Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

8

- Yallaling Haralayya

21 Jul 2026, 01:46 pm

ಪ್ರೀತಿಯ ಮೌನ ರಾಗ

ನಿನ್ನ ಗುಂಗಿನಲ್ಲಿ ಮುಳುಗಿದ ಈ ಮನ,
ನನ್ನ ಹೃದಯದ ಮೌನ ಗೂಡಲ್ಲಿ ಮೂಡಿತು ಗೀತೆಯೊಂದು…
ನಿನ್ನ ನೆನಪು ಮಳೆಯ ಹನಿಯಂತೆ ಬಂದು,
ಮನದ ಆಳದಲ್ಲಿ ಅರಳಿಸಿತು ಒಲವಿನ ಕವಿತೆಯೊಂದು…
ನಿನ್ನ ನಗು ಬೆಳಕಾಗಿ ಹರಿದು,
ನನ್ನ ಬಾಳಿಗೆ ಕನಸಿನ ಬಣ್ಣ ತುಂಬಿತು…
ನಿನ್ನ ಮಾತಿನ ಸಿಹಿ ಸ್ಪರ್ಶದಲ್ಲಿ,
ಮೌನವಾಗಿಯೇ ಹುಟ್ಟಿತು ಪ್ರೀತಿಯ ರಾಗ…

-Bhargavi ✒️

- Bhargavi

18 Jul 2026, 08:18 pm

ಈ ಜನ್ಮ ಭೂಮಿ ನಮ್ಮದು

ಈ ಜನ್ಮಭೂಮಿ,ನಮ್ಮದು
ನಮ್ಮ ಕರುನಾಡು
ನಮ್ಮ ಕರುನಾಡು
ಈ ಮಾತೃಭಾಷೆ ನಮ್ಮದು
ಅದುವೇ ಕನ್ನಡ
ಅದುವೇ ಕನ್ನಡ
ವೈಭವತುಂಬಿಕೊಂಡು ಮೆರೆದ
ನಾಡಗುಡಿಯೂ ನಮ್ಮದು
ಸೌಂದರ್ಯ ಈ ನೋಡುವುದೇ
ಸೌಭಾಗ್ಯ ಸೌಭಾಗ್ಯ ನಮ್ಮದು

ನಮ್ಮನುಡಿಸಿರಿ ಕನ್ನಡಸಿರಿ
ಎಲ್ಲೆಲ್ಲೆಲ್ಲೂ ಕನ್ನಡವೇ
ಕಂಪು ಮೊಳಗಲಿ
ಎಲ್ಲೆಲ್ಲೆಲ್ಲೂ ಕನ್ನಡವೇ
ಇಂಪು ಬೆಳಗಲಿ
ನಮ್ಮ ಮೈಸೂರು ದಸರಾ
ನಮ್ಮ ಕರುನಾಡೇ ಸುಂದರ
ಶ್ರೀ ಚಾಮುಂಡೇಶ್ವರಿ ದರ್ಶನ
ನೋಡುವುದೇ ಸುಂದರ
ಕಾವೇರಿತಾಯಿ ಹರಿದ ನಾಡು
ದಾಸರು ಶರಣರು ನಲಿದ ನಾಡು
ನಮ್ಮ ಕರುನಾಡು ನಮ್ಮ ಕರುನಾಡು
ನಮ್ಮ ಪುಣ್ಯ ಭೂಮಿಗೆ
ವಂದನೆ ಅಭಿನಂದನೆ...

✍️ವೀರೇಶ್ ವಿ ಕುಂಬಾರ ಖೈರವಾಡಗಿ

- Veereshappa v khairawadagi

16 Jul 2026, 05:05 pm

ಮುದ್ದಿನ ಗಿಣಿಯಂತೆ ನಾ ಸಾಕುವೆ (ಜಾನಪದ )

ನನ್ನ ಮನದೊಳಗೆ ರಾಣಿ
ನಿನ್ನ ನೆನಪು ಮೂಡಿದೆ ರಾಣಿ
ನನ್ನ ಕನಸಿನೊಳಗೆ ನೀ
ತುಂಬಾ ಕಾಡಿದೆ ನೀ ಕಾಡಿದೆ
ಯಾವ ಜನ್ಮದ ಪುಣ್ಯವೋ ನೀ ಸಿಕ್ಕಿದೆ
ನೀ ದಕ್ಕಿದೆ ನೀ ಸಿಕ್ಕಿದೆ
ನನ್ನ ಹೃದಯದ ರಾಣಿ ನೀನಾದೆ...
ನನ್ನ ಹೃದಯದ ರಾಣಿ ನೀನಾದೆ....

