Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಬ್ಬನಿ

ತಿಳಿಗಾಳಿಯ ತುಂಟಾಟ ನೋಡಿ ಮನಸೋತೆ,
ತಂಪಾದ ಇಬ್ಬನಿಯ ಚೆಲುವಿಗೆ
ಶರಣಾದೆ.

ತುಸು ಮೆಲ್ಲೆನೆ ಉಸಿರಾಡಿ ಘಮ ಘಮಿಸುವ ಕಾಫಿ ಕೈಯಲ್ಲಿ ಹಿಡಿದು,
ಭಾರವಾದ ಕಣ್ಣ ರೆಪ್ಪೆ ಬಲವಂತವಾಗಿ ತಗೆಯುತ್ತ ಎದ್ದು ಏಳದ ಹಾಗೆ ಕಂಬಿಳಿಯೊದು ಕುಳಿತಿರುವೆ.

ಮುಂಜಾನೆ ಆದಿತೆಂದು ಮುಸಿ ಮುಸಿಯ
ನಗುವು ಚೆಲ್ಲುತ್ತಾ....

- ಚುಕ್ಕಿ

29 Dec 2017, 08:55 am

ಹಳ್ಳಿ ಹೈದ

"ಮುಂಜಾನೆಗೆ ಕಣ್ಣೊಸಕಿ
ತಲೆಗೆ ಪೇಟ ಕಟ್ಟಿ,
ಎತ್ತು ಕಟ್ಟಿ,ನೇಗಿಲ ಹಿಡಿದ
ತುಂಡು ಚಡ್ಡಿಯಾ
ಹಳ್ಳಿ ಹೈದ ನಾ.

"ಮಂಜು ಕವಿದರು
ಸೋನೆ ಸುರಿದರೂ,
ಸುಡು ಬಿಸಿಲೆ ಸುಟ್ಟರು, ಜಗ್ಗದೆ
ನೇಗಿಲ ಹಿಂದೆ ಸುತ್ತಿದ
ಹಳ್ಳಿ ಹೈದ ನಾ.

"ಅಂಜದೆ ,ಅಳುಕದೆ
ಕುಗ್ಗದೇ, ಹಿಗ್ಗದೇ,
ಉಳುಮೆ ಮಾಡಿ ಹೊತ್ತು ತಂದ್ದ,
ಮೂರೋತಿನ ಅನ್ನದ ಬುತ್ತಿ
ಹಳ್ಳಿ ಹೈದ ನಾ.

"ದುಡಿಯಲು ಅಂಜದ
ಬಯಲುಸೀಮೆಯ ಗಂಡು
ಗುಡುಗು ಸಿಡಿಲಿಗೆ ಜಗ್ಗದ
ಬಂಟದ್ದೆಯ ಬಂಡ
ಹಳ್ಳಿ ಹೈದ ನಾ.

ರಾಜು

- ರಾಜು ಹಾಸನ

29 Dec 2017, 01:42 am

ಜೊತೆಗಾತಿ.

ಬಿಸಿಲು ಬೆಂಗಾಡಿನ ಬಸವಳಿದ
ನನ್ನ ಬಾಳ ಪಯಣದಲ್ಲಿ
ನೀನೇಕೆ ಜೊತೆಯಾದೆ ಒಲವೇ
ನಿನಗೆ ಬೇರೇನೂ ಕೆಲಸ ಇರಲಿಲ್ಲವೇ ?

ಕೆಸರಿನ ಸಮಾಜದಲ್ಲಿ ಮೊಳೆತು ಅರಳಿದ
ಕಂಪು ಸೂಸಿ ನಗೆಯ ಹರಡಿದ
ಕೆಂಪು ತಾವರೆಯು ನೀನು,
ದಿಕ್ಕು ದೆಸೆಯಿಲ್ಲದೆ ಬಂದು
ಬಾಂಧವ್ಯಗಳ ಕಿತ್ತೆಸೆದು,
ತಿಲಾಂಜಲಿಯಿತ್ತು ಹೊರಟಿದ್ದೆ ನಾನು
ಬಿಟ್ಟೆಲ್ಲ ಸಂಪ್ರದಾಯಗಳ
ಬೇಡವಾಗಿತ್ತು ಇನ್ನೆಂದೂ
ಈ ಹುಲು ಮಾನವರ ಸಹವಾಸ
ಹೇಳಿ ಬಿಟ್ಟಿದ್ದೆ ಎಲ್ಲಾ ಸಂಕೋಲೆಗಳಿಗೂ ವಿದಾಯ,

