Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನಾಗದಿರುವ ಮುಳುಗುವ ಸೂರ್ಯ

ನೀ ಸನಿಹವಿರದ ನನ್ನ ಹೃದಯವು
ಸೂರ್ಯ-ಚಂದ್ರನಿರದ ಬಾನು-ಭುವಿಯಂತೆ
ನಿನ್ನ ಹೆಸರನೆ ಜಪಿಸುವ ಈ ಜೀವಕೆ
ಸದಾ ನಿನ್ನೊಲವಿನಲಿ ಬೆರೆಯಬೇಕಂತೆ!

ನೋವು ನಲಿವನ್ನು ಹಂಚಿಕೊಂಡು
ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ
ಖಾಲಿ ಹೃದಯದ ತುಂಬೆಲ್ಲಾ
ಕನಸುಗಳ ಚಿತ್ರಿಸಿ ಖುಷಿಯನು ನೀ ತಂದೆ!

ನಮ್ಮ ಪ್ರೀತಿಯ ಅರಮನೆಯಲ್ಲಿ
ಕಾವಲಾಗಿರುವೆ ಸದಾ ನೆರಳಿನಂತೆ
ನಿನ್ನೆದೆಯ ತೋಟದಲ್ಲಿ, ಹೂವಿನಂತೆ
ಅರಳಿ ನಿಂತಿರುವೆ ಎಂದು ಬಾಡದಂತೆ!

ಸಂಜೆ ಸೂರ್ಯ ಮುಳುಗಿದ ಮೇಲೆ
ಚುಕ್ಕಿ-ಚಂದ್ರಮ ಬೆಳಕ ಚೆಲ್ಲುವನು ಧರೆಗೆ
ನನ್ನ ಬದುಕಿನ ಕೊನೆಯಪುಟದವರೆಗೂ
ನೀನಾಗದಿರು ಮುಳುಗುವ ಸೂರ್ಯನ ಹಾಗೆ!

ಪ್ರಿಯಾಂಕ✍

- ಪ್ರಿಯಾಂಕ

01 Nov 2017, 09:45 am

ಹಿತ

*ಚುಟುಕು ೧*

ಮನಸೊಳಗಿರಲು‌ ಅಗಾಧ ಪ್ರೀತಿಯ ಸೆಳೆತ
ಪ್ರೇಮಿಗಳೆಂದರಂತೆ‌ ಆಹಾ‌ ಎಂಥ ಹಿತ
ಅವರಾದಗ ಮದುವೆಯ ಹೆಸರಲಿ‌ ಮಿಳಿತ
ಗೊಣಗಿದರಂತೆ‌ ಇದು ನಮಗೆ ಬೇಕಿತ್ತ...


*ಚುಟುಕು ೨*
ಆಹಾ ಏನು ಚೆಂದ‌ ಅಂತೀರಿ ಎದುರು‌ ಮನೆ‌ ಹಿತ
ನಿಂತು ಬಿಡುವೆ ಕಂಡಾಗವಳ ಹೆಚ್ಚಾಗಿ ಎದೆ ಬಡಿತ
ನನ್ನವಳೇನದರು ಕಂಡು ಕಣ್ಣಲ್ಲೆ ಕೊಟ್ಟಾಗಲೆ ಹೊಡೆತ
ನೆನಪಾಗುವುದು ನನಗೆ ನಾನೊಬ್ಬ ವಿವಾಹಿತ

*ಚುಟುಕು ೩*
ಎಂಥ ಶಕ್ತಿ ಇರಬೇಕು ಹೆತ್ತವಳ ಪ್ರೀತಿಗೆ
ಒಮ್ಮೆ ತಲೆ ಇಟ್ಟು ಮಲಗಿದರೆ ಅವಳ‌‌ ಮಡಿಲಿಗೆ
ಸಿಕ್ಕಾರೆ ಅವಳ ಹಿತವಾದ ಪ್ರೀತಿಯ ಅಪ್ಪುಗೆ
ಸಾಕೆನಗೆ ಅದೇ ಸಾಂತ್ವನ ಹೇಳಲು ನೋವು ಕಣ್ಣೀರಿಗೆ

- ಶ್ರೀಕಾವ್ಯ

01 Nov 2017, 07:31 am

ಜೈ ಕನ್ನಡ

ಯಾರಿಗೆ ಯಾವ
ಭಾಷೆ ಬೇಕೋ
ಅದೇ ಮಾತಾಡ್ಲಿ
ಅಡ್ಡಿ ಇಲ್ಲ !!

