ಇನಿಯ ನೀನೆಕೆ ಇಷ್ಟು ದೂರ
ಬರಬಾರದೆ ನಿನ್ನ ಜೀವದ ಕಡೆಗೆ
ಹಗಲು ರಾತ್ರಿ ಕಾಯುತಿದೆ ಈ ಜೀವ ನಿನಗಾಗಿ
ನಿನ್ನ ಅಗಲಿ ಅರೆ ಷಣವು ಇರಲಾರೆ ಇನಿಯ
ಒಬ್ಬಳೆ ನಾನು ಇಲ್ಲಿ ಬಯವಾಗಿದೆ ಏಕೂ
ಏನು ಮಾಡಲಿ ಎಲ್ಲಿ ನೂಡಲಿ ಅಲ್ಲಿಯು
ನಿನ್ನ ದೆ ನೆನಪು......
ಕಣ್ಣು ಮುಚ್ಚಿ ದರು ನಿನ್ನ ನಗು
ನನ್ನ ನು ಬಡಿದೆಸಿದೆ......
ಒಬ್ಬಳೆ ಕೂತು ನಿನ್ನ ಮಾತು ಕೆಳಬೇಕಿದೆ
ಬಳಿ ಬಾರೆಏನು.....
ನಿನ್ನ ಮಡಿಲಲ್ಲಿ ಮಗುವಾಗಿ ಮಲಗಬೇಕಿದೆ
ಬಂದು ಬಿಡು ಬೇಗನೆ ....
ನಿನಗಾಗಿ ಕಾಯುತಿಹೆನು ಓ ಇನಿಯ.....
ನೆನಪಲ್ಲಿ ನೋಯುತಿದೆ ಈ ಹೃದಯ
ನೋವಲ್ಲಿಯೇ ಅಳಿಯುತಿದೆ ಹರೆಯ
ನೀನು ಕಾಣದಾದೆಯ ಇನಿಯ
ಒಮ್ಮೆ ಹಿಂತಿರುಗಿ ಬರಲಾರೆಯ
ನಿನ್ನಲಿನ್ನೂ ಮನ್ನಿಸಲಾಗದ ಮುನಿಸಿದೆ
ನನ್ನೊಳಗೆ ಇನ್ನೂ ಪ್ರೀತಿಯು ಉಳಿದಿದೆ
ಕಣ್ಣ ನೀರು ಕೆನ್ನೆ ಸೋಕಿ ಮುತ್ತಿಕ್ಕಿದೆ
ಈ ಹೃದಯ ನಿನಗಾಗೆ ಕಾಯುತಿದೆ
ಸುತ್ತಲೂ ಇದ್ದರು ನನಗಾಗಿ ಜೊತೆಗೆ ಎಲ್ಲರೂ
ಬೇಕೆನಿಸುತ್ತಿಲ್ಲ ನಿನ್ನ ಹೊರತು ಇನ್ಯಾರು
ನಿನ್ನ ನೆನಪುಗಳಿಗೆ ಮನಸಾಗಿದೆ ತವರೂರು
ಕೊನೆಯಿಲ್ಲದಾಗಿದೆ ಮರುಗುತಿದೆ ಹೃದಯದೂರು
ಕಳೆದೋಗಲಿ ಇನ್ನೂ ಹತ್ತಾರು ವರುಷ
ಇಲ್ಲದಾಗಲಿ ನನಗೆ ಅಳಿದುಳಿದ ಹರುಷ
ಕಾಯುವೆನು ನಾ ನಿನಗಾಗಿಯೇ ಪ್ರತಿ ನಿಮಿಷ
ಬರುವೆಯಾ ನೀನು ನನ್ನ ಪ್ರೀತಿಯರಿತು ಎನ್ನರಸ
ಕನಸುಗಳು ದಾರಿ ಕಾಣದೆ ಕಳೆದೋಗುವ ಮುನ್ನ
ಕಣ್ಣ ಒಡಲಲಿ ಕಡಲೇ ಹರಿದು ನೀರು ಬತ್ತುವ ಮುನ್ನ
ನಿನಗಾಗಿಯೇ ಕಾದು ನನ್ನುಸಿರು ಹಾರಿ ಹೋಗುವ ಮುನ್ನ
ನೀ ಒಮ್ಮೆ ಹಿಂತಿರುಗಿ ಬಂದು ಸೇರಿಬಿಡು ನನ್ನ
ಕಣ್ಣ ಹನಿಗಳು ಮರೆತರು ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ , ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು.....