ಮುದ್ದಿನ ಗಿಣಿಯಂತೆ ನಾ ಸಾಕುವೆ
ಬಂಗಾರಿ ನಿನ್ನ ನಾ ನಿನ್ನ ಮುದ್ದಿಸುವೆ
ಬೆಟ್ಟದಷ್ಟು ಕಷ್ಟವೇ ಬರಲಿ ನಾನಿರುವೆ
ಕಷ್ಟವೇ ಇರಲಿ ಸುಖವೇ
ನಿನ್ನ ಬಳಿಯಲಿರುವೆ ನಿನ್ನಲ್ಲೇ ಇರುವೆ
ನಾ ನಿನ್ನೊಂದಿಗೆ ನಾ ಬಾಳುವೆ...
ನಾ ನಿನ್ನೊಂದಿಗೆ ನಾ ಬಾಳುವೆ..

ಮಲ್ಲಿಗೆ ಮಾಲೆಯಾಹೂ ಚಂದ ನಿನ್ನ ಮೂಡಿಗೆ
ಸಂಪಿಗೆ ಮಲೆಯಾ ಹೂ ಚಂದ ನಿನ್ನ ಮೂಡಿಗೆ
ನೀ ನನ್ನೊಂದಿಗೆ ಬಂದರೆ ಘಮೀಸುವೇ
ಹೂ ಮಾಲೆಯಲಿ ನೀ ಚಂದವೇ ನೀ ಅಂದವೇ
ಅಂದದ ಚಿತ್ತಾರದ ರಾಣಿ ನೀ
ಚಂದದ ಚಿತ್ತಾರದ ರಾಣಿ ನೀ
ಹೃದಯದ ಮಹಾರಾಣಿ ನೀ
ಹೃದಯದ ಮಹಾರಾಣಿ ನೀ

✍️ವೀರೇಶ್ ವೀ ಖೈರವಾಡಗಿ








- Veereshappa v khairawadagi

15 Jul 2026, 04:51 pm

ಅಪರಂಜಿ ಬಣ್ಣದ ಚಲುವೆ

ಅಪರಂಜಿ ಬಣ್ಣದ ಚಲುವೆ.
ಎಷ್ಟು ಸುಂದರ...
ನಿನ್ನ ಕಣ್ಣ ಬೆಳಕಿಗೆ ಹೊಳಿತಾವೇ
ಎನೂ ಸುಂದರ
ಬಳ್ಳಿಯಲಿ ಮೊಗ್ಗುಗಳು ಹರಳಿದವು
ಇನ್ನೂ ಸುಂದರ....

ನಿನ್ನ ಕೆನ್ನೆಯಲಿ ಮೂಡಿದ
ಆ ಬಾನ ಚಂದಿರ...
ಹುಣ್ಣಿಮೆಯ ಬೆಳಕೇ ನೀನು
ಸೌಂದರ್ಯದ ರಾಣಿ ನೀನು
ಈ ಭೂರಮೆಯೇ.. ಸುಂದರ..

ಕನ್ನಡದ ಮಣ್ಣಿನ ಮಗಳೇ..
ಕನ್ನಡದ ಕಸ್ತೂರಿ ಸುರಿಮಳೆ
ಎಲ್ಲೆಲ್ಲೂ ಹೋಗುವ ನನ್ನ ಮನಸ
ನಿನ್ನ ಪಡಿಯುವ ಹೃದಯದ ಕನಸ

ಚಂದದ ಬಣ್ಣದ ಚಲುವೆ
ನೀನೇಷ್ಟು ಅಂದವೇ
ಮನದಲಿ ನೀ ತುಂಬಿರುವೆ
ನನ್ನೊಳಗೆ ಹೃದಯದಲಿ
ಕಾಡುತಳಿರುವೆ.....
ನೀನೆಂದು ಪ್ರೀತಿ ಹೃದಯದವೇ...

