Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೇವನೊಬ್ಬ
ನೆಪಮಾತ್ರ
ಒಲವಾಡಿಸುತಿದೆ
ನೂರಾರು ಪಾತ್ರ
ಅದಕ್ಕೆಂದೆ ನಾ
ಬರುತಿರುವೆ ನಿನ್ನ ಹತ್ರ
ಭೇಟಿಯಾಗೋಣ
ನಿನ್ನೆಲ್ಲ ಬಿಗುಮಾನ
ಬಿಂಕವ ಮರೆತ್ರ
ಜೊತೆಯಾದರೆ ಬದುಕೆ
ಜೀವನ ಚೈತ್ರ..!!!
ಮಾನಸಾ ಎಪಿ...
- ಮಾನಸಾ ಎಪಿ
09 Sep 2017, 07:14 am
ಅಮ್ಮ ಈ ನಿನ್ನ ಕರುಳಕುಡಿ
ಇಡೀ ಜೀವನವೆ ನಿನಗಾಗಿ ಮುಡಿ
ಸಂಸಾರ ತ್ಯಜಿಸಿದ ತ್ಯಾಗಮಯಿ
ಜೀವನದುದ್ದಕ್ಕು ಉಂಡದ್ದು ಬಲು ಕಹಿ!
ಪಿತೃ - ವಾತ್ಸಲ್ಯವು ಸೆಳೆಯಲು
ಸಮಾಜ ಸೇವೆಯ ಕಡೆಗೆ
ದಿಟ್ಟತನದಿ ಉಳಿಯಲು
ಅನಂತಚಕ್ರದಿಂದ ಹೊರಗೆ!
ನಿನ್ನ ಬೆನ್ನೆಲುಬಾಗಿ ನಿಂತವಳು
ಈ ಹೆಮ್ಮೆಯ ನಾರಿ
ಎಡ-ಬಲ ಪಂತಗಳ ಎಡಮುರಿಕಟ್ಟಿದಳು
ಸೈರಿಸದೆ ತೋರಿದರು ಸಾವಿನ ದಾರಿ!
ಕೆಟ್ಟಕುಳಗಳ ಹುಟ್ಟಡಗಿಸಲಾಗಲಿಲ್ಲ
ದಿಟ್ಟ ಮಹಿಳೆಯ ಉಳಿಸಿಕೊಳ್ಳಲಾಗಲಿಲ್ಲ
ನ್ಯಾಯಕ್ಕೆ ಸೆಡ್ಡುಹೊಡೆದಿಹರು ಭ್ರಷ್ಟರೆಲ್ಲ ದಂಡಿಸುವಷ್ಟರಲ್ಲಿ ಎಲ್ಲ ಇಹಲೋಕತೊರೆವರಲ್ಲ!
ಯಾರದೋ ಸೇಡು ,ಯಾವುದೋ ಜಾಡು
ನಿನ್ನ ಮಕ್ಕಳ ರಕ್ಷಣೆಗಾಗಿ ಸವಿಸಿದಳು ಜೋಡು
ಅವಳು ಸೇರಲಾಗಲಿಲ್ಲ ಇರುಳಲ್ಲಿ ತನ್ನ ಗೂಡು
ಜರೂರಿನಲ್ಲಿ ಗುಂಡಿಟ್ಟವನು ದೌಡು!
ರಕ್ತದ ಮಡುವಿನಲ್ಲಿ ಮಿಂದೆದ್ದಳು
ನೇತ್ರಗಳ ನಿನ್ನಲ್ಲೆ ಬಿಟ್ಟೋದಳು
ಬಲಿದಾನದಲ್ಲೆ ಬಲಿಯಾದಳು
ನಯನದಿಂದ ಎಂದೆಂದು ನಮ್ಮ ನೋಡುವಳು!
ಅಮ್ಮ ಕನ್ನಡಾಂಬೆ ನಿನಗಾಗಿ
ತನ್ನ ಉಸಿರ ನೀಡಿದ ತ್ಯಾಗಿ
ಅಮರಳಾದಳು ನಮ್ಮಮ್ಮ ಗೌರಿ
ದುಷ್ಡರ ಪಾಲಿಗೆ ನೀನಾಗು ಮಾರಿ!
ಜೈ ಭಾರತಾಂಬೆ!
ಜೈ ಕನ್ನಡಾಂಬೆ!
