Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ಅಗಲಿಕೆ

ನಿನ್ನನ್ನೆ ಕಂಡ ನಯನ
ಕನಸುಗಳ ಕಟ್ಟುತಿವೆ!
ಮನಸಿನನ್ನಲ್ಲಿ ನಿನ್ನ ಬಗ್ಗೆಯೆ ಹಾಡುಗಳು
ಒಮ್ಮಿಂದೋಮ್ಮೇಗೆ ಬರುತಲವೆ!
ನೀ ನನ್ನ ಮಾಯದ ಶಶಿ ಗುಲಾಬಿ....

ನೋಟ ಕಾಣದಿದ್ದಂತೆ ಎಲೆಗಳ ಆರಟ
ನಟ ನಟಿಸುತಿರಲು ಪಕ್ಷಿಗಳು!
ಕಾಡಿ ಹೋದವು ನನ್ನ ಆಸೆಗಳು'
ಮುಗಿಲ ಮಲ್ಲಿಗೆಯು ಬಾಡಿದವು!
ಮರು ಅರಳದಂತೆ.....

ನಿನ್ನ ನಡುವೆ ಕಳೆದ ಸಮಯವು
ನಾಳಿನ ಚಿಂತೆ ಮರೆಸಿತು!
ನೀ ಇಲ್ಲದ ಕ್ಷಣಗಳು ನೋವನ್ನುತರಿಸಿತು..
ಇಂಪು ಧನಿಯ ಬಿಳಿಕೋಗಿಲೆ!
ಸೋತಿದೆ ಮನ...

ನೀ ಇಲ್ಲದೆ ಸಂಜೇಯ ಕಾಡಿತು
ಕಂಪಾದ ಬಾನು ಆಸೆಯ ಕೆರಳಿಸಿತು!
ಮೋಡದ ಹಂಚು ನೀ ಅತ್ತಿರ ಇಲ್ಲದನ್ನು
ಕಂಡು ಅಪಹಾಸ್ಯ ಮಾಡುತಿವೆ.......

- ak

25 Jun 2017, 11:24 pm

ಪ್ರೀತಿ ನೀತಿ ಭೀತಿ....

ನಿನ್ನಯ ಪ್ರೀತಿ
ಇರಲು ಹೂವಿನ ರೀತಿ
ಮನಸಿಗೆ ಸಮ್ಮೋಹನ ಸ್ಥಿತಿ
ನನ್ನಲಿ‌ ನನ್ನನೆ‌‌‌ ಹುಡುಕುವ ಪರಿಸ್ಥಿತಿ
ಕೊನೆಯಿರುವುದೆ ಕಣ್ಣೊಳಗಿನ ಕನಸಿಗೆ ಮಿತಿ

ನುಡಿವ ಗಿಳಿಯಂತೆ ನಾನು
ಕೈ ಹಿಡಿದು ನಡೆಸಿರಲು ನೀನು
ಕಾದು ಕೊಲ್ಲುವ ಗಿಡುಗವಾದೆಯೇನು?
ಕತ್ತಲಲಿ‌ ಕತ್ತ ಇಸುಕಿರಲು ನೀನು
ನಂಬಿ ಬಂದ ಉಸಿರಿಗೆ ಅರ್ಥ ಉಳಿಯುವುದೇನು

ನನ್ನದು ಎದೆಗವಚಿ‌ ಕೂತ ‌ಗುಬ್ಬಚ್ಚಿಯ ಮತಿ
ನೀನರಿಯಲಿಲ್ಲ‌ ಎದೆಗೊರಗಿ ಕುಳಿತಾಗಿನ ಮನಸ್ಥಿತಿ
ಪ್ರೀತಿ ಪ್ರೇಮಕೆ ಇರಬೇಡವೆ ಒಂದು ನೀತಿ
ಜಾರಿ ಹೋದರೆ ಮನಸೆ ನಂಬಿದ ಪ್ರೀತಿ
ಸಾವು ಬಂದರು ಇರದು ಜೀವಕೆ ಭೀತಿ

- ಶ್ರೀಕಾವ್ಯ

25 Jun 2017, 10:26 pm

ನಾನು

ಉತ್ತರವಿಲ್ಲದ ಸಾವಿರ ಪ್ರಶ್ನೆಗಳು ನನ್ನನ್ನೇ
ಧ್ಯೇಯವಾಗಿಟ್ಟುಕೊಂಡು ಈ ಕ್ಷಣಕ್ಕೆ ಕಾಡುತ್ತಿವೆ ಉತ್ತರ ಕೊಡು ಎಂದು...........

