Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೊಂದ ಹೃದಯ

ಪ್ರೀತಿಯನ್ನು ಬಿಟ್ಟಿರುವಾಗ
ಪ್ರೀತಿಯ ನೋವು
ಪ್ರೀತಿಸಿದವರಿಗೆ ಮಾತ್ರ ಗೊತ್ತಿರುತ್ತದೆ
ಹೊರೆತು
ಪ್ರೀತಿ ಮಾಡಿದಂತೆ ನಟಿಸಿದವರಿಗೆ ಅಲ್ಲ
ಪ್ರೀತಿಯಲ್ಲಿ ನೊಂದ ಮನಸ್ಸು

- Manu virat

24 Aug 2017, 02:58 pm

ರಾಜಕಾರಣಿ.. ಸರಕಾರಿ ಕೆಲಸ...

ಬೆಪ್ಪುತಕ್ಕಡಿ ಬೆಪ್ಪುತಕ್ಕಡಿ ...
ಏನು ಮಾಡುತಿರುವೆ ಎಂದು ಕೇಳಿತು ಕಪ್ಪು ಕರಡಿ...

ನನಗಿದೆ ದೊಡ್ಡ ಸರಕಾರಿ ಹುದ್ದೆ
ಭ್ರಷ್ಟರ ಮೈಯನ್ನೆಲ ಮಾಡಿಬಿಡುವೆನು ಒದ್ದೆ
ನಾ ದೇಶ ಕಾಯುವೆನು
ಬಡತನವ ತೊಲಗಿಸುವೆನು
ಜಾತಿ ಮತ ಧರ್ಮ ಮೀರಿ ಸಮಾಜ ಕಟ್ಟುವೆನು
ಎಲ್ಲರ‌ ನೋವುಗಳ ನಿರ್ಮೂಲನೆ ಮಾಡುವೆನು
ಎಂದಿತು ಬೀಗುತ ಅಭಿಮಾನದಲಿ ಬೆಪ್ಪುತಕ್ಕಡಿ

ಬೆಪ್ಪುತಕ್ಕಡಿ ಮಾತಕೇಳಿ ಗಹಗಹಿಸಿ ಹೇಳಿತು ಕಪ್ಪು ಕರಡಿ..
ಈ ಸರಕಾರ ನನ್ನದು
ವೋಟು‌ ಹಾಕುವವರೆಗಷ್ಟೆ‌‌ ಜನರು‌‌ ನಾಯಕರು
ಆಮೇಲೆನಿದ್ದರು‌‌‌ ನಮಗವರು ಸೇವಕರು
ನಾನೆಳಿದ್ದ ಕೇಳಬೇಕದವನು‌ ನೀನು
ಸಾರ್ವಭೌಮನು‌ ಈ ಸರಕಾರಕ್ಕೆ ನಾನು
ಮಾತು ಕೇಳದಿದ್ದರೆ‌‌ ನೀನು, ಮಾಡುವೆನು ಊರಿಂದೂರಿಗೆ ಎತ್ತಂಗಡಿ
ಆಗಲು ಜಗ್ಗದಿದ್ದರೆ ನಿನಗೆಲ್ಲಿರುವುದು ಭೂಮಿಯ ಮೇಲೆ ಜಾಗ ಬೆಪ್ಪುತಕ್ಕಡಿ
ಭ್ರಷ್ಟತನವೆ ಮೈಯಲೆಲ್ಲ‌ ತುಂಬಿ ನಾನಾಗಿರುವೆನು ಕಪ್ಪುಕರಡಿ
ಮೋಸ ಮಾಡಿ ಟೋಪಿ ಹಾಕಿ ದುಡ್ಡು ಮಾಡಿ ಅನ್ಯರ ಕಾಡಿ ಮೋಜು‌ ಮಾಡಲು ರಾಜಕೀಯವೆ ದೊಡ್ಡ ‌ಗರಡಿ
ಯಾರು ಹಾಕುವರು ಈ ನಾಗಲೋಟಕೆ ಲಗಾಮು‌ ಆಗಲೆ ದೇಶವನೆ‌ ಆಕ್ರಮಿಸಾಗಿದೆ ನಮ್ಮಂತವರೆ ಎಲ್ಲೆಲ್ಲೂ ಹರಡಿ
ಸುಮ್ಮನೆ ಹೇಳಿದಷ್ಟು ಕೇಳಬೇಕು, ಹೇಳಿದಷ್ಟು ಮಾಡಬೇಕು ಸಂಬಳ ಪಡೆಯಬೇಕು, ಕೆಲಸವಿಲ್ಲದಿದ್ದರೆ ಕೈ ಕಟ್ಟಿ ಕುಳಿತಿರಬೇಕು ಛಾವಣಿಯ ಅಡಿ

