Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅರ್ಥವಾಗದ ಬಂಧನ..!!

ತನ್ನೊಳಗಿನ ಭಾವದ ಪರಿಯ ಹಿಡಿಯಲು ಹೋಗಿ ಜಾರಿ ಬಿದ್ದ ಆ ಘಳಿಗೆ‌..
ಮೊಗದ ಹಿಂದಿದೆ ನಾಚಿ ನೀರಾದ ಮನವು
ಸದಾ ನಿನ್ನನ್ನೇ ಪರಿತಪಿಸುವ ಬಯಕೆಯೊಳು ನಾನಿರಲು,
ನಿನ್ನ ಮನದ ಮಾತನ್ನು ‌ನಾ ಹೇಗೆ ತಾನೇ ಕೇಳಲಿ..
ಕೇಳಿದರೂ ಹೇಗೆ ತಾನೇ ವಿವರಿಸಲಿ..!!
ಆ ನಿನ್ನ ವಿಶಾಲ ಮೈಕ್ಕಟ್ಟು,ಗೆದರಿದ ತಲೆ ಕೂದಲು..
ಸದಾ ನಗುವ ಸೂಸುವ ಆ ನಿನ್ನ ಗುಳಿ ಕೆನ್ನೆ..
ಮತ್ತೆ ಮತ್ತೆ ನೋಡ ಬಯಸುವ ಆ ನಿನ್ನ ಸುಂದರ ವದನ..
ಸಾಕಿಷ್ಟು ಅಂತ ಅನಿಸಿದರೂ ಒಳಗೊಳಗೆ ಏನೋ ಕಾಡುವ ಬಯಕೆಗಳು..
ಹೇಳು ನೀನು ಯಾರು..?
ಮನಸ್ಸು ದೋಚಿದ ಇನಿಯನೋ ಅಥವಾ ಹೃದಯಕ್ಕೆ ಹತ್ತಿರವಾದ ಗೆಳೆಯನೋ..!!
ಸ್ನೇಹಕ್ಕೂ ಮಿಗಿಲಾದ ಬಂಧನವಿದೆಯೇ..?ಬಹುಶಃ ಇದ್ದರೂ ಆ ಸಂಬಂಧಕ್ಕೆ ಅರ್ಥವಿದೆಯೇ..??
ತಿಳಿಯದಾಗಿದೆ ನನಗೀಗ ಮುಂದಿನ ಸಾಲುಗಳು..

- ನಮಿತ ಗಟ್ಟಿ

10 Dec 2017, 02:06 pm

ಅಂದದ ಅರಮನೆ...

ಮುಗಿಲಾಚೆ ಹೋಗಿ
ಮಳೇಯ ಹಿಡಿದು ತರಲೆ
ಭುಮಿ ತಾಯಿಯ ಮಡಿಲ
ತಂಪು ಮಾಡೋಕೆ......

ಕಡಲ ಆಳಕ್ಕೆ ಹೋಗಿ
ಮುತ್ತ ಹುಡುಕಿ ತರಲೆ
ಮದನಾರಿಯರಯರ
ಮನವ ಒಲಿಸೋಕೆ.....

ಚಂದ್ರನಂಗಳಕ್ಕೆ ಹೋಗಿ
ತಾರೆಗಳ ಎಣಿಸಿ ತರಲೆ
ನಮ್ಮನೆ ಅಂಗಳ ಸಿಂಗರಿಸೋಕೆ....

ಸ್ಪರ್ಗ ಲೋಕಕ್ಕೆ ಹೋಗಿ
ನಗುವ ಹೋತ್ತು ತರಲೆ
ನಿಮ್ಮಲ್ಲರ ನೋವ ಮರೆಸೋಕೆ......

ನಾಗಲೋಕಕ್ಕೆ ಹೋಗಿ ನಾಗ
ಮಣಿಯ ಕದ್ದು ತರಲೆ
ಜೀವ ಉಳಿಸೋಕೆ.....

ದೇವ ಲೋಕಕ್ಕೆ ಹೋಗಿ
ದೇವರ ಬೇಡಿ ಕರೆತರಲೆ
ಯಲ್ಲರ ಹರಸೋಕೆ.......

ಯಲ್ಲರ ಕರೆತರಲೆ
ಅಂದದ ಅರಮನೆಯ
ಮಾಡಿ ನಲಿಯೋಕೆ ..........

- ರಾಗಸಿರಿ....