ಮನ್ಸಲ್ಲಿ ಕನ್ನಡದ್
ಪ್ರೀತಿ ಇರ್ಲಿ
ಅಭಿಮಾನ
ತುಂಬಿ
ತುಳುಕಾಡ್ಲಿ !!

ಕನ್ನಡ ನಾಡ್ನಲ್ಲಿ
ಹುಟ್ಟಿರೋ
ಪ್ರತಿಯೊಬ್ರೂ
ಕನ್ನಡಿಗರೇ
ಸಂಶಯ ಬೇಡ !!

ಒಂದಿನದ್
ಕನ್ನಡಿಗ
ಆಗೋದ್ಬೇಡಾ
ಹುಟ್ಟಾ
ಕನ್ನಡಿಗನಾಗೋಣಾ !!

ಜೈ ಕನ್ನಡ
ಜೈ ಜೈ ಕನ್ನಡ !!

- ಅಲ್ತಾಫ್ ಬಿಳಗುಳ

01 Nov 2017, 12:27 am

ಕರುನಾಡ ಕನ್ನಡತಿ

ಏಳವ್ವಕನ್ನಡದತಾಯೇಏಳವ್ವನೀ
ಏದ್ದೇಳು ಕನ್ನಡದ ತಾಯೇ ಏದ್ದೇಳು ನೀ
ಕನ್ನಡದ ಅಂಗೈ ಕನ್ನಡಿಯ ವರಿಸುನೀ
ಮಹಾ ತಾಯೆೇ ಜೈ,, ಜೈ,,
ಜಯ ವೀರ ಕನ್ನಡ ಧೀರ ಕನ್ನಡದ ತಾಯೇ

ಕನ್ನಡ ಮಣ್ಣಿನ ಕಣಿ ಕಣಿ ತಣಿಸುತ
ಕನ್ನಡದ ಹೆಣ್ಣನು ಮೆರೆ ಮೆರೆ ಮೆರೆಸುತ
ಮೆರುತಿಹ ಕನ್ನಡ ಶ್ರೀ ಸಿರಿಯವರಿಸುವ ನೀ
ಜಯ ಮಂಗಳದಂಗಳದಂಗಳ ನೀನಮ್ಮ

ವೀರಧೀರರ ಸುತರಲೀ ವೀರಧಾರಿಯು ನೀ
ವೀರನಾರಿಯು ನೀನಮ್ಮ,, ನೀನಮ್ಮ,, ನಮ್ಮಮ್ಮ
ಕನ್ನಡ ಕಣ್ಮಣಿಯು ನೀ ನಮ್ಮ ವರವಮ್ಮ
ಜಯ ಜಯ ಜಯಹೋ ಜಯ ವೀರಜಯ
ಕರುನಾಡ ಕನ್ನಡತಿ ನೀನಮ್ಮ,,,

ನಾಗರಾಜ್ ಎಸ್ ಟಿ
ಹೊಸದಡಗೂರು

- Rajfrom Raj

31 Oct 2017, 10:32 pm

ವಯ್ಯಾರೀ ಚೆಲುವೆ

ಮಲೆನಾಡಿನ ಒಡತಿ ಮೈಸೂರಿನ ಗೆಳತಿ
ಮಳೆ ಬೀಳುವುದೇ ನಿನಗೆ ಸೊಗ್ಗಡತಿ
ಚಿನ್ನರಿಯೇ ನಿನ್ನ ಕಣ್ಣ ಶ್ರೀಗಂಧದ ಮೈ ಬಣ್ಣ
ಬಳಕು ಸೊಕಲಿದೆ ತಾನಿನ ತಳುಕಿನ ನಡೆ ಚಂದ
ತಾನಿನ ನಡು ಚಂದ ಅ ಆನಂದ,,,,,
ಈ ವಯ್ಯಾರೀಯ ಕಣ್ಣ,,
ಈ ವಯ್ಯಾರೀಯಬಣ್ಣ,,,,,

ನೀ ಹೇಳಲೇ ಬೆಡಗಿ ಚಿನ್ನರ ಹುಡಗಿ
ಚಿಲುಪಿಲಿ ನಗುವಿನ ಮುದ್ದಾದ ಈ ಹುಡುಗಿ
ಸಿಂಗಾರದ ಚೆಲುವೆ ಎನ ಬಂಗಾರದ ನವಿಲೆ,,

