Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಡೆಂಘೇಜ್ವರ

ಸರ್ವರುಂ ಪಂಡಿತರೆ, ಸರ್ವರುಂ ತಜ್ಞ ವೈದ್ಯರೆ,
ಪರಂಗಿಪತ್ರದ ರಸವೇನು, ಕಿವಿ ಹಣ್ಣಿನ ತಿರುಳದೇನು, ಈರುಳ್ಳಿ ಬೆಲ್ಲವ ಮೇಯಿಸಿದ್ದೇನು ಇತರರಿಗೆ ಅನಾರೋಗ್ಯ ಬಂದೊದಗಿದಾಗ!
ಡೆಂಘೇಜ್ವರ ಬಂದು ತನ್ನೊಡಲನ್ನೇ ಆವರಿಸಿಕೊಂಡಾಗ ರಕ್ತಪರೀಕ್ಷೆಗೊಳಪಡಿಸಿ ಸಜಲೀಕರಣಗೊಳಿಸುವ ಚಿಕಿತ್ಸಾಲಯವೇ ಗತಿ ಮಂಕುತಿಮ್ಮ!

ಡಾ! ಸಿ.ಮುರಳೀಧರ, ಆಗಷ್ಟ್,2017

- ಡಾ!ಸಿ.ಮುರಳೀಧರ

27 Sep 2017, 11:06 pm

ಮಧುಮೇಹ

ಮಧುಮೇಹ ಬಂದೊಡರಿತೆಂದು ಭಯವಪಡಲುಬೇಡವದನತೋಟಿಗೆತರುವ ಸುಲಭದಸೂತ್ರವಿದೆ !
ಮಾನಸಿಕ ವಿಶ್ರಾಂತಿ, ದೈಹಿಕಶ್ರಮ, ಋತುವನುಸಾರ ಹಿತಮಿತಭೋಜನವನನುಸರಿಸುಜೀವನದಿ ಮಂಕುತಿಮ್ಮ!!

ಡಾ!ಸಿ. ಮುರಳೀಧರ. ಸೆಪ್ಟಂಬರ, 2017

- ಡಾ!ಸಿ.ಮುರಳೀಧರ

27 Sep 2017, 11:04 pm

ಗೋಮಾತ

ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ ಎಂದು ಅಂದು ಗೋಗರೆದ ತ್ಯಾಗಮಯಿ ನೀ ಗೋಮಾತ !!1!!

ಸತ್ಯ ವಾಕ್ಯ ಪರಿಪಾಲನೆಯ ನಿನ ನಿಷ್ಠೆಗೆ ಮೆಚ್ಚಿ ಚಂಡವ್ಯಾಘ್ರನನೆ ಪ್ರಾಣತ್ಯಾಗ ಮಾಡುವಂತಾಗಿಸಿದ ಸತ್ಯವತಿ ನೀ ಗೋಮಾತ !!2!!

ಕಾಡಿನಿಂದ ನಾಡಿಗೆ ಗುಳೆಬಂದು ನಿನ್ನ ದೇಹದ ನರ ನಾಡಿಗಳನೂ ಬಿಡದೆ ಕಿತ್ತು ತಿನ್ನುವ ಮಾನವರೂಪದ ವ್ಯಾಘ್ರರನೂ ಕ್ಷಮಿಸುವ ತಾಯಿ ನೀ ಗೋಮಾತ !!3!!

ಆಹಾರಕ್ಕಾಗಿ, ಆರೋಗ್ಯಕ್ಕಾಗಿ ವನಸ್ಪತಿಗಳ ಬೆಳವಣಿಗೆಗಾಗಿ ಸಾವಯವ ಗೊಬ್ಬರ ನೀಡುವ ಮಾನವಸ್ನೇಹಿ ನೀ ಗೋಮಾತ !!4!!

ಹಾಲು - ಮೊಸರು - ಗಂಜಲ, ಬೆಣ್ಣೆ - ತುಪ್ಪ - ಮಜ್ಜಿಗೆಗಳೆಂಬ ಅಮೃತವನು ಮಾನವನಿಗೆ ಉಣಿಸುವ ಕಾಮಧೇನು ನೀ ಗೋಮಾತ !!5 !!