10 Dec 2017, 01:18 pm

ದೀಪದ ಬೆಳಕು

ದೀಪದ ಬೆಳಕು
"""""""""" ”"""""""""""'
ಅವಳ ಹಿಂದೆ ಹೋದಾಗ.
ಅವಳು‌ ಕಂಡಳು ತುಪ್ಪದ ದೀಪದಂತೆ.
ಅವಳು ನನ್ನ ಜೀವನದಲ್ಲಿ ಬಂದಾಗ .
ನಾನಾದೆ ಚಂದಿರನ ಬೆಳದಿಂಗಳ ಬೆಳಕಿನಂತೆ .
ಅವಳು‌ ನನ್ನೊಂದಿಗೆ ಇರುವಷ್ಟು ದಿನ
ನಾ ಹೊಳೆದೆ. ರವಿ ಕಿರಣಗಳ ಕಾಂತಿಯಂತೆ.
ಅವಳು‌ ನನ್ನನ್ನು ತೊರೆದು ಹೊದಾಗ
ನಾನಾದೆ ಅಮವಾಸ್ಯೆ ಯ ಕತ್ತಲಿನಂತೆ.

ಜೀವನದಲ್ಲಿ ಬಂದಾಗ ಬೆಳಕನ್ನು
ತಂದವಳು ಅವಳು.
ಬಂದ ದಾರಿಯಲಿ ಪುನಃ ಹಿಂದಿರುಗಿ‌ ಹೊರಟಾಗ .ಅದೇ ದೀಪವನ್ನು ಹಾರಿಸಿ ಹೊಗೆಯನ್ನು ಸ್ರುಷ್ಟಿಸಿ ಹೋದವಳು ಅವಳು.
ಕೊನೆಗೆ ನಾನಾದೆ ಬತ್ತಿಯಿಂದ ಉದುರಿದ ಬೂದಿಯ ತಿರುಳು .

ರಚನೆ = ನೆನಪಿನ ನಾವಿಕ ಸಂತೋಷ್

- ಸಂತೋಷ್//ಜೀತು

10 Dec 2017, 11:13 am

ಹಾಳು ಮಾಡಿದೆವಲ್ಲ ?

ಸುಮ್ಮ ಸುಮ್ಮನ ಸುದ್ದಿ ಪ್ರಳಯ - ಗಿಳಯ ಏನು ಆಘ್ಲೆ ಇಲ್ಲಾ
ಸ್ವರ್ಗ ನರಕ ಇಲ್ಲೆ ಅಂದರು ನಂಗತ್ತು ಏನು ಕಾಣ್ಲೆ ಇಲ್ಲ ?
ಮಾತು ಕೊಟ್ಟವರೆಲ್ಲ ನೆಡೆಸಿ ಕೊಟ್ಟೆ ಇಲ್ಲಾ ?
ಕಡಲು ನದಿಗಂತೆ ಮುನಿಸು ನಂಬಿ ಕೆಟ್ಟೆವಲ್ಲ ?
ಕಲ್ಪನೆಯ ಕಟ್ಟಿ ಕುರುಡು ಗಾಂಧಾರಿ ರೀತಿ
ಮಕ್ಕಳನ ಹಾಳು ಮಾಡಿದೆವಲ್ಲ ?
ಹುಸುಗೆ ಕರುವ ತೊರಿ ಹಾಲು ಕದ್ದೆವಲ್ಲ ?
ಹಾವು ಗೆದ್ದಿಲನು ತಿಂದು ಮನೆಯ ಗೆದ್ದಿತಲ್ಲ ?
ಕಾಗೆ ಕೊಗಿಲೆಯ ಮರಿ ಮಾಡಿ ಗೂಡು ಬಿಡಿಸಿತಲ್ಲ ?
ಅಕಿ ನೆನಪ ಹಂಗ ಹಾವು ಗೆದ್ದಿಲು ತಿಂದಂಗ
ಕಾಗೆ ಕಾವು ಕೊಟ್ಟಂಗ ಉಸಿರು ಕಟ್ಟಿ ಗಂಟಲು ಬಿಗಿದಂಘ್ .....

- ಕೌರವ

10 Dec 2017, 06:46 am

ನೋಡು ನೋಡು....