ಎಷ್ಟೇ ಹೊಡೆತ ಬಿದ್ದರು ಅಚ್ಚಳಿಯದ ಶಿಲೆಯಾದೆ ನಾನು........

ಸಮುದ್ರದ ಅಲೆಯಂತೆ ತೀರಕ್ಕೆ ಅಪ್ಪಳಿಸಿ ಜೋರಾದ ಹೊಡೆತಕ್ಕೆ ಗುರಿಯಾಗಿ ಮತ್ತೆ ಅದೇ ಕಣ್ಣೀರ ಸಾಗರ ಸೇರುತ್ತಿರುವೆ................

ನಾನು ಎಂಬ ಒಂದು ಪದವು ನೋವು ಎಂಬ ಎರಡಕ್ಷರಗಳಲ್ಲಿ ಬೆರತೊಗಿ ಜೀವನದ ಪಯಣ ಸಾಗಿಸುತ್ತಿವೆ ನಿರಂತರ ಅತ್ತು ಅತ್ತು............

- ಚುಕ್ಕಿ

25 Jun 2017, 08:11 pm

ಗೆಳತಿ ನನ್ನ ಮನದೊಡತ

ಕಪ್ಪುಗಟ್ಟಿದ ಭಾನು,
ರೆಕ್ಕೆ ಮುರಿದುಕೊಂಡ ಕಾಗೆ,
ಕಂಡವರಿಗೆ ಕೈ ಚಾಚುವ ಹರಕಲು ಹುಡುಗಿ,
ಸಂತೆ ಮುಗಿದ ನೀರವ ರಸ್ತೆ,
ಬೊಚ್ಚು ಬಾಯಿ ಅಜ್ಜಿಯ ನಿರಿ ಚಹರೆ
ಕಿಟಕಿಯಾಚೆಗೆ ಏನೂ ಹೊಸದಿಲ್ಲ…

ಈಚೆಗೂ ಅಷ್ಟೇ…
ನಿನ್ನ ನೆನಪುಗಳು… ಮತ್ತದೇ ಖಾಲಿತನ…
ಗೆಳತಿ ನನ್ನ ಮನದೊಡತಿ......
....

- ರಾಮು ಎಸ್

25 Jun 2017, 07:25 pm

ಬರಿದಾದ ಮನಸ್ಸು

ಬರಿದಾದ ದಾರಿಯಲ್ಲಿ .
ಬಾಡಿ ಹೊದ ಹೊವಿನ ಹಾಗೆ.
ಮನಸೊರೆಗೊಂಡ ಮನದ ಭಾವನೆಯಲ್ಲಿ

ಬೆಂದು ಮಂಕಾಗಿರುವ ಇರುವ ಮನಸ್ಸಿನ
ಮಿಡಿತ ಇಂದು ಕವನವಾಯಿತೆಂದು ಹೇಳುತ್ತಿರುವೆ
ನಾನಿಂದು ಎಂದೆಂದೂ...ππ


ಸಂತೋಷ್// ಜೀತು

- ಸಂತೋಷ್//ಜೀತು

25 Jun 2017, 06:04 pm

ನಿನ್ನಲ್ಲಿನ ನಾನು..........

ಕಪ್ಪು ಹಾಳೆ ಮೇಲೆ ನನ್ನ ನಗೆಯಿಂದ ಬರೆದ ಬಿಳಿ ಹೆಸರು ನನ್ನ ನೆರಳಲ್ಲಿನ ನೀನು.........

