Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆಯ ಬರಿಸು ಮನುಜ

ಮಳೆಯ ಬರಿಸು ಮನುಜ
ನೀ ಬರವ ನೀಗಿಸು ಮನುಜ!!
ಮರವ ಬೆಳೆಸು ಮನವ ತಣಿಸು
ಧರಣಿಗೆ ನೀ ನೀರ ಉಣಿಸು!!

ಚಿಗುರೆಲೆಗಳಲ್ಲಿ ಆನಂದ
ಆ ಹರುಷದಿ ಮಳೆಯ ಆರಂಭ!!
ಗಿರಿ ವನಗಳಲ್ಲಿ ಹಸಿರು ತುಂಬಿ
ಹಸಿರಿನಲ್ಲಿ ಉಸಿರು ತುಂಬಿ!!

ನದಿ ತೊರೆಗಳೆಲ್ಲ ಪುಳಕಗೊಂಡು
ಮೈದುಂಬಿ ಉಕ್ಕಿ ಹರಿದು!!
ಧರಣಿಗೆ ಹೊಸ ಹರುಷವನ್ನು
ಬರುವ ನೀಗಿಸಿ ಕರೆತರಲಿ!!

ನವ ಉಲ್ಲಾಸದಿ ಬದುಕ ಕಟ್ಟಿ
ಬದಿಕಿಗೊಂದು ಮರವ ನೆಟ್ಟು!!
ವರವ ಕರುಣಿಸು ಮನುಜ
ನೀ ಮಳೆಯ ಬರಿಸು ಮನುಜ!!

- ಪಿ.ಜಿ.ಜ್ಯೋತಿ

19 Jul 2017, 09:42 am

ಕವನವೇ

ಕವನವೇ ಕವನವೇ
ಕವಿಯು ಬರೆದ ಕವನವೇ!!
ಕವಿಯ ಮನದ ಭಾಷೆ ಅರಿತು
ಪದಗಳಾಗಿ ಬಂದೆಯಾ!!

ಕವಿಯ ಕಲ್ಪನೆಯ ಕೂಸಿನಂತೆ
ನೀನು ರೂಪುಗೊಂಡೆಯ!!
ಕವಿಯು ನಿನ್ನ ಜನುಮ ದಾತ
ಅವ‌ನಿಗೇನು ಕೊಡುವೆ ನೀ!!

ಕವಿಯ ಉಸಿರ ಭಾಶೆಯೇ
ನೀ ಪದದಿ ಬೆರೆತ ಕವಿತೆಯೇ!!
ಕವಿಯ ಬದುಕಿನ ಚರಿತೆಯ
ನೀ ಸ್ವರದಿ ಕಲೆತ ರಾಗವೇ!!

- ಪಿ.ಜಿ.ಜ್ಯೋತಿ

19 Jul 2017, 09:31 am

ಯಾಕ ಬಂದಿ ಸರದಾರ

ಯಾಕ ಬಂದಿ ನೀ ಸರದಾರ
ಏನ ಹೆಸರು ನಿಂದು!!
ಏನ ಕೇಳಿ ನಂಬಲಿ ನಾನ
ಈ ನಿನ್ನ ವರಸೆಯನ್ನ!!

ದುಂಡು ಮೊಗದ ಚಲುವಿನ
ಮ್ಯಾಲ ಚಿಗುರು ಮೀಸೆ ಕಾಣ!!
ನಟನಿ ಎಂದು ಉಹಿಸಲೇ ಬೇಕು
ನಿನ್ನ ನಗುವ ಕಂಡು!!

ನುಂಗಿ ಬಿಡುವ ನೋಟ ಯಾಕ
ಆಚೆ ಹೊರಳಿಸ ನಿನ್ನ ಕಣ್ಣ!!
ನಿಲ್ಲದಿರು ನೀನ ಇಲ್ಲಿ
ದೂರ ಸರಿದು ಹೋಗು!!

