Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ವಿಧೀಗೇಕೆ ಇಂತ ಕೋಪ
ಆರಿಸುತಿರುವ ಒಲವ ಪ್ರೇಮ ದೀಪ
ಅವನ ಸವಿನೆನಪುಗಳ ಸಲ್ಲಾಪ
ಇಂದೆನಗೆ ನೋವುಗಳ ಪ್ರಲಾಪದ ಶಾಪ
ಕಿರುಬೆರಳ ಹಿಡಿದು ನಡೆದ ಹಾದಿ
ತರುತಿದೆ ಎದೆಯೊಳಗೆ ಕೊನೆಯಿರದ ಬೇಗುದಿ
ಜೊತೆಯಾದ ಹೆಜ್ಜೆಗಳು ತುಳಿದ ಸಪ್ತಪದಿ
ಮತ್ತೆ ತಿರುತಿರುಗಿ ನೋಡಿದಂತಾಗಿದೆ ಮರುಕದಿ
ಜಾರಿದ ಮುಂಗುರುಳ ಸೇರುವ ಕೈಯಿಗೆ
ತೆರೆದು ನೋಡುವಾಸೆ ಪ್ರೀತಿಯ ನೆನಪುಗಳ ಮಳಿಗೆ
ಅವನ ಕಣ್ಣ ಕಡಲಲಿ ಕುಣಿದ ತೇಲಿದ ಕಣ್ಣಿಗೆ
ಕಂಬನಿಯ ಸಾಗರ ಜೊತೆಯಾಗಿದೆ ತಿಳಿಯದ ಹಾಗೆ
ಬಾಳ ದಾರಿಯಲಿ ಪ್ರೀತಿಯ ಹೆಜ್ಜೆ ಗುರುತು
ಅಳಿಸಿ ಹೋಗುವುದಂತು ಕನಸಿಗೂ ದೂರದ ಮಾತು
ನೆನಪುಗಳು ಮಾಸಿ ಮಬ್ಬು ಆವರಿಸದ ಹೊರತು
ಬದುಕಬಹುದೆ, ಹೋಗದಿದ್ದರೆ ಕಳೆದ ಕ್ಷಣವೆಲ್ಲ ಮರೆತು
- ಶ್ರೀಕಾವ್ಯ
01 Dec 2017, 01:53 pm
ಈ ಬದುಕು ನಿನಾಗಾಗಿ ಮೀಸಲಿಡುವೆ
ಮುತ್ತಿನಂಗಳದಲ್ಲಿ ಇಟ್ಟು ಜೋಪಾನ
ಮಾಡುವೆಯ ಈ ಬದುಕನ್ನ......
ಈ ಉಸಿರು ನಿನ್ನೋಳಗೆ ಬೆರೆಸಿಡುವೆ
ನಿನ್ನ ಉಸಿರಿರುವ ವರೆಗು ಬೇರೆಯಾಗದಂತೆ
ಕಾಪಾಡಿಕೋಳ್ಳುವೆಯ ಈ ಉಸಿರನ್ನ......
ಈ ಮನಸ್ಸು ನಿನ್ನ ಮನಸಿಗೆ ಸಂಗಾತಿಯಾಗಿ
ಕೋಟ್ಟು ಬಿಡುವೆ ಅಂಬರದರಮನೆಯಲ್ಲಿ ಇಟ್ಟು
ಎಂದು ಮುರಿಯದ ಹಾಗೆ ಉಳಿಸಿ ಕೋಳ್ಳುವೆಯ ಈ ಮನಸ್ಸನ್ನ...........
ಈ ಹೃದಯ ನಿನ್ನೂಳಗೆ ಇಟ್ಟುಬಿಡುವೆ
ನಿನ್ನೆದೆಯ ಬಡಿತದ ಜೊತೆಗೆ ಬೆರೆಸಿಕೋಂಡು
ಎಂದು ನಿಲ್ಲದ ಹಾಗೆ ನೋಡಿಕೋಳ್ಳುವೆಯ
ಈ ಹೃದಯವನ್ನ...........
