ಕಷ್ಟಗಳಲ್ಲಿ ಸುಖವಂದಿರುವುದು
ತಿಳಿದರೇ ನೀ ಜಗ್ಗುವುದಿಲ್ಲ
ಸುಖದಿಂದೆ ಹಲವು ಕಷ್ಟಗಳ ಸರಪಳಿ ಇರುವುದು, ಅರಿತರೇ ಜಂಬದಿಂದಿರಲು ಸಾದ್ಯವಿಲ್ಲ
ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿದರೆ ವ್ಯತ್ಯಾಸ ಪಡಿಸಲು ಅವಕಾಶಗಳಿಲ್ಲ.
ಸುರಿಯೋ ಮಳೆ
ನಿನಗಾಗಿ ಕಾದಿದೆ ಇಳೆ
ನೀನಿಲ್ಲದೆ ಇಳೆಯಲಿಲ್ಲ ಕಳೆ
ನೀ ಬಂದು ಕಳೆದಾಕು ನೋವಿನ ಕೊಳೆ
ನೀ ಬಂದು ತೊಳೆಯ ಬೇಕು ರೈತನ ಕಣ್ಣೀರು
ನೀನಿದ್ದರೇನೆ ಅವರ ಬದುಕು ಪನ್ನೀರು
ನೀರಿಲ್ಲದಿದ್ದರೆ ಎಲ್ಲಿಂದ ಬರಬೇಕು ಹಸಿರಾದ ಬೆಳೆ
ಬೆಳೆ ಇಲ್ಲವೆಂದರೆ ಅವರಿಗೆಲ್ಲಿದೆ ಈ ಭೂಮಿಯಲಿ ಬೆಲೆ
ನೀನಿಲ್ಲದೆ ದಾನ ಮಾಡಿರುವರು ಜೀವವ ಯಮನಿಗೆ
ಕಿಂಚಿತ್ತಾದರು ಬೆಲೆಕೊಡರು ಯಾರು ಅವರ ಕಣ್ಣೀರಿಗೆ
ಜೀವ ಉಳಿಸುವ ನೀನೆ ದೂರ ಸರಿದರೆ ಮತ್ತ್ಯಾರು ಅವರಿಗೆ
ಜೀವದಾನ ನೀಡು ನೀನು ಸುರಿದು ಕೆರೆ ಕಟ್ಟೆ ತುಂಬುವರೆಗೆ
ನೀನು ಆಗದಿರು ಈ ಜನರಂತೆ ನಿಷ್ಕರುಣಿ
ನೀನಾಗು ಈ ಜಗಕ್ಕೆಲ್ಲ ಜೀವಧಾರಿಣಿ
ಕಾದಿರುವಳು ತನ್ನೊಡಲಲಿ ಹಸಿರ ನೋಡಲು ಧರಣಿ
ನೀನು ಇನ್ನೂ ಕಾರಣವಾಗಬೇಡ ಆಗಲು ಆತ್ಮಹತ್ಯೆ ಸರಣಿ
ನೇಸರ ಸರಿದ ಇಳಿ ಸಂಜೆಯಲಿ
ತನುವ ಸೋಕುವ ತಂಪು ಗಾಳಿಯಲಿ
ಗೂಡು ಸೇರುವ ಹಕ್ಕಿಗಳ ಇಂಚರದಲಿ
ಪ್ರಕೃತಿ ಅಪ್ಪಿರಲು ಮೌನವನು ಪ್ರಶಾಂತತೆಯಲಿ
ಕೈ ಬೆರಳುಗಳು ತಾವಿಬ್ಬರು ಜೊತೆಗೆಂದು ಬೆಸೆದಿರಲು
ಇಬ್ಬರ ಕಣ್ಣುಗಳು ಕಣ್ಣ ಮುಚ್ಚಾಲೆಯಾಡುತ ಸೇರಿರಲು
ನೋವುನಲಿವಲಿ ನಿನ್ನೊಟ್ಟಿಗೆಂದೂ ಹೆಜ್ಜೆ ಜೊತೆಯಾಗಿರಲು
ತೋಳ ಬಳಸಿ, ಶಿರವ ತಗ್ಗಿಸಿ ಎದೆಗೆ ತನುವು ಒರಗಿರಲು
ಹೇಳುವೆಯೇನು ಮೆಲುದನಿಯಲೊಂದು ಪಿಸುಮಾತು
ಈ ಜಗದಲಿ ಇನ್ನೇನೂ ಬೇಡ ನನಗೆ ನಿನ್ನ ಹೊರತು
ಬದುಕಲು ಆಗದು ಎಂದೂ ನಾನು ನಿನ್ನನು ಮರೆತು
ಇರಬೇಕು ನಿನಗಾಗಿ ನಾನು, ನನಗಾಗಿ ನೀನೆಂದು ಬೆರೆತು
ಪ್ರಿಯವಾಯಿತು ಕೆಮ್ಮಣ್ಣಿನ ಕೆಸರು
ಹುಳಿ ಮಾವಿನ ಹಚ್ಚ ಹಸಿರು
ಅವಳಾಗಲು ಒಡಲು ತುಂಬಿ ಬಸಿರು
ಸಿದ್ಧಳು ತನ್ನೊಡಲ ಸೇರಿದ ಜೀವಕೆ ಕೊಡಲು ತನ್ನ ಉಸಿರು
ಕೂಸ ನೆನೆಯುವಳು ಹಾಕಿ ಅದರಪ್ಪನ ಮುಖದ ಕವಚ
ಕೊಡುವಳು ಆ ಕೂಸಿಗೆ ತನ್ನಮ್ಮನ ಪ್ರೀತಿಯ ಸ್ಪರುಶ
ಬೇಡುವಳು ತನ್ನಪ್ಪನ ಗುಣಗಳು ಸೇರಲೆಂದು ಪ್ರತಿ ನಿಮಿಷ
ನಗುವಳು, ಉಣ್ಣುವಳು ಕೂಸಿರಬೇಕೆಂದು ಹರುಷ
ನೇವರಿಸುವಳು ತನ್ನೊಡಲ ನೆನೆದು ಕೂಸ ಬಾರಿ ಬಾರಿ
ಆಶಿಸುವಳು ಈ ಕೂಸೆ ಇನ್ನೆಂದು ನನ್ನಾಸೆ ಕನಸಿಗೆ ರೂವಾರಿ
ಆ ಕೂಸ ಮೇಲಿನ ಆಸೆಗಳದೆ ಮನಸಲೆಲ್ಲ ಸವಾರಿ
ಕುಲಾವಿ, ಬೆಳ್ಳಿ ಚಮಚವೆ ಹೇಳುವವು ಆ ಸಂಭ್ರಮದ ಪರಿ
ನೋವನುಣ್ಣ ಬೇಕು ನವಮಾಸ ಕೂಸ ಭಾರವ ಹೊತ್ತು
ಆ ಕೂಸಿನ ಹುಟ್ಟು ತರಬಹುದು ಅವಳ ಜೀವಕೆ ಕುತ್ತು
ಮತ್ತೊಮ್ಮೆ ಹುಟ್ಟಬೇಕವಳು ಪ್ರಸವ ವೇದನೆಯಲಿ ಸತ್ತು
ಆದರವಳಿಗೆ ತಾಯ್ತನಕ್ಕಿಂತ ಬೇರೆಯಾವುದಿಲ್ಲ ಸ್ವತ್ತು