ಕನ್ಯೆಯರ ಕೆನ್ನೆಯಂತೆ ಚರ್ಮವನು ನುಣುಪಾಗಿಸುವ ಕೆನೆಯನು ಹಾಲಿನಿಂದ ನೀಡುವ ಮಾತೆಯ ಮಮತೆಯ ಪ್ರತಿರೂಪವೆ ನೀ ಗೋಮಾತ !!6!!

ಕಸದಿಂದ ರಸವನ್ನು ನೀಡಿ, ಕೃಶರನ್ನೂ ಸದೃಡಗೊಳಿಸಿ, ಅರ್ಬುದದಿಂದ ಆರೋಗ್ಯದೆಡೆಗೆ ಕೊಂಡೊಯ್ಯುವ ಅಶ್ವಿನೀ ದೇವತೆ ನೀ ಗೋಮಾತ !!7!!

ರಾಘವೇಶ್ವರರ ರಾಮಾಶ್ರಮದಲಿ ನಿನ ವಿಶ್ವರೂಪವನ್ನು ಪ್ರದರ್ಶಿಸಿ, ಮೂಕವಿಸ್ಮಿತರನ್ನಾಗಿಸಿದೆ ಎಲ್ಲರನೂ ನೀ ಗೋಮಾತ !!8!!

ಡಾ!ಸಿ. ಮುರಳೀಧರ.

- ಡಾ!ಸಿ.ಮುರಳೀಧರ

27 Sep 2017, 11:02 pm

ಮತ್ತೊಮ್ಮೆ    ನಿನ್ನನ್ನು   ಪ್ರೀತಿಸುವ     ಆಸೆ

ಮುಂಜಾನೆ ಎದ್ದೊಡನೆ ಗಡಿಬಿಡಿಯಲಿ ತಯಾರಾಗಿ, ಸಬ್ಯನಂತೆ ಸೋಗುಹಾಕಿ ನಿನ್ನಾಗಮನದ ನಿರೀಕ್ಷೆಯ ಆ ಸುಖವನ್ನನುಭವಿಸಲು ...    
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ      ! 1 !

ಅಕ್ಕಪಕ್ಕದವರ ಕಣ್ಣುತಪ್ಪಿಸಲು ಹಲವಾರು ಕುಂಟುನೆಪಗಳನೊಡ್ಡಿ, ನಿನ್ನ ದಂತದ ಮೈಯ ಸೌಂದರ್ಯವನ್ನು ಕಾಫಿಯೊಂದಿಗೆ ಹೀರಲು .......   
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ     ! 2 !

ಸಾಂಗತ್ಯದ ಭಾವದಲಿ ಸ್ಪರ್ಷಸುಖದ ಮತ್ತಿನಲಿ, ಮಬ್ಬುಗತ್ತಲಿನ ಸಂಜೆಯಲಿ ಗೊತ್ತು ಗುರಿಯಿಲ್ಲದ ದಾರಿಯನು ಸವೆಸಲು ...    
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ      ! 3 !

ಕೈಯಲ್ಲಿ ಕೈ ಹಿಡಿದು, ನವಿರಾಗಿ ಕಟಿ ಬಳಸಿ, ತುಟಿಗಳೊಂದಿಗೆ ತುಂಟಾಟವನಾಡುತ್ತ ಮನದಾಸೆಯನ್ನರುಹಲು ...   
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ      ! 4 !

ಮಡಿಲಲ್ಲಿ ಮಗುವಾಗಿ ಮುಂಗುರುಳಿನೊಂದಿಗೆ ಆಟವಾಡುತ್ತಾ, ಬಿಸಿಯುಸಿರಿನ ಕಚಗುಳಿಯನ್ನಿಡುತ್ತಾ ಹೃದಯವದು ಬಿನ್ನವಿಸಿಕೊಳ್ಳಲು ...   
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ      ! 5 !

ಡಾ! ಸಿ. ಮುರಳೀಧರ ಏಪ್ರಿಲ್ 10,  2017

- ಡಾ!ಸಿ.ಮುರಳೀಧರ

27 Sep 2017, 10:46 pm

  ಬರ - ಪರಿಹಾರ

ಕರುನಾಡಿನ ರೈತರಿಗೆ ಕುಡಿಯಲು ನೀರಿಲ್ಲ,
ತಿನ್ನಲು ಅನ್ನವಿಲ್ಲ,
ರಾಸುಗಳಿಗೆ ಮೇವಿಲ್ಲ,
ರೆಟ್ಟೆಯಲಿ ಕಸುವಿಲ್ಲ,
ಮಾಡಲು ಉದ್ಯೋಗವಿಲ್ಲ,
ಗುಳೆ ಹೊರಟ ಜನರಿಗೆ ಸಾಂತ್ವನ ಹೇಳುವವರಿಲ್ಲ, ಕೇಳುವವರಿಲ್ಲ!


