋಮಲ ಕೂದಲ ಪರದಾಟ,
ಕ್ಷಣಕ್ಕೊಮ್ಮೆ ಇಲ್ಲಿರುವೆನೆಂದು ಸದ್ದು
ಮಾಡುವ ಬಳೆಗಳ ಸನ್ಹೆಯಾಟ.
ಬೆರಗಾದೆ ಬೆಡಗಿ ಏನೇ ನಿನ್ನ
ಆಕರ್ಷಕ ನಡುಗೆ, ಮಾತೊಂದು ಬಾರದೆ
ಪದಗಳಲ್ಲಿ ಮಲಗಿರುವೇ ನಿನ್ನ ಅಂದವ
ಸವೆಯುತ ನೀ ಕೊಟ್ಟ ಒಲವಲ್ಲಿ ಹುಡುಗಿ.
- ಚುಕ್ಕಿ
04 Jan 2018, 07:14 pm
ರೈತರು ರೈತರು ರೈತರು
ಭೂವಿಯನು ನಂಬಿ ಬದುಕುವರು
ಹಗಲಿರುಳೆನ್ನದೆ ದುಡಿಯುವರು
ಬೆವರನು ಬಸಿದು ಬೆಳೆಯುವರು
ಅನ್ನವ ನೀಡುವ ದೇವರು
ದೇಶದ ಬೆನ್ನೆಲಬು ಇವರು
ನೆಗಿಲ ಯೋಗಿಗಳೋ ಇವರು
ದಣಿವನೆ ಅರಿಯದ ಶ್ರಮಿಕರು
ರೈತರು ರೈತರು ರೈತರು
ಧರಣಿಯ ಉಳುವರು ಪ್ರೀತಿಯಲಿ
ಸಂತೋಷದಿ ನಲಿವರು ಮಳೆಯಲಿ
ಕೂಡಿ ದುಡಿವರು ಸ್ನೇಹದಲಿ
ಪ್ರೀತಿಯ ಮಕ್ಕಳು ಭೂ ತಾಯಿಯ
ಮಡಿಲಲಿ...
ಅನ್ನವ ನೀಡುವ ಅನ್ನ ದಾತರ
ನಮಿಸಿ ಮನದಲ್ಲಿ..
ಹೇಳಿ ಮಣ್ಣಿನ ಮಕ್ಕಳೇ ನಿಜ ದೇವರು
ಈ ಧರಣಿಯ ಒಡಲಲಿ
ರೈತರು ರೈತರು ರೈತರು
- Bhagya Girish
04 Jan 2018, 12:38 pm
( ಮರ )
ನಾನೊಂದು ಮರವಾಗಿದ್ದಾಗ.
ನನ್ನವಳ ಮನಸ್ಸು ಅದಕ್ಕೆ ಧರೆಯಂತೆ .
ಕಲ್ಪನೆಗಳಲ್ಲಿ ನಾನು ಅದಕ್ಕೆ ನೀರುಣಿಸುವ
ಕೆರೆಯಂತೆ .
ಅವಳ ಮುಗ್ದ ಪ್ರೀತಿ. ಬುಡದಲ್ಲಿ
ಕವಲೋಡೆದಿರುವ ಬೇರಂತೆ.
ನನ್ನಲ್ಲಿ ಮಿಡಿಯುತ್ತಿರುವ ಹ್ರುದಯದ
ತುಡಿತ .ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪದಂತೆ.
ಮರದಿಂದ ಹೊರಬಂದ ಕಲ್ಮಶವಿಲ್ಲದ ಗಾಳಿ ಎನು ಅರಿಯದ ಮುಗ್ದ ಪ್ರೀತಿಯಂತೆ.
ಓಂದು ಸುಂದರ ಮರ ಅದೆಷ್ಟೋ ಪ್ರೇಮಿಗಳ ನೆಲೆಯಂತೆ.
ಅಮ್ರುತ ಶಿಲೆಯಲ್ಲಿ ಕೆತ್ತಿದ ಶಿಲೆಯಂತೆ.
ಕಲ್ಪನೆಗಳಲ್ಲಿ ಅದು ನೀಲ ಕಡಲ ಅಲೆಯಂತೆ
ನೆನಪಿನ ನಾವಿಕ ಸಂತೋಷ್
- ಸಂತೋಷ್//ಜೀತು
04 Jan 2018, 10:32 am
ಮುಚ್ಚಿಡಲಾಗದು ನನ್ನಯ ಪ್ರೀತಿ
ಕಣ್ಣೆದುರಲಿ ನೀ ನಿಂತಾಗ
ಬಚ್ಚಿಡಬಹುದೇ ಹೃದಯದ ಆಸೆ
ಮೈಮನದಲಿ ನೀ ಕುಂತಾಗ!
ನಿನ್ನನೇ ಧ್ಯಾನಿಸಿ ಬರೆದಿಹ ಪದಗಳು
ಮೌನವಾಗಿದೆ ನನ್ನೆದೆಯೊಳಗೆ
ಸದ್ದನು ಮಾಡದೇ ಸುದ್ದಿಯ ನೀಡದೇ
ಆವರಿಸಿದೆ ನೀ ನನ್ನೊಳಗೆ!
