Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಸಿರುಡಲು ಭುವಿಯು..

ಹನಿ ಹನಿಯಾಗಿ ಕರಗಿದೆ ಅಂಬರವೆಲ್ಲಾ
ಕೊಳದ ತುಟಿಯು ಗುನುಗಿದೆ ಮೇಘಮಲ್ಹಾರ
ತೊಟ್ಟಿಕ್ಕುವ ಮಳೆಯ ತಾಳಕೆ
ನದಿಯ ಮಂಜುಳ ನಾದಕೆ
ಸಂತಸವು ಬೀಜವೊಡೆದು
ನೆಮ್ಮದಿಯು ಚಿಗುರಿರಲು
ಹಸಿರುಡಲು ಭುವಿಯು ಅಣಿಯಾದಳಿಂದು...

- Indushekar Chinivar

07 Jun 2017, 06:02 pm

ದಿನನಿತ್ಯ

ದಿನವೂ ನಿನ್ನ ಜೊತೆ ನಡಿಯುತ್ತಿದೇ
ರಾತ್ರಿಯೂ ನಿನ್ನ ಜೊತೆ ಕಳೆಯುತ್ತಿದೆ
ಸಮಯ ನಿನ್ನ ಉಸಿರಿನ ಜೊತೆಗೆ ಉರುಳುತ್ತಿದೆ ನನ್ನ ಅನುಮತಿ ಕೆಲದೇನೆ ಸಂಗಾತಿ..........

ವಿಧಿ ಬದಲಿಸಿ ಬಿಟ್ಟೆಯೊ ನನ್ನ ಮನವ
ನಿನ್ನ ಹಿಡಿತದಲ್ಲಿಟ್ಟೆಯೊ ನನಗಂತೂ ತಿಳಿದಿಲ್ಲ.......

ನಿನ್ನ ಮಾಯೆಯಲ್ಲೇ ಬಿದ್ದೇನೋ ಒಲವಿನ ಮೋಡಿಯಲ್ಲೇ ಸಿಲುಕಿರುವೇ ಏನೆಂದು ತಳಿದಿಲ್ಲ
ನಿನ್ನ ಪ್ರೀತಿಸುವುದು ಬಿಟ್ಟರೆ

ದಿನನಿತ್ಯ ನಿನ್ನ ನೋಡಲು ಕಾತೊರೆಯುವುದು ಬಿಟ್ಟರೆ......

- ಚುಕ್ಕಿ

07 Jun 2017, 01:12 pm

ಫಾರ್ಮಸಿ ಸೀಟು

ಎನಗೆ ಸಿಗಲಿಲ್ಲ ಫಾರ್ಮಸಿ ಸೀಟು
ಪಡೆಯಲು ಬೇಕು ಹಣೆಯಲ್ಲಿ ಗೀಟು
ಅದಕಾಗಿ ಬೇಕು ಕಂತೆ ಕಂತೆ ನೋಟು

ಮನೆಯಲಿ ಹೇಳಿದರು ಮಾಡು ನೋಟು
ನಾನಾಗ ಹೊಡೆದೆ ಅದಕ್ಕೆ ಗೀಟು
ಅದಕ್ಕೆ ಬಿತ್ತು ಈಗ ಸರಿಯಾದ ಏಟು!!

- ಪ್ರಕುಲ್

07 Jun 2017, 12:27 pm

ನನ್ನ ಗೆಳತಿ

ಗೆಳತಿ ಎನಲು ಎನ್ನ ಮನದಲ್ಲಿ ಹರುಷ
ಅವಳ ಹೆಸರು ಕೇಳಲು ಬೇಕಾಯಿತು ವರುಷ
ಅವಳ ನೆನಪಿನಲ್ಲೆ ಕಳೆದೆ ಪ್ರತಿ ನಿಮಿಷ

ಅವಳ ಸ್ಪರ್ಶಕ್ಕಾಗಿ ಕಾದ ಈ ಪುರುಷ
ಆದರೂ ಸಿಗಲಿಲ್ಲ ಅವಳ ಸ್ಪರುಷ
ಸಿಕ್ಕರಾಗ ಅದೇ ಎನಗೆ ಹರುಷ!!