ಈ ಒಡಲೆ ನಿನಗಾಗಿ ಗೆಳೆಯ
ಎಂದು ದೂರಾಗದ ಹಾಗೆ ಕಾಪಾಡಿಕೋ ಓ ಗೆಳೆಯ.............
- ರಾಗಸಿರಿ....
01 Dec 2017, 01:16 pm
ಒಲವೆಂಬ ಈರುಳ್ಳಿನಾ ಕುಯಿವಾಗ ಕಣ್ಣೀರು
ಕುಯ್ಲಿಗೆ ಬಂದ ಈರುಳ್ಳಿನ ನೆಲದಿಂದಾನೆ ಅಗಿಯೊದು
ಒಲವನ್ನು ಮುಚ್ಚಿ ಇಡದೆ ಹೆಚ್ಚಿ ಮಾಡು
ಅಡುಗೆನಾ
ಬದುಕಲ್ಲಿ ಒಲವೆ ಇರದೆ ರುಚಿಯೆ ಬರದು
ಚಿತ್ರನ್ನಾ
ಕಣೀರು ಕಡಿಮೇಯಾದರು ಪ್ರೀತಿ ಮಾಡೊಣಾ
ಕೈ ಸಾಲಾನು ಮಾಡಿಯಾದರು ಕಣ್ಣಿರ ಸುರಿಸೊಣಾ
ಒಲವೆಂದರೆ ಹಿಂಗೆತಾನೆ ಉಪ್ಪುಕಾರದ ಒಗ್ಗರಣೆ••••••••••
(ನಿಮ್ಮ ಪುಟ್ಟ)
- ಕೌರವ
30 Nov 2017, 10:46 pm
ಮಳಲು ಬಂಗಾರ
ಅಳಿಲ ಸಿಂಗಾರ
ನೊಡವಳ ವೈಯಾರ
ತಳಕು ಬಳುಕಲಿ
ಅಳಕು ಭಯವಿಲ್ಲ
ಅಂಜುವಳಲ್ಲ ಅಳುಕುವಳಲ್ಲ
ನಲಿಯುವಳು ದಿನವೇಲ್ಲ
- ಕೌರವ
30 Nov 2017, 10:15 pm
ಬಯಲು ಹೊಂಗನಸಿನಲ್ಲಿ
ದೀಪ ಆರಿಹುದು ಅಲ್ಲಿ!!
ನಾನು ಒಬ್ಬಂಟಿಯಾಗಿ
ನಿಂತು ಕಾದಿರುವೆನು ಅಲ್ಲಿ!!
ಬದುಕು ಹೀಗೆಯೇ ಎಂಬ
ಮಂತ್ರವು ಮನಸಿನ ತುಂಬ!!
ಇರುಳ ಹೊದಿಕೆಯ ಹೊದ್ದು
ನಿದ್ರಿಸಿತೇ ನನ್ನಯ ಸ್ವತ್ತು!!
ಬಳಲಿ ಬೆಂಡಾದ ಮೇಲೆ
ಬದುಕಿಗೆ ಯಾವ ಬೇಲಿ!!
ಏಕಾಂತದ ತಾಪದ ಒಳಗೆ
ಬಿದ್ದು ಏಳಲು ಇಹುದೇ ದಾರಿ!!
- ಪಿ.ಜಿ.ಜ್ಯೋತಿ
30 Nov 2017, 09:47 pm
ನನಗಾರು ಇಲ್ಲದಿರುವಾಗ,
ಬರೀ ಕಷ್ಟಗಳೇ,ತುಂಬಿರುವಾಗ,
ಭಯದಲ್ಲಿ ನಡುಗುತ್ತೀರುವಾಗ,
ಆಸರೆಯಾದೆ ನೀ ನನಗಾಗ.
ನನ್ನ ಕಣ್ಣೀರ ಓರಸಿ,
ಸಮಾಧಾನ ಪಡಿಸಿ,
ಮಗುವಂತೆ ನನ್ನ ಓಲೖೆಸಿ,
ಸಂತೋಷ ಪಡುವೇ ನೀ, ನನ್ನ ನಗಿಸಿ.
