Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆ ಕಣ್ಣುಗಳು..

ಆ ಕಣ್ಣುಗಳು ಕಾಡುತ್ತಿವೆ ನನ್ನ,
ಮತ್ತೊಮ್ಮೆ ಮಗದೊಮ್ಮೆ
ಎತ್ತೆತ್ತ ಹೋದರೂ ಬಂದು
ಬೆಂಬಿಡದೆ ನೋಡುವವು
ಕೊಂದು ಬಿಡುವಂತೆ.

ಎಲ್ಲಿದ್ದೆನೋ ನಾನು,
ಹೇಗೆ ಸಿಗೆ ಬಿದ್ದೆನೋ ಇವಕ್ಕೆ
ತಪ್ಪಿಸಿಕೊಳ್ಳಲಾಗದ ಕೈಕೋಳ
ತಪ್ಪಿಕೊಂಡರೊಮ್ಮೆ ನಿರುಮ್ಮಳ.

ದೃಷ್ಟಿಯಿಟ್ಟು ನೋಡಲಾರೆ,
ತಿವಿದು ಹಾಕುವಂತಹ ಮೊನಚು ನೋಟ
ನಿಲ್ಲದಾಗಿದೆ ನನ್ನೀ ಓಟ
ತಿರುಗಿ ನೋಡಿದರೆ ಕಂಗಳ ಕಾಟ
ಕೊನೆಯಾಗುವುದೆಂದೋ ಈ ಬದುಕಿನಾಟ.

- ಶ್ರೀಗೋ.

12 Oct 2017, 08:27 pm

ಉಸೀರು ನೀನೆ.....

ಬತ್ತಿದ ಮನದಲಿ ನೀನಾದೆ
ಹೂಸ ಕನಸಿನ ಅಲೆ,,
ಕಲೆ ಮರೆತ ಶಿಲ್ಪಿಯ ಕೈಯಲಿ
ನಿನಾದೆ ಹೋಸ ಶಿಲೆ,,

ನಿನಾದೆ ಈ ನಿಂತ ಹೃದಯಕ್ಕೆ
ಉಸಿರು ನಲ್ಲೆ....
ಹಸಿರ ಮನಕ್ಕೆ ಬಣ್ಣದ
ಚಿಟ್ಟೆಯಾಗಿ ಬಾರೇ ಬಾಲೆ.....!

- ಮಳೆಯಲ್ಲಿ ಜೋತೆಯಲ್ಲಿ

12 Oct 2017, 07:09 pm

*ಸೋಲಿನ ಪಯಣ*

ನಿನ್ನದೇ ಭಾವಚಿತ್ರದ ಎದುರಿನಲಿ
ಕವನ ಗೀಚುತ್ತಿರುವೆ ನಾನಿಲ್ಲಿ
ನಿನ್ನ ಮನದ ಮಾತುಗಳ ಕೇಳಲು
ಹೃದಯ ಬಯಸುತ್ತಿದೆ ನನಗಿಂದು!

ನಿನ್ನ ಮೊಗವ ನೋಡಲು
ಬಯಸುತ್ತಿದೆ ಮನವಿಂದು...
ಕನಸು ನನಸಾಗುವ ಮೊದಲೇ
ನನ್ನಿಂದ ದೂರಾದೆ ಯಾಕಿಂದು..

ನಿನ್ನೊಂದಿಗೆ ಕಳೆದ ನೆನಪುಗಳು
ಹೃದಯವ ಚುಚ್ಚಿ ಕೊಲ್ಲುತ್ತಿದೆ ಇಂದು,
ಈ ಜೀವ ಸಾಕೆನಿಸಿದೆ ನನಗೆ
ಎಲ್ಲಿದ್ದರೂ ನೀ ಸುಖವಾಗಿರು ಎಂದೆಂದೂ!

ಸಾಗುತ್ತಿದೆ ನನ್ನೀ ಪಯಣ
ಯಾರ ಅರಿವಿಗೂ ನಿಲುಕದಂತೆ
ಏಕಾಂಗಿಯಾಗಿ ಸಾಗಿರುವೆನು
ಮರಳಿ ಬಾರದ ಲೋಕಕ್ಕಿಂದು!

