Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ನನ್ನ ಹೃದಯದರಸಿ..

ಕಣ್ಣಂಚಿನ ಕನಸಿನಲಿ
ಮಧು ತುಂಬಿದ ಮನಸಿನಲಿ
ನನ್ನೆಲ್ಲಾ ಭಾವನೆಗಳ ಸೇರಿಸಿ
ನಾ ಬರೆದಿರುವೆನು ನಿನ್ನ ಹೆಸರ
ಓ... ನನ್ನ....ಹೃದಯದರಸಿ

ಮನ ಮಿಡಿಯುತ್ತಿದೆ
ನನ್ನೆದುರು ನೀ ಬಂದು ನಿಂತಾಗ
ಹೃದಯ ಜೆಲ್ಲೆಂದಿದೆ
ಒಮ್ಮೆ ನೀ ಮಾತಾಡಿದಾಗ...
ಕಲ್ಪಿಸುವ ಕವಿ ಕಲ್ಪನೆಗೂ ಮೀರಿ
ನಾ ನಿನ್ನ ಪ್ರೀತಿಸುವೆ
ಓ... ನನ್ನ ....ಹೃದಯದರಸಿ

ನನ್ನಾಣೆ ನಿಜ ನುಡಿಯಲೆ ಹುಡುಗಿ
ನಿನ್ನ ಒಲುಮೆಯ ನೋಟಕ್ಕಾಗಿ
ಈ ಜೀವ ಮಿಡಿಯುತಿದೆ
ನನ್ನ ಹೃದಯದ ಬಡಿತದಲಿ
ನಿನ್ನ ಹೆಸರನೆ ಕರೆಯುತಿದೆ
ನಾ ನಿನ್ನ ಜೊತೆಗಿರುವೆ
ನನ್ನ ಕೊನೆಯುಸಿರನ್ನು ಮೀರಿ
ನೀನೊಪ್ಪಬಾರದೆ ನನ್ನೊಮ್ಮೆ
ಓ.. ನನ್ನ ....ಹೃದಯದರಸಿ

- ಪ್ರಿಯಾಂಕ

02 Sep 2017, 02:41 pm

ಅಫಿಡವಿಟ್ಟು

ಗಜಲ್ (ಅಫಿಡವಿಟ್ಟು)
------------------------
ಹುಟ್ಟಿದಾಗ ಹೃದಯ ಬಡಿತವನ್ನಿಟ್ಟವನಿಗೆ ಗೊತ್ತಿದೆ
ಹೃದಯ ಹಿಂಡುವ ನಿನಗೆ ಹೇಗೆ ಗೊತ್ತಾಗುತ್ತದೆ

ನಿನ್ನ ಜಪ,ತಪ ಎಲ್ಲವೂ ನಾನು ನಕ್ಕಾಗ ಮಾತ್ರ
ಸದಾ ದುಃಖದ ಕರಿನೆರಳು ನೆಪವಾದ ನನಗೆ ಮಾತ್ರ

ನನ್ನವಳೆನ್ನುವ ಎದೆಯೊಳಗೆ ನೀ ಬರೀ ತಕರಾರು
ಹೇಗೆ ತಾನೆ ತಿಳಿದೀತು ನಿನಗೆ ಪ್ರೀತಿಯ ಕರಾರು

ಪ್ರೀತಿ ಕೂಡಿಡದೇ ಇಲ್ಲಿ ಬಂದವರೆಲ್ಲರೂ ಬಡವರೇ
ಇನ್ನಾದರೂ ಆ ರೀತಿ ಶ್ರೀಮಂತಳಾಗಬಾರದೇ

ಮೋಡ ಮುಸುಕಿದ ಬಾನಂಚಿನ ಮಿಂಚು ಈ ಪ್ರೀತಿ
ನಿರಾಶೆಗೊಂದು ಅಪಿಡವಿಟ್ಟು ಸಲ್ಲಿಸಬಾರದೇಕೆ? ದಿನದ ರೀತಿ .
--- ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

02 Sep 2017, 11:37 am

ಭೋಗ ವರ್ಜನೆ

ಭೋಗ ವರ್ಜನೆ
---------------------

ಕಾಣದ ಅದೃಶ್ಯದೆದೆಯ ಮೇಲೆ ಹೂವಿಟ್ಟಂತೆ,ಕಂಪು
ಮಲಗಿದಾಗಲೊಮ್ಮೆ ಎದೆ ಬಡಿತ ,ನಿನ್ನ ನೆನಪು.