- ಶ್ರೀಕಾವ್ಯ

24 Aug 2017, 11:47 am

ಪ್ರೀತಿಯ ಅಣ್ಣನಿಗೆ.....

ನೂರು ಕಾಲ ಬಾಳು ನಗುತಲಿ ನೀನು
ಬಯಸಿ ಬಂದ ಭಾಗ್ಯ ನಿನ್ನದಾಗಲಿ!

ಮತ್ತೆ ಮತ್ತೆ ಬರಲಿ ಈ ದಿನಗಳು
ಸಂತಸದ ಕ್ಷಣಗಳು ನಿನ್ನ ನೆನಪಿನಲ್ಲಿರಲಿ!

ಜನುಮ ದಿನದ ಶುಭಾಶಯ ನಿನಗೀದಿನ
ನಿನ್ನ ಕನಸಿನ ಜೀವನ ನಿನಗಾಗಿ ಕಾಯುತಲಿರಲಿ!

ಪ್ರೀತಿ ತುಂಬಿರುವ ನಿನ್ನ ಹೃದಯದಲಿ
ಮಾತುಗಳು ಜೇನಿನಂತೆ ಮಧುರವಾಗಿರಲಿ!

ತಾಯಿಯ ಆಶಿರ್ವಾದದ ಕಾಣಿಕೆಯೊಂದು ಸಾಕು
ನಿನ್ನ ಬಾಳು ಸದಾ ಬೆಳಗುತಿರಲು!

- ಪ್ರಿಯಾಂಕ

24 Aug 2017, 09:54 am

ಅಪ್ಸರೆ

( ಅಪ್ಸರೆ )

ನನ್ನವಳ ಹ್ರುದಯದ ಪಿಸು ಮಾತಿನ ಸ್ವರಗಳ ಶಬ್ದಕ್ಕೆ ಸ್ತಬ್ದವಾಗಿದೆ ನನ್ನ ಕಿವಿಗಳ ತಮಟೆಗಳು.
ನಿನ್ನ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು
ನನ್ನ ಕಣ್ಣಲ್ಲಿ‌ ಅಡಗಿರುವ‌ ಪಾಪೆಗಳು
ತನ್ನ ರೆಪ್ಪೆಗಳಲ್ಲಿ ಮ್ರುದಂಗದ ರಾಗ ಸಂಯೊಜನೆ ಗೊಳಿಸುತ ನಿನಗಾಗಿ‌ ಕಾದಿವೆ .

ನಿನ್ನ ಸೌಂದರ್ಯವನ್ನು ವರ್ಣಿಸಲು ನನ್ನ ನಾಲಿಗೆಯಲ್ಲಿ ಪದಗಳೆ ಹೊರಡದೆ‌
ನನ್ನ ತುಟಿಗಳು ಬರಡಾಗಿ ಬಂಜರು ಭೂಮಿಯಾಗಿ
ನಿನ್ನ ತುಟಿಯಲ್ಲಿ ಓಮ್ಮೆ ನನ್ನ ನೆನೆದರೆ ಸಾಕು
ಬರಡಾಗಿರುವ‌ ತುಟಿಯು ಚಿಗೊರೆಡೆದ ಗರಿಕೆಯ ಹಾಗೆ ಕಂಗೊಳಿಸುವುದು ಮನವೆ

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

24 Aug 2017, 09:44 am

ಏನೆಂದು ಪ್ರಶ್ನಿಸಲಿ

ಏನೆಂದು ಪ್ರಶ್ನಿಸಲಿ ನನ್ನ ಮನಸನು
ನಿನ್ನ ಪ್ರೀತಿಯ ನನಗೆ ತಿಳಿಸೆಂದು ಈ ಕ್ಷಣ.
ಮತ್ತೊಂದು ಮುಂಗಾರಿನ ಸೇರ್ಪಡೆ ನನ್ನ
ಯವ್ವನಕೆ ನಿನ್ನ ರೂಪದಲ್ಲಿ ಈಗಿಂದು ನೀನಾಗಿ.