ಅಭಿವೃದ್ದಿಯ ಹೆಸರಿನಲಿ ಮರಗಳನು ಕಡಿದರು, ಗಣಿಗಾರಿಕೆಗಾಗಿ ವಸುಂಧರೆಯ ಒಡಲನ್ನು ಬಗೆದರು,
ಕೆರೆ ಕಟ್ಟೆಗಳನ್ನು ನಿವೇಶನಗಳನ್ನಾಗಿಸಿದ ಭೂ ಒತ್ತುವರಿದಾರರನ್ನು,
ಕಾಡುಗಳ್ಳರನ್ನು ಹಿಡಿಯುವವರಿಲ್ಲ, ಕೇಳುವವರಿಲ್ಲ!

ನೀರಿಗಿಲ್ಲ ತತ್ವಾರ, ಸಹಜ ಬಿಸಿಲು ಇದು ಬರವಲ್ಲ ಎಂದೊಬ್ಬ ಮಂತ್ರಿಯ ವ್ಯಾಖ್ಯಾನ,
ಬರವಲ್ಲವಿದು ಬರಿಯ ಬಿಸಿಲದಿಕವಷ್ಟೇ ಎಂದು ಮತ್ತೊಬ್ಬ ಬೃಹಸ್ಪತಿಯ ಸಾಂತ್ವನ, ಬರಪರಿವೀಕ್ಷಣೆಗೆ ಬರುವ ಮುಖಂಡರನ್ನು  ಸ್ವಾಗತಿಸಲು, ಇದ್ದ ಬದ್ದ ನೀರನ್ನೂ ರಸ್ತೆಗೆ ಚೆಲ್ಲುತ್ತಿರುವವರನ್ನು ತಡೆಯುವವರಿಲ್ಲ  ಕೇಳುವವರಿಲ್ಲ!

ಅನುದಾನ ಬಿಡುಗಡೆಯಲ್ಲಿ ಕೇಂದ್ರದ ಪಕ್ಷಪಾತವೆಂದು ಆಡಳಿತ ಪಕ್ಷದವರ ಆರೋಪ,
ಕೊಟ್ಟ ಹಣ ಸರಿಯಾಗಿ ವಿನಿಯೋಗಿಸಲಿಲ್ಲವೆಂದು ವಿರೋಧ ಪಕ್ಷದವರ ಪ್ರತ್ಯಾರೋಪ,
ಇದರ ಮದ್ಯೆ, ತಮ್ಮ ಹೊಗಳು ಭಟ್ಟರು, ವಂದಿಮಾಗದರಿಗೆ ಕೈ ತುಂಬಾ, ಹೊಟ್ಟೆ ತುಂಬಾ ಅನುದಾನದ ಹಣ ಹಂಚಿಕೊಳ್ಳುತ್ತಿರುವುದನ್ನು ತಡೆಯುವವರಿಲ್ಲ,
ಕೇಳುವವರಿಲ್ಲ!

ಹುಚ್ಚುಮುಂಡೆ ಮಧುವೆಯಲ್ಲಿ ಉಂಡವನೇ ಜಾಣ, ಬರಪರಿಹಾರದ ನೆಪದಲ್ಲಿ ಬಾಚಿಕೊಂಡವನೇ ಜಾಣ,
ಜನಸಾಮಾನ್ಯರಿಗೆ ಕುಡಿಯಲು ನೀರಿಲ್ಲ, ರಾಸುಗಳಿಗೆ ತಿನ್ನಲು ಮೇವಿಲ್ಲ, ಗುಳೆಹೊರಟ ಜನರನ್ನು ತಡೆಯುವವರಿಲ್ಲ,
ಸಾಂತ್ವನ ಹೇಳುವವರಿಲ್ಲ!

