Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೇವರೆ... ನೀನೆಷ್ಟು ಸ್ವಾರ್ಥಿ
ಕೆಲವರಿಗೆ ತಿನ್ನಲು ಗಂಜಿ ಇಲ್ಲ
ನೀನು ತಿನ್ನದೇ ಇದ್ದರೂ
ಮೃಷ್ಟಾನ್ನ ಭೋಜನ ನೈವೇದ್ಯ
ಮನೆ ಮನೆಗೆ ಹೋಗಿ ಅಮ್ಮ ಹಸಿವು
ಎಂದರೂ ಹಿಡಿ ಅನ್ನ ಕೊಡದವರು
ನಿನ್ನ ಮೈಯಿಗೆ ಪಂಚಾಮೃತ
ಸುರಿಯುತ್ತಿರುವರಲ್ಲ
ಕಷ್ಟ ಪಟ್ಟು ಸಾಲ ಮಾಡಿ ಬೀಜ ಗೊಬ್ಬರ
ತಂದು ಹಗಲು ಇರುಳೆನ್ನದೆ
ಉಳುಮೆ ಮಾಡಿ ಬಿತ್ತಿರಲು
ಬಾರದೆ ಹೊಗುವನು ಜವರಾಯ
ಅಷ್ಟು ಇಷ್ಟು ಮಳೆ ಬರಲು
ಸೊಗಸಾಗಿ ಬೆಳೆ ಬರಲು
ಹಬ್ಬದ ಸಡಗರ ರೈತನ ಮೊಗದಲಿ
ಸುಗ್ಗಿಯು ಬಂದಿತು ಹಿಗ್ಗನು ತಂದಿತು
ಎಲ್ಲೆಲ್ಲೂ ರಾಶಿ ಕಣ್ಮನ ತುಂಬಿಹುದು
ಕುಷಿಯಲಿ ಹೇಳಿದನು ಮಗಳಿಗೆ
ಪೇಟೆಗೆ ಹೋಗುವೆನು ಬೆಳೆ ಮಾರಿದ
ದುಡ್ಡಲಿ ತರುವೆನು ಬೆಳ್ಳಿಯ ಗೆಜ್ಜೆ
ಬಣ್ಣದ ಅಂಗಿ ಹೋಗಿ ಬರುವೆ ನನ್ನ ಕಂದ
ಪೇಟೆಯ ತಲುಪಲು ಕತ್ತಲಾಗಲು
ಸುತ್ತಲೂ ಮೋಡ ಕವಿದಿರಲು
ಎತ್ತ ನೋಡಿದರು ನಿಲ್ಲಲು ಜಾಗವಿಲ್ಲ
ದೋ ಎಂದು ಸುರಿಯುತ್ತಿರಲು ಮಳೆ
ಬೆಳೆದ ಬೆಳೆಯಲ್ಲ ನೀರು ಪಾಲು
ದೇವರೆ ನೀನೆಷ್ಟು ಕ್ರೂರಿ....
- chinmayi
27 Jun 2017, 02:42 pm
ಬಾರದ ಮಳೆಯ ಅರಸುತಾ
ಬೀಜದಲಿ ಅಡಗಿದ
ತನ್ನ ಭವಿಷ್ಯವ ನೆನೆಯುತಾ
ಬಾಳ ಈ ಜೂಜಾಟದಲಿ
ಸೋಲ ಕಹಿವಿಷವನುಂಡು
ಭೂತಾಯಿ ಮಡಿಲಿಗೆ ತಲೆಕೊಟ್ಟ
ಚಿರನಿದಿರೆಗೆ ಜಾರುತಾ...
- Indushekar Chinivar
26 Jun 2017, 10:53 pm
ಗೆಳತಿ ಬರೆಯಲೇನು ನಾನು ಸಾವಿರ ಮುತ್ತುಗಳ ಸೇರಿಸಿ ಮನಸ್ಸಿನ ಒಂದು ಕವಿತೆಯ, ಕೇಳದೆ ನೀ ಕೊಟ್ಟು ಹೋದ ನೋವುಗಳ ಕೂಡಿಸಿ ಹೇಳಲೇನು ನನ್ನ ಒಂದು ಜೀವನದ ಚರಿತೆಯ, ಬಿಳಿಯ ಹಾಳೆಯ ಮೇಲೆ ಬರೆದಿದ್ದು ಮಾಸಬಹುದು ಆದರೆ
ನನ್ನ ಹೃದಯದಲ್ಲಿ ನಾ ಕೆತ್ತಿರುವ ನನ್ನ ನಿನ್ನ ಪ್ರೀತಿಯ ಬರಹವನ್ನು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಕಣೇ ಚಿನ್ನ
- PavanGowda
26 Jun 2017, 10:38 pm
ದಾರಿ ತಪ್ಪಿತು ಕಾಲುಗಳು
ಕೆಲಸ ಮರೆತಿದೆ ಕೈಗಳು
ಮಾತು ತಪ್ಪಿದೆ ನಾಲಿಗೆ
ಮೌನವಾಗಿದೆ ಒಲವಿಗೆ
ಮನಸ್ಸು ಕೇಳಿದೆ ನಿನ್ನನು
ನೋಟ ಮರೆತಿದೆ ನನ್ನನು
- PavanGowda
26 Jun 2017, 10:15 pm
ಹುಟ್ಟಿರುವೆವು ನಾವು ಮಾನವರಾಗಿ
ಬದುಕುತ್ತಿಲ್ಲ ಏಕೆ ಸ್ವಾತಂತ್ರ್ಯವಾಗಿ
ದುಡಿ ದುಡಿದು ಬೆವರ ಹನಿ ಸುರಿದು
ಕಾಲುಗಳೆಂಬೊವು ಮರಗಟ್ಟಿದರು
ಬದುಕಲಾರೆವು ನಾವು ಬೇರೆ ಯವರ ಅಂಗಿಲ್ಲದೆ.