ಇಂದೆಷ್ಟೋ ನಾಳೆಗಳ ಹಿಂದೆಷ್ಟೋ, ಅಳತೆಗಳು
ಬಾಧಿಸದೆ ಬೆಂಬತ್ತಿ ಓಡಿ ಬರುತ್ತಲಿವೆ ,ಕನಸುಗಳು

ವೈಶಾಲ್ಯ ಬದುಕಿನ ವಿಸ್ತಾರದಲ್ಲೊಂದು,ತೇಲಾಟ
ಮಂಕಾದ ಮನಕ್ಕೊಂದು ಇಂಪಾದ ಸಂಗೀತ,ನೀನು

ಜಪಿಸುವಾಗಲೊಮ್ಮೆ ಯೌವನದ ಬಂದರು,ಹಗಲು
ನಿಟ್ಟುಸಿರು ಬಿಟ್ಟು ಬಿಕ್ಕಳಿಸಿದಾಗ ನೆನಪಾಗುವುದು,ಆ ತಾಜಮಹಲು.,

ವಾಂಙ್ಮಯ ಜಗತ್ತಿನಲ್ಲಿ ಇನ್ನೆಷ್ಟೋ ಗಳಿಗೆಗಳು
ನೋವ ನುಂಗಿ ದಾಹ ಸಹಿಸುತ್ತಿವೆ,ರಾತ್ರಿಗಳು

ಯೌವನವನ್ನು ನುಂಗಿದ ಆ ಭೋಗವರ್ಜನೆ
ಇನ್ನೂ ಹಾಯಾಗಿ ನಿದ್ರಿಸುತ್ತಿದೆ,ದಡ ಇನ್ನೆಲ್ಲಿಗೆ


-ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

02 Sep 2017, 11:17 am

ನಾನೊಂದು ಗಗನ

ಯಾರೊಂದುಗೂ ಬೆರೆಯದ ಅಗಸವು ನಾನು ನೋಡಲಷ್ಟೇ ಚಂದ ಕೈಗೆಟುಕದೇನೆ ಕೊಡುವೆನು ಆನಂದ ವೈಶಾಲ್ಯತೆ ನನ್ನ ಊರು
ಕಣ್ಣೀರ ಸಾಗರ ನನ್ನ ಉಸಿರು...............

ಭೋರ್ಗರಿದು ಮಿಂಚುಗಳೊಡನೆ
ಆಟವಾಡುವೆನು ಗುಡುಗಿನ ಸದ್ದಿಗೆ ಬೆಚ್ಚಿ ಬಿದ್ದು ಕತ್ತಲಾಗುವೆನು...............

ನೋಡುವಷ್ಟು ದೂರ ಭುವಿಮೆಲೆ ನಿಂತ ಜನರು ನನ್ನ ಕಣ್ಣಿಗೆ ದಿನನಿತ್ಯ ಕಾಣುವರು ಆದರೆ ಅವರ ಒಳಗಿನ ಕಲ್ಮಶ,ಸ್ವಾರ್ಥ ನನಗೆಂದಿಗೂ ತಿಳಿಯುದಿಲ್ಲ................

ನನ್ನತ್ತ ಕಣ್ಣೆತ್ತಿ ನೋಡಿದವರ ನೋವು ನೋಡುವೆ ನೊಂದ ಮನಗಳ ವ್ಯಥೆಯನ್ನು ನಾನರಿತು ನಲಿವು ತುಂಬುವೆ...............

ಬಿಸಿಲೆಂದು ಸೋತು ನೆರಲಾಸರೆ ಬೇಡಿದವರಿಗೆ ಮೋಡಗಳ ಅಡ್ಡಿಯಾಕಿ ಮನಸಾರೆ ಕಣ್ತುಂಬಿ ಮಳೆಯಾಗುವೆ................