ಅತ್ತಿತ್ತ ನೋಡು
ಚುಕ್ಕಿ ಚಂದ್ರನ ನೋಡು
ಕಪ್ಪು ಮಿಂಚುಳ್ಳಿ ಅಣಕಿ ನೋಡು
ಚಂದಕಿ ಸಾಲು ಜಿಗಿದು ನೋಡು
ಮುತ್ತಿಟ್ಟ ಮುಗಿಲ ಮಿಂಚು ನೋಡು
ಕತ್ಲಲ್ಲಿ ಮೀನುಗೋ ತಾರೆ ನೋಡು
ಅದರೋಳಗೆ ಕಾಣೋ ಗತ್ತು ನೋಡು
ಇರುಳಲ್ಲಿ ಕಾಣೋ ಬೇಳಕ ನೋಡು
ಕಣ್ಣೋಳಗೆ ಕಾಣೋ ಕನಸ ನೋಡು
ಅಲ್ಲಿಲ್ಲಿ ಅಲೆಯೋ ನೆರಳ ನೋಡು
ಅವ್ವಲಕ್ಕಿ ಅನ್ನ ಊಟ ಮಾಡು......
ಕಣ್ಮಚ್ಚಿ ಒಲವ ನಿದ್ದೆ ಮಾಡು....

- ರಾಗಸಿರಿ....

09 Dec 2017, 08:51 pm

ಓ ನೈಟಿ

ವಸ್ತ್ರ ಲೋಕ ಆಕ್ರಮಿತ ರಾಣಿ
ಓ ನೈಟಿ
ಸಾವಿರಾರು ರೂ ತೆತ್ತ
ಯಾವ ಸ್ಯಾರಿನು
ನಿನಗಿಲ್ಲ ಸರಿಸಾಟಿ
ನೀರೆಯರ ಸೀರೆಗಳ
ಮಾಡಿರುವೆ ಲೂಟಿ
ಚೂಡಿ ಮಿಡಿಗಳೊಡನೆ
ನಡೆಸುತ್ತಿರುವೆ ಪೈಪೋಟಿ
ನಗರವಾಸಿ ಲಲನೆಯರ
ನಲ್ಮೆಯ ಬ್ಯುಟಿ
ಹಳ್ಳಿ ಹೈದೆಯರ ಚಿತ್ತಗೆಡಿಸಿ
ಮೆರೆಯುತ್ತಿರುವ ಮಹಾ ಘಾಟಿ
ಅಂದು ಒಳಗಿರಲೂ ಅಳುಕುತ್ತಿದ್ದ ನೀನು
ಇಂದು ಬೀದಿ ಬಜಾರಗಳಲ್ಲೂ
ನಿನ್ನ ಸಂಭ್ರಮ ಆಹಾ ಅದೇನು
ನೀರು ಕಾಣಿಸದಿದ್ದರು
ಪಡಲಾರೆ ಕೋಪ
ನೆರಿಗೆ ಇಸ್ತ್ರಿ ಕಾಟ
ನಿನಗೆ ತಟ್ಟದ ಶಾಪ
ಅಂಗನೆಯರ ಅಂಗ ರಕ್ಷಕಿ
ಪುಂಡ ಪೋಕರ ಮನರಂಜಕಿ


"

- ಯು.ರಾಮು ಸಿರಿಗೆರೆ

09 Dec 2017, 08:25 pm

ಮುದ್ದು ಅಣ್ಣ

ಅಣ್ಣ ಎಂದರೆ ಶಕ್ತಿ
ನನ್ನಲ್ಲಿನ ಬಲವೇ ನನ್ನಣ್ಣ.....

ಅವನ ಪ್ರೀತಿಗೆ ಕೊನೆಯೇ ಇಲ್ಲ
ನನ್ನ ಜೀವದ ಜೀವ ನನ್ನಣ್ಣ....

ನನ್ನಲ್ಲಿನ ನಂಬಿಕೆ ನನಗಾಗಿಯೇ
ಜನಿಸಿರುವ ನನ್ನಣ್ಣ....

ನನ್ನ ಅಣ್ಣನೆಂದರೆ ನನ್ನ ಮುದ್ದು
ನನಗೆ ನನ್ನ ಮುದ್ದು ಅಣ್ಣ....

- sparsha surya

09 Dec 2017, 07:41 pm

ಕೊಡಲೇನೆ....

ಅಂದವೆ ಇಲ್ಲದ ಮಲ್ಲಿಗೆ
ನೀ ಯಾಕೆ ಮರುಗುವೆ
ನನ್ನ ಅಂದ ಕೊಡಲೇನೆ ನಿನಗೆ......