ಕರೆಯೊಂದು ಕೂಗಿದಂತೆ ನನ್ನನು ನಿನ್ನೆಡೆಗೆ
ಜಾರದೆ ಎಳೆದುಕೊಂಡಂತೆ ನನ್ನ ಮನಸ್ಸನ್ನು .
ಮಾಮೂಲಿ ಕರೆಯೋಲೆ ನಿನ್ನ ಕನಸಿನ ಕಲ್ಪನೆಯೆಡೆಗೆ ಕಳುಹಿಸುರುವೆ ನಿನ್ನ ಕರೆತರಲು ನನ್ನೆಡೆಗೆ.

ಮಳೆ ಬರುವ ಮುನ್ನ ಗರಿಬಿಚ್ಚಿ ಆಡುವ
ನವಿಳಂತೆ ಕುಣಿಯುತಿರುವೆ ನಿನ್ನ ಆಗಮನಕ್ಕೆ.
ಬದುಕು ನಿನ್ನ ಜೊತೆಗೆ ಮರಣ ನಿನ್ನ ಜೊತೆಗೆ
ಮದ್ಯದಲ್ಲಿನ ಮನಸಿನ ಮಾತುಕತೆ ನಿನ್ನ ಹೃದಯದ ಜೊತೆಗೆ.

ಮೊಡಕರಗಿ ಮಳೆಯಂತೆ ನನ್ನ ಉಸಿರಿನ
ತಾಪತ್ರಯ ನಿನಗೆ ಮುಟ್ಟಿಸಲೆಂದು ಮತ್ತೇರಿ ಬರುತಿದೆ ಈ ಧರೆಗೆ ತಂಪುಣಿಸುವ ಬಗೆಯಲ್ಲಿ.

- ಚುಕ್ಕಿ

24 Aug 2017, 07:53 am

ಅವಿನಾಶ್ ಗೌಡ

ಬೆಳಿಗ್ಗೆ 5 ರೂಗೆ ತಿಂಡಿ.
ಇದು ಸಿದ್ದರಾಮಯ್ಯನ ಭಾಗ್ಯ..
ಮದ್ಯಾಹ್ನ 10 ರೂಗೆ ಮುದ್ದೆ ಊಟ. ಇದು ದೇವೇಗೌಡ ಕ್ಯಾಂಟೀನ್ ಭಾಗ್ಯ.
ಇನ್ನು ಉಳಿದಿರೋದು ಯೆಡ್ಡಿ ಮಾತ್ರ..
ಇವರೇನಾದ್ರು ಯೋಚನೆ ಮಾಡಿ ರಾತ್ರಿ ಎಣ್ಣೆಗೆ ವ್ಯವಸ್ಥೆ ಮಾಡ್ಬಿಟ್ರೆ....ಸುಖೀ ರಾಜ್ಯ ಕರ್ನಾಟಕ.....

- Avinash Gowda Avi

23 Aug 2017, 11:24 pm

ತಮ್ಮ

ನಾನು ನನ್ನ ತಮ್ಮನ ಜೊತೆ ಕೋಪ ಮಾಡ್ತೇನೆ ಆದ್ರೆ ಮರುದಿನ ಅ ಕೋಪದ ಪರಿವೇ ಇರಲ್ಲ. ನೆನಪೇ ಇರಲ್ಲ ಯಾಕೆ ಗೊತ್ತಾ ನಮ್ಮ ನಡುವೆ ಅಷ್ಟೋಂದು ಪ್ರೀತಿ,ಮಮತೆ, ನನ್ನ ಜೀವನ ನನ್ನ ತಮ್ಮ .