ನಾ ಕಂಡ ಅಂದಿನ ಕನಸು
ಮಿಂಚಿನಾತಾಯಿತು ಇಂದಿನ ನೆನಪು
ನೆನಪುಗಳ ನಾವೆಯಲಿ ಬದುಕಿದೆನು ನಾನು
ಆದರೆ ವಿದಿ ಬರೆಯಿತೋ ಒಂದು ಕಥೆ ಯ
ಆ ಕಥೆಯಲ್ಲಿ ಸಿಡಿಲೋಂದು ಬಡಿದಿತು
ಆ ಸಿಡಿಲೆಂಬ ಅಬ್ಬರಕೆ ಮರೆಯಾಗಿ ಹೂಯಿತು
ನನ್ನ ನೆನಪುಗಳ ನಾವೆ
ಜೀವನದ ಕಥೆಯೆ ಮುರಿದು ಬಿಟ್ಟಿದೆ
ಅದನ್ನು ಸರಿ ಮಾಡುವ ಸೂನೆ ಮಳೆ ಸುರಿಯುವುದಾದರು ಯಾವಗ ನೆನಪುಗಳ ನಾವೆಯಲಿ ಬದುಕುತಿರುವೆ ನಾನು.....
ಮಾನವ ಹೊತ್ತು ಉರಿಯುತಿದೆ ಧರೆ
ಇದು ನಿನ್ನ ಜೀವಕ್ಕಿದ್ದ ಮೂಲ ಆಸರೆ
ಕಳಚು ಇಂದೇ ನಿನ್ನ ಬುದ್ದಿಗಂಟಿರುವ ಪೊರೆ
ನೀನಿಡುವ ಮುನ್ನ ಬದುಕಿಗಾಗಿ ಸಹಾಯದ ಮೊರೆ
ತಲೆಗೇರಿದೆ ಆಧುನಿಕ ಐಷಾರಾಮಿ ಜೀವನದ ನಿಶಾ
ಮಾಡುತಿದೆ ಅದು ಇಡೀ ಮಾನವ ಸಂಕುಲವ ನಾಶ
ನಿನ್ನ ದುರ್ಮಾರ್ಗವಾಗಿದೆ ಇತರೆ ಜೀವಿಗಳಿಗೂ ಪಾಶ
ಎಚ್ಚೆತ್ತುಕೊ ಭೂ ಸಂಕುಲವೇ ತಲುಪುವ ಮುನ್ನ ವಿನಾಶ
ನಾಡು ಕಟ್ಟುವೆನೆಂದು ಮಾಡಿರುವೆ ಕಾಡುಗಳ ಹರಣ
ಕಡಿದ ಕಾಡು ಜೊತೆಗೆ ಸೆಳೆದು ಹೋಯ್ತು ಜೀವಿಗಳ ಪ್ರಾಣ
ಹಿಂದೆ ನಿಂತು ಕಾಪಾಡಿದ್ದ ಜೀವಿಗಳ ಸಾವು ಮಾಡಿದೆ ನಿನ್ನ ನಿತ್ರಾಣ
ಉಳಿಸವುಗಳ ನೀನು ಕೂಡ ಹೊಂದುವ ಮೊದಲೆ ಮರಣ
ಎಷ್ಟು ತುಂಬಿಟ್ಟಿದ್ದರೂ ನೀನು ಧನ ಕನಕ
ತಂದುಕೊಡುವುದಿಲ್ಲ ಉಸಿರಾಡಲು ಆಮ್ಲಜನಕ
ಎಲ್ಲಿ ನೋಡಿದರು ತಲೆ ಎತ್ತಿದೆ ಕಾಂಕ್ರೀಟ್ ಕಾಡು
ಮುಂದೆ ನಿನಗಿದೆ ನರಕ್ಕಿಂತಲೂ ಕೆಟ್ಟದಾದ ಪಾಡು
ಹನಿ ನೀರಿರದೆ ಒಡಲ ಬಿರಿದು ಭುವಿ ತಬ್ಬಿರುವಳು ನೋವ
ಇನ್ನೆಲ್ಲೋ ನಿಲ್ಲದೆ ಧೋ ಎಂದು ಸುರಿದು ಮಳೆ ತಂದಿದೆ ಸಾವ