ಆಕಾಶದಲ್ಲಿ ಸಂಧ್ಯಾ ವೇಳೆಗೆ ಮುಂಬರುವ ನಕ್ಷತ್ರವು ನೀನು............

ನೀನೇಷ್ಟೇ ದೂರದಲ್ಲಿದ್ದರು ನನ್ನ ಪ್ರೀತಿಯ ಬೆಳಕ ಬೀರುವ ಶಶಿಯು ನಾನು.............

ನೆನ್ನೆಯ ನೆನಪು ನೀನು ನಾಳೆಯ ಕನಸು ನೀನು ಈ ಕ್ಷಣದಲ್ಲಿ ಆಲೋಚನೆ ನೀನು...........

ನನ್ನಲ್ಲಿನ ನಗುವು ನೀನು ನನಗಾಗಿ ನನ್ನಲ್ಲೇ ಅಡಗಿರುವ ಉಸಿರು ನೀನು ನನ್ನೆದೆಯ ಬಡಿತ ನೀನು....................

- ಚುಕ್ಕಿ

25 Jun 2017, 05:59 pm

(ಬೆಳದಿಂಗಳ ದೀಪ)

( ಕಾಲ ಚಕ್ರ )

ಜೀವನವೆಂಬ‌ ದಾರಿಯಲಿ ಓಂಟಿಯಾಗಿ‌ ನಡೆಯುತ್ತಿರುವೆ ಅದರ ನಡುವಿನಲಿ .

ಕಣ್ಣಿಗೆ ಕಂಡ್ಡದ್ದೆಲ್ಲ ಮರೆಯಾಯಿತಲ್ಲ.
ದೊರೆತ ಪ್ರೀತಿಯು ನಶ್ವರ ವಾಯಿತಲ್ಲ.

ಕತ್ತಲು ಕವಿದಿರುವ ಮನಸ್ಸಿನಲ್ಲಿ ಎಣ್ಣೆ ಬತ್ತಿ ಇಡಿದು‌ ನನ್ನ ಜೀವನದಲ್ಲಿ ಬೆಳದಿಂಗಳ ದೀಪವನ್ನು ಹಚ್ಚಲು ಯಾರು ಇಲ್ಲ.
ನನ್ನ ಬಾಳು ಕತ್ತಲಿನ ಕೊಟೆಯಾಯಿತಲ್ಲ.
ನಾ ಕತ್ತಲಿನಲಿ ಕಣ್ಣಿದ್ದರು ಕುರುಡನಾಗಿ ಬದುಕುತ್ತಿರುವೆನಲ್ಲ.

ಕಾಲವೆಂಬ ಚಕ್ರದಲ್ಲಿ ಸುತ್ತುವ‌ ಬುಗುರಿಯಾಯಿತಲ್ಲ ನನ್ನ ಈ ಜೀವನ

ಸಂತೋಷ್ // ಜೀತು

- ಸಂತೋಷ್//ಜೀತು

25 Jun 2017, 05:13 pm

ಅವನ ನಗು.......

ಅವನ ನಗೆಯ ಸದ್ದು ಭಾರವಾದ
ನನ್ನ ಮನವ ಸಡಿಲ ಗೊಳಿಸಿತು.........

ಆ ನಗೆಯಲ್ಲಿನ ಸೊಬಗು ನೋಡುತ್ತಾ ನಿಂತ ನಾನು ಅವನ ನಗೆಯಲ್ಲಿ ನನ್ನ ಮರೆತು ಹೊದೆನೇನು.............

ಯಾವ ರೀತಿಯ ಭಾವವಿದು ನನ್ನ ಸಿರಿಸೊಗಸ ನಾಚಿಸಿ ನನ್ನ ಮನದಲ್ಲಿ ತಾನೊಂದು ಅಧ್ಯಯ ಶುರುಮಾಡಿತು...........

ಅದು ನಗುವೋ ಅವನಲ್ಲಿನ ಚೆಲುವೋ ಅರಿಯದಾದೆ ನಾನು.........

ನನ್ನ ಗಮನವಿಂದು ಅವನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲವೆಂದು ಅವನಲ್ಲೇ ಉಳಿಯಿತೆ ನಗುವಾಗಿ ನನ್ನ ನೋಡಲು................