ನಾ ಕಾಯುತ್ತಿರುವುದು ನಿನಗೂ ಗೊತ್ತು
ತೋರುವೆ ನಿನಗೆ ನನ್ನ ತಾಕತ್ತು
ಆದರೂ ನಿನಗಿಲ್ಲ ಪ್ರೀತಿಲಿ ನಿಯತ್ತು!!

- ಪ್ರಕುಲ್

07 Jun 2017, 11:05 am

ಚನ್ನಕೇಶವ *ನನ್ನ ಅಣ್ಣ*

ಅಣ್ಣ ಎನಲು ಮನಕೆ ಬೆಣ್ಣೆ ತಿಂದ ಆನಂದ
ಅವನ ಮನವು ತಿಳಿ ನೀರಿಗಿಂತ ಸ್ವಚ್ಛಂದ
ನುಡಿಯು ವೀಣೆಯ ಇಂಪಂತೆ ಆಹ್ಲಾದ

ಅವನಿರಲು ನನಗಿಲ್ಲ ತೊಂದರೆಗಳ ಭಾರ
ಅವನಿದ್ದರೆ ನನಗೆ ಸಂತೋಷದ ಹಾರ
ಅವನಿಂದಲೇ ತಿಳಿಯಿತು ಬದುಕಿನ ಸಾರ

ಬೇಡಿಲ್ಲ ನನಗಾಗಿ ಏನನ್ನು ಎಂದು
ಬೇಡದೇ ನೀಡಿದ ಎಲ್ಲವನು ಇಂದು
ನಾ ಬೇಡುವೆ ನಿನ್ನನೆ ಸೋದರನಾಗಿ ಎಂದೆಂದು.

**** **** ****

ಚನ್ನಕೇಶವ.ಡಿ
ಮಧುಗಿರಿ

- ಪ್ರಕುಲ್

07 Jun 2017, 10:05 am

ಕಂಬನಿ

ಮರೆಯಾದ ಮಾತುಗಳ ಹಿಂದಿನ ಮೌನವನು ನಾನಿಂದು
ಪ್ರಶ್ನಿಸಲೇ ಯಾತಕ್ಕೆ ನಿನ್ನ ಅಗಮನವೆಂದು
ನಾನು ಮೆಚ್ಚಿದ ಅಕ್ಕರೆಯ ಮಾತುಗಳನ್ನು
ಎಲ್ಲಿ ಬಚ್ಚಿಟ್ಟಿರುವೆ ಎಂದೂ...............

ಕಳೆದೊದ ಕಾಲದಲ್ಲಿ ಬೆರತೊದ ನಿನ್ನ ಮಾತು ಕರೆತಂದು ಬಿಟ್ಟಿತು ನನ್ನನ್ನು ನಿನ್ನಲ್ಲಿಗೆ ನಿನ್ನ ಸ್ನೇಹನಿಡೆಂದು ನನ್ನ ಜೀವಕೆ..............

ಕಣ್ಮರೆಯಾದ ಕಂಬನಿಯು ನೀನು ಮರೆಯಾದ ಒಂದು ಕ್ಷಣವೂ ಕಂಗಾಲಾಗಿ ಕಾತೊರೆಯುತ್ತೆ
ನಿನ್ನ ನೋಡುಳು ನನ್ನ ಅನುಮತಿ ಕೆಲದೇನಿ ನಿನ್ನ ಹುಡುಕಲು ತಾನು ಹೊರ ಬಂದು ಕರೆಯುತ್ತೆ ನಿನ್ನ ಹೆಸರೇ ಗೆಳೆಯ........................