ಶಾರಧ
- ಶಕುಂತಲಾ
08 Sep 2017, 05:43 pm
ನೋವುಗಳು ಮೀರಿವೆ ಅವುಗಳ ಎಲ್ಲೆ
ಕಣ್ಣೀರಿಗೆ ಹೇಳಿ ಬಿಡಲೆ ನಾ ನಿನ್ನ ಒಲ್ಲೆ
ಅತ್ತಷ್ಟು ನಿಲ್ಲದು ಸುರಿವ ಕಣ್ಣೀರ ಸಾಲು
ಮತ್ತಷ್ಟು ಸೇರುವುದು ನೋವಿಗೇನೆ ಪಾಲು
ಸಾಧ್ಯವೇ ನೋವಲ್ಲಿಯೂ ನಗಲು
ದೂರಾಗುವುದೆ ನೋವಿನ ಅಳಲು
ಕಾಣುವುದೆ ನೆಮ್ಮದಿಯ ಹಗಲು
ಕಳೆಯಲಾಗುವುದೆ ಕಣ್ಣೀರಿಲ್ಲದೆ ಇರುಳು
ನಿಂತಲ್ಲೂ ಕುಂತಲ್ಲೂ ಕಣ್ಣೀರದೆ ಧ್ಯಾನ
ಮನಸ ಅಪ್ಪಿ ನಿಂತಿದೆ ಎಡಬಿಡದೆ ಮೌನ
- ಶ್ರೀಕಾವ್ಯ
08 Sep 2017, 02:55 pm
ಮಾತಲ್ಲಿ ಹೇಳಲಾಗದೆ..ಮೌನವು
ನಿನಗಾಗಿ ಬರೆದ ಪ್ರೇಮ ಕವನ
ಮರೆತ ನೋವುಗಳು
ನೆನಪುಗಳಾಗಿ ಮರಿಕಳಿಸುತ್ತಿದೆ,
ಒಲವಿನ ಕ್ಷಣಗಳ
ಮರೆಯಲಾಗದೆ ನೆನಪಾಗುತ್ತಿದೆ..
ನಿನ್ನ ನೆನೆದಾಗ ಮನಸ್ಸು
ಹೂವಿನಂತೆ ಅರಳುತ್ತದೆ,
ನಿನ್ನ ಕಂಡ ಕ್ಷಣದಲ್ಲಿ
ನಿಂತ ಹೃದಯದ ಬಡಿತವು
ಮತ್ತೆ ಮಿಡಿಯುತ್ತಿದೆ,
- Pb
08 Sep 2017, 12:32 am
ಸುಂದರ ಸಂಜೆಯಲ್ಲಿ ತುಂತುರು ಮಳೆಯಲ್ಲಿ
ತಿಂಗಳ ಬೆಳಕಿನಲ್ಲಿ ತಂಗಾಳಿಯ ಜೊತೆಯಲ್ಲಿ!!
ಎಳೆ ಹುಲ್ಲ ಹಾಸಿಗೆಯ ಮೇಲೆ ನಾ ಕುಳಿತು ಕಾದಿರುವೆನು ಗೆಳೆಯ ನಿನ್ನನು ಇಲ್ಲಿ ಇಂದು!!
ನಸುನಗುತಲೇ ನೀನು ನನ್ನ ಎದುರಿಗೆ ಬರವಾಗ
ಈ ನಸುಕಿನಲ್ಲಿ ಅದುವೇ ನನಗೆ ಶುಭ ಯೋಗ!!
ಬದುಕಲ್ಲಿ ಎಲ್ಲವೂ ಹೊಸತಾಗಿದೆ ಗೆಳೆಯ
ನೀನು ಹೀಗೆಯೇ ನನ್ನ ಜೊತೆಯಲ್ಲಿ ಇರುವಾಗ!!
ಈ ಸುಂದರ ಸಂಜೆಯಲ್ಲಿ ನಿನ್ನ ಆಗಮನವು
ತಿಂಗಳ ಬೆಳಕಿನಲ್ಲಿ ಚಂದಿರನು ಬಂದಂತೆ!!
ಈ ನನ್ನ ಹೃದಯ ಮಂದಿರದ ಗರ್ಭಗುಡಿಯ
ಒಳಗೆ ನೇಲೆಸಲು ನೀ ಬಂದು ನಿಂತೆ ದೇವರಂತೆ!!
- ಪಿ.ಜಿ.ಜ್ಯೋತಿ
07 Sep 2017, 10:12 pm
ಆ ದುಂಬಿಗೆ ನೀ ಅದರದಿ
ಮಧುವನು ನೀಡಲು ಸುಂದರ!!