✍️ವೀರೇಶ್ ವಿ ಕುಂಬಾರ ಖೈರವಾಡಗಿ
ಕವಿ ಪರಿಚಯ
ಸ್ಥಳ :ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ಖೈರವಾಡಗಿ ಗ್ರಾಮ
ವಿದ್ಯಾಭ್ಯಾಸ : ಎಲ್ ವಿ ಡಿ ಕಾಲೇಜು ರಾಯಚೂರು
ಅನುಭವ : ಮುಕ್ತ ಮುಕ್ತ, ಮಿಂಚು 'ಶುಭಮಂಗಳ ಧಾರಾವಾಹಿಗಳ ಸಹ ಸಂಕಲನ.
ಹವ್ಯಾಸಗಳು : ಕವನಗಳು, ಸಾಹಿತ್ಯ, ಜಾನಪದ,
ಬರೆಯುವದು, ಓದುವುದು.
ಕವನ ಸಂಗ್ರಹಣೆ
"ಕನ್ನಡ ಕವನ ಇನ್ "ವೆಬ್ಸೈಟ್



















- Veereshappa v khairawadagi

13 Jul 2026, 04:45 pm

ಇನ್ಸ್ಟಾಗ್ರಾಮ್ ನಲ್ಲಿ ನೀ ಇಷ್ಟವಾದೇ

ಇನ್ಸ್ಟಾಗ್ರಾಮ್ ನಲ್ಲಿ ನೀ ಇಷ್ಟಾವಾದೇ
ಫೇಸ್ಬುಕ್ ನಿನ್ನ ಫೋಟೋ ನೋಡಿದೇ
ವಾಟ್ಸಪ್ಪ್ ನಲ್ಲಿ ನಿನ್ನ ವಿಡಿಯೋ ನೋಡಿದೇ
ಟ್ವಿಟ್ಟರ್ ನಲ್ಲಿ ನೀ ಮೆಸೇಜ್ ಮಾಡಿದೆ
ಕಾಮೆಂಟ್ ಬಾಕ್ಸ್ ಕಾಮೆಂಟ್ ಮಾಡಿದೆ
ಇಷ್ಟೆಲ್ಲಾ ಆದಮೇಲೆ ಇನ್ನೇನಿದೆ...

ನಾ ನಿನ್ನ ಜೊತೆಯದೆ ಚಲುವೆ
ನೀ ನನ್ನ ಉಸಿರಾದೆ ಚಲುವೆ
ಬಾ ಬಾರೆ ಹೋ ಚಲುವೆ
ಎಂದೆಂದಿಗೂ ನಾ ನಿನ್ನ
ಮರೆಯಲಾರೆ ಓ ಚಿನ್ನ
ನಮ್ಮಿಬ್ಬರ ಒಂದೇ ಟೀನ್ಏಜ್
ನಾವು ಹೋಗೋಣ ಕಾಲೇಜು

ಕಳೆದರೂ ಬಾರದ ವಯಸ್ಸು
ನಮ್ಮಿಬ್ಬರ ಒಂದೇ ಕನಸು
ಜೊತೆಯಾಗಿ ಇರೋಣ
ಜೊತೆಗೆ ನೆಡೆಯೋಣ
ಬದಲಿಸಬೇಡ ನಿನ್ನ ಮನಸು
ಕುಡಿದಾಸೆ ನೀ ಈಡೇರಿಸು
ಪ್ರೀತಿಯಲಿ ಇರಲಿ ಸಿಹಿ ಮುತ್ತು
ಪ್ರೀತಿಯ ದೋಣಿಯಲಿ ಸಾಗೋಣ
ಪ್ರೀತಿ ಸಾಂಬ್ರಾಜ್ಯ ಕಟ್ಟಿ ಮೇರಿಯೋಣ
ಜೋಡಿ ಹಕ್ಕಿಯಂತೆ ಹಾರೋಣ
ಪ್ರೀತಿ ಗೂಡು ಸೇರಿ ಹೋಗೋಣ

✍️ ವೀರೇಶ್ ವಿ ಖೈರವಾಡಗಿ











- Veereshappa v khairawadagi

13 Jul 2026, 11:20 am

ನೋವಿನ ಅರ್ಥ ಬಲ್ಲವರು ಯಾರು?