ಬೇಲಿ ಮ್ಯಾಗಿನ ಮುಳ್ಳಿನ ಗಿಡದ
ಹೂವಿನಂಗ ನಾನು!!
ನನ್ನ ಸಂಗ ಬಯಸಿದರ ನೀ
ನೋಯಬೇಕು ಚಲುವ!!

- ಪಿ.ಜಿ.ಜ್ಯೋತಿ

19 Jul 2017, 09:17 am

ಮತ್ತೆ ಹಾಡಿತು ಕೋಗಿಲೆ

ಪುನಃ ನೀ ನನ್ನೋಡೆ ಸೇರಿ ಆಡಿದ ಮಾತು,,,
ಹಾಲು ಜೇನಿನಂತೆ ಹೃದಯದಲಿ ಬೆರೆತು,,,

ಉಲ್ಲಾಸ ಉತ್ಸಾಹದ ಚಿಲುಮೆಯೊಂದು ಜೀವ ಪಡೆದಿದೇ
ನನ ತುಂಟ ಯೋಜನೆಗಳಿಗೆ ಕಣ್ಣಲೇ ಸಹಿ ಬೇಕಿದೆ

ಕಿಲರುಬೆರೆಳಲೇ ನಿನ್ನ ಮೈಯ ಸೋಕಲೇ,,,
ಸೋತಿರುವ ಈ ಜೀವಕೆ ಉಷ್ಣ ನೀಡು ನಿನ ಬಿಸಿ ಉಸಿರಲೇ,,,

ಆಡದ ನೂರುಮಾತು ಕೇಳದ ಭಾವನೆಗಳ ವಿವರಿಸಿ ಹೇಳಬೇಕಿಲ್ಲ,,,
ನನ್ನಲಿ ನೀನು ನಿನ್ನಲಿ ನಾನು
ಇರುವಾಗ ಮೌನವೇ ಎಲ್ಲಾ,,

ಪುನಃ ನನ್ನೋಡೆ ಸೇರಿ ನೀ ಆಡಿದ ಮಾತು
ಹೊಸ ಕನಸ ಬಿತ್ತಿದೆ ಹೃದಯದಲೇ ಕೂತು

- pavan

19 Jul 2017, 08:06 am

ನಗಬೇಡ ನನ ಮುಂದೆ

ದಯವಿಟ್ಟು ನಗಬೇಡ ನೀನೆಂದಿಗೂ ನನ ಮುಂದೆ
ಹೃದಯವ ಹಿಡಿದಿಡಲಾರೆ ನಕ್ಕರೆ ನೀ ನನ ಮುಂದೆ

ನಿನ್ನ ನಗುವು ಬರಿ ನಗುವಾಗಿ ಉಳಿಯದೆ
ನನ್ನ ಕನಸಿಗೂ ಎಟುಕದಷ್ಟು ಸೊಗಸಾಗಿ ಬೆಳೆದಿದೆ

ಅದು,
ನನ್ನ ಹೃದಯ ಮಿಡಿತವ ಹೆಚ್ಚಾಗಿಸಿದೆ
ನನ್ನ ಮನಸ್ಸನ್ನು ಹುಚ್ಚಾಗಿಸಿದೆ
ನನ್ನ ತನುವನು ಬೆಚ್ಚಗಾಗಿಸಿದೆ
ನನ್ನ ಬಾಳಿಗೆ ನೆನಪುಗಳ ಅಚ್ಚೊತ್ತಿದೆ
ನನ್ನ ಜೀವಕೆ ಪ್ರೀತಿಯ ಕಿಚ್ಚು ಹಚ್ಚಿದೆ

ನೀ ನಕ್ಕಾಗ ನನ್ನ ಹೃದಯಕೆ
ಸಾವಿರಾರು ಸಿಡಿಲುಗಳು ಬಡಿದಿದೆ

ಸಿಡಿಲುಗಳು ಬಡಿದರೂ ಕಡಲುಗಳೇ ಹುಕ್ಕಿದರೂ
ನನ್ನ ಹೃದಯ ನಿನ್ನ ನಗುವ ಬೇಡುತಿದೆ

- ಅಕವಿ

18 Jul 2017, 09:47 pm

ಪದೇ ಪದೇ....