ನಿನ್ನ ನಾ ಏನೇಂದು ಕರೆಯಲಿ...
ಬದುಕಿನ ಹಾದಿಯ ಪಯಣದಲಿ,
ಈ ದೇಹದ ಉಸಿರ ಗತಿಯಲ್ಲಿ,
ಬೆರೆತಿರುವೇ,ನೀ ನನ್ನ ಅಣು ಅಣುವಲ್ಲಿ..
ನಾ ಹೇಗೆ ಏಳಲಿ,ನಿನ್ನಲ್ಲಿ...
ಈಡೀ ಪ್ರಪಂಚವೇ ಕುಳಿತಿದೆ, ನನ್ನ...ಕಣ್ಣೇದುರಲ್ಲಿ.....
ನೀನ್ನ ಪ್ರೀತಿಯ ಬಯಸಿ ಮನದಲ್ಲಿ....
- Bhagya Girish
30 Nov 2017, 09:37 pm
ನಿನ್ನ ಪ್ರೇಮದ ಸಾನಿಧ್ಯಕರಳಿದ ಪ್ರೀತಿ ಹೂವು
ನಿನ್ನ ಮೋಸಕೆ ಬಾಡಿ ಉದುರಿ ನೆಲಸೇರಿ
ಕಂಡ ಕಂಡವರ ಕಾಲಧೂಳ ಕಂಡು
ಹೆದರಿ ಉಸಿರೂ ಬಿಡಲಾಗದೆ ನರಳುತಿದೆ
ನಿನ್ನ ಕಣ್ಬೆಳಕಿನ ಕಾಂತಿಗೆ
ಬಾಳಿಗೆ ಬೆಳಕರಿದಂತಾಗಿ ನಿನ್ನೆಡೆಗೆ
ಬಾಗಿದ ನಾ ಸೂರ್ಯಕಾಂತಿ ಹೂವು
ನಿನ್ನ ಕಣ್ಣ ಸೆಳೆತವಿರದ
ಕ್ಷಣ ಕ್ಷಣವೂ ನನಗೆ ಸಾವು
ಅವಳ ಅಂದವ ಕಂಡ
ಲತೆಗೂ ಏಕೊ ನಾಚಿಕೆ ಬಂತೇನೊ
ಸೌಂದರ್ಯವೆಂದರೆ ಅವಳೆ ಅನಿಸಿ
ಬಳ್ಳಿ ತುಂಬಾ ಹೂವು ಅರಳಿಸಿ
ನಾನು ಸುಂದರಿ ಎಂದು ಅಳುತ್ತಿತ್ತು
- ಶ್ರೀಕಾವ್ಯ
30 Nov 2017, 09:30 pm
ಚಿಗುರು ಗಿಡವಾಗಿ ಬೆಳೆವಾಗ
ಯಾರು ಹೊಯ್ದಿಲ್ಲ ನಾಲ್ಕು ಹನಿ ನೀರು
ಆದರೂ ಮರವಾದೆ ಸ್ರಷ್ಟಿ ಔದಾರ್ಯ
ರಸ್ತೆ ಬದಿಯಲ್ಲಿ ನಿಂತು
ದಾರಿ ಹೋಕರಿಗೆ ನೆರಳೀಯುತ್ತಿದ್ದೇನೆಂಬ
ಹಮ್ಮುತನವಾಗಲಿ
ಹತ್ತಾರು ಪಕ್ಸಿಗಳು ನನ್ನಲ್ಲಿ
ಗೂಡುಕಟ್ಟಿ ಬದುಕುತ್ತಿವೇ ಎಂಬ
ಹೆಗ್ಗಳಿಕೆಯಾಗಲಿ ನನಗಿಲ್ಲ
ಇಷ್ಟಾದರೂ ಕಲ್ಪಿಸಿದ ದೈವದೊಲುಮೆ ಬಗೆಗೆ
ಧನ್ಯತಾ ಭಾವ
ಸ್ವಾರ್ಥ ಪರರು ನನ್ನ ಬುಡಕ್ಕೆ
ಕೊಡಲಿ ಇಟ್ಟಾಗ ಕಂಪಿಸಿದ್ದು
ಸಾಯುತ್ತೇನೆಂಬ ಭಯದಿಂದಲ್ಲ
ನನ್ನ ಆಶ್ರಿತರೆಲ್ಲ ಇನ್ನೊಬ್ಬರನ್ನು
ತಬ್ಬಬೇಕಲ್ಲ ಎಂಬ ನೋವಿನಿಂದ.