ನೋವು..
ಅನುಭವಿಸುವುದಕ್ಕೋ?ಮರೆಯುವುದಕ್ಕೋ??
ಹೆದರಿಸುವುದಕ್ಕೋ?ಎದುರಿಸುವುದಕ್ಕೋ??
ಕಲಿಸುವುದಕ್ಕೋ? ಕೆರಳಿಸುವುದಕ್ಕೋ??
ನೋವುಂಡವನ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲೇ
ಅಡಗಿದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ.

ನೋವು ನೇರ,ಮನಸಿಗೆ ಗುರಿ ಇಟ್ಟ ಬಾಣ.
ಮನಸೊಳಗೆ ಮನೆ ಮಾಡಿ ಕುಳಿತುಕೊಳ್ಳುವ ಭ್ರೂಣ.
ಹೆರಿಗೆ ಯಾಗದೆ ಪ್ರತಿದಿನ ಹಿಂಡುವುದು ಪ್ರಾಣ.
ಕೊನೆಯಿಲ್ಲ ಇದಕೆ ಮುಗಿಯುವವರೆಗೆ ನಮ್ಮ ಜೀವನ ಯಾಣ.

- Manju

12 Jul 2026, 09:01 pm

ಯಾವ ಊರಿನ ಚಂದದ ಚಲುವೆ

ಯಾವ ಊರಿನ
ಚಂದದ ಚಲುವೆಯೋ
ಮಾತಾಡೋ
ಮುದ್ದು ಗಿಣಿಯೋ
ಎನೂ ಚಂದವೋ
ಎನೂ ಅಂದವೋ
ಕೆನ್ನೆಯೊಂದು
ಕೆಂಪು ಕಸ್ತೂರಿಯೋ
ಕಣ್ಣುಗಳೇಲ್ಲ
ಅರಳಿದ ಕೆಂದಾವರೇಯೋ
ಮನದ ಮಲ್ಲಿಗೆ
ಪರಿಮಳಿವಳು

ಹಲ್ಲುಗಳು ದಾಳಿಂಬೆ
ನೋಡಲು
ದಂತದಗೊಂಬೆ
ಮುತ್ತಿನರಾಶಿಯಲಿ
ಮುದ್ದಾದ ಗೊಂಬೆ
ಚಲುವಿಗೆ ಹೊಲಿಸಲಾಗದ ಗೊಂಬೆ
ಚಂದಕ್ಕೆ ಚಂದ ಚಲುವಾದ ಗೊಂಬೆ

ನಗುವಿನಲಿ ನರ್ತಿಸುವ ಚಲುವೆ
ಬೆಲೆ ಕಟ್ಟಲಾಗದ ಮಾಣಿಕ್ಯ ಚಲುವೆ
ನನ್ನಾಣೆ ನಿನ್ನ ನಂಬಿದೆ ನನ್ನೊಲವೇ
ಬಾಡಿಹೋಗದ ಚಂದುಳ್ಳ ಚಲುವೆ
ನಕ್ಷತ್ರದ ಗುಂಪಲ್ಲಿ ಮಿನುಗೋ ಹೊವೇ