ಏ ಕಂಡದ್ದು ಮಾತ್ರಕ್ಕೆ ನೋಡೇನು ತಿಳಿಯ
ತಿಳಯ ಒಳಪಿನ ತಾ ನೀನ ಸುಂದರ ಮೊಗದವಳೆ
ತಾ ನಿನ್ನ ಅಂದ, ತಾ ನಿನ್ನ ಚೆಂದ
ಈ ವಯ್ಯಾರೀಯ ಕಣ್ಣ
ಈ ವಯ್ಯಾರೀಯ ಬಣ್ಣ,,

ಬಿಡಲು ಬಿಳುಕಿನ ಬಿಳುಪಿನ ಬಾನಿನಲಿ
ಬಸವಳಿಯದ ನಸುಕಿನ ಸಂಜಯಲಿ
ನಸುನಗೆಯ ಬೀರುತ ಗೆಜ್ಜೆಯ ಕುಲುಕುತ ನಡೆಯುವಳೆ,,
ಓಹೋ ನಡೆಯುವಳೆ, ಬಲು ಚೆಲುವಿವಳೆ
ಬಲು ಚೆಲುವಿವಳೆ ನನ್ನ ಮಂದಾರಾದ ಹೂವೇ,,
ಶ್ರೀಗಂಧದ ಮೈ ಬಣ್ಣದ ಚಲುವೆ.. ಓಹೋ
ನೀನು ಬಲು, ಮುದ್ದಾದ ಮೊಗದವಳೆ,,,
ಓಹೋ ಮುದ್ದಾದ ಮೊಗದವಳೆ,,,

- Rajfrom Raj

31 Oct 2017, 08:21 pm

ಹಣತೆ

ಎತ್ತಲು ಮುಸುಕಿದೆ ಗಾಢಾಂಧದ ಕತ್ತಲೆ
ಈ ತಮದೊಳಗೆ ಸಮಾಜವೇ ಬತ್ತಲೆ
ನನಸಾಗಲಿಲ್ಲ ಮಹನೀಯರ ಕನಸು
ಬಡವರು ದೀನರು ಆದರು ಬಲಿಪಶು

ಸರ್ವವ ವ್ಯಾಪಿಸಿದೆ ಕೋಲೆ ಬಸವಗಳ ಗುಟುರು, ಕಾಕು
ಹಿಂದೆಯೆ ನಡೆದಿದೆ ಅಹಂಕಾರದ ಗದ್ದುಗೆಯ ಪರಾಕು
ಹಿಂಬಾಲಕರಿಗೆಲ್ಲ ಅಧಿಕಾರದ ರಕ್ಷಾ ಕವಚದ ಬಾಳು
ರಕ್ಷಕರೆಲ್ಲಾ ಎಂಜಲಿಗೆ ಬಾಯ್ಬಿಡುವ ಕಾಲಡಿಯಾಳು

ನೋಟ ಬೀರಿದಲ್ಲೆಲ್ಲಾ ನಾನು ನನ್ನದೇ
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ

ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ತೆಗೆದು ಬಗೆದು ಸಿಗಿದು ಅಗೆದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ, ಸೊರಗಿದವರೆಷ್ಟೋ?
ತನ್ನನ್ನೆ ಕೊಟ್ಟು ಗಂಟು ಕಟ್ಟಿಕೊಂಡವರೆಷ್ಟೋ?

ಆಚಾರದ ನೆರಳಲ್ಲಿಯೇ ಅನಾಚಾರ
ಅಡಿಅಡಿಯಲ್ಲಿಯೂ ಬೆಳೆದಿದೆ ಭ್ರಷ್ಟಾಚಾರ
ಇನ್ನೆಲ್ಲಿದೆ ಸಂಸ್ಕೃತಿಯ ಶಿಷ್ಟಾಚಾರ
ನಡೆದದ್ದು,ನಡೆಯುವುದೆಲ್ಲ ಅಗೋಚರ

ಹೆಜ್ಜೆ ಇಟ್ಟಲ್ಲೆಲ್ಲ ಬರೀ ಆಶಾಭಾವದ ಸೋಗು
ಎಂದಿಗೂ ನಿಲ್ಲದು ನೊಂದವರ ಕೂಗು
ದೇಶದೆಲ್ಲೆಡೆ ತುಂಬಿದೆ ಜಾತಿಯ ರಾಜ್ಯ
ನಿಜವಾಗಿಯೂ ಲಭಿಸಿದೆಯೇ ನಮಗೆ ಸ್ವರಾಜ್ಯ?