ಆದರೂ ಎಲ್ಲಿಂದ ಬಂದು ನೀನು ಆತುಕೊಂಡೆಯೋ ನಾನರಿಯೆ,
ಬಿಟ್ಟೆನೆಂದರೂ ಬಿಡದೀ ಮಾಯೆ
ಬಟ್ಟಲು ಕಂಗಳ ಮೋಹಕ ಛಾಯೆ
ನಿನ್ನ ಮೋಹದ ಸಂಕೋಲೇ ಕಳಚಿ ಮುಂದೆ ಓಡಲೇ?
ನಿನ್ನ ಕೈ ಹಿಡಿದು ನನ್ನೊಡನೆ ಎಳೆದು ಸಾಗಲೇ ?
ಅರಿತೇನೆಂದರೂ ಅರಿಯಲಾರೆನು ಹೆಣ್ಣೇ
ನಮ್ಮ ಈ ಸಲುಗೆಯ ಕೊನೆಯನ್ನು.
ಮರೆತೇನೆಂದರೂ ಮರೆಯಲಾರೆ ಹೆಣ್ಣೇ
ನಿನ್ನ ಈ ಮಮತೆಯ ಸವಿಯನ್ನು.

- ಶ್ರೀಗೋ.

28 Dec 2017, 10:52 pm

ಅರಸರಸೀ ಬಂದಳೋ.......

ಅರಸರಸೀ ಬಂದಳೋ ಸರಸಿ
ಅಂಬೆಗಾಲಿಟ್ಟು ಕರೆದಳೋ ಮುನಿಸಿ
ಪ್ರೀತಿಯ ಶಿಖರವ ಉಣಿಸ ಬಯಸುತಿಹಳು
ಚಂದ್ರನ ನೋಡಿ ನಾಚಿ ಮರೆಯುತಿಹಳು
ಕೆನ್ನೆಗಲ್ಲವ ಸವರಿ ಹಿಂಡುತಿಹಳು
ಸಿಹಿಯಾದ ನೋವ ಸವಿಸುತಿಹಳು
ಗೆಜ್ಜೆಸದ್ದಲಿ ನನ್ನೇ ಮರೆಸುತಿಹಳು
ಸದ್ದಿಲ್ಲದೇ ಚಂದ್ರನ ಚುಂಬಿಸಿ ನಾಚುತಿಹಳು

- ಡಿ.ಸಿ.ಎನ್@100%

28 Dec 2017, 02:38 pm

ನನ್ನಯ ಹರಕೆ

ಹುಚ್ಚಪ್ಪಗಳಿರ ಎಚ್ಚೆತ್ತುಕೊಳ್ಳಿ
ಅಚ್ಚರಿಗಳೇ ಕಾದಿದೆ ಮುಂದೆ
ಅದೋ ನಿಮ್ಮ ಕರ್ಮ
ಅರಿತು ಬಾಳಿರೋ ಕರ್ಮದ ಮರ್ಮ

ಅವರಿವರ ಆಶ್ವಾಸನೆಗಳ ಹಾರಕೆ
ಮಾರುಹೋಗಿ ಬಾಗಿ ತಲೆತಗ್ಗಿಸದಿರಿ
ಅಕ್ಕ-ಪಕ್ಕದ ಚಾತುರ್ಯಗಳ ಬಿಡಿ
ನಿಮ್ಮ ದಾರಿಯ ಹದ ಮಾಡಿ

ಮಕ್ಕಳ ಪಾಲಿಗೆ ವಿಧ್ಯಾಸ್ತಿಯ ಹರಿಸಿ
ಕಾಂಂಚಾಣನ ಭೀತಿಯ ಹೊಡೆದೋಡಿಸಿ
ಸತ್ಯ ನ್ಯಾಯ ಧರ್ಮದ ಜಾಡಲಿ ನಡೆಸಿ
ಧೀನರ ಪಾಲಿಗೆ ಆಲದ ಮರವಾಗಿ ನಿಲಿಸಿ