ಪ್ರಿಯಾಂಕ✍

- ಪ್ರಿಯಾಂಕ

12 Oct 2017, 06:30 pm

....

ಕಥೆ ಬರೆಯಲು ಅಣಿಯಾದೆ
ಪಾತ್ರಗಳೇ ಗೊತ್ತಿಲದೇ ..
ಪಾತ್ರಗಳು ಪರಿಚಯ ಆಗೋ ಒತ್ತಿಗೆ
ಕಥೆಯೇ ಮರೆತು ಹೋಗಬೇಕೆ..

- ಗಾದೆಪ್ಪ

12 Oct 2017, 05:27 pm

ಜೀವನ ಪಯಣ

ಸೋಜಿಗ ಈ ಜೀವನ ಪಯಣ‌
ತನ್ನೊಳಗಿಟ್ಟಿದೆ ಕಾಣದ ಹಲವು ತಾಣ
ನೋಡುತ ಸಾಗು ಎಂದಿಗೂ ಆಗದೆ ನಿತ್ರಾಣ
ವಿರಮಿಸು ಸಿಕ್ಕಾಗ ಒಂದೊಂದು ನಿಲ್ದಾಣ

ತುಟಿಯ ಮೇಲಿರಲೊಂದು ಹೂ ನಗೆ
ಮನಸಿನೊಳಗೆ ‌ಬೆಳೆದಿರಲಿ ಪ್ರೀತಿಯ ಮಲ್ಲಿಗೆ
ಯಾರೆ ಬರಲಿ ಯಾನದ ಜೊತೆ ಜೊತೆಗೆ
ಸಂತಸವ ಹಂಚುತ್ತ ಸಾಗಿಬಿಡು ಕನಸಿನ‌ ಊರಿಗೆ

ಜಗದಲಿ ಕಷ್ಟ ನೋವಿಲ್ಲ ಯಾರಿಗೆ
ನೋವೆನಿಸಿದರೆ ಅತ್ತು ಬಿಡು ಮೆಲ್ಲಗೆ
ಪಿಸುನುಡಿ ನೋವಿನಲಿ ಜಾರುವ ಕಂಬನಿಗೆ
ಹೊತ್ತೋಗು ಈ ನೋವಿನ ನೆನಪ ನಿನ್ನೊಟ್ಟಿಗೆ

ತಪ್ಪು ಮಾಡಿದಾಗ ಒಪ್ಪಿಬಿಡು ಶಿರಬಾಗಿ ‌
ಮೋಸ ಕಂಡಾಗ ಒಪ್ಪದಿರು ಮೌನವಾಗಿ
ನೊಂದವರ ‌ಕಂಡಾಗ ಅಪ್ಪಿ ಸಾಂತ್ವನಿಸು ಮಾನವನಾಗಿ
ಸೋತಾಗ ಗೆದ್ದಾಗ ಹೆದರದೆ ಹಿಗ್ಗದೆ ಸ್ವೀಕರಿಸಿಬಿಡು ಸಮವಾಗಿ

ಬಾಳ ಪಯಣವು ಒಮ್ಮೊಮ್ಮೆ ಅತಿ ವಿಸ್ಮಯ
ಇನ್ನೊಮ್ಮೆ ಅನಿಸುವುದು ಎಲ್ಲವೂ ಅಯೋಮಯ
ಬಂದದ್ದೆಲ್ಲ ಅನುಭವಿಸಿಬಿಡು ನೀನಾಗಿ ‌ತನ್ಮಯ
ಆಗ ಪಯಣ ಕ್ಷೇಮವಾಗಿ ಸಾಗಿ ಅನಿಸುವುದು ಸುಂದರಮಯ