ಶ್ರಮ ಯಾರುದೊ ಪ್ರತಿಪಲ ಯಾರದೊ
ತಿರುಗಾಡುವ ಕೈಗಳಿಗಿಲ್ಲಿ ತುಂಬಿತ್ತು ನಗದು
ಮೂರೊತ್ತು ದುಡಿವ ಕೈಗಳಿಗಿಂದು ಸಿಕ್ಕಿದ್ದು
ಬರಿ ಚಿಂತೆ ಚಿಂತೆ ಚಿಂತೆ
- Ms
26 Jun 2017, 09:07 pm
ಒಂದೆ ಸಮನೆ ನಿನ್ನ ಯೋಚನೆ ಮಾಡಿ ಮಂಕಾದೆನ !
ನನ್ನ ಮುಂದಿನ ಜೀವನವನರಿಯದೆ ನಿಂತ ನೀರಾದೆನಾ !
ಬೇಡ ಎನ್ದವರ ಬಳಿ ಹೋಗಿ ಕದ ತಟ್ಟುತಿರುವೆ ನಾ !
ಕಿಟುಕಿಯಲ್ಲಿ ಇಣುಕಿದರು ಕಾಣುತಿಲ್ಲವೆ ಆ ನಿನ್ನ ಬಿಂಬ...
-ಗಿರೀಶ್ ರಾಮಕೃಷ್ಣ
- girish r
26 Jun 2017, 09:00 pm
ಕವಿಯು ಹೃದಯದೊಳಿಲ್ಲ
ಕವನಗಳ ಸುಳಿವಿಲ್ಲ
ಆಡಿಕೊಂಡಿದ್ದ ಪದಗಳೆಲ್ಲ
ಇಲ್ಲೇ ಎಲ್ಲೋ ಕಳೆದೋದವಲ್ಲ.
ಕಂಬನಿ ಉಜ್ಜಿದ ಕಣ್ಣು
ಕಳಕೊಂಡಿದೆ ಹೊಳಪನ್ನು
ರೆಪ್ಪೆ ಮುಚ್ಚುವುದ ಮರೆತು
ಹುಡುಕುತಲಿದೆ ಏನನ್ನೋ..
ಬರಿದೇ ಬೀಳುತಿಹವು
ಬಣ್ಣ ಮಾಸಿದ ಕನಸುಗಳು
ಬಿಳಿ ಗೋಡೆಯ ಮೇಲೆ
ಹರುಕು ಮುರುಕು ಚಿತ್ರಗಳು.
ಕವಿ ಹೃದಯ ಸತ್ತಿಹುದೋ
ಹೊಂಗನಸು ಮರೆತಿಹುದೋ
ಬೇಕು ಬೇಡಗಳ ಗೊಡವೆಗಳಿಲ್ಲದೆ
ಕಸದ ರಾಶಿಯಲಿ ಬಿದ್ದಿಹುದೋ.
- ಶ್ರೀಗೋ.
26 Jun 2017, 07:47 pm
ನಾಗರಿಕರಂತೆ- ಸುಸಂಸ್ಕೃತರಂತೆ
ಮುಗುಳುನಗೆ ಬೀರುತ್ತ........
ದಿನವಿಡೀ ಹುದ್ದೆದಾರರಂತೆ
ಸಂಚರಿಸುವರು ಅತ್ತಿಂದಿತ್ತ......
ಮುಂಜಾನೆ ಮಬ್ಬಿನಲಿ
ಮುಸ್ಸಂಜೆ ಹೊತ್ತಿನಲಿ
ಹೊಂಚು ಹಾಕುತ್ತ ಕೂರುವರು
ಅಲ್ಲಿ......ಇಲ್ಲಿ......
ಗಮನ ಬೇರೆಡೆ ಸೆಳೆದು
ತೋರಿಸುವರು ಕೈ ಚಳಕ
ಇವರಿಗಿಲ್ಲ ವಯಸ್ಸಿನ ಮಿತಿ
ಮಾಡುವರು ಎಲ್ಲರ ತಿತಿ
ದೋಚಿ ಹುಣ್ಣುವುದೆ
ಇವರ ಮಂತ್ರ....
ದ್ರೋಹಿಗಳ ಬಂದಿಸಲು
ಆರಕ್ಷಕರು ಮಾಡುವರು
ಹಲವು ತಂತ್ರ....