ಓ ಹೂವೆ ನಿನ್ನ ನಗುವನು ಕಂಡು
ಮರುಳಾಗಿಹನೇ ಆ ಚಂದಿರ!!
ಬಾಡದೇ ನೀನು ಅರಳಿರೆ ಜೇನು
ಸಕ್ಕರೆ ತುಂಬಿದ ಗಡಿಗೆಯು!!
ಆ ಚಂದಿರನ ಮೋಹದಿ ನೀನು
ದುಂಬಿಯನ್ನು ತೊರೆಯವೆಯೇನು!!
ಚಂದಿರನನ್ನು ಸೇರುವ ಬಯಕೆ
ಬರಿದಾದ ಇರುಳಿನ ಕನಸು!!
ದುಂಬಿಯ ಒಡನಾಟದ ಸಲಿಗೆ
ದಿನ ನಿತ್ಯವೂ ಬದುಕಲಿ ಸೊಗಸು!!
ಚಂದಿರನ ಮೇಲಿನ ಅನುರಾಗ
ಕರಗುವುದು ಹಗಲಿನಲ್ಲಿ!!
ದುಂಬಿಯ ಜೊತೆಗಿನ ಪರಾಗ
ಇರುವುದು ನಿನ್ನಯ ಜೊತೆಯಲ್ಲಿ!!
- ಪಿ.ಜಿ.ಜ್ಯೋತಿ
07 Sep 2017, 10:10 pm
ಈ ಭೂಮಿಯ ಸಂತೆಲಿ
ಒಬ್ಬಂಟಿಯು ನಾನಿಲ್ಲ!!
ಒಬ್ಬಂಟಿಗೆ ಒಂಟಿತನವೇ
ಸಂಗಾತಿಯ ನೆನಪಲ್ಲಿ!!
ಸಂಭ್ರಮವು ಸಡಗರವು
ಸಂಬಂಧದ ನಡುವಲ್ಲಿ!!
ಅಡಗಿರುವ ಮನಸೊಂದು
ಅಳಿತಿಹುದು ನಿನ್ನ ನೆನೆದು!!
ಈ ಅಲೆಮಾರಿ ಬದುಕೀಗ
ಅಲೆದಿಹುದು ನಿನಗಾಗಿ!!
ನೀ ಸಿಗದೇ ಇರಲು ನನಗೆ
ನಿನ್ನ ನೆನಪೇ ಸಂಗಾತಿ!!
ಹುಡುಕಾಟದ ನಶೆಯಲ್ಲಿ
ಮರೆತಿರುವ ಬದುಕೆಲ್ಲಿ!!
ಕಳೆದು ಹೋದ ನಕಾಶೆಯು
ದೊರಕದಂತ ಹತಾಶೆಯು!!
- ಪಿ.ಜಿ.ಜ್ಯೋತಿ
07 Sep 2017, 10:09 pm
ಹೊಟ್ಟೇ ಪಾಡಿಗಾಗಿ ಶಾಲೆಯನ್ನು ತೊರೆದವರು
ಕೂಲಿ ಕೆಲಸಕ್ಕೆ ಅಣಿಯಾಗಿ ನಿಂತರು!!
ವಿದ್ಯೆ ಎಂಬ ಮಂತ್ರ ಪಠಿಸುತ್ತಿದ್ದವರು
ದುಡಿಮೆ ಎಂಬ ತಂತ್ರಕ್ಕೆ ಸಿಲುಕಿದರು!!
ಪುಸ್ತಕದ ಮೇಲಿರುವ ಮೋಹವನ್ನು ತ್ಯಜಿಸಿ
ಕ್ಷಣ ಮಾತ್ರದ ಹಸಿವನ್ನು ನೀಗಿಸಲು ಬಂದವರು!!
ದುಡಿಮೆಯ ಸವಾಲನ್ನು ಎದುರಿಸುತ್ತ
ಅನಿವಾರ್ಯ ಬಾಲ ಕಾರ್ಮಿಕರಾದವರು ಅವರು!!
ಬಳಪವನ್ನು ಹಿಡಿಯುತ್ತಿದ್ದ ಆ ಮುದ್ದು ಕೈಯಲ್ಲಿ
ಬದುಕಿನ ಭಾರವ ಹೊರಲಾರದೇ ಹೊತ್ತವರು!!