ಚಳಿಯೆಂದು ನಡುಗುವವರಿಗೆ ಸೂರ್ಯನ ಕಿರಣಗಳ ಕರೆತಂದು ಶಾಖವನ್ನು ನಾನಿಡುವೆ
ದಿನನಿತ್ಯ ದುಡಿದು ಬೆಂದವರಿಗೆ ರಾತ್ರಿಯ ಚಂದಿರನ ತಂಪಾಗಿ ಕರೆತರುವೆ.............

ನಿಮ್ಮ ನಗೆಯನ್ನು ನೋಡುವಾಸೆಯಿಂದ ನಕ್ಷತ್ರಗಳ ಕಾಂತಿ ಇರುಳಲ್ಲಿ ನಾ ತುಂಬುವೆ.......

ಎಲ್ಲರಂತೆ ನಾನಿಲ್ಲ ನಾನೆಂದಿಗೂ ನನ್ನ ನಿಷ್ಕಲ್ಮಶ ಮನಸೊತ್ತಾ
ಹೊತ್ತ ಗಗವೇ.................

- ಚುಕ್ಕಿ

02 Sep 2017, 10:14 am

ಜಂಗಮವಾಣಿ

ಗೆಳೆಯಾ..
ಕೆಲವೊಮ್ಮೆ
ನನಗನ್ನಿಸುತ್ತದೆ
ನಾನು ಹುಡುಗಿ
ಆಗುವ ಬದಲು
ನಿನ್ನಿಚ್ಛೆಯ
ಒಂದು ಮೊಬೈಲ್
ಅಗಿದ್ದರೇ
ಚೆನ್ನಾಗಿರುತ್ತಿತ್ತು
ಕಾರಣ ಇಷ್ಟೇ
ನನ್ನ ಭಾವನೆಗಳನ್ನು
ಅರ್ಥಮಾಡಿಕೊಳ್ಳುವದಕ್ಕಿಂತ
ಆ ನಿರ್ಜೀವ
ಮೊಬೈಲ್‌ ನಿನಗೆ
ಹೆಚ್ಚು ಇಷ್ಟವಾಗುತ್ತದಲ್ಲ...!

ಮಾನಸಾ ಎಪಿ...

- ಮಾನಸಾ ಎಪಿ

02 Sep 2017, 09:16 am

ಅಂತರ್ಜಾಲ

ನೆಟ್ವರ್ಕ್ಗೆ ಏಕಿಷ್ಟು ಮುನಿಸು
ಅವಳ ಕಾಣುವ ಬಯಕೆ ಎದೆಯಲ್ಲಿ
ಅದಮ್ಯ ಆಗಿದ್ದರೂ
ಯಾರಿಗೂ ಅರಿವಾಗದಂತೆ
ಬಚ್ಚಿಟ್ಟುಕೊಂಡಿರುವೆ ಮನದಲಿ
ನನ್ನ ಮನದ ದುಗುಡ
ಅರೆತೂ ಕೂಡ
ನೀ ಹೀಗೆ ಮಾಡಿದರೆ
ದೂರದಲ್ಲಿ ಅಲ್ಲೆಲ್ಲೋ ಇರುವ
ನನ್ನ ಮುದ್ದು ರಾಜಕುಮಾರಿಯ
ಪ್ರೀತಿಸಲಿ ಎನಿತು
ಮುದ್ದಿಸಲಿ ಎಂತು
ನೀ ಮುನಿಸಿಕೊಂಡರೆ
ನಿನ್ನ ನಾನು ಸಮಾಧಾನ ಪಡಿಸಬಲ್ಲೆ
ಅದರೆ ನನ್ನವಳನ್ನು ಸಮಾಧಾನ
ಮಾಡಲು ಸಾಧ್ಯವಿಲ್ಲ
ಅವಳ ಕಣ್ಣೀರಿಗೆ ಕರಗಿ
ನೀರಾಗಿ ಬಿಡುವೆ
ಅವಳ ಮುಗ್ದ ಪ್ರೀತಿಯಲಿ
ಮಾತೆ ಬಾರದ ಮೌನಿಯಾಗಿಬಿಡುವೆ
ಮತ್ತೆಂದು ನೀ ಮುನಿಯದಿರು
ನನ್ನವಳನ್ನು ನನ್ನಿಂದ
ದೂರಾಗಿಸದಿರು

ಮಾನಸಾ ಎಪಿ.

