ಬಿಸಿಲ ಮರೆತ ಮನಕೆ
ಚಳಿಯ ಕೊರೆತ ಶುರುವಾಗಿದೆ
ನೆನ್ನೆಯೆಂಬ ಚಿಂತೆಗೆ
ನಾಳೆಯೆಂಬ ಚಿತೆ ಜೊತೆಯಾಗಿದೆ
ವಿರಹದಿ ಹರಿದ ಹೃದಯಕೆ
ಒಲವ ನೂಲಿನ ಕೊರತೆ ಇದೆ
ಕಡಲ ದಡದ ಉಸುಕಿಗೆ
ಅಲೆಯ ಕಣ್ಣೀರು ತಿಳಿದಿದೆ |೧|
ಮೋಡವ ಮರೆತ ಹನಿಗಳಿಗೆ
ಸೂರ್ಯನ ಸೆಳೆತ ಶುರುವಾಗಿದೆ
ಮಾತನು ತೊರೆದ ಮನಸಲಿ
ಮೌನದ ಮೊರೆತ ಮಾರ್ಧನಿಸುತ್ತಿದೆ
ಕೆಲವು ದಿನಗಳ ಸಂತೋಷವು
ಹಲವು ದಿನಗಳ ಸಂತಾಪವ ಬಯಸಿದೆ
ದಾರಿ ಕಾಣದೆ ಕಂಗಾಲಾದ ಹಡಗಿಗೆ
ಕಡಲ ಸುಳಿಯ ಒಡಲು ಆಹ್ವಾನ ನೀಡಿದೆ |೨|
ಕಂಗಳ ಅಂಗಳ ತೋಯ್ದಿರಲು
ನೋವಿನ ಮೋಡದಿ ಇಳಿದ ಕಣ್ಣೀರೇ ಕಾರಣವಾಗಿದೆ
ಸಾವಿರ ಸ್ವಪ್ನಗಳ ಸೆರೆಯೊಳಗೆ
ಜೀವವು ಜೀವಾವಧಿ ಸಜೆಯ ಅನುಭವಿಸಬೇಕಿದೆ
ನೆನಪ ನಾವೆಯ ನಾವಿಕ ನಾನಾಗಲು
ಕಾಲದ ಕಡಲು ನನ್ನ ಸಾವ ಸವಿಯಲು ಸಜ್ಜಾಗಿದೆ
ಅಲೆಯ ರಭಸಕೆ ದಡ ಸೇರಿದ ಮೀನಿಗೆ
ಕಡಲಿನ ಕುಟಿಲತೆ ಈಗಷ್ಟೇ ತಿಳಿಯಬೇಕಿದೆ |೩|
ನಾನಿನ್ನು ಅರಿತಿಲ್ಲ ಈ ಜಗತ್ತನ್ನು
ನಾಲ್ಕು ಗೋಡೆಗಳ ಮದ್ಯೆ ಮುಸುಕು ಹಾಕಿ ಕೂರಿಸಿರುವೆ ನನ್ನ ಮನಸ್ಸನ್ನು ಹೊರಗಿನ ಪ್ರಪಂಚದ ಪರಿವೆಯೇ ಇಲ್ಲದಂತೆ.
ಹಾರು ಹಕ್ಕಿಯಾಗುವಾಸೆ ನನ್ನ ಕೊರೆದು ಕಾಡುತ್ತಿದ್ದರು ಕೇಳಲಿಲ್ಲವೆಂದು ಅದರ ಕೂಗು
ಮರೆತಂತೆ ಮರಳಿ ಬಯಸುತಿರುವೆ ಮತ್ತೆ
ನಾನು ಸ್ವಾತಂತ್ರ್ಯಳಾಗಬೇಕೆಂದು ಬಂಧಿಯಾಗಿ ಸ್ವಾರ್ಥಿಗಳ ಬಂಧನದಲ್ಲಿ.
ದಿನೇ ದಿನೇ ಓಡುತ್ತಿದೆ ಕಾಲ ಚಕ್ರ ನೂತನ
ಅಂಶಗಳನ್ನು ಅಳವಡಿಕೊಂಡು ನಿಂತ ನಿರಂತೆ ಮುಂದೊಗಳು ಜಾಗವಿಲ್ಲವೆಂದು ನನ್ನಲ್ಲಿ ನಾನೇ ಹಾಕಿಕೊಳ್ಳುತ್ತಿರುವೆ ಸೀಮಿತ ತಿಳುವಳಿಕೆಯ ಮನಸಿನ ಬಾಗಿಲನ್ನು ಮೌನವೆಂಬೆ ಬೀಗದಿಂದ.
ನೆಡಿಯೇ ಹೆಜ್ಜೆ ನಿನ್ನ ನೆರಳ ತೊರೆದು ಬೆಳಕಿನೆಡೆಗೆ
ಸಂಕುಚಿತ ಮನೋಭಾವದಿ ಕುಂಟಿತವಾದ ಕನಸುಗಳನ್ನು ಕಂಡಿದ್ದು ಸಾಕು ಈ ಕ್ಷಣಕೆ ಮಾತೇಲುವ ಮಂದಿ ಮುಂದಿನ ನಿನ್ನ ನೋವು ನಲಿವಿನಲ್ಲಿ ಭಾಗಿಯಾಗರೆಂದು ತಿಳಿದು.
ಅವಳ ಹಣೆಯಲ್ಲಿ ಕಂಡ ಬಿಂಬ
ಹಚ್ಚು ಹಸಿರು ಮಾಡಿದೆ ನನ್ನ ಮನಸ್ಸಿನ ತುಂಬಾ...
ಅವಳ ಕಣ್ಣಲ್ಲಿ ಕಂಡ ಕಮಲ
ಮಾಡಿದೆ ನನ್ನ ಹೃದಯವನ್ನು ಕೋಮಲ...
ಅವಳು ತೊಟ್ಟ ಹಳದಿ ಬಣ್ಣ
ಹೊದಿಸಿದೆ ಆಕಾಶಕ್ಕೆ ಚಪ್ಪರ...
ಕವನ ಹುಟ್ಟುವುದೆಂದು ಇಲ್ಲಿ ತಿಳಿಯರು ಯಾರು
ಬರೆದರು ಒಂದು ಸಾಲು ಇಲ್ಲಿ ಕೇಳುವರಾರು
ಬರೆದು ಬರೆದು ನನ್ನ ಲೇಖನಿಯ ಮಸಿ ವ್ಯರ್ಥ ಸುಮ್ಮನೆ
ಬರೆದಿಲ್ಲವೆಂದರೆ ನನ್ನ ಮನಸಾಗುವುದು ಮಗುಮ್ಮನೆ
-ಉಮೇಶ್.