- ಶ್ರೀಕಾವ್ಯ

12 Oct 2017, 02:17 pm

ನನ್ನ ಪೂರಿ

"ತಿಳಿ ಬೇಳ್ಳನೇಯ ಪೋರಿ
ಕರಿ ಸ್ಕೂಟಿಯನ್ನ ಎರಿ
ಕೂಗೀ ಕರೇದಳು ನಾರಿ"
ಪೋರಿ ಕೂಗಿದಳು ಹಲವು ಭಾರಿ

"ನಾ ತಿಳಿದೇ ಯಾರನ್ನೊ ಕರೆದಿರಬಹುದು ಈ
ಪೋರಿ
ನನ್ನ ಹೇಸರನ್ನಿಟ್ಟು ಕರೆದಳು ಒಂದು ಭಾರಿ
ನಾ ಆದೆನು ಗಾಭರಿ
ತಿರುಗಿದೇ ವಾರೇ ನೂಟ ಭೀರಿ"

"ನಕ್ಕಳು ನನ್ನ ನೂಡೀ ಪೋರಿ
ಎನೆಂದು ಕೇಳಿದೆ ಹತ್ತಿರದಿಂದ ಒಂದು ಸಾರಿ
ಅವಳಂದಳು ನಾ ನಿನ್ನ ಪ್ರೀತಿಸುತ್ತಿರುವೇ ರೀ
ನಾನಾದೇ ಅವಳ ಪ್ರೀತಿಗೆ ಮೂಕ ವಿಸ್ಮೀತ ರೀ"

""ಚೇತನ್"'

- ChetanHiremath

12 Oct 2017, 10:44 am

ಹನಿಗವನ

ನಗುತಿದ್ದಳು ನನ್ನ ಹುಡುಗಿ
ನನ್ನ ಕಂಡಾಗಲೆಲ್ಲ
ಕಾರಣ ಗೊತ್ತಿದಿಲ್ಲ
ಮೊನ್ನೆ ಮದುವೆಯಾಗುವವರೆಗೆ
ಹೇಳಿದಳು ಕೊನೆಗೆ
ಕಾರ್ಟೂನ್ ಕಂಡರೆ ಅವಳಿಗೆ ನಗೆ

ಚುನಾವಣೆ ಪ್ರಚಾರಕೆಂದು
ಹೆಂಗಸರಿಗೆಲ್ಲ ಸೀರೆ
ಹಂಚಿದ್ದ ರಾಜಕಾರಣಿಯೊಬ್ಬ
ಸೀರೆ ತೊಟ್ಟು
ಕನ್ನಡಿ ಮುಂದೆ ನಿಂತ ನಾರಿಯರು
ಮರೆತೇ ಬಿಟ್ಟರು ಮತದಾನವನ್ನು..



ಅವಳ ನೋಡಿದಾಗಲೆಲ್ಲ
ಹೇಳುತಿದ್ದ ಇವ
ಅವಳೆಂದು ನನ್ನವಳೇ
ಮದುವೆ ಆಗಿ
ಅವಳಿಗೆ ಎರಡು ಮಕ್ಕಳು
ಇವನು ಇನ್ನು ಸಿಂಗಲ್ಲೇ ….

ರೇಡಿಯೋದಲ್ಲಿ ಪ್ರಕಟಣಾ
ಮೋಡ ಕವಿದ ವಾತಾವರಣ
ಭಾರಿ ಮಳೆ ನೀರಿಕ್ಷೆ
ಸುಡುವ ನೆಲವ
ಕಣ್ಣು ಕುಕ್ಕೋ ಸೂರ್ಯನ
ನೋಡಿ ನಕ್ಕನು ತಿಪ್ಪೇಶಿ ..
ಗಾದೆಪ್ಪ.

- ಗಾದೆಪ್ಪ

12 Oct 2017, 09:14 am

ಕಣ್ಣೀರು

ಕಣ್ಣೀರೆ,
ನಿನಗೇಕೆ ನನ್ನ ಕೆನ್ನೆಯ ಮೇಲೆ
ಅಷ್ಟೊಂದು ಪ್ರೀತಿ ?
ಒಂದು ದಿನವಾದರೂ ಬಿಟ್ಟಿರಲಾರದೆ
ಮತ್ತೆ ಮತ್ತೆ ಇಣುಕಿ ನೋಡುತಿ.

