Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತುಂತುರು

ನೇಸರನ ಆಗಮನಕ್ಕೆ
ತಂಗಾಳಿಯ ತನನO
ಮಲ್ಲೇಯ ಘಮಕ್ಕೆ
ಜುಮುಗುಡುತಿದೆ ದುOಬಿಗಳ ವದನO
ಗರಿಗೆದರಿದ ಪ್ರಕ್ರುತಿಯು ಮಾಡುತಿದೆ
ಲಾಸ್ಯ ಁನೃತ್ಯO
ತಂದಿದೆ ಹರ್ಷಾ
ಈ ಮೋಹಕ ಮುಂಜವಿನ ಆಗಮನO .

- Chandni

12 Jun 2017, 05:54 am

ವಿಪರ್ಯಾಸ

ಶೋಕಿಗಾಗಿ ಕೋಟಿಗಟ್ಟಲೆ
ಸಾಲ ಮಾಡಿ
ಪಂಗನಾಮ ಹಾಕಿದೋನು
ವಿದೇಶದಲ್ಲಿ ಹಾಯಾಗಿ...

ಮಾಡಿದ ಸಾಲ
ತೀರಿಸಲಾಗದ
ಬಡ ರೈತನ ದೇಹ
ಮರದ ಕೊಂಬೆಯಲ್ಲಿ
ಶವವಾಗಿ....

ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

12 Jun 2017, 12:16 am

ಪ್ರೀತಿ ಏತಕೆ ನಿನ್ನಲ್ಲಿ ಈ ಸ್ವಾರ್ಥ............

ಪ್ರೀತಿ ಮನಸ್ಸುಗಳನ್ನು ಕಟ್ಟಿಹಾಕು
ಸಾಕು ನೀನು ಮನುಷ್ಯನ್ನು ಅಲ್ಲಾ.........

ನೀನಿರುವ ಮನಸಲ್ಲಿ ಸಾವಿರ ತಪ್ಪು ಕಂಡರು
ಸರಿಯೆಂದು ತೋರಿಸುವೆ ನೀನು ..........
ನೀನಿಲ್ಲದ ಮನದಲ್ಲಿ ನೂರು ಸತ್ಯ ಕಂಡರು
ತಪ್ಪೆಂದು ಹೇಳಿಕೊಡುವೆ ನೀನು ನಿನ್ನಲ್ಲೇಕೆ
ಪ್ರೀತಿ ಈ ಸ್ವಾರ್ಥ...............

ಪ್ರೀತಿಸುವೆ ಅಂದರೆ ಕೊಡುವುದು ತಾನೇ ಮರುಕಳಿಸಿ ಪಡೆಯುವ ಕನಸೆಕೆ ಹುಚ್ಚು ಪ್ರೀತಿ ನಿನಗೆ ..................

- ಚುಕ್ಕಿ

11 Jun 2017, 11:13 pm

ಪಂಜರವೇಕೆ .....?

ಹಾರುವ ಹಕ್ಕಿಗೇಕೆ ಬಂಗಾರದ ಪಂಜರ,
ಹಾಡುವ ದನಿಗೇಕೆ ಮಾಮರದ ಕಾತರ,
ಸರಿಸು ದೂರ ಪಂಜರದ ಮನ ಬಾರ......

- Acchu love

11 Jun 2017, 10:27 pm

ನೀ ನನ್ನ ತೊರೆಯುವೆಯಾ....?....?

ಓ ಪ್ರೀತಿಯೇ ನಿನ್ನ ಪಾಲಿಗೆ ನಾ ಮುಳ್ಳದೇನಾ
ನೀ ನನ್ನನ್ನು ತಿರಸ್ಕರಿಸಿ ಬೇರೆ ಹೃದಯದಾಸರೆಯ ಕಡೆ ಹೊರಟೆಯಾ ಗೆಳೆಯ......
ನೀ ನೀಡಿದ ಆಶ್ವಾಸನೆ ಎಲ್ಲವೂ ಬರಿ ಸುಳ್ಳುಗಳ .....

- Acchu love

11 Jun 2017, 10:22 pm

ಮನಸ್ಸಿನ ಮಿಡಿತ

( ಮನಸ್ಸಿನ ಮಿಡಿತ. )

ಓಲ್ಲೆ ಎಂದ ಮನಕೆ ವಜ್ರ ವೈಡೂರ್ಯ ಯಾಕಯ್ಯ.
ನಿನ್ನನು ಹೊಲಿಸಿಕೊಳ್ಳಲು ಯತ್ನಿಸಿದ ನನ್ನ ಮನಕ್ಕೆ ನಿನ್ನ ಮನಸ್ಸು ಎಲ್ಲಿ ಅಲೆಯುತಿದೆ ಎಂದು ತಿಳಿಯದಯ್ಯ .
ಕಣ್ಣಿಗೆ ಕಾಣದ ದಾರಿಯಲಿ ನಿನ್ನಡುಕುತ ನಾನು ಎಲ್ಲಿ ಅಲೆಯಲಯ್ಯ.