ಪದೇ‌ ಪದೇ ಭಾನ‌ ನೋಡಿ
ಕರೆದಿದೆ ಭುವಿಯು ಹಾಡಿ
ದೂರದಲಿ ಸೇರಿವೆ ಜನುಮಗಳ ಜೋಡಿ
ಹಿಂಬಾಲಿಸಲು ಮರೆಯಾಗುವರು ದೂರ ಓಡಿ

ಪ್ರೇಮ ಸಂದೇಶ ವಿನಿಮಯಿಸಿವೆ ಆ ಬಾನಾಡಿ
ತಂಪೆರೆದಿದೆ ಇಬ್ಬರಿಗೂ ಮೋಡಗಳೆಂಬ ಒಡನಾಡಿ
ಮುತ್ತಿನ ಮಳೆ ಹರಿದಿದೆ ಹನಿಗಳ‌ ರೂಪ ಧರಿಸಿ
ಹಚ್ಚ ಹಸಿರಾಗಿಸಿರುವನು ಅವನು ಅವಳ ರಮಿಸಿ‌

ಬಿಸಿಲಲಿ ಕಣ್ಣಾಮುಚ್ಚಾಲೆಯಲಿ ಸುರಿಸಲು ಮುತ್ತಿನ ಮಳೆ
ಕಾಮನಬಿಲ್ಲ ಉಡುಗೊರೆಯ ಕಂಡು‌ ರಂಗೇರುವಳು ಇಳೆ
ಅವರೊಳಗೆ ಉಳಿದಿದೆ ಎಂದಿಗೂ ಕೊನೆಯಾಗದ ಸೆಳೆತ
ಅತಿ ಸುಂದರ ಜಗದಲಿ ಅವರಿಬ್ಬರ ಮಿಳಿತ

ಇನಿಯಳಿಗಾಗಿ ಅವನು ಕೈಯ ಚಾಚೆ
ಸಂಧಿಸಿರುವರು ಇಬ್ಬರು ಅಪ್ಪಿ ಕಡಲ ಆಚೆ
ಸಮಯದ ಪರಿಮಿತಿಯೇ ಇರದೆ ಇರುವರು ಜೊತೆಗೂಡಿ
ಎಂದಿಗೂ ಇವರೆ ಒಬ್ಬರಿಗೊಬ್ಬರು ದೂರಾಗದ ಒಡನಾಡಿ

- ಶ್ರೀಕಾವ್ಯ

18 Jul 2017, 06:46 pm

"ಹೆಮ್ಮೆಯ ಪುತ್ರರು"

ಕೊರೆಯುವ ಚಳಿಯಲ್ಲಿ ನಿಂದು,
ಸುರಿವ ಮಳೆಯಲ್ಲಿ ಮಿಂದು,
ಬೇಸಿಗೆಯ ಬಿರುಬಿಸಿಲಿನಲ್ಲಿ ಬೆಂದು,
ಅವರಿವರೆಂಬ ಬೇಧಬಾವವಿಲ್ಲದೆ ,
ಸದಾ ನಮ್ಮೆಲ್ಲರ ಜೀವದ ಉಸಿರೆಂಬ
ದಾಹಕೆ ,
ಸದಾತುಂತುರು ಹನಿಯಾಗಿರುವವರು,
ನನ್ನದೇಶದ
"ಹೆಮ್ಮೆಯ ಪುತ್ರರು".