ಹೇಗೆ ತಡಿಯಲಿ ಆ ಕಂಬನಿಯ ಕಣ್ಣಲ್ಲೇ ಕೂರೆಂದು ನಿನ್ನ ರೂಪವ ನೋಡುತ್ತಾ ನೋವು ಮರಿಯೆಂದು ಕೇಳಿತಿಲ್ಲ ನನ್ನ ಮಾತನ್ನು....

ಕಂಬನಿಯು ನೀನು ಬೇಕೆಂಬ ಹಠದಲ್ಲಿ ನನ್ನ ತೊರೆದು ನಡೆಯುತ್ತಿದೆ ನಿನ್ನ ಮನಸಿನೆಡೆಗೆ
ರುದಿರವಾಗಿ ನಿನ್ನಲ್ಲೇ ತಾನುಲಿಯಲು........

ಹೊಡೆದು ಕರೆಯಲೇ ಬೈದು ಹೇಳಲೇ ಈ ನನ್ನ ಹಾಳಾದ ಕಂಬನಿಗೆ ನನ್ನಲ್ಲೇ ಉಳಿಯೆಂದು ನಿರಾಗಿ ಅಲ್ಲ ನೋವಾಗಿ ಮಾತಿಲ್ಲದೆ ನನ್ನಾಗೆ ಮೌನಿಯಾಗಿ............

- ಚುಕ್ಕಿ

07 Jun 2017, 12:05 am

ವ್ಯಾಮೋಹಿ ನಾನು.....

ಅತಿ ವ್ಯಾಮೋಹಿ‌ ನಾನು
ಎದುರು‌ ಬಂದಾಗ ನೀನು
ನೀನೆನೆ‌ ನನ್ನ ಒಲವಿನ ಜಾನು
ಸೇರಬಹುದೇನು ನಿನ್ನ ನಾನು.......

ನಿನ್ನ ಮುಂಗುರುಳು ಆಡಲು ಜೋಕಾಲಿ
ಸೋತು ಬರುವನು ನೋಡಲು ಆ ತಂಗಾಳಿ
ತನುವ ಸೋಕಿ ತರುವ ನಗುವ ಮುಖದಲಿ
ಆ ಮುದ್ದು ನಗುವಿಗೆ ಶರಣು ನಾನು ನಿನ್ನಲಿ.........

ಕೊಂಚ ಜಾಸ್ತೀನೆ ಮೌನಿ ನೀನು
ಮೌನದ ಗಾಂಭೀರ್ಯ ಚೆಲುವಿಗೆ ಅನುರಕ್ತನು‌ ನಾನು
ನುಡಿಯುತಿರಲು ನಿಲ್ಲದ‌ ಮಳೆಯಂತೆ ನೀನು
ಮಾತಿನಲೆ ಮಾಡಿದೆ ಅನುರಾಗಿಯಾಗಿ ನನ್ನನು......

ನಿನ್ನ ಕಿರುಬೆರಳ ನನ್ನ ಕಿರುಬೆರಳಲಿ‌ ಸೇರಿಸಲೇನು
ನನ್ನ‌ ಉಸಿರಂತೆ ಕಾಯುವೆನು‌ ನಿನ್ನ ನಾನು
ಈ‌ ಉಸಿರಿನ‌ ಹೆಸರೇನೆ ನೀನು
ಮಾಡಬೇಡವೆ ನನ್ನ ವಿರಹಿ‌ ಇನ್ನೂ......

- ಶ್ರೀಕಾವ್ಯ

06 Jun 2017, 11:21 pm

ಚಿಕ್ಕಾಸೆ...

ಮಾಂದಳಿರು ತೋರಣ ಕಟ್ಟಿ
ಮನಸಾರೆ ಮೋಹವ ಬಿತ್ತಿ
ಮುಂಗಾರು ಮೋಡದೊಲುಮೆಯ ನೆಚ್ಚಿ
ಕಾದು ಕುಳಿತೆನಲ್ಲೇ,
ನೀ ಬರುವಿಯೆಂದು ನಲ್ಲೇ...