- ಡಿ.ಸಿ.ಎನ್@100%

28 Dec 2017, 02:25 pm

ಜಣ ಜಣ ಕಾಂಚಾಣ

ಕುದಿರಿಯ ಮ್ಯಾಲೆ ಕತ್ತಿಯ
ಹಿಡಿದು ಸವಾರಿ ಕುಂತೈತೀ
ಹುಡುಕುಡುಕಿ ತಲೆಗಳ ತೆಗೆದು
ಜೇಂಕರಿಸುತ ನಲಿದೈತಿ

ಒದ್ದೊದ್ದು ಎದೆಯೆಲುಬುಗಳ
ಪುಡಿ ಮಾಡೈತಿ
ಮೊಣಕಾಲ್ ಕೈ ಕೀಲುಗಳ
ಮುರಿದು ಕುಣಿತೈತಿ

ಹೊಲ ಗದ್ದಿಗಳಾಗ ರಕ್ತದ
ಹೋಕುಳಿ ಹರಿದೈತಿ
ಅನ್ನದ ಪೈರ ಹಸಿರನು ನುಂಗಿ
ಬಡ ಬಾನಲಕೆ ಬೆಂಕಿ ಹಚೈತಿ

ಹಸಿರಿನ ನಾಡ ಚಿನ್ನದ ಬೀಡ
ಬೆತ್ತಲ ಮಾಡೈತಿ
ತುಳಿತುಳಿದು ಕಾಂಚಾಣ
ಜಣ ಜಣದ ಸದ್ದು ಹರಡೈತಿ

ಬಡವರ ನೆತ್ತರಲೇ ಮಿಂದೈತಿ
ಘರ ಬಡಿದಾಂಗ ಕುಂತೈತೀ
ಸಿಡಿಲೊಡೆದಾಂಗ ಬಿದೈತಿ
ಜಡವದು ಜಡವದು ಸತೈತಿ........ಡಿ.ಸಿ

- ಡಿ.ಸಿ.ಎನ್@100%

28 Dec 2017, 02:15 pm

ಸಣ್ಕತೆ

ನಿತ್ಯ ಕಡಲದಂಡೆ ವ್ಯತ್ಯಾಸವಿಲ್
ಆಗೊಮ್ಮೆ ಈಗೊಮ್ಮೆ ಸುಳಿವಾಗ
ಕಣ್ಣಿಗೆ ಕಂಡಿದ್ದೆಷ್ಟೋ, ಕಾಣದೆ ಉಳಿದದ್ದೆಷ್ಟೋ,
ದೂರ ದಿಗಂತದಿ ಕೈ ಕೂಡಿದ
ಭುಜಕೆ ಭುಜ ತಾಗಿಸಿದ
ಇಳಿಸಂಜೆಯ ಜೋಡಿ ಮೆಲ್ಲನೆ
ಹೆಜ್ಜೆ ಇರಿಸಿದೆ ಕಡಲ ತೀರವೇ
ಉಳಿದ ಒಂಟಿ ಅವನು,,.!

- sk

28 Dec 2017, 11:42 am

ಸುಳ್ಳೆ ಸುಳ್ಳು

"ಯಾರ ನಂಬಲಿ
ಅಸ್ಟುಇಷ್ಟ, ಇಷ್ಟು ಇಷ್ಟ ಎನ್ನುವರು,
ಸುಳ್ಳು ಸಂತೆಯಲ್ಲಿ.

"ಯಾರ ನಂಬಿದರಷ್ಟೇ
ಹಾಗೆ ಹೀಗೆ ಎಂದು ಕಾಗೆ ಹಾರಿಸುವರು,
ಸುಳ್ಳು ಸಂತೆಯಲ್ಲಿ.

"ಎಷ್ಟೇ ಪ್ರೀತಿಸಿದರಷ್ಟೇ
ಚಿತ್ರ ಬಿಡಿಸುವರು ಚಿತ್ತಾರದ ಮಾತುಗಳ,
ಸುಳ್ಳು ಸಂತೆಯಲ್ಲಿ.