ಡಾ!ಸಿ.ಮುರಳೀಧರ. ಏಪ್ರಿಲ್, 2016

- ಡಾ!ಸಿ.ಮುರಳೀಧರ

27 Sep 2017, 10:43 pm

ಹೊಸ ವರುಷ 2017

ನೃತ್ಯ ನಾಟ್ಯ ಡಿಸ್ಕೋಗಳಿಗೆ ಹೆಜ್ಜೆಹಾಕುವುದಷ್ಟಕ್ಕೆ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಸಂಗಾತಿ ಸ್ನೇಹಿತರು, ನೆರೆಹೊರೆಯವರ ಮನವನು ಅರ್ಥೈಸಿಕೊಂಡು ಅವರೊಂದಿಗೆ ಹೆಜ್ಜೆಹಾಕುವಂತಾಗಲಿ ಈ ಹೊಸವರುಷ !! 1 !!

ತುಂಡು ಮಾಂಸ ಬಾಡೂಟ ಕುರುಕಲು ಸವಿಯಲಷ್ಟಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಪರರ ಕಷ್ಟ ನಷ್ಟಗಳಿಗೆ ಸ್ಪಂದಿಸುವ, ನಮ್ಮ ನೋವುಗಳನ್ನೂ ನಗು ನಗುತ ಸವಿಯುವಂತಾಗಲಿ ಈ ಹೊಸವರುಷ !! 2 !!

ಗಾಂಜಾ ಬೀಡಿ, ಗುಂಗುರು ಉಂಗುರಗಳ ಧೂಮ್ರಪಾನಗಳಿಗೆ ದಾಸನಾಗಿ ಹೋಗುವುದಷ್ಟಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಇಷ್ಟು ಕೊಟ್ಟ ದೇವರಿಗೆ ಧನ್ಯವಾದವನೇಳಿ ಮಧ ಮತ್ಸರ, ರಾಗ ದ್ವೇಷ ವ್ಯಸನಗಳಿಂದ ಹೊರಬರಲು ಸಂಕಲ್ಪ ಮಾಡಲನುಕೂಲವಾಗಲಿ ಈ ಹೊಸವರುಷ !! 3 !!

ಮಧು ಮಧ್ಯ ಮಧಿರೆಗಳ ಮತ್ತಿನಲಿ ಬರಿ ತೂರಾಡುವುದಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಮತ್ತು ನೆತ್ತಿಗೇರಿ ಮತ್ಯಾರಿಗೋ ನೋವುಂಟು ಮಾಡದೆ ಮುತ್ತಿನಂತಹ ಮಾತುಗಳಿಂದ ಎಲ್ಲರ ಮನವನು ಗೆಲ್ಲಲು ಮುಡಿಪಾಗಲಿ ಈ ಹೊಸ ವರುಷ !! 4 !!

ವಾಸ್ತು ಪೂಜೆ ಪುನಸ್ಕಾರಗಳನು ಮಾಡಿ, ಲಕ್ಷ ಕೋಟಿ ಆಸ್ತಿ ಕೋರಿ, ಅವನಿಗಷ್ಟು ಪಾಲು ಕೊಟ್ಟು ಇನ್ನಷ್ಟು ಲೋಭಿಗಳಾಗಲು ಸೀಮಿತವಾಗಿ ಹೋಗದಿರಲಿ ಹೊಸವರುಷ ! ಬಾಳಿಗೊಂದು ಅರ್ಥ, ಬದುಕಿಗೊಂದು ಗುರಿಯನಿತ್ತು 'ನಗದು ರಹಿತ ವಹಿವಾಟಿ'ನ ನಡವಳಿಕೆಯಂತೆ ನಡೆಯುವಂತಾಗಲಿ ಈ ಹೊಸವರುಷ !!5 !!

ಡಾ! ಸಿ. ಮುರಳೀಧರ 31 / 12 /2016

- ಡಾ!ಸಿ.ಮುರಳೀಧರ

27 Sep 2017, 10:39 pm

ಮಧುಪಾನ

ಮಧುರ  ಮಧುರವೀ ಮಧುವಿನ ಪಾನ
ಮನವನು ತಣಿಸುವ ಮಧುಪಾನ !!