- Spb...@#

18 Jul 2017, 04:20 pm

ವಿನಂತಿ

ಅದರದಲಿನ ಮಧುರ ಸವಿ ಸ್ವರವ ನೀ ನಿಲ್ಲಿಸಿದೆ,,
ಅದ ಕೇಳಿ ಖುಷಿಯ ಪಡುವ
ಭಾಗ್ಯ ಕೈ ಜಾರಿದೆ,,

ನೀ ನಿಲ್ಲದ ಕನಸು ನರಕ
ಬಾಳು ಇನ್ನೇಕೆ,,
ಕೊನೆಯಾಗದ ಸ್ಫೂರ್ತಿ ಚಿಲುಮೆ
ನೀ ಈ ಜೀವಕೆ,,

ಎಲ್ಲೇ ಹೋದರು ನಾ ಹುಡುಕುವೆ ನಿನದೆ ಜಾಡು,,
ಅನುರಾಗಿಯ ಕೋರಿಕೆಗೆ
ಅನುಮೋದನೆ ನೀಡು,,

ನಿನ ಪ್ರೀತಿ ಶಕ್ತಿ ಇಲ್ಲದ ನಾ ವಿಕಲಚೇತನ,,
ಬರಿದಾದ ಈ ಬಾಳಲಿ
ನೀಡು ಬಾ ಬೆಳಕನ,,

- pavan

18 Jul 2017, 02:55 pm

ನೀನಿರದ ಮೇಲೆ....

ನನ್ನ ನಗುವೇನೆ ನೀನೆ
ನೀನಿರದ ಮೇಲೆ ಏನಿದ್ದರೇನೆ
ಇಲ್ಲ ಕಣೆ, ನನ್ನ ಒಳಗೆ ನಾನೆ
ಎಂದು ಬರುವೆ ನನ್ನ ಜಾಣೆ

ನೀನಿರದ ಮೇಲೆ
ನನಗೆಲ್ಲಿದೆ ನಾಳೆ
ನೀನಿದ್ದರೇನೆ ನನಗೆ ಬಾಳೆ
ನೀನಿಲ್ಲದ‌‌ ನಾನು ಬರಿಯ ಸುಳ್ಳು
ನೀನಿಲ್ಲದ ಬದುಕಾಗಿದೆ ಜೊಳ್ಳು

ನೀನರದ‌‌ ಮನಸು ನೋವನೆ ತುಂಬಿ ಆಗಿದೆ ಪೊಳ್ಳು
ನೆನಪುಗಳು ಚುಚ್ಚಿ ನೋಯಿಸಿವೆ ಆಗಿ ಮುಳ್ಳು
ಮನಸಾಗಿದೆ ಮನೆಯು ನಿನ್ನ ನೆನಪುಗಳಿಗೆ
ಇನ್ಯಾರಿಗು ಕೊಡಲಾರೆ ಮನಸ ಬಾಡಿಗೆಗೆ
ಅದರೊಳಗಿನ ಕನಸು ಕಾದಿವೆ ಅವುಗಳ‌ ಒಡತಿಗೆ

ನನ್ನೀ ಉಸಿರಿಗೆ ನೀನೆ‌ ಒಡತಿ
ನೀನಿರದೆ‌ ನಾನಿರುವೆನೆ ಗೆಳತಿ
ತಿರುಗಿ ಬಾರೆ ನನ್ನ ಜಾಣೆ
ನಿನ್ನಗಲಿ ಬದುಕಲಾರೆ ನನ್ನ ಆಣೆ

- ಶ್ರೀಕಾವ್ಯ

18 Jul 2017, 02:44 pm

ವಿಪರ್ಯಾಸದ ಕನಸು..

ಸುತ್ತಿ ಸುತ್ತಿ ಬರುತ್ತಿದ್ದೆ ನಿನಗಾಗಿ,
ಸದಾ ಬೆನ್ನು ಬಿಡದ ಕರಿನೆರಳಾಗಿ,
ಕಷ್ಟದಲ್ಲಿ ನಿನ್ನ ಕಣ್ಣೀರ ಹನಿಯಾಗಿ,
ನಗುವಾಗ ನಿನ್ನ ಕೆನ್ನೆಯೊಳಗಿನ ಗುಳಿಯಾಗಿ,
ಪ್ರತಿ ದಿನವು ತಳಮಳ ನನ್ನೊಳಗೆ
ಹೀಗೆ,
ವಿಪರ್ಯಾಸ ಇದು ನನಸಲ್ಲ,
ಬರೀ ಕನಸು...

- Spb...@#

18 Jul 2017, 11:00 am