ಅವನ ನಗು ಮಾತಾಡುವ ನನ್ನ ಮೌನದ ಮಾತಿನ ಒಲವು ಮರೆಯಾಗದ ನನ್ನ ಪ್ರೀತಿಯ ನಿಲುವು..............

- ಚುಕ್ಕಿ

25 Jun 2017, 04:42 pm

ನನ್ನವಳ ಕಲಾಕ್ರುತಿ

( ನನ್ನವಳ ಕಲಾಕ್ರುತಿ )

ಹ್ರುದಯವೆಂಬ ಅರಮನೆಯಲ್ಲಿ ನನ್ನವಳ ನೆನಪಿಗಾಗಿ ಓಂದು ಸುಂದರ ಸೌಂದರ್ಯ ಬರಿತ ಶಿಲ್ಪವನ್ನು ಕೆತ್ತಿ ಅದರಲ್ಲಿ ಅವಳ ಅಂದವ ಕಡೆನು ನಾನು .

ನಿನ್ನ ಸುಂದರವಾದ ಶಿಲೆಯನ್ನು ಕಂಡಾಗ ಅದರಲ್ಲಿರುವ ನಿನ್ನ ಭಂಗಿಯು ಸೌಂದರ್ಯ ಲಹರಿಯ ಇಂಪಾದ ಸಂಗೀತ ಸುಧೆ ನಿನ್ನೊಳಗೆ ಅಡಗಿ ಕುಳಿತಿದ್ದಂತೆ ನನ್ನ ಮನದಲ್ಲಿ ಸ್ವರಗಳ ಇಂಪಾದ ನಾದವು ಕೇಳಿಸಿತು. ಓ ನನ್ನ ಅಪ್ಸರೆಯೆ ...

( ಸಂತೋಷ// ಜೀತು )

- ಸಂತೋಷ್//ಜೀತು

25 Jun 2017, 04:31 pm

ಮುದ್ದು ಕೃಷ್ಣ

ಬೆಣ್ಣೆ ಕದಿಯುವ ಮುದ್ದು ಕೃಷ್ಣ ಅವನ ಚುರುಕು ನೋಟದಲ್ಲಿ ನನ್ನ ಮನವ ಕದ್ದುಬಿಟ್ಟ...............

ಬ್ರಹ್ಮಾಂಡವ ಬಾಯಲ್ಲಿ ಬಚ್ಚಿಟ್ಟ ಕಳ್ಳ ಕೃಷ್ಣ
ನನ್ನ ಮನವ ಅವನ ಹೃದಯದ ಅರಮನೆಯಲಿ ಕೂಡಿಟ್ಟ.........

ಮಾಧವನ ಮುರಳಿ ಗಾನವ ಕೇಳುತಿರಳು ನನ್ನೆದೆಯ ವೀಣೆ ತನ್ನಂತೆ ತಾನೆ
ಸ್ವರಗಳ ಜೊತೆಗೂಡಿಸುತ್ತಿರುವು ನಿನ್ನ ಉಸಿರಿನಾಡಿಗೆ ಕೃಷ್ಣ...............

ನವಿಲುಗರಿಯ ಚೆಲುವಿಗೆ ಮನಸೋತ ಮಲ್ಲಿಗೆ ನಿನ್ನ ಶಿಗೆಯಲ್ಲಿ ಸೇರಲೆಂದು ಪರದಾಡಿತು ನಿನ್ನ ಮನದ ಮಲ್ಲಿಗೆಯಾದ ಶ್ರೀಯ ಅನುಮತಿ ಕೇಳದೇನೆ ಕೇಳಿತು.............

ನಿನ್ನ ನಗೆಯ ಸದ್ದಲ್ಲಿ ನಿನಾಗದ ನೀನಾಗಿರಳು ನನಗನುಮತಿ ನೀಡುವೆಯಾ ನವನೀತ ಚೋರ..............

- ಚುಕ್ಕಿ

25 Jun 2017, 04:27 pm