ದೇಶದ ಬೆನ್ನೆಲುಬು ರೈತ
ಇಂದು ಅವನ ಸ್ಥಿತಿ ಬರೀ ಜೀತ ಜೀತ
ದೇಶಕಾಗಿ ದುಡಿದು ದುಡಿದು ಸೋತ
ಇಂದಾಗಿದೆ ಅವನ ಬಾಳು ವಿಪರೀತ

ಒಂದೆಡೆ ಅನ್ನಕ್ಕಾಗಿ ಕ್ರಾಂತಿ ಕ್ರಾಂತಿ
ಒಂದೆಡೆ ಅಜೀರ್ಣದ ವಾಂತಿ
ಅನಾಥರ ನಿರ್ಗತಿಕರ ಹಾಹಾಕಾರ
ಬೇಕಿದೆ ಇದಕೆಲ್ಲ ಪರಿಹಾರ

ಈ ಎಲ್ಲಾ ಆಟಗಳ ಆಡುಂಬೋಲ
ಬೆಳಕಿದ್ದರೂ ಕತ್ತಲೆಯಾಗಿರುವ ಸಮಾಜ
ಈ ಕತ್ತಲೆಯಲ್ಲಿ ಹತ್ತುವುದೇ ಬೆಳಕಿನ ದೀಪ

- Kumara.C

31 Oct 2017, 07:53 pm

ಮುಟ್ಟು

ಚೆಲುವಾದ ಬಾಲ್ಯಕ್ಕೆ ಬಲು ದುಃಖದಿ ನಾಂದಿ ಹಾಡಿ
ಹರೆಯಕ್ಕೆ ಕಾಲಿಟ್ಟೆ ಈ ಮುಟ್ಟು ನನ್ನ ಮುಟ್ಟಿದ ಕಾರಣಕ್ಕಾಗಿ.

ಹೆಣ್ಣೆಂದು ಹೊನ್ನಂತೆ ನೋಡುವುದ ಬಿಟ್ಟು ಮುಟ್ಟಾದೇನೆಂದು ಮನೆಯಿಂದ ಹೊರಹಾಕಿ ಭಿಕ್ಷುಕರ ಬಟ್ಟಲಿಗೆ ಅರೆಅಗಳು ಎಸೆದಂತೆ ಎಸೆದು ಕೊರೆವ ಚಳಿಯಲ್ಲಿ ಮಲಗೆಂದು ದೂರ ನೂಕಿದರು ಅಂಟೆಂದು ನನ್ನ ಉಸಿರು ಸೋಕಿದರೆ.

ತಾಯ್ತನದ ಸವಿ ಸುದ್ದಿ ಊರೆಲ್ಲಾ ಜೈಕಾರ ಹಾಕಿ ಹೇಳುವ ಈ ಸಭ್ಯ ಜನರು ಏತಕ್ಕೆ ನನ್ನನ್ನು ಮುಂದಾಗುವ ಒಂದು ತಾಯಿಯೆಂದು ನೋಡಲಾರರು ನನ್ನ ತಮ್ಮಂತೆ ನಾನು ಒಂದು ಜೀವಿಯೆಂದು ಕಾಣಲಾರರು.

ಮನೆಯ ಸಿರಿ ನಾನಂತೆ ಮನಸ ಮಮತೆಗೆ ಮತ್ತೊಂದು ಹೆಸರು ಸ್ತ್ರೀಯಂತೆ ?
ಮಗಳೊಂದು ಮುದ್ದಾದ ಗೊಂಬೆ
ಪ್ರೇಯಸಿಯು ಹೃದಯದರಸಿ ತಾಯಿಯೇ ಸೃಷ್ಟಿಗೆ ಮೂಲಾಧಾರ ಮಾತಿಗೇನಾ ಇವೆಲ್ಲ ಮೆಚ್ಚುಗೆಯ ಪ್ರಶಂಸೆಪಡೆಯಲೆಂದು.

ಹೆಣ್ಣೊಂದು ಮುಟ್ಟಾಗದೆ ಮಗುವೊಂದು ಹುಟ್ಟುವುದೇನು ?
ಅವಳ ನೋವೆಲ್ಲಿ ತಿಳಿವುದು ಈ ಪುರುಷ ಪ್ರಾಧಾನ ಪ್ರಪಂಚಕ್ಕೆ ಅವನು ಕೂಡ ಜೀವ ಪಡೆವುದು ಒಂದು ತಾಯಿಯ ಗರ್ಭದಲ್ಲೇ.