- ಎಸ್.ಬಿ

23 Aug 2017, 11:19 pm

ಹೇ ಚಿನ್ನ.

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾ

- Manju...

23 Aug 2017, 11:07 pm

ಮರೆತರು ಮರೆಯಲಾಗದ ನೆನಪು

ಮರೆತರು ಮರೆಯಲಾಗದ ನೆನಪು,ಸುಟ್ಟರೂ ಸುಡದಿರುವ ಕನಸು,ಕೊಂದರು ಸಾಯದ ಮನಸ್ಸು,ಇದಕ್ಕೆ ಕರಣ ನೀನ್ನ ಪ್ರೀತಿ,ಕೆಲವೊಮ್ಮೆ ಹೇಳದೆ ಕೇಳದೆ ಬಂದೆ,ಹೋಗುವಾಗ ಕಣ್ಣೀರಿನ ಜೋತೆಗೆ ಜೀವನವನ್ನೇ ಕೊಂದೆ....ಪ್ರೀತಿ ನೀ ಶಾಶ್ವತನಾ...??

- Manju...

23 Aug 2017, 11:07 pm

ಮನಸಿಗೆ ಸಂಗಾತಿ‌ಯ ಹುಡುಕುತಿರುವೆ...

ಮನಸಿಗೆ ಸಂಗಾತಿಯ ಹುಡುಕುತಿರುವೆ
ಜೀವವಿರುವುದೊ, ಇಲ್ಲದ್ದೊ
ಹುಡುಗನೊ‌, ಹುಡುಗಿಯೊ
ಅಂದ ಚೆಂದದ ಮಗುವೊ
ಬಣ್ಣ ಕಳೆದ ಅಂದವಿರದ ಪ್ರಾಣಿಯೊ
ಅಜ್ಜನೊ‌, ಅಜ್ಜಿಯೊ
ಕುರಿಯೊ ,ಕೋಳಿಯೊ
ಕಾಗೆಯೊ,ಗಿಳಿಯೊ
ಕೋತಿಯೊ, ನಾಯಿಯೊ
ಮರವೊ ,ಗಿಡವೊ
ಗೊಂಬೆಯೊ ಇಲ್ಲ ‌ಮರದ ಕೊಂಬೆಯೊ
ಪಾತಾಳಲೋಕದ್ದೊ, ಆಕಾಶಕಾಯದ್ದೊ
ದೇವರಾದ ಕಲ್ಲೊ, ಕಲ್ಲಾಗಿರುವ ದೇವರೊ
ಮನಸಿಗೆ ಸಂಗಾತಿಯ ಹುಡುಕುತಿರವೆ
ಮನಸಾರೆ ನಗುವಾಗ ನಗುತಿರುವೆನೆಂದು
ಅಳಬೇಕೆನಿಸಿದಾಗ ಅಳಬೇಕೆಂದು
ಕಷ್ಟದೊಳಗೆ ಕಷ್ಟವೆಂದು
ಸುಖದೊಳಗೆ ಸುಖವೆಂದು
ಕೋಪದೊಳು ಕೋಪ ತೋರಿ
ಹರುಷದೊಳು ಹರುಷ ತೋರಿ
ಮನಸಿನ ಲೋಕವ ಮುಖದಲಿ ಮರೆಸದೆ
ಮುಖದ ಭಾವವು ನನ್ನನೆ ಆವರಿಸಿದಂತೆ
ನಾನು ನಾನಾಗಿ, ನನ್ನೊಳಗಿನ ಭಾವಕೆ ಬಣ್ಣ ಹಚ್ಚದೆ
ಜಗಕೆ ನಾನು ನಟನೆಯ ತೋರದೆ
ಹೊರಗಿನ ನಾನು, ಒಳಗಿನ ನಾನು ಒಂದೆ ಎಂಬಂತೆ ಇರಲು
ಮನಸಿಗೆ ಸಂಗಾತಿಯ ಹುಡುಕುತಿರುವೆ...

- ಶ್ರೀಕಾವ್ಯ

23 Aug 2017, 09:53 pm