ಜೀವವೆ ಇಲ್ಲದ ಓ ಮುದ್ದು
ಗೊಂಬೆ ಕೂರಗದಿರು ನೀ ಹಿಂಗೆ
ಈ ಜೀವ ಕೊಡಲೇನೆ ನಿನಗೆ....

ಪ್ರೀತಿಯೇ ಇಲ್ಲದ ಓ ಮನಸೆ
ಅಳುಕದಿರು ನನ್ನ ಪ್ರೀತಿ
ಕೊಡಲೇನೆ ನಿನಗೆ........

ಚಂದವೆ ಇಲ್ಲದ ಓ ಮುದ್ದು
ಕರುವೆ ಅಳದಿರು ನನ್ನ
ಚಂದ ಕೊಡಲೇನೆ ನಿನಗೆ........

ಮಾತೆ ಬಾರದ ಓ ಮೂಗ ಹಕ್ಕಿಯೆ
ಅಳದಿರೂ ನನ್ನ ದನಿಯ
ಕೊಡಲೇನೆ ನಿನಗೆ.......

ನಲುಗುವ ಮನಸುಗಳೆ
ನಲುಗದಿರಿ ನಿಮಗು ನಲಿಯುವ
ದಾರಿ ಇದೆ................

- ರಾಗಸಿರಿ....

09 Dec 2017, 04:50 pm

ಕನಸಿನ ಹುಡುಗಿ

ರಾತ್ರಿ ದೇವರನ್ನು ನೆನೆಯಲು
ಬರುವೆ ಕನಸಿನಲ್ಲಿ ದಿನಾಲು
ಕೇಳಿದೆ ಮನಸ್ಸನ್ನು ಯಾರೆಂದು
ಹೇಳಿತು ನನ್ನ ಕನಸಿನ ರಾಣಿಯೆಂದು.

ನಂಬು ನನ್ನಯ ಮಾತನ
ಕಾಣಲು ನಿನ್ನನ್ನು, ಮನ
ಬಿಗಿ ಹಿಡಿದಿದೆ ಉಸಿರನ
ತೋರಿಸು ನಿನ್ನಯ ವದನ

ಹೇಳು ಚೆಲುವೆ, ನೀ ಎಲ್ಲಿ ಅವಿತೆ
ನೀನಿಲ್ಲದೆ ಕಳೆದೆ ಅದೆಷ್ಟೋ ಹಗಲಿರುಳು
ಮರುಕಳಿಸುವವು ನಿನ್ನ ನೆನಪುಗಳು
ಆಗಾಗ ತುಂಬುವುದು ನನ್ನ ಕಣ್ಣುಗಳು
ಬಾ ಚೆಲುವೆ ಕನಸಿನಲ್ಲಿ ದಿನಾಗಲು

- manu

09 Dec 2017, 04:15 pm

ಸಾವಿನ ಸುತ್ತ...

ಬದುಕಿರುವವರೆಗೂ ಸಾವಿನ ಚಿಂತೆ..!
ಹೋಗುವ ಕಾಲಕೆ ಬದುಕಿನ ಚಿಂತೆ..!
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ..!
ಅದಕ್ಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ..!

ಸಾವಿನಾಚೆಯ ಊರು ಕಂಡವರು ಯಾರು..!
ಸ್ವರ್ಗ ನರಕಗಳ ಊಹೆಗಳು ನೂರಾರು..!
ಸ್ವರ್ಗ ದಾನಂದದಲಿ ಮಿಂದು ಬಂದವರಿಲ್ಲ..! ಎದುರಿನಲಿ..!
ನರಕದ ಬೆಗೆಯಲಿ ಬೆಂದು ಬಂದವರಿಲ್ಲ ಆಸು ಪಾಸಿನಲಿ..!

ಸಾವಿನ ಸುತ್ತ ಅಂತೆ ಕಂತೆಗಳ ಭೂತ..!
ಇಲ್ಲಿಹುದು ನನಗೆ ತಿಳಿದಿರುವ ಅರ್ಥ..!
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ..!
ಆತ್ಮ ಹುಡುಕುತಾ ಹೊರಡುವುದು ಹೊಸ ದೇಹದ ಸಾಂಗತ್ಯ..!


೦0೦......೦0೦......೦0೦......೦0೦......೦0೦...

- ಪ್ರಕಿ..

09 Dec 2017, 04:01 pm