ಹೆತ್ತವರ ಪಾಲಿನ ಆಸರೆಯ ಕನಸು ಇವರು
ಶಾಲೆಯಿಂದ ದೂರಾಗಿ ಅನುಭವದಿ ಕಲಿತವರು!!
ದಿನ ಕೂಲಿಯಲ್ಲಿ ಬಾಲ್ಯವನ್ನು ಕಳೆದವರು
ಚಿಣ್ಣರ ಲೋಕದಿ ದೂರಾದ ಕಣ್ಣಿನವರು!!
ಕನಸಿನ ಲೋಕಕ್ಕೆ ತಾವೇ ಗೋಡೆ ಕಟ್ಟಿ
ಕಷ್ಟದಲ್ಲಿ ಇಷ್ಟ ಇಲ್ಲದೇ ಬಾಲಕಾರ್ಮಿಕರಾದರು!!
- ಪಿ.ಜಿ.ಜ್ಯೋತಿ
07 Sep 2017, 10:08 pm
ನಿನ್ನ ನೆನಪು ಎಂಬ ಸಣ್ಣ ಸಂತೆಯಲ್ಲಿ
ಕಾಣೆಯಾದ ಪುಟ್ಟ ಮಗುವಿನಂತೆ ನಾನು!!
ನನ್ನನ್ನೇ ನಾ ಮರೆತು ನಿಂತಿದ್ದರೂ ಅಲ್ಲಿ
ನಾ ಹುಡುಕುತ್ತಲಿ ಇರುವುದು ನಿನ್ನನ್ನೇ!!
ಕಾಣದ ನಿನ್ನನ್ನು ಹಂಬಲಿಸಿ ಹಂಬಲಿಸಿ
ಅಳುತ್ತಲಿ ಇರುವ ಪುಟ್ಟ ಮನಸ್ಸು ನನ್ನದು!!
ಈ ನನ್ನ ಮನದ ಅಳುವಿನ ದನಿ ಕೇಳಿ
ನೀ ಒಮ್ಮೆ ನನ್ನ ಎದುರು ಬಂದು ನಿಲ್ಲು ಸಾಕು!!
ಅದು ಯಾವ ತಪ್ಪಿಗೆ ನನಗೆ ಈ ಶಿಕ್ಷೆ
ಯಾವ ತಪ್ಪಿಗೆ ನನ್ನನ್ನು ದಿಕ್ಕರಿಸಿ ಹೋದೆ ನೀ!!
ನಿನ್ನ ನೆನಪುಗಳ ಸುಳಿಯಲ್ಲಿ ಸಿಲುಕಿ
ಒದ್ದಾಡುತ್ತಲಿ ಇರುವ ಒಂಟಿ ಬದುಕು ನನ್ನದು!!
ನೀ ಬಿಟ್ಟು ಹೂದ ನಿನ್ನ ನೆನಪಿನ ಸಂತೆಯಲ್ಲಿ
ದಿಕ್ಕು ಅರಿಯದೇ ನಿಂತಿರುವೆನು ನಾನು!!
ನೀ ಒಮ್ಮೆ ಮರಳಿ ಇಲ್ಲಿಗೆ ಬಂದು
ನನ್ನ ಕೈ ಹಿಡಿದು ದಾರಿ ತೋರು ಗೆಳೆಯ!!
- ಪಿ.ಜಿ.ಜ್ಯೋತಿ
07 Sep 2017, 10:06 pm
ಅವಳ ನೋಟದಿಂದ
ಮೂಡಿ ಬಂತು ಆಸೆಯ ಬಳ್ಳಿ!!
ಆಸೆ ಬಳ್ಳಿಯಿಂದ
ಸಾಲು ಕನಸ ಹೂಗಳು ಅರಳಿ!!
ನನ್ನನ್ನು ಕರೆಯಿತೇ
ಸನಿಹ ಪರಿಮಳವನ್ನು ಬೀರಿ!!
ನಾ ಮನಸೋತು
ಸಾಗಿದೆನು ಅದರ ಬಳಿಯಲ್ಲಿ!!
ನನ್ನ ನೋಡಿದೊಡನೆ
ನಾಚಿತು ಆ ಆಸೆಯ ಹೂ ಬಳ್ಳಿ!!
ನಾ ಸ್ಪರ್ಷಿಸಲು
ಬಾಡಿತು ಆ ಬಳ್ಳಿ ನನ್ನ ಕೈಯಲ್ಲಿ!!
- ಪಿ.ಜಿ.ಜ್ಯೋತಿ
07 Sep 2017, 10:05 pm