ತನ್ನ ರಕ್ತ ಮಾಂಸ ಶಕ್ತಿಯನ್ನೆಲ್ಲವು ಧಾರೆ ಎರೆದು ಜೀವ ಕೊಡುವಳು ತಾನು ಸತ್ತು ಮಗುವ ಬದುಕಿಸಿ ಮತ್ತೆ ಪುನರ್ಜನ್ಮ ತಾಳುವಳು ಈ ತಾಯಿ.

ಮನದಲ್ಲಿ ಮಡುಗಟ್ಟ ನೋವು ಮಾತಲ್ಲಿ ಹೇಳಿದರೆ ನಾವು
ಅರಿತೂ ಅರಿಯದಂತೆ ಮುಂದೆಕೇ ಸಾಗುವಿರಿ ನೀವು.

ನಾಚಿಕೆಯ ಮರೆಯಲ್ಲಿ ಮುಚ್ಚಿಡುವೆವು ನಮ್ಮಲ್ಲಿನ ವ್ಯಥೆಯೆಲ್ಲಾ ತಿಳಿಸಿದರೆ ಮತ್ತೆ ನೀವು ಕೇಳುವ ನಿಲ್ಲಲಾರದ ನೂರು ಪ್ರಶ್ನೆಗಳಿಗೆ ಉತ್ತರಿಸಲಾರೆವೆಂದು.

ಹುಟ್ಟಿಗಿರುವ ಮುಟ್ಟು ಸಾವಿಗಿರುವ ಅಂಟು ಮಧ್ಯದಲ್ಲಿ ನಡೆಸುವ ಜೀವನಕ್ಕೆ ಏತಕಿಲ್ಲ ಹೇಳಿ ನೀವೇ ನೊಂದಿಹೆನು ನಾನು ನಾನಿಂದು ಒಂದು ಹೆಣ್ಣೆಂದು.

- ಚುಕ್ಕಿ

31 Oct 2017, 06:45 pm

ಹಾಲಾಯಿತೆ- ಹಾಲಾಹಲ!

ಹೆಗಲೇರಿ ಕುಣಿದು
ಮಡಿಲಲ್ಲಿ ಬೆಳೆದ ಮಗು
ಮಸಣದ ಹಾದಿ ತೋರುವಂತಾಯಿತೆ ಇಂದು!

ಕಮಜದ ಗೂಡು
ಸಿಹಿಯಾಯಿತು ನೋಡು
ದೇವಾನ್ನವು ನಂಜಾಯಿತೆ ಇಂದು!

ಹಸುಗೂಸನು ಹೊರನೂಕದಾದೆ
ರೆಕ್ಕೆಯುಳ್ಳ ಹಕ್ಕಿಯ ಬಂದಿಸಲೋದೆ
ನೀ ಪಟ್ಟ ಶ್ರಮವ ಯಾರು ಲೆಕ್ಕಿಸುವರಿಂದು!

ಒಡಹುಟ್ಟಿದವರ ದಡ ಸೇರಿಸಿದೆ
ತಾಯಿಗಾಗಿ,ತ್ಯಾಗದ ಮೇರೆ ಮೀರಿದೆ
ಸರ್ವಸ್ವವನ್ನೂ ತ್ಯಜಿಸಿ ನೀ ಒಂಟಿಯಾದೆ!

ನಿನ್ನ ಗಡಸುತನವ ಎತ್ತಿ ಹಿಡಿದರು
ನಿನ್ನ ನಿಷ್ಕಲ್ಮಶ ಪ್ರೀತಿಯ ಮರೆತರು
ನಿನ್ನವರ ದೃಷ್ಟಿಯಲ್ಲಿ ನೀನಾದೆ ಕಡುವೈರಿ!

ಮೂರು ದಶಕಗಳ ಕಾಲ
ಹೊತ್ತೆ ನೀ ಸಂಸಾರದ ಭಾರ
ಮಾಡಿದೆಲ್ಲ ,ಮೂರು ತಾಸಿನಲ್ಲಾಯಿತು ಸಂಹಾರ!

ನೀ ಮಾಡಿಟ್ಟ ಆಸ್ತಿಯ ನೀ ಹಾಕಿಕೊ
ನಿನ್ನ ಎದೆಯ ಮೇಲೆ, ಆಸಿಕೋ
ಎಂದರೆ, ನೀ ಸಲಹಿದ ಕಂದಮ್ಮರಿಂದು!