"ಪರಿ ಪರಿಯಾಗಿ, ನಂಬಿಸಿ
ಕಟ್ಟುವರು ಸುಳ್ಳಿನ ಕಂತೆಯ,
ಸುಳ್ಳುಗಳ ಸಂತೆಯಲ್ಲಿ.

"ತಿಳಿಯೋ ಪೆದ್ದಣ್ಣ
ಮನುಜರ ಮರ್ಮವ,
ಸುಳ್ಳುಗಳ ಸಂತೆಯಲ್ಲಿ.

..............ರಾಜು

- ರಾಜು ಹಾಸನ

28 Dec 2017, 11:23 am

ಈ ಬೇಟಿ ಆದ ನಂತರ

ಈ ಬೇಟಿ ಆದ ನಂತರ
ಇನ್ನಿಲ್ಲ ಯಾವ ಅಂತರ!!
ಈ ನಮ್ಮ ಪ್ರೀತಿ ಸೋಜಿಗ
ನೀ ನನ್ನ ಪ್ರಾಣ ಓ ಸಖ!!

ಯಾರು ಚೆಲ್ಲಿ ಹೋದರೂ
ಬಣ್ಣವನ್ನು ಈ ಬದುಕಿಗೆ!!
ಯಾವ ಬೇಲಿ ಇರದೂ
ಇನಿಯ ನಮ್ಮ ನಲಿವಿಗೆ!!

ಮನಸಿನಲ್ಲಿ ನಿನ್ನ ಇರಿಸಿದೆ
ಬೆಚ್ಚನೆಯ ಪ್ರೀತಿ ಹೊದಿಸಿದೆ!!
ಕತ್ತಲಲ್ಲಿ ಬೆಳಕಿನಂತೆಯೇ
ನಾನು ನಿನ್ನ ಜೊತೆಗೆ ಸಾಗುವೆ!!

ನಮ್ಮ‌ ಪ್ರೀತಿ ಹೀಗೆ ಸಾಗಲು
ಒಂಟಿ ತನವು ಬಳಿಗೆ ಬಾರದು!!
ದೂರ ಎಂಬ ಮಾತು ದೂರಕೆ
ಸನಿಹ ಒಂದೇ ನಮ್ಮ ಸನಿಹಕೆ!

- ಪಿ.ಜಿ.ಜ್ಯೋತಿ

28 Dec 2017, 10:51 am

ದೇಶಭಕ್ತ

ವೀರ ಪುತ್ರನು ನೀನು
ಭಾರತ ಮಾತೆಯ ಕುಡಿ ನೀನು
ವೀರ ವನಿತೆಯ ಮಗು ನೀನು
ದೇಶಕೆ ಕಿತಿ೯ ತರುವೆಯಾ ನೀನು

ದೇಶ ಪ್ರೇಮದ ಭಕ್ತಿಯು
ನಿನ್ನಲಿ ಹರಿಯುವ ರಕ್ತವು
ಹಾಡುವುದು ನಿನ್ನೆದೆ ಗುಂಡಿಗೆಯು
ಎಂದು ನನ್ನ ದೇಶವೇ ಶ್ರೇಷ್ಠವು

ನಿನಗೆ ಋಣಿಯು ತಾನೆಂದು
ನಮಿಸುವೆ ನಿನ್ನಯ ಪಾದಕ್ಕೆಂದು
ನಿನೇ ಎನಗೆ ನೀಜ ದೈವ
ತುಂಬು ದೇಶ ಭಕ್ತಿಯ ಒಲವ

ನಿನ್ನಯ ಮಗುವು ತಾನೆಂದು
ಹೇಳುವ ಹೆಮ್ಮೆಯು ಎಷ್ಟೋಂದು
ನಿನಗಿಂತ ಮಿಗಿಲು ಯಾರೆಂದು
ಕೇಳಲು ಹೆತ್ತ ತಾಯಿ ಹೇಳುವಳು
ದೇಶವೇ ಮಿಗಿಲೆಂದು..
ದೇಶಕ್ಕಾಗಿ ಹೆತ್ತ ಮಗು ತಾನೆಂದು..

- Bhagya Girish

28 Dec 2017, 09:05 am