ಆ ಸೂರ್ಯನೆದ್ದು ಬಂದಾನ
ಜಗದ ಅಂದಕಾವರ ತೊಳೆದು
ತನ್ನ ಬೆಳಕನ್ನ ಚೆಲ್ಲುತ್ತಾ.....
ಹಾಲಿನ ಕಡಲಲ್ಲಿ ಮಿಂದು
ಎದ್ದು ಬರುತಿರವ ಅವ
ಬಂದು ಪಳ ಪಳನೆ
ಕಣ್ಣು ಹೋಡೆಯುವ ಮನ್ನ
ಎದ್ದು ಬಿಡಿರೆ ಮುದ್ದು ಮನಸುಗಳೆ...
ಮುಂಜಾನೆಯಲಿ ಕನಸೊಂದು
ಬಂದಿರಲು ನನಸ ಮಾಡಲೆಂದೆ
ಬರುವ ಅವನೋಬ್ಬ ಸಮಯ ಪಾಲಕ
ನೋಡಿ.............
ಅವನೋಬ್ಬ ಇದ್ದರೆ
ಜಗವೆ ಎಚ್ಚೆತ್ತು ಕೋಳ್ಳುವುದು ನೋಡಿ...
ಓ ಮನಸ್ಸೇ ಅತ್ತು ಬಿಡು
ಒಮ್ಮೆ ಜೋರಾಗಿ
ಮನದಲ್ಲಿರುವ ನೋವೆಲ್ಲ
ಕಣ್ಣಿರಂತೆ ಹೊರಹಾಕಿ ಬಿಡು....
ಏಕೆ ನೋವಿನಿಂದ ಮರುಗುವೆ
ನಿನ್ನ ನೊಂದ ಮಾತು
ಪ್ರೀತಿಸುವ ಮನಕೇ ಉಸಿರು
ಕಟ್ಟಿ ದಂತಾಗಿದೆ......
ನಿನ್ನ ಒಂದು ನಗುವಿಗಾಗಿ ಕಾಯುತ್ತಿದೆ
ಈ ನಿನ್ನ ಮನಸ್ಸು ಒರಟು ಮಾತಿನಿಂದ
ನನ್ನ ಕೊಲ್ಲವ ಬದಲು ಮೌನವಾಗಿ
ಇದ್ದು ಬಿಡು ಸುಮ್ಮನೇ ಮೌನದಿಂದಲೇ
ಉತ್ತರಿಸು ಒಮ್ಮೆಲೇ ಅತ್ತು ಬಿಡು ಮನಸ್ಸೇ....
ಹುಣ್ಣಿಮೆಯ ಓ ಚಂದಿರನೆ
ಎಲ್ಲಿಂದ ಬಂತು ಈ ಅಂದ ಚಂದ
ನಿನಗೆ ಈ ದಿನ .......
ತಿಳಿನೀರ ಸಾಗರದಲ್ಲಿ ಮಿಂದು
ಗಂಧದ ಹೋಳೆಯಲ್ಲಿ ನಿಂದು
ಮೈಯಲ್ಲ ಅಂದದ ಹೊಂಬಣ್ಣ
ಸವರಿಕೋಂಡು
ಯಾರು ಇಲ್ಲದ ಆ ಆಗಸದಲ್ಲಿ
ಒಬ್ಬನೆ ಮದು ಮಗನಂತೆ
ಕಾಯುತಿರುವೆಯಲ್ಲ.....
ನಿನಗಾಗಿ ಕಾದಿರುವ ಆ ಮದು ಮಗಳ
ಹುಡುಕಿ ತರಲೆಂದೆ ಈ ಅಂದವೆ ನಿನಗೆ.....
ಆ ಮದು ಮಗಳ ಬಂದುಗಳು ನಾವು
ನಮಗು ಅಲ್ಲಿ ಜಾಗ ಕೋಡುವೆಯ
ಬೆಳದಿಂಗಳ ಅಂಗಳದಲ್ಲಿ ಹಸಿರ ಚಪ್ಪರ
ಹಾಕಿ ದಿಬ್ಬಣ ತರಿಸಿ ಮದುವೆಯ ಮಾಡಿ
ಸಡಗರದಿ ನಲಿಯುವೆವು ನಾವು
ಜಗತ್ತನ್ನೆ ನಿನ್ನ ಕೈಯಲ್ಲಿ ಇಟ್ಟು
ಬೆಳಕ ಚೆಲ್ಲುತ್ತಿರುವೆ ನೀನು
ನಿನಗಾಗಿ ನಾವು ಬೆಳದಿಂಗಳಲ್ಲಿ
ಮದುವೆಯ ದಿಬ್ಬಣ ಹೋತ್ತು ತರುವೆವು
ಕಾಯುತಲಿರು ಓ ಚಂದಿರನೆ.......
ಹುಣ್ಣಿಮೆಯ ಅಂಗಳದಲ್ಲಿ ಚಂದಿರನ
ಮದುವೆಯ ಮೆರವಣಿಗೆ ಸಾಗುತಿರಲಿ ಹೀಗೆ......