ಬಣ್ಣ-ಬುದ್ದಿಯ ವೃದ್ದಿ, ಸ್ವರ- ಆರೋಗ್ಯದ ಸಿದ್ದಿ
ಸ್ರೋತೋಮಾರ್ಗಗಳ ಶುದ್ದಿ, ಸಮಾಜದಲಿ ಗೌರವವೂ ವೃದ್ದಿ,
ಕೃಶ - ಸ್ಥೂಲರಿಗೂ ಹಿತ, ಬಡವ-ಬಲ್ಲಿದರಿಗೂ ಹಿತ, ಕನಿಷ್ಟ ಕಾಸಿನಲಿ ಸುಖ ಅಪರಿಮಿತ  
ಬಡವನ ಕೈಗೂ ಎಟಕುವ
ಅಮೃತ ಈ ಮಧುಪಾನ!!1!!

ಅತಿ ನಿದ್ರೆಯವನಿಗೂ ಇದು ಮದ್ದು
ನಿದ್ರಾಹೀನನಿಗೂ ಇದೆ ಇದರಲ್ಲೇ ಮದ್ದು
ಚಿಂತಾಕ್ರಾಂತನಿಗೆ  ಸಾಂತ್ವನದ ಮದ್ದು
ಚಿಂತೆ ಇಲ್ಲದವನಿಗೋ ಇದು
ಸಮಯ ಕಳೆವ ಮದ್ದು
ಧಾತುಗಳವೃದ್ದಿ,
ಸರ್ವರೋಗಹರ
ಭೂಲೋಕದ ಸಂಜೀವಿನಿ ಈ ಮಧುಪಾನ!!2!!

ವಾತ ಶ್ಲೇಷ್ಮಹರ,
ರೂಕ್ಷ-ಸೂಕ್ಶ್ಮ-ಸರ
ಒಗರು ಮಿಶ್ರಿತರಸ ಮಧುರ-ಕಹಿ-ಖಾರ
ವಿಪಾಕ ಹುಳಿಯಾದರೂ,
ಇದು ಚಿತ್ರ-ವಿಚಿತ್ರ ರುಚಿಯ ಉಷ್ಣವೀರ್ಯ
ಮನಸಿಗೆ ತುಷ್ಠಿಯು, ದೇಹಕೆ ಪುಷ್ಟಿಯು
ಇಳೆಯಲೆ ಸ್ವರ್ಗವ ಸೃಷ್ಠಿಸಬಲ್ಲ  
ರುಚಿಕರ ಪೇಯ ಈ ಮಧುಪಾನ!!3!!

ಸುರಲೋಕದ ಅಪ್ಸರೆಯರನು
ಇಳೆಯಲೆ ದಕ್ಕಿಸಬಲ್ಲುದೀ ಮಧುಪಾನ
ಸುರ-ಅಸುರರನು ಧರೆಯಲೇ
ಸೃಷ್ಥಿಸಬಲ್ಲುದೀ  ಸುರಪಾನ  
ಹಿತವೆಂದು ಮಿತಿ ಮೀರಿದೊಡೆ
ಅದೋಗತಿಗೆ ಇದುವೇ ಸೋಪಾನ
ಇತಿ ಮಿತಿಯನರಿತವನಿಗೆ ಇದುವೇ
ವಸುದೆಯೊಳಗಿನ ಸುಧಾಪಾನ!!4!!

ಡಾ!ಸಿ.ಮುರಳೀಧರ. ಮಾರ್ಚ್ 2016

- ಡಾ!ಸಿ.ಮುರಳೀಧರ

27 Sep 2017, 10:37 pm

ನೀನಿಲ್ಲದೇ ನನಗೇನಿದೆ

ಬಸ್ಸಿನಲಿ ತಿರುಗಾಡಲು ಚಿಲ್ಲರೆಕಾಸೂ ಇರಲಿಲ್ಲ ನೀನಿದ್ದೆ ಅಂದು, ವಿಮಾನಯಾನದ ಸೌಕರ್ಯವಿರುವಾಗ ತಾನ ಯಾನದಲಿ ಜೊತೆಯಾಗೆ ನೀನಿಲ್ಲ ಇಂದು !1!

ಸುತ್ತಾಡಲು ನನ್ನ ಬಳಿ ಸೈಕಲ್ಲೂ ಇರಲಿಲ್ಲ ನೀನಿದ್ದೆ ಅಂದು, ಐಷಾರಾಮಿ ಕಾರುಗಳ ಒಡೆಯ ನಾನಾದಾಗ ಜೊತೆಯಾಗಿ  ಸುತ್ತಾಡಲು ನೀನಿಲ್ಲ ಇಂದು !2!