✍️ವೀರೇಶ್ ವಿ ಖೈರವಾಡಗಿ


















- Veereshappa v khairawadagi

11 Jul 2026, 10:32 am

ಮಾಯದ ಲೋಕದೊಳಗೆ

ಲಾ ಲಾ.....ಹೊ ಹೊ....
ಚಲುವೆ ನೀ ಬಂದೆ
ಮಲ್ಲಿಗೆ ಪರಿಮಳ ಎಲ್ಲೆಲ್ಲೂ ಹರಡಿದೆ
ಸುಗಂಧ ಸುವಾಸನೆ ಎಲ್ಲೆಲ್ಲೂ ಬೀರಿದೆ
ಮಾಯದ ಲೋಕದೊಳಗೆ
ನೀ ಬಂದೆ ಹೃದಯದ ಅರಮನೆಗೆ
ನೀ ಬಂದೆ ಹೃದಯದ ಆರಮನೆಗೆ
ನಿನ್ನ ಮಾತು ಮುತ್ತು
ನಿನ್ನ ಮಾತು ಮುತ್ತು
ಮನಸು ನಿನ್ನ ಸಿಹಿ ಮುತ್ತು
ಮನಸು ನಿನ್ನ ಸಿಹಿ ...
ಮನದೊಳಗೆ ಮನೆ ಕಟ್ಟಿ
ಮನಸೆಳೆದ ಸುಂದರಿ, ವಯ್ಯಾರಿ
ಮನಮೋಹಕ ಮದನಾರಿ
ನೀನ್ನದೆ ಸೌಂದರ್ಯ, ಮುದ್ದು
ಮುದ್ದು ಸುಂದರಿ
ಮನಮೆಚ್ಚಿಸೋ ಸಿಂಗಾರಿ
ಮನದೊಳಗೆ ಮನೆ ಕಟ್ಟಿ
ಮನಸೆಳೆದ ಸುಂದರಿ, ವಯ್ಯಾರಿ
ಮನಮೋಹಕ ಮದನಾರಿ
ನೀನ್ನದೆ ಸೌಂದರ್ಯ,
ಮುದ್ದು ಮುದ್ದು ಸುಂದರಿ
ಮನಮೆಚ್ಚಿಸೋ ಸಿಂಗಾರಿ
ನಿನ್ನಂದವ ನೋಡಿದೆ ವಯ್ಯಾರಿ
ನಿನ್ನಂದವ ನೋಡಿದೆ ವಯ್ಯಾರಿ
ಧರೆಗಿಳಿದೆ ಹುಣ್ಣಿಮೆ.... ನೀ

✍️ ವೀರೇಶ್ ವಿ ಖೈರವಾಡಗಿ

- Veereshappa v khairawadagi

10 Jul 2026, 06:33 pm

ನನ್ನೊಲವೇ ಅಂತರಂಗದ ಹೃದಯದವೇ

ನನ್ನೊಲವೇ ಅಂತರಗದ ಹೃದಯವೇ
ನಿನ್ನ ನೆನಪು ಆನಂದವೇ
ನಿನ್ನೊಂದಿಗೆ ಬೆರತ ಸಂಗೀತ ರಾಗವೇ
ಚಲುವೆ ನಿನ್ನ ಕಣ್ಣೋಟವೇ
ಬಾನಿಂದ ಚೆಲ್ಲಿದ ಬೆಳದಿಂಗಳ ಸುಮವೇ
ನೀಷ್ಟವೇ ಎಷ್ಟೊಂದು ಸುಂದರವೇ
ಸಂಭ್ರಮವೇ ಸಂತೋಷವೇ

ನಿನ್ನ ನೆನಪೊಂದು ಮದುರ ಕ್ಷಣ
ನಿನ್ನಿಂದ ಹುಕ್ಕಿತು ನವ ಯವ್ವನ
ಓ ಚಲುವೆ ನಾ ನಿನ್ನ ಜೀವನಾ
ಎಂದೆಂದಿಗೂ ನಾ ಮರೆಯದೆ ಪ್ರೇಮಿ ನಾ

ಎಲ್ಲಿಂದ ಎಳ್ಕೊಂಡು ಬಂದೆ ನನ್ನ ಮನಸು ಪ್ರತಿ ದಿನವು ಕಾಡುವ ನಿನ್ನ ಕನಸು
ನಾ ನಿನ್ನೊಂದಿಗೆ
ನೀ ನನ್ನೊಂದಿಗೆ
ಇರವೇ ಸಿರಿಸಂಪಿಗೆ ಇರುವೆ ಸಿರಿಸಂಪಿಗೆ

ನನ್ನ ಮನದ ಅಸೆ ಹೇಳುವೆ ಈಗ
ಚಲುವೆ ಚಂದದ ಮೊಗ್ಗು ಈಗ
ನನ್ನ ಅಂತರಂಗದ ವೀಣೆ ನುಡಿಸು ಬೇಗ
ಹಾಡುವೇನು ನಾನು ಸುಂದರ ರಾಗ

ನನ್ನೊಲವೇ ಅಂತರಗದ ಹೃದಯವೇ...

✍️ ವೀರೇಶ್ ವಿ ಖೈರವಾಡಗಿ

















- Veereshappa v khairawadagi

10 Jul 2026, 01:44 pm