- ಮಾನಸಾ ಎಪಿ

02 Sep 2017, 09:05 am

ಹುಚ್ಚು ಮನಸ್ಸು

ನಿನ್ನೊಲವಲಿ ಮಿಂದ ಮನವು
ಕಾಣುತಿದೆ ನಿನ್ನದೇ ಕನಸು
ನನಸಾಗಿಸಲು ನೀ ಬರುವ
ದಾರಿಯನು ಕಾಯುತ
ಹಗಲಿರುಳೆನ್ನದೇ
ಪರಿತಪಿಸುತಿದೆ ಜೀವ ನಿನಗಾಗಿ
ಅರಿತಾದರು ಮನದಾಳದ ಭಾಷೆಯ
ಬಂದು ಸೇರು ಇನಿಯ

ಮಾನಸಾ ಎಪಿ.

- ಮಾನಸಾ ಎಪಿ

02 Sep 2017, 12:31 am

ಹಠಮಾರಿ ಮನಸ್ಸು

ಮತ್ತೆ ಮತ್ತೆ ಬೇಕೆನ್ನುವ
ಹಠಮಾರಿ ಮನಸ್ಸಿಗೆ
ನಿನ್ನದೆ ಬಿಸಿ ಮುತ್ತಗಳು.!
ತಂಗಾಳಿ ಬೀಸಿ ಮನ
ನವಿರೇಳಿಸುವ
ಮಧುರ ಕ್ಷಣಗಳು.!
ಸಂಗಾತಿಯ ಹಿತವಾದ
ಅಪ್ಪುಗೆಯಲಿ
ಬಂಧಿಯಾಗಿ ಮೈಮರೆತು
ಒಲುಮೆಯ ಬಯಕೆಯು
ನವ ಪಲ್ಲವದಿ ಅರಳುತಿದೆ
ರಸಮಯ ಘಳಿಗೆಗಳ
ನೆನೆನೆನೆದು ಮತ್ತೆ ನಿನ್ನ
ಜೊತೆ ಒಂದಾಗಲು...!

ಮಾನಸಾ ಎಪಿ..

- ಮಾನಸಾ ಎಪಿ

02 Sep 2017, 12:26 am

ಬಿರುಕು

ಮತ್ತೆ ಬರುವೆನೆಂದುಕೊಳ್ಳಬೇಡ
ನಿನ್ನ ಬಾಳಿನಲಿ
ಒಂದು ಭಾರಿ ಬಾಗಿಲು ಮುಚ್ಚಿದ ಮೇಲೆ
ಅದು ಬರೀ ಕತ್ತಲು
ನೀ ಅಂದುಕೊಳ್ಳಬಹುದು ನಾ ಸರಿ ಹೋಗಬಹುದೆಂದು
ಮನ ಹೇಳಿ ಆಗಿದೆ ದೂರ ಸರಿದು ಬಿಡು ಎಂದು
ಇನ್ನೆಲ್ಲಿದೆ ನಾವಿಬ್ಬರು ಜೊತೆಯಾಗುವ
ಸಂಭವ....?!!

- ಎಸ್.ಬಿ

01 Sep 2017, 10:43 pm

ಶುಭ ರಾತ್ರಿ...

ಮಲಗು ನಿ ಮಲಗು
ತುಂಬ ಧಣಿದಿರುವೆ..
ಮೆಲುಕು ಹಾಕು ನಿನ್ನ ಸರಿತಪ್ಪುಗಳ
ಕನಸುಕಾಣು ನಾಳಿನ ಗುರಿಯ
........... ಕಡೆಗೆ
ನಾಳೆ ಬರುವ ನನ್ನ ಸ್ನೇಹಿತ.. ಹಗಲು
ಕೈ ಜೋಡಿಸುವ ನೀ ಗುರಿಯೆಡೆಗೆ
............ ಸಾಗಲು!

ಶುಭವಾಗಲಿ.... ನಾಳಿನ ದಿನ ನಿಮಗೆ


--------ಮಂಜು

- ಮಂಜು

01 Sep 2017, 10:28 pm