ದೋಸೆ, ಕಾಫಿಗೂ ದುಡ್ಡಿರಲಿಲ್ಲ ಜೇಬಿನಲಿ ನೀನಿದ್ದೆ ಅಂದು, ಭೂರಿ ಭೋಜನಕೂಟಗಳ ಆಹ್ವಾನಗಳನು ಜೊತೆಯಲ್ಲಿ ಆಸ್ವಾದಿಸಲು ನೀನಿಲ್ಲ ಇಂದು !3!

ವಾಸದ ಮನೆಗೆ ಬಾಡಿಗೆ ಕಟ್ಟಲು ಹಣವಿಲ್ಲದಿದ್ದರೂ ನೀನಿದ್ದೆ ಅಂದು, ಹಲವಾರು ಬಂಗಲೆಗಳ ಒಡೆಯನಾನಾಗಿರುವೆ, ವಾಸಿಸಲು ಜೊತೆಯಲ್ಲಿ ನೀನಿಲ್ಲ ಇಂದು !4!

ಹಳೆಯ ಅಂಗಿ-ಮೆಟ್ಟನ್ನು ಬದಲಿಸಲೂ ಶಕ್ತನಿರಲಿಲ್ಲ ನೀನಿದ್ದೆ ಅಂದು, ಕಪಾಟಿನಲಿ ತುಂಬಿರುವ ವಿದೇಶೀ ಸೂಟು, ಬೂಟುಗಳ, ನೋಟಿನ ಕಂತೆಗಳ ನೋಡಿ ಆನಂದಿಸಲು ನೀನಿಲ್ಲ ಇಂದು !5!

ಇವೆಲ್ಲಾ ಕೊರತೆಗಳೆಂದು ನನಗೆ ಅನ್ನಿಸಿರಲೇ ಇಲ್ಲ ನೀನಿದ್ದ ಅಂದು, ಸುಖದ ಸುಪ್ಪತ್ತಿಗೆಯಲ್ಲಿರುವ ನನಗೆ ಈಗ ಇರುವುದೊಂದೇ ಕೊರತೆ. ನನ್ನೊಂದಿಗೆ ನೀನಿಲ್ಲವಲ್ಲಾ ಎಂದು !6!

ಡಾ!ಸಿ.ಮುರಳೀಧರ ಮೇ, 2016.   

- ಡಾ!ಸಿ.ಮುರಳೀಧರ

27 Sep 2017, 10:31 pm

ನೀನಿಲ್ಲದೇ ನನಗೇನಿದೆ

ಬಸ್ಸಿನಲಿ ತಿರುಗಾಡಲು ಚಿಲ್ಲರೆಕಾಸೂ ಇರಲಿಲ್ಲ ನೀನಿದ್ದೆ ಅಂದು, ವಿಮಾನಯಾನದ ಸೌಕರ್ಯವಿರುವಾಗ ತಾನ ಯಾನದಲಿ ಜೊತೆಯಾಗೆ ನೀನಿಲ್ಲ ಇಂದು !1!

ಸುತ್ತಾಡಲು ನನ್ನ ಬಳಿ ಸೈಕಲ್ಲೂ ಇರಲಿಲ್ಲ ನೀನಿದ್ದೆ ಅಂದು, ಐಷಾರಾಮಿ ಕಾರುಗಳ ಒಡೆಯ ನಾನಾದಾಗ ಜೊತೆಯಾಗಿ  ಸುತ್ತಾಡಲು ನೀನಿಲ್ಲ ಇಂದು !2!

ದೋಸೆ, ಕಾಫಿಗೂ ದುಡ್ಡಿರಲಿಲ್ಲ ಜೇಬಿನಲಿ ನೀನಿದ್ದೆ ಅಂದು, ಭೂರಿ ಭೋಜನಕೂಟಗಳ ಆಹ್ವಾನಗಳನು ಜೊತೆಯಲ್ಲಿ ಆಸ್ವಾದಿಸಲು ನೀನಿಲ್ಲ ಇಂದು !3!