ಮಂತ್ರಾಕ್ಷತೆಯ ಮಂತ್ರದಿ
ಮಿಂದೆದ್ದ ಮಾಂಗಲ್ಯವನ್ನು
ಬಿಡರು ಈ ದುರುಳರು
ಕೊನೆಗೊಮ್ಮೆ ನರಳಲೇಬೇಕು
ನಮ್ಮೆಲ್ಲರ ಹಿಡಿ ಶಾಪದಿ.....
ನಿಮ್ಮ ಮನದ ಕದವ ತಟ್ಟದೆ
ಪತಿಯ ಅಗಲಿದ ಸತಿಯ.....
ಮಕ್ಕಳ ಆರ್ಥನಾಧ....
ಕಷ್ಟದಿ ದುಡಿದು ಗಳಿಸಿದವರ
ಬಿಸಿಯುಸಿರಿನ ಶಾಪ.......
ಲೂಟಿ ಮಾಡುವುದ ಬಿಡಿ......
ನೀಡಿ ಬಾಳುವುದ ಕಲಿ......
ಮಾನವೀಯತೆಯ ಪಡಿ.....
ಇಲ್ಲವೆ ಮುಂದೆ ನಿನ್ನ ಬಲಿ.....
ಶಾರಧ
- ಶಕುಂತಲಾ
26 Jun 2017, 07:20 pm
( ನನ್ನ ಮನಸಿನ ಅರಗಿಣಿ )
ಕನಸಿನ ಕಣ್ಮಣಿಯೇ .
ನೀನೆ ನನ್ನೆದೆಯ ಅರಗಿಣಿಯೆ.||
ನನ್ನ ಮನಸಿನ ಮನೋರಮೆಯೆ
ನಾನು ಸದಾ ನಿನ್ನ ಪ್ರೀತಿಗೆ ಚಿರರುಣಿಯೆ ||
ನನ್ನ ಬಾಳಿನ ಬೆಳದಿಂಗಳ ಬೆಳಕು ನೀನು.
ಆ ಬೆಳಕಿಗೆ ಕಾವಲುಗಾರ ನಾಗುವೆ ನಾನು||
ನನ್ನ ಹ್ರುದಯದ ಬಡಿತ ನೀನು.
ಅದರಲ್ಲಿ ಅಡಗಿರುವ ತುಡಿತ ನಾನು.||
ತುಡಿತದಿ ಅಡಗಿರುವ ಜೀವ ನೀನು
ಅದಕ್ಕೆ ಬೇಕಾದ ಆಸರೆ ನೀಡುವೆ ನಾನು ||
ನೀನು ನನ್ನ ಮನಸ್ಸಿನ ಭಾವನೆ .
ನಾನೇ ನಿನ್ನ ಕನಸಿನ ಕಲ್ಪನೆ .||
ಎಂದೆಂದೂ ನಿನಗಾಗಿ ನನ್ನ ಮನದ ಆಲಾಪನೆ.
ನಿನಗಾಗಿ ನನ್ನ ಹ್ರುದಯದಿ ಕಟ್ಟಿರುವೆ
ಅರಮನೆ || ನಲ್ಮೆಯ. ಮನವೇ.
ನನ್ನ ಮನದಿ ನಿನ್ನ ನೆನಪು . ಸದಾ. ಹಸಿರು ||
( ಸಂತೋಷ್ || ಜೀತು )
- ಸಂತೋಷ್//ಜೀತು
26 Jun 2017, 12:02 pm
ನಿನ್ನ ಕಣ್ಣುಗಳು ನಗುತ್ತಿವೆ ನನ್ನ ನೋಡಿದ ತಕ್ಷಣ ನನ್ನ ಜೀವ ಇವಳೆಂದು ಹೇಳುತ್ತಾ ನಿನ್ನಲ್ಲಿ..........
ಅಕಾಶದಷ್ಟು ಅರಮನೆ ಬೇಕಿಲ್ಲ ನಾನಿರಳು ನೀನು ಕಟ್ಟಿದ ಹೃದಯದ ಮನೆಸಾಕು ನಿನ್ನ ಜೊತೆ ನಗುತಿರಳು...........
ಅದೆಷ್ಟು ಅಕ್ಕರೆ ನಿನಗೆ ಪ್ರತಿಕ್ಷಣ ನನ್ನಲ್ಲೆ ಇರುವ ಆಸೆ ಕರೆತಂದಿದೆ ನಿನ್ನನ್ನು ನನ್ನೆದೆಯ ಬದಿಗೆ.........
ಹಿಂದೆಂದೂ ಕಾಣದ ಅನುರಾಗ ಕಂಡೆ ನಿನ್ನಲ್ಲಿ
ನಾನೆಂದು ಮರೆಯದ ಸ್ನೇಹದ ಆಸರೆ ನೋಡಿದೆ ನಿನ್ನ ಕಣ್ಣ ಕಾಂತಿಯಲ್ಲಿ ಗೆಳೆಯ...............
- ಚುಕ್ಕಿ
26 Jun 2017, 08:00 am