ಮನಸಿನ ತುಂಬಾ ಕಷ್ಟಗಳ ಸುರಿಮಳೆ ತುಂಬಿರುವಾಗ..... ನಗು ಮುಖವ ನಾ ಹೇಗೆ ದರಿಸಲಿ......
ಈ ಕಂಗಳಲ್ಲಿ ಕನಸುಗಳ ಬದಲು ಕಣ್ಣೀರೆ ತುಂಬಿರುವಾಗ ....ನಾ ಇನ್ನು ಹೇಳುವುದಾದರು ಏನು........
ಹುಣ್ಣಿಮೆಯ ಚಂದಿರನಿಗೆಕೋ
ಬೆಳದಿಂಗಳ ಕೊರತೆಯಿದೆಯಂತೆ,
ಮೊಗದ ಅಂದವ ಸಾಲ ಕೊಡುವೆಯಾ ಗೆಳತಿ,
ಮರುಪಾವತಿಗೆ ಚಂದಿರನೇ ಬಂದು ನಿನ್ನ ಮನೆಮುಂದಿನ ಬೀದಿದೀಪವಾಗುವನಂತೆ...
ಸಾಗರದ ಅಲೆಗಳಿಗೆಕೋ ಸರದಿಯ ದ್ವಂದ್ವವಿದೆಯಂತೆ,
ಶಾಂತತೆಯ ಕಳಿಸಿ ಕೊಡುವೆಯಾ ಗೆಳತಿ,
ದಿನವೆಲ್ಲವೂ ನಿನ್ನ ಮುಂಗುರುಳ ತುದಿಯಲ್ಲೇ ಅವಿತು ಮೊಗದ ಮೇಲೆ ಹರಿಯುವವಂತೆ..
ಮುತ್ತುರತ್ನಗಳ ಹೊಳಪೆಲ್ಲವೂ ಕಳೇಗುಂದಿದೆಯಂತೆ,
ನಿನ್ನ ಮಾತುಗಳನ್ನೇ ಧಾರೆಯೆರೆಯುವೆಯಾ ಗೆಳತಿ,
ಮರುಉತ್ತರಿಸದೆ ಬಿಂಕಬಿಟ್ಟು ನೀ ನಡೆವ ದಾರಿಗೆ ಹಾಸಾಗಿ ಸಾಲ ತೀರಿಸುವುದಂತೆ..
ಬೆಟ್ಟ ಶಿಕರಗಳಿಗೆಕೋ ಮೌನದ ದೂಷವಿದೆಯಂತೆ,
ಮೌನದ ಅಂಚನ್ನು ತುಸು ನೀಡುವೆಯಾ ಗೆಳತಿ,
ಈ ಕಾಣಿಕೆ ಅರಿತು ನೀ ಎಲ್ಲೇ ಹೋದರು ತಂಗಾಳಿ ಬೀಸಿ,ನೆರಳು ಧನ್ಯವಾದ ತಿಳಿಸುವುದಂತೆ...
ನದಿ ಕಲ್ಯಾಣಿಗಳಿಗೆಕೋ ಪವಿತ್ರತೆಯ ದೋಷವಿದೆಯಂತೆ,
ನಿನ್ನ ಪಾದದ ದನಿಯ ಸ್ಪರ್ಶಿಸುವೆಯಾ ಗೆಳತಿ,
ಪ್ರತಿಯಾಗಿ ನೀ ಎಲ್ಲೇ ನಡೆದರು ಪಾದ ತೊಳೆದು ಸತ್ಕರಿಸುವುದಂತೆ....
ಭುವಿಯ ಗುಣಗಳಿಗೆಕೋ ಕ್ಷಮೆಯ ಮರೆವಿದೆಯಂತೆ,
ನಿನ್ನ ಕ್ಷಮೆಯ ಕಣವನು ಉದಿರಿಸೆ ಗೆಳತಿ,
ನಿನ್ನ ಕ್ಷಮೆಯ ಉದಾರತೆಗೆ ತನ್ನ ಸ್ಥಾನ ಮರೆತ ಭುವಿ ವಂದಿಸುವುದಂತೆ...
ಎಲ್ಲಾ ದೇವರುಗಳಿಗೆಕೋ ನಂಬಿಕೆಯ ಕೊರತೆಯಿದೆಯಂತೆ,
ಒಂದು ದಿನದ ನಂಬಿಕೆಯ ಪಾಠ ಹೇಳುವೆಯಾ ಗೆಳತಿ,
ನಿನ್ನ ಪಾಠಕ್ಕೆ ನಂಬಿಕೆಯ ಪದಕ್ಕೆ ನಿನ್ನ ಹೆಸರನ್ನೇ ಅನುಮೋದಿಸಲು ಆಜ್ಞೆ ಮಾಡುತ್ತವಂತೆ.
ತಾರೆ ಪ್ರಕೃತಿ ಮಳೆ ಸಿರಿಯು ಕೋರಿಕೆಯನ್ನು ನೀ ನೀಗಿಸ ಬೇಕಂತೆ ಗೆಳತಿ,
ಸರದಿಯಲ್ಲಿ ನಿಂತು ಕೈ ಮುಗಿದು ಬೇಡುತ್ತವಂತೆ ನೀ ಎಂದೂ ನಗು ಹೊತ್ತ ಮೊಗದಲ್ಲಿ ಸುಮ್ಮನೆ ನಡೆದಾಡ ಬಾರದಂತೆ...