ಮೌನ ಆವರಿಸಿತು
ಮೌಲ್ಯ ಮರೆಯಾಯಿತು
ನಂದಾದೀಪವಾಗಿ ಬೆಳಗಿದ ಜ್ಯೋತಿ ನಂದಿತು!




ಶಾರಧ

- ಶಕುಂತಲಾ

31 Oct 2017, 04:24 pm

ದೂರ ದೂರ....

ಮುಗಿಲ ಒಳಗೆ ನಾನು
ನೀನು ಜೂತೆಯಾಗಿ
ಆ ಕಡಲಾಚೆ ಯಲ್ಲು
ನೀನು ನನ್ನ ಜೂತೆಯಾಗಿ.....

ಪ್ರೀತಿ ಇಲ್ಲದ ಭೂಮಿ ಯಲ್ಲಿ
ನಾನು ನೀನು ದೂರ ದೂರ
ಯಾರು ಇಲ್ಲದ ಆ ಊರಲ್ಲಿ
ನಾನು ನೀನೆ ರಾಜ ರಾಣಿ ಯಾಗಿ
ಸೇರಿ ಹೂಗುವ ಜೂತೆಯಾಗಿ...

ನಮ್ಮ ಪ್ರೀತಿ ಯುಗದಾಚೆಗು
ಸಾಗಿ ಹೂಗಲಿ ಅಲೆಯಾಗಿ
ಅಲ್ಲಿ ನಿನಗೆ ನಾನು ನನಗೆ ನೀನು
ಜೂತೆಯಾಗಿ ಹೂಗುವ ದೂರ ದೂರ .......

ಅರ್ಥ ವಾಗದ ಲೋಕಾದಲ್ಲಿ
ನಮ್ಮ ಪ್ರೀತಿ ಅರ್ಥ ವಾಗದ
ರೀತಿ ಊಳಿದು ಬಿಡಲಿ......

- ರಾಗಸಿರಿ....

31 Oct 2017, 03:42 pm

ಹ್ರದಯದ ವ್ಯೆಥೆ.

ಅವಳ ಪ್ರೀತಿಸತೊಡಗಿದೆ ನಾ ಒಂದು ದಿನ,
ಅದು ಅವಳಿಗೆ ತಿಳಿಯಿತು ಮುಂದೊಂದು ದಿನ.
ಆಕೆ ಹೇಳಿದಳು ನಿನ್ನನೆಂದು ಪ್ರೀತಿಸೆನು ನಾ,
ಆದರು ಬಿಡಲಿಲ್ಲ ಅವಳ ಪ್ರೀತಿಸುವುದ ನಾ.

ದಿನ ಕಳೆಯುತ್ತಾ ಬಂದಂತೆ ಒಂದುದಿನ!
ಸ್ನೇಹಿತರಿಗೆಲ್ಲ ತಿಳಿಯಿತು ನನ್ನ ಪ್ರೀತಿಕಥನ,
ಅಂದೇ ಎದುರಾದಳು ನನ್ನ ಪ್ರೀತಿಯ ಸುಮನ,
ಶುರುಮಾಡಿದಳು ನಮ್ಮ ಮೊದಲ ಕದನ.

ಕಂಡಳು ನೇರವಾಗಿ ನನ್ನ ಹೆತ್ತವರನ್ನಾ!
ತಿಳಿಸಿಬಿಟ್ಟಳು ನಡೆದ ಎಲ್ಲ ವಿಷಯವನ್ನಾ,
ಹೆತ್ತವರ ಪ್ರೀತಿ! ಬೈಯಲಿಲ್ಲ ಮನೆಯಲಿ ಆ ದಿನ,
ಮುಂದುವರಿಸಿದೆ ಅರಿಯದೆ ನಾ ಪ್ರೀತಿಯನ್ನ.

ಒಂದೆರಡು ವರುಷ ಕಳೆದ ಮೇಲೆ,
ನೊಡಿದೆ ಆಕೆಯ ನಾ!, ಬೈಕಿನಮೇಲೆ.
ತಿಳಿಯಿತು ಮುಂದೆ ಕುಳಿತವ ಅವಳ ಪತಿ,
ಏನಾಗಿರಬೇಕು ಆಗ ನನ್ನ ಹ್ರದಯದ ಸ್ಥಿತಿ?.

- ಚಿರು

31 Oct 2017, 03:37 pm