ನಿನ್ನನು ನೋಡುವ ಕಣ್ಣುಗಳ್ಯಾಕೋ
ಅಚ್ಚರಿ ಸೂಸಿವೆ ಅರೆಕ್ಷಣದಿ
ಕಾಡುವ ಕಣ್ಣಿನ ಸೆಳತಕೆ ಸೋತು
ನನ್ನನೇ ಮರೆತೆನು ಮರುಕ್ಷಣದಿ!
ಪ್ರೀತಿಯ ತಳಮಳ ಯಾರಿಗೆ ತಿಳಿಸಲಿ
ಕನಸಲಿ ಒಪ್ಪಿಗೆ ತಿಳಿಸುವೆಯಾ
ಸುಮ್ಮನೆ ನಿಂತೆನು ನಿನ್ನಯ ಸನಿಹ
ನಗುತಲಿ ನನ್ನನು ಸ್ವೀಕರಿಸುವೆಯಾ!
- ಪ್ರಿಯಾಂಕ
02 Jan 2018, 09:56 pm
ಖುಶಿಯಾಗಿರು
ನಗುನಗುತಿರು
ಚಿಂತೆಯಾಕೆ ನಿನಗೆ
ನಾನಿರವೆ ಸದಾ ನಿನ್ನ ಜೊತೆಗೆ
ಓ ನನ್ನ ಬಾಳ ಸಂಗಾತಿ
ಮಾಡ್ಬೇಡ ನನಗೆ ಪ್ರೀತಿಯಲ್ಲಿಮಿತಿ
ಮಾತುಗಳೆ ಅಂತರಂಗದ ಭಾವನೆ
ಹೇಗೆ ಇರುವುದು ನಾ ನೀ ಮರತೇಬಿಟ್ಟೆ ನನೊಂದಿಗೆ ಮಾತಾಡುವುದನೆ
- ರಘು
02 Jan 2018, 12:52 pm
ಮೇಘಗಗಳೇ ಮೇಘಗಗಳೇ
ಹೋಸ ಸುದ್ದಿ ಏನೆಂದು ಹೇಳೆಲೆ
ನಿನ್ನ ಆಗಮನ ಯಾಕೆಂದು ತೋರಲೆ
ನನ್ನ ಇನಿಯನ ಬರುವಿಕೆಯ ಸಾರಲೆ
ಚದುರಿ ಹೋಗದೆ ನಿಂತು ಹೇಳಿರಿ
ಪ್ರೇಮ ಸಂದೇಶ ಅರುಹಿ ಹೋಗಿರಿ
ಮನದಲಿ ಪ್ರೀತಿಯ ಭಾವವೆಚ್ಚಿದೆ
ಹೃದಯದ ಬಡಿತ ಹಿಮ್ಮಡಿಯಾಗಿದೆ
ಇನಿಯನ ಕಾಣುವ ಕಾತರ ಹೆಚ್ಚಿದೆ
ಉಸಿರಿನ ಲಯವು ನಿನ್ನಲಿ ಅಡಗಿದೆ
ಮೇಘ ಸಂದೇಶ ಕೇಳಲು ಬಯಸಿದೆ
ಮನದಲಿ ಕಾಮನೆ ಕೆರಳಿ ನಿಂತಿದೆ
ಹೋಸ ಯುಗಳಗೀತೆ ಹಾಡಬೇಕಿದೆ
ಕೋಗಿಲೆಯ ಸ್ನೇಹ ಮಾಡಬೇಕಿದೆ
ವಸಂತನನ್ನು ಮನ ಕೂಗಿ ಕರೆದಿದೆ
ಪ್ರಾಣಕಾಂತನ ಸೇರಬಯಸಿದೆ
ಮೇಘ ನಿನ್ನ ಸಂದೇಶ ತಿಳಿಯ ಬೇಕಿದೆ
- Bhagya Girish
02 Jan 2018, 12:24 pm
ಹದಿನೆಂಟು ತುಂಬಿ ನಿಂತ
ಹದಿ ಹರೆಯದ ಹೆಣ್ಣು,
ಫಸಲು ಬಂದು ತುಳುಕಿದಂತೆ
ಮರದಲ್ಲಿ ಮಾವಿನ ಹಣ್ಣು.
ಗುಡುಗು ಸಿಡಿಲಿಗೆ ಪುಟಿದು ಮೊಳೆಯುವ
ಅಣಬೆಯಂತೆ ದುಷ್ಟ ಮೊಡವೆಯು
ಹರೆಯದೂರಿನ ಹಣೆಯ ಮೇಗಡೆ
ದಾಳಿ ಮಾಡಿವೆ ಬಿಡದೆ ಮೂಗನು.