- ಯು.ರಾಮು ಸಿರಿಗೆರೆ
30 Nov 2017, 09:30 pm
ನಿನ್ನ ಕಣ್ಗಳ
ಮಧುರ ನೋಟಕೆ
ಕರಗಿಹೋಗಿಹೆ ನಲ್ಲೆ
ಕಣ್ಣೀರ ಹನಿಯಾಗಿ
ನಿನ್ನ ಕಣ್ಗಳಿಂ ಉದುರಿ
ಮೃದುಕದಪುಗಳ
ಮುತ್ತಿಕ್ಕಿಹೆನಲ್ಲೆ
ನಿನ್ನಧರಕಿಳಿದ
ಕಂಬನಿಯಲಿ
ನನ್ನನರಸಿ ಅಧರದಿಂ
ಸೆಳೆಯಲೆ ನಲ್ಲೆ?
ಕಣ್ಣಲ್ಲಿ ಕಣ್ಣಿಟ್ಟು
ನಿನ್ನಲ್ಲಿ ಕೇಳಲು
ನಾ ನಿನ್ನ ಕಣ್ಗಳಲೇ
ಕಂಬನಿಯಾಗಿಹೆನಲ್ಲೆ!
- ನಾಗರಾಜ್
30 Nov 2017, 08:03 pm
ಗಜಲ್
೧. ಒಲವ ದಾರಿ
ಅಂದು ನೀ ನೀಡಿದ ಭಾಷೆ, ಯಾರು ಮರೆತರಿಗ ಹೃದಯವ ಮೊದಲು
ಒಲವ ದಾರಿಯ ಮರೆಯಿತೇ ನಿನ್ನ ಹೃದಯ ಕೈ ಹಿಡಿದು ಸಾಗುವ ಮೊದಲು
ಬೂದಿ ಮಾಡಿದೆ ನೀ ನನ್ನ ಎದೆಯ ಅರಮನೆಯನ್ನು
ನಿನ್ನ ಪಾದವ ಉರಿ ನೀ ರಾಣಿ ಆಗುವ ಮೊದಲು
ಮಸಣದ ಹಾದಿ ತೋರಿಸಿದೆ ನೀ ನನ್ನ ಕನಸುಗಳನ್ನು
ಹೂವಿನಂತೆ ಅರಳಿ ಅವು ನನಸಾಗುವ ಮೊದಲು
ಕೊಡಿಟ್ಟ ಕನಸುಗಳನ್ನು ಚೆಲ್ಲಾಡಿ ನೀ ನಡೆಯುವಾಗ
ನನ್ನ ಮಾತುಗಳು ಸಹ ಮೌನವಾದವು ನಾ ಹೇಳುವ ಮೊದಲು
ಕಣ್ಮರೆಯಾಯಿತು ಆ ನಿನ್ನ ತಂಗಾಳಿಯ ಪಿಸು ಮಾತಿನ ಹೊನಲು
ನಿನ್ನ ಆ ಪಿಸು ಧ್ವನಿಯ ನಾದವಿಲ್ಲದೆ ನರಕ ಕಾಣುತ್ತಿದೆ ಈ ಅನಿಲನ ಹೃದಯ ಸಾಯುವ ಮೊದಲು
✍ಅನಿಲ್ ಕುಲಕರ್ಣಿ
ಕೆರೊರ (ತಾ: ಬದಾಮಿ)
- ಅನಿಲ್ ಕುಲಕರ್ಣಿ
30 Nov 2017, 04:36 pm