ವಾಸದ ಮನೆಗೆ ಬಾಡಿಗೆ ಕಟ್ಟಲು ಹಣವಿಲ್ಲದಿದ್ದರೂ ನೀನಿದ್ದೆ ಅಂದು, ಹಲವಾರು ಬಂಗಲೆಗಳ ಒಡೆಯನಾನಾಗಿರುವೆ, ವಾಸಿಸಲು ಜೊತೆಯಲ್ಲಿ ನೀನಿಲ್ಲ ಇಂದು !4!

ಹಳೆಯ ಅಂಗಿ-ಮೆಟ್ಟನ್ನು ಬದಲಿಸಲೂ ಶಕ್ತನಿರಲಿಲ್ಲ ನೀನಿದ್ದೆ ಅಂದು, ಕಪಾಟಿನಲಿ ತುಂಬಿರುವ ವಿದೇಶೀ ಸೂಟು, ಬೂಟುಗಳ, ನೋಟಿನ ಕಂತೆಗಳ ನೋಡಿ ಆನಂದಿಸಲು ನೀನಿಲ್ಲ ಇಂದು !5!

ಇವೆಲ್ಲಾ ಕೊರತೆಗಳೆಂದು ನನಗೆ ಅನ್ನಿಸಿರಲೇ ಇಲ್ಲ ನೀನಿದ್ದ ಅಂದು, ಸುಖದ ಸುಪ್ಪತ್ತಿಗೆಯಲ್ಲಿರುವ ನನಗೆ ಈಗ ಇರುವುದೊಂದೇ ಕೊರತೆ. ನನ್ನೊಂದಿಗೆ ನೀನಿಲ್ಲವಲ್ಲಾ ಎಂದು !6!

ಡಾ!ಸಿ.ಮುರಳೀಧರ ಮೇ, 2016.   

- ಡಾ!ಸಿ.ಮುರಳೀಧರ

27 Sep 2017, 10:29 pm

ಕಹಿ(ರಿ)ಗುಳಿಗೆ

ಕಹಿ(ರಿ)ಗುಳಿಗೆ ಹೃದಯವಂತರು ಸ್ಪುರದ್ರೂಪಿಗಳೇ ಆಗಿರಬೇಕೆಂದೇನಿಲ್ಲ
ಕಪ್ಪಾಗಿರುವ ಮಾತ್ರಕ್ಕೇ ಕೆಟ್ಟವರಾಗಿರಬೇಕಿಲ್ಲ ಬೆಳ್ಳಗಿರುವುದೆಲ್ಲ ಹಾಲೇನಲ್ಲ
ಸಿಹಿಯಿದ್ದ ಮಾತ್ರಕ್ಕೇ ಸಕ್ಕರೆಯಂಶವಿರಬೇಕಿಲ್ಲ ವಿದೇಶದ ಮೇಕಡೋನಲ್ಡ್, ಕೆಯಫ್ ಸಿ ಶ್ರೇಷ್ಟವೇನಲ್ಲ
ಕೋಕ, ಪೆಪ್ಸಿಯ ದುಷ್ಪರಿಣಾಮ ಕಡಿಮೆಯೇನಲ್ಲ
ಮಾಂಸಾಹಾರಿಗಳೆಲ್ಲ ಮತಿಹೀನರಲ್ಲ
ಮಧ್ಯ ಸೇವಿಸದವರ ಮಾತೂ ಹದ್ದುಬಸ್ತಿನಲ್ಲಿ ಇರಬೇಕೆಂದೇನೂ ಇಲ್ಲ
ಹಿಮಾಲಯದಲ್ಲೇ ಎಲ್ಲವೂ ಸಿಗಬೇಕಾಗಿಲ್ಲ ಹಿತ್ತಲಗಿಡದಲ್ಲೂ ಮದ್ದಿನಂಶವಿಲ್ಲದಿಲ್ಲ
ನವೀನ ಪದ್ಧತಿಗಳೂ ಪೂರ್ತಿ ಅಮೃತವೇನಲ್ಲ
ಸ್ವದೇಶದ ಕಹಿ(ರಿ)ಗುಳಿಗೆ ಕೀಳೇನಲ್ಲ.

ಡಾ!ಸಿ.ಮುರಳೀಧರ ಮಾರ್ಚ್,2017

- ಡಾ!ಸಿ.ಮುರಳೀಧರ

27 Sep 2017, 10:26 pm