ಕರಿಯ ಮೇಘವು ಜರಿದು ಬಿದ್ದಿತೊ
ಎನುವ ಅಂದದಿ ತಲೆಯ ಕೂದಲು,
ತಿದ್ದಿ ತೀಡಿದ ಹುಬ್ಬು ಬಾಗಿದೆ
ಮುದ್ದು ಗಲ್ಲವು ಉಬ್ಬಿಕೊಂಡಿದೆ.
ಬಟ್ಟಲು ಕಂಗಳಿಗೆ ಕಾಡಿಗೆಯ ಅಂಚು
ಬಿರಿದ ಕೆಂದುಟಿಗಳಲ್ಲಿ ಕಾಮನೆಯ ಮಿಂಚು
ಸಂಪದ್ಭರಿತ ಹೆಣ್ತನದ ಎದೆಯಂಗಗಳನ್ನ
ಹಿಡಿದಿಟ್ಟುಕೊಂಡ ಉಡುಪುಗಳೇ ಧನ್ಯ !
ಸೌಂದರ್ಯ ಸಿರಿವಂತಿಕೆ ತುಂಬಿದ ಚೆಲುವಿಗೆ
ಕಿರು ಸೊಂಟದಲ್ಲಿ ಮಾತ್ರ ಬಡತನದ ಕಾಣಿಕೆ
ಅಂದಗಾತಿಯ ಅಂದಕೆ ಸುಗುಣಗಳ ಅಲಂಕಾರ
ಹೂ ಮನಗಳ ಸೊಗಸುಗಾತಿಯ ಮೊಗಕೆ
ಸಂಕೋಚವೇ ಶೃಂಗಾರ.
- ಶ್ರೀಗೋ.
02 Jan 2018, 11:13 am
ಮುಗಿದ ವರುಷಕೆ ಬೀಳ್ಕೊಡುಗೆ
ಮನಸಲಿ ನೆನಪುಗಳ ಮೆರವಣಿಗೆ
ಕಣ್ಣಾಮುಂದೆ ಎಲ್ಲ ಹಾದುಹೋಗೋ ಘಳಿಗೆ
ಎದೆಯೊಳಗೆ ಸಣ್ಣ ಕಂಪನ ಮೆರವಣಿಗೆಯ ಸದ್ದಿಗೆ
ಒಂದು ವರುಷ ನೂರಾರು ರಸ ನಿಮಿಷ
ದಿನವೂ ಕಷ್ಟ ಸುಖಗಳ ಜೊತೆಗಿನ ಸರಸ
ಪ್ರೀತಿ ಹಂಚಿ ಪ್ರೀತಿ ಪಡೆದ ಕ್ಷಣ ತಂದ ಹರುಷ
ಎಲ್ಲ ನೆನೆನೆನೆದು ನಗಬೇಕು ಕುಳಿತು ಒಂದು ನಿಮಿಷ
ಬದಲಾವಣೆ ಜಗದ ನಿಯಮದ ಸಾರ
ಇಳಿಸಿ ಕೂಡಿಟ್ಟ ಎಲ್ಲ ಎದೆಯ ಭಾರ
ಸಾಗಬೇಕಿದೆ ಸೇರಲು ಮುಂದಿನ ತೀರ
ಹುಡುಕುತ ಕಂಡ ಬಾಳ ಕನಸುಗಳ ವಿವರ
ಈ ವರುಷ ಸೋತಿದ್ದರೇನು ಗೆದ್ದಿದ್ದರೇನು
ಕನಸಿಗೆಲ್ಲಾದರು ಕೊನೆಯಿರುವುದೇನು
ನಗುವ ತುಂಬಿ, ಆತ್ಮಬಲವ ನಂಬಿ ದಾಟಿಬಿಡಲೆ
ಎದುರಾದರು ದಾರಿಗೆ ಸಪ್ತ ಕಡಲೆ
- ಶ್ರೀಕಾವ್ಯ
01 Jan 2018, 06:07 pm
ಮನಸು ತೇಲಿ
ನೀಲಿ ಬಾನಲಿ
ನಿನ್ನ ಪಿಸು ಮಾತಿನ ಒಲವಲಿ
ಎದೆತುಂಬಿ ಹೋಗಿದೆ ಮಮತೆಯ ಲಾಲಿ ಲಾಲಿ..
ನಿನ್ನ ಕಣ್ಣಂಚಲಿ
ಬೆಳಂದಿಗಳ ಚೆಲುವಿನಲಿ
ಅರಳಿದ ಸುಮದಲಿ
ಅಡಗಿದೆ ನಿನ್ನ ನಸು ನಗುವಿನ ಸುವ್ವಾಲಿ...
ನೀ ಇಟ್ಟ ಹೆಜ್ಜೆ ಗುರುತಲಿ
ನಾ ಹೊರಳಾಡಿದೆ ಖುಷಿಯಲಿ
ಭಾವನೆಗಳ ಲೋಕದಲಿ
ಮರೆತು ಹೋಗಿರುವೆನು ನಾನು ನಿನ್ನದೇ ಗುಂಗಲಿ..
- ಮಳೆಯಲ್ಲಿ ಜೋತೆಯಲ್ಲಿ
01 Jan 2018, 05:46 pm