ನಿನಗೆಷ್ಟು ಗೆಳೆಯರು,
ಬಂದು ಬಾಂಧವರು,
ಎಲ್ಲರೂ ನನಗೆ ನಿನ್ನ
ಉಡುಗೊರೆಯಾಗಿ ಕೊಡುವರು !

ಅಪ್ಪನಿಂದ ಅಷ್ಟು,
ಅಮ್ಮನಿಂದ ಇಷ್ಟು,
ಮನಸಿಗೆ ಬಂದ ಹುಡುಗನಿಂದ ಇನ್ನಷ್ಟು.
ನಂಬಿಕೊಂಡ ಗೆಳೆಯರಿಂದ
ಮೊಗೆದಷ್ಟು, ಸುರಿದಷ್ಟು...

ಕಣ್ಣೀರೆ ನಿನಗೆ ಊರೆಲ್ಲ ನೆಂಟರು,
ನನಗೆ ನಿನ್ನನೇ ದಿನವೂ ಧಾರೆಯೆರೆವರು.
ಸಾಕು ನಿನ್ನ ಸಹವಾಸ,
ಬೇಡ ಈ ವನವಾಸ.
ಬಿಟ್ಟು ಹೋಗು ಕಣ್ಣೀರೆ
ಬಿಡಿಸು ನನ್ನ ದುಃಖದ ಸೆರೆ !

- ಶ್ರೀಗೋ.

12 Oct 2017, 07:23 am

ನನ್ನುಸಿರೆ ನೀನು .....

ಅವನ ನಗುವ ಮುಖವ ಕಂಡು ಚಿಟ್ಟೆಯಾಗಿ ಹಾರುತಿದೆ
ಹೂವಿನಂತ ನನ್ನ "ಮನಸ್ಸು"

ಪ್ರೀತಿಯ ಪಲ್ಲಕ್ಕಿಯಲ್ಲಿ ತೇಲುತಿದೆ
ನೂರಾರು ಸುಂದರ "ಕನಸು"

" ನನ್ನುಸಿರಿಗೆ ನೀನೇ ಜೀವ ವಾಗಿರುವಾಗ ನಿನ್ನನ್ನುಅಗಲಿ ನಾ ಹೇಗೆ ಬದುಕಲಿ ಹೇಳು "

ನನ್ನುಸಿರೆ .......

- Shilpa

11 Oct 2017, 10:14 pm

ಸೋದರಿ

ಓ ಸೋದರಿ
ನೀ ಇಂದು ನನ್ನ ಜೀವ

ಈ ಬರಿದಾದ ಹೃದಯದ ಕಡಲಿನಲಿ
ನಿನ್ನ‌ಪ್ರೀತಿಯ ಅಲೆ ಏಬ್ಬಿಸಿದೆ
ಆ ಅಲೆಯೊಳಗೆ ನಾ ಗೊತ್ತಿಲ್ಲದೆ ಬಂಧಿಯಾದೆ..
ನಿನಗೊಮ್ಮೆ ಹುಸಿಮುನಿಸು
ಬಂದಿರಲು
ನಾ ನೀರಿನಿಂದ ಹೊರಗೆ ಬಿದ್ದ
ಮೀನಿನಂತೆ
ನೀ ಒಮ್ಮೆ ಮಾತನಾಡಿದರೆ
ನನಗಾಗುವುದು
ಆ ಕ್ಷೀರ ಸಾಗರವೇ ಕುಡಿದಂತೆ

ಅಷ್ಟೊಂದು ಪ್ರೀತಿಯಿದೆ
ನನಗೆ ನಿನ್ನಲ್ಲಿ‌
ಪದಗಳೇ ಸಾಲುತ್ತಿಲ್ಲ
‌‌ ‌ ‌ನಿನ್ನ ವರ್ಣಿಸಲು ನನಗಿಲ್ಲ...
ಮುಗ್ಧ ಮನಸು

- mahesh

11 Oct 2017, 08:37 pm