ಅತ್ತೆಲ್ಲೋ ಜೀವ ಹೊತ್ತೊಯ್ಯುವ ರವಿ ಬೀಸಿ ಬಿಸಿಲ ಚಾಟಿ
ಈ ನೋವು ಸಾವಿನ ಕೃತ್ಯಕ್ಕೆಲ್ಲ ನೀನೇನೆ ಮೂಲ ಮೇಟಿ
ಕರಗುತ್ತಿದೆ ಮಂಜು ಹನಿಯ ರೂಪ ತಾಳಿ
ಹನಿ ಸೇರಿದೆ ಕಡಲ ಕೊಲ್ಲಲು ನಿನ್ನ, ಅಹಂಕಾರವ ಸೀಳಿ
ನಿಸರ್ಗ ವಿಕೋಪಗಳು ತೋರುವ ಮುನ್ನ ತಮ್ಮ ಪ್ರತಾಪ
ತಣಿಸು ನೀನು ಈ ಧರೆಯ ವಾತಾವರಣದ ಬಿಸಿಯ ತಾಪ
ನಿನಗಿಲ್ಲ ಉಳಿವು ನೀನೊಬ್ಬನೆ ಬದುಕಿದರೆ ಭೂಮಿ ಮೇಲೆ
ನಿನಗುಳಿವು ಇರವುದು ಉಳಿದರೇನೆ ಎಲ್ಲ ಜೀವ ಸೆಲೆ
ನಿನ್ನ ಸಾವಿನ ಮನೆಗೆ ನೀನೆ ತೋಡುತ್ತಿರುವೆ ಹಳ್ಳ
ತಿಳಿ ನೀನಂಬಿ ಹೊರಟ ಬಾಳ ದಾರಿಯಲಿ ತುಂಬಿರೋ ಜೊಳ್ಳ
ನೀನೇನೆ ಸೃಷ್ಟಿಸೂ ಪ್ರಕೃತಿಯ ವಿರುದ್ಧ ಅದೆಂದಿಗೂ ಕೃತಕ
ನಿನ್ನುಳಿಸಲು ಅವುಗಳ ಉಳಿವು ಅತೀ ಕ್ಷಣಿಕ
ಕೊಡಲಾರವು ಪ್ರಾಕೃತಿಕ ಸಮತೋಲನಕ್ಕೆ ಬೇಕಿರುವ ತೂಕ
ಈಗಲಾದರೂ ನಿನ್ನ ನೀನು ಕಾಪಾಡಿಕೋ ಕಾಡ ಬೆಳೆಸಿ ಉಳಿಸುವ ಮೂಲಕ
ಮರೆತು ಹೋದ ಸಾಲೊಂದು ನೆನಪಾಗಿದೆ
ಆ ಕವಿತೆಯ ಸಾಲಲ್ಲಿ ಬಂದ ಕನವರಿಕೆ ನಿನ್ನದಾಗಿದೆ.
ಖಾಲಿ ಕಾಗದ ಮೇಲೆ ಏನೆಂದು ಗೀಚಲಿ ನಿನ್ನೀ ನೆನಪಲಿ,
ನನ್ನ ಖಾಲಿ ತಲೆಯಲ್ಲಿ ಕವನ ಸಾಲೊಂದು ಬಂತು
ಅದರಲಿ ಮೊದಲು ನೆನಪಾಯಿತು ಆ ನಿನ್ನ ತೊದಲ ಮಾತು.
ಆ ನಿನ್ನ ಸ್ನೇಹದ ಬಿಗಿದಪ್ಪಿದ ಅಪ್ಪುಗೆಯ ಬಿಸಿ ಗಾಳಿಯಲಿ
ನನ್ನ ಮನಸಲಿ ನಿನ್ನ ನೆನಪು ಕದಲಿಸಿತು ತುಸು ತಾಳಿ.
ನನ್ನ ಮನವೆಂಬ ಮರ್ಕಟಕ್ಕೆ ನಿನ್ನ ನೆನಪೇ ಲಗಾಮು,
ನನಗೆ ಯಾಕೋ ಗೊತ್ತಿಲ್ಲ ಈ ನಿನ್ನ ನೆನಪಿನ ತಾಲೀಮು.