ಬಂಡೆ ಮೇಲಿನ ಕಿರು
ಬಿರುಕಿನೊಳಗಿನ ಚಿಗುರು
ಹನಿ ನೀರು ಬಿದ್ದರೆ ಕೊನರು
ಅಲ್ಲೇ ಹಸಿ ಪ್ರೀತಿಯ ಬಿಸಿಯುಸಿರು.

ಬತ್ತಿ ಹೋದ ಕಂಗಳಲ್ಲಿ
ಇಲ್ಲ ಹನಿ ದುಃಖದ ಸೆಲೆ
ನೆತ್ತಿ ಕಾದ ಬಿರು ಬಿಸಿಲಲ್ಲಿ
ಬಾಚಿ ತಬ್ಬಿತು ಮೋಸದ ಬಲೆ.

ಮುರಿದು ಬಿದ್ದ ಒಣ ಮುದಿ ಮರ
ಮರಳಿ ತೋರಿದ ಬದುಕುವ ಛಲ
ಕೊರಡು ಕೊನರಿತು
ಎಂಬಂತಾಯಿತು...

- ಶ್ರೀಗೋ.

06 Jun 2017, 10:57 pm

ನರಳಿ ಸಾಯುತಿರುವೆ ...!!!

ಬರೆದಿತ್ತು ಮನ ನೆನಪಾದಾಗ
ಪುಟ್ಟದೊಂದು ಕವನ
ಮೋಡದ ಮರೆಯಲಿ
ಸೂರ್ಯನ ಕಿರಣಗಳಂತೆ
ಮನಸ್ಸಿನ ಆಳಕೆ ನೀ ಇಳಿದೆ
ಮನಸ್ಸಿಗ ಎಲ್ಲೊ ಮರೆಯಾಗಿ
ನಿನ್ನುಸಿರು ನನ್ನ ಉಸಿರಾದಾಗ
ಉಸಿರು ಕಟ್ಟಿತು ಸುಮ್ಮನಾಗಿ ದೂರವಾದಾಗ
ಓಡುತಿದೆ ಮನದಲಿ ನೆನಪುಗಳ ಹಿಂಡು
ನರಳಿ ನರಳಿ ಸಾಯುತಿರುವೆ
ನಾನೇಕೆ ಇಂದು...???

- Pb

06 Jun 2017, 10:22 pm

ಜನುಮದಿನ

ಜನುಮ ದಿನವು ನಿನದು
ಹರಸುವಾಸೆ ನನದು!!
ನೀ ಕೇಳಲು ನಾ ಹೇಳುವೇ
ಸವಿಮಾತಿನ ಶುಭಾಶಯ!!

ಹರಸುವೆನು ನಾನು ಇಂದು
ನೂರು ಕಾಲ ನೀ ಬಾಳೆಂದು!!
ಸವಿಮಾತಿನ ಸವಿಪ್ರೀತಿಯ
ಆಶಯ ಸುಭಾಶಯ!!

ನೀ ಜನಿಸಿದ ಈ ದಿನವು
ನನ್ನ ಒಲವಿನ ಹಾರೈಕೆ!!
ಹರುಷದಿ ನೀ ನಗುತಿರೆ
ಈ ಬದುಕಿಗೆ ಶುಭೋದಯ!!

ಈ ಬದುಕಿನ ಸಂಧಾನಕೆ
ಸಂಬಂಧವು ಚಿರನೂತನ!!
ಜನುಮ ಜನುಮ ಹೀಗೆಯೇ
ಬೆಸೆದುಕೊಳ್ಳಲಿ ಈ ಬಂಧನ!!

ನೀ ನಗುತಿರು ಖುಷಿಯಾಗಿರು
ಅನುಗಾಲವೂ ಸುಖವಾಗಿರು!!
ಸವಿಮಾತಿನ ಶುಭಾಶಯ
ಹೇಳುವುದೇ ನನ್ನ ಆಶಯ!!

- ಪಿ.ಜಿ.ಜ್ಯೋತಿ

06 Jun 2017, 06:43 pm