Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕ್ಷಣಕ್ಕೆ

ಅದುರುತಿರುವ ಎಡಗಣ್ಣ ನೋಡಿ
ಶುಭ ಸಂಕೇತವೆಂದು ತಿಳಿದು
ಕಾಯುತಿರುವೆ ಆ ಕ್ಷಣಕೆ ಮನ
ಕೋಲಾಹಲದಿಂದ ಕುಣಿಯುವ ಘಳಿಗೆಗೇ .

ಬಾಡಿದ ಹೂ ಬಳ್ಳಿ ಚಿಗುರಿ
ಸೊಗಸಾದ ಹೂ ಬಿಡುವ ದಿನಕ್ಕೆ.
ಎಂದು ಬಾಡದ ನಿನ್ನ ಕಣ್ಣ ಹೂಗಳು
ನನ್ನ ರೂಪ ತುಂಬಿ ನಗೆಬಿರುವ ಕ್ಷಣಕ್ಕೆ.

- ಚುಕ್ಕಿ

22 May 2017, 04:43 pm

ನಿನ್ನ ನಿರೀಕ್ಷೆಯಲ್ಲಿ.......,,

ಒಂಟಿಯಾದರು ತುಟಿಯಂಚಲಿ ನಸು ನಗು ಮೂಡುತಿದೆ..
ಹೇಗೆ ಹೇಳಲಿ ನಾ, ಏನೆಂದು ವಿವರಿಸಲಿ ನಾ?
ಕಂಡು ಕಾಣದ ಆ ಗೆಳೆಯನ,
ದೂರವಿದ್ದರು ಕಾಡುವ ನನ್ನ ಇನಿಯನ..
ಪುಳಕದಲಿ ಹೃದಯವು ಅರಳುತ್ತಿದೆ ಹೂವಾಗಿ,
ಮತ್ತೆ ಮುದುಡುತ್ತಿದೆ ನಾಚುತ ಮೊಗ್ಗಾಗಿ..
ಅವನೊಂದಿಗೆ ಸ್ವಚ್ಚಂದವಾಗಿ ಹಕ್ಕಿಯಂತೆ ಹಾರಲೆ..?
ಇಲ್ಲ ಎದೆಯ ಗೂಡಲಿ ಪುಟ್ಟ ಗುಬ್ಬಿಯಂತೆ ಬಚ್ಚಿ ಕೂರಲೆ..?
ಎಲ್ಲಿರುವನೊ ? ಎಂದು ಬರುವನೊ ?
ಕಣ್ಣ ರೆಪ್ಪೆಯಂತೆ ಕಾಯಲು..
ಕಪ್ಪೆ ಚಿಪ್ಪಿನಂತೆ ಜೋಪಾನ ಮಾಡಲು..

- Acchu love

22 May 2017, 03:00 pm

ಶ್ರಮಜೀವಿಗಳು ನಾವು

ಲೆಕ್ಕವಿಲ್ಲದ ಅದೆಷ್ಟೋ ಹಗರಣಗಳು
ತೂಕಡಿಸುತ್ತ‌,ಸಾಗುತಿರುವ ತನಿಕೆಗಳು
ದಲಿತರ ಉದ್ದಾರದ ಮಂತ್ರ
ಅವರ ಮನೆಯಲ್ಲಿ
ಉಣ್ಣುವುದರಲ್ಲಿ ಮಾತ್ರ

ತನಿಕೆಯ ನೆಪದಲ್ಲಿ
ಬಡವರ ಸಂಹಾರ
ಅದೆ,ತನಿಕೆಯ ಮರೆಯಲ್ಲಿ
ಸಿರಿವಂತರ ಉದ್ದಾರ
ಇದೆ,ನಮ್ಮನಾಳುವವರ ಉದ್ಗಾರ

ಸಮಾಜವೆಂಬ ಸುಂದರ
ಹೂ-ದೋಟವು
ಹಗರಣಗಳೆಂಬ ಕೀಟಗಳ
ಹಾವಳಿಯಿಂದ ಸೊರಗಿಹವು
ತನಿಕೆಯೆಂಬ ಔಷಧಿ ಸಿಂಪರಣಿಕೆಯು
ಸಾಗಿದೆ ಆಮೆ- ಗತಿಯಲ್ಲಿ

ಸಾವಿರಾರು- ಸಮಸ್ಯೆಗಳು
ನೂರಾರು- ಹೋರಾಟಗಳು
ಹತ್ತಾರು- ಸಲಹೆಗಳು
ಆರ್ಥಿಕತೆಯ ಬೆನ್ನೆಲುಬು ನಾವು
ಅಭಿವೃದ್ಧಿಯ ನೆಪದಲ್ಲಿ ಮಣ್ಣಾದೆವು

ಹರಿಯುವುದು ಆಶ್ವಾಸನೆಯ
ಮಹಾಪೂರ
ಅರಿಯುವವರಿಲ್ಲ ನಮ್ಮೆದೆಯ
ದುಃಖದ ಸಾಗರ

ಬಿತ್ತಿ- ಬೆಳೆವವರು ನಾವು
ಕೂತು- ಉಣ್ಣುವವರು ನೀವು
ನಿಮ್ಮ ಒಪ್ಪಿಗೆ
ನಾವು ತಿನ್ನುವ ತುತ್ತಿಗೆ ....,,,,,,,,?

ದಿನವಿಡೀ ಶ್ರಮವಹಿಸಿ ದುಡಿವೆವು
ದೇಹವ ದಂಡಿಸಿ- ಕಬ್ಬಿಣವ ಬಗ್ಗಿಸಿ
ಬಂಡೆಗಳ ಬಡಿದು- ಬೆವರ ಸುರಿಸಿ
ವೈಭವದ ಮಹಡಿಯ ನಿರ್ಮಿಸಿವೆವು

ಬೇಸತ್ತು ಹೋಗಿದೆ ಮನ
ಆಶ್ವಾಸನೆ,ಪರಿಶೀಲನೆ, ಯೋಜನೆ ?
ಜಡತ್ವವ ಬಿಡಿ ,ನ್ಯಾಯವ ನೀಡಿ.


ಶಾರಧ

- ಶಕುಂತಲಾ

22 May 2017, 12:44 pm