ನಿನ್ನ ಹ್ರುದಯದ ಬಡಿತದ ಶಬ್ದಕ್ಕೆ ನನ್ನ ಮನಸ್ಸು ಮಿಡಿಯಿತಯ್ಯ
ಆದರೆ ನಿನ್ನನ್ನು ನೋಡದೆ ನನ್ನ ಕಣ್ಣಲಿ ಕಂಬನಿ ಸುರಿಯಿತಯ್ಯ.
ಇದನ್ನು ನಾನು ನಿನಗೆ ಹೆಂಗೆ ಹೇಳಲಯ್ಯ

ನೀನು ಎಲ್ಲಿ ಅಡಗಿ ಕುಳಿತಿರುವೆ ನಾ ಅಲ್ಲಿಗೆ ಬಂದು‌ ನಿನ್ನನು ಸೇರಿಕೊಳ್ಳಲು ಕಾದು‌ಕುಳಿತೆನಯ್ಯ.
ಚಿಂತಿಸುತ ನನಗೆ ಮನಸು ನೊಯಿತಯ್ಯ ನಾನು‌ ಇದನ್ನು ಹೆಂಗೆ ಹೇಳಲಯ್ಯ ಓ ‌ಅಯ್ಯ.
ನಿನಗೆ ಹೇಂಗೆ ಹೇಳಲಯ್ಯ...
‌‌‌‌‌‌‌‌‌‌‌‌ ‌ ‌ ( ಸಂತೊಷ್ )

- ಸಂತೋಷ್//ಜೀತು

11 Jun 2017, 09:45 pm

ನಿನ್ನ ಉಸಿರಲಿ.......

ಗೆಜ್ಜೆಕಟ್ಟಿ ಹೆಜ್ಜೆ ಹಿಡುತಿರುವೆ ನಿನ್ನ
ಎದೆಬಡಿತದ ತಾಳಕ್ಕೆ ಘಲ್ಲು ಘಲ್ಲೆಂದು......

ನಿನ್ನ ಪ್ರೀತಿಯ ಕುಣಿತದಲ್ಲಿ ಪಾದದಿಂದ
ಚುಂಬಿಸುತ್ತಿರುವೆ
ಈ ಭುವಿಯನ್ನು ನಿನ್ನ ಮನಸೆಂದು...

ನೂರೆಂಟು ಬಣ್ಣಗಳೊತ್ತು ನಾ ಉಟ್ಟ
ವಸ್ತ್ರಗಳ ಅಂಚುಗಳಿಗೆ ಹಂಚುತಿರುವೆ
ನಗುವಚೆಲ್ಲುತ ನನ್ನ ಸೊಗಸನ್ನು...

ನಿನ್ನ ನಗುವಲ್ಲಿ ಮಿಂದು ಬಂದ
ನನ್ನ ನಗುವಿನ ಹೊಳಪಿಗಿಂದು
ಹೊಸತನದ ಸೋಬಗಿನ ಶ್ವೇತವರ್ಣವ
ನೋಡಿ ನಾ ಸೋತೆ ನಿನಗಾಗಿ...

ಈ ಅಪೂರ್ವ ನೃತ್ಯಕ್ಕೆ ಹತ್ತು ರಾಘಗಳ
ಬೆರೆಸಿದ ಸ್ವರಗಳಿಗಿಂದು ಅದನ್ನಾಡಿದ ನಿನ್ನ
ಧ್ವನಿಗೆ ಪ್ರೀತಿಯ ಚುಂಬನ ಸಂಗಾತಿ...

- ಚುಕ್ಕಿ

11 Jun 2017, 07:43 pm

ಮನಸ್ಸಿನ ಭಾವನೆ

( ಮನಸ್ಸಿನ ಭಾವನೆ )

ಮನಸ್ಸೆಂಬುದು ಬರಿ ಮಾನವನ ಭಾವನೆಯಲ್ಲ.
ಮನುಜನ ದೇಹದಲ್ಲಿರುವ ಮಾಂಸದ ಮುದ್ದೆಯಲ್ಲ.
ಅದು ಕನಸ್ಸಿನ ಕಲ್ಪನೆಯನ್ನು ಓಟ್ಟುಗೂಡಿಸಿ.

ಜೀವನವೆಂಬ ಪಯಣವನ್ನು ಸದಾ ಓಟ್ಟಾಗಿ ಮತ್ತೊಂದು ಹ್ರುದಯವನ್ನು ಜೊತೆಗೂಡಿಸಿ
ನಮ್ಮೊಂದಿಗೆ ಜೀವನ ಪರ್ಯಂತ ಹೆಜ್ಜೆಯನ್ನು
ಇಡಿಸುವುದೇ ಮನಸ್ಸು ಸದಾ.........

( ಸಂತೊಷ )

- ಸಂತೋಷ್//ಜೀತು

11 Jun 2017, 02:12 pm

ಜೀವನದ ಸತ್ಯ

ಬರೆದದ್ದೆಲ್ಲ ಕವನವಾಗದು‌. ನುಡಿದದ್ದೆಲ್ಲ ವಚನವಾಗದು. ಕಂಡದ್ದೆಲ್ಲ ಕನಸೆನ್ನಲಾರೆವು.

ಎಂದು ನಡೆದಂತೆ
ನುಡಿಯುತ್ತೇವೆಯೊ ಅದೆ ಎಂದೆಂದೊ ಶಾಶ್ವತವಾಗಿ ಉಳಿವುದು ಅದೇ ಜೀವನದ ಸತ್ಯ‌
( ಸಂತೋಷ್ ಕುಮಾರ್ )

- ಸಂತೋಷ್//ಜೀತು

11 Jun 2017, 12:01 pm

ತುಂತುರು

ನೇಸರನು ಮೈಮುರಿದು
ನಸುನಕ್ಕಾಗ ಹೊಮ್ಮಿತು
ಮುಗಿಲಲ್ಲಿ
ಎಳೆಯ ಕಿರಣಗಳ
ಹೊಂಬಣ್ಣ
ಅದ ಕಂಡ ಭುವಿಯ
ಹೃದಯ ಅಂಗಳದಲಿ
ಚಿತ್ತಾರಗೊಂಡಿತು
ನಿನ್ನ ನೆನಪಿನ ರಂಗೋಲಿ

- Chandni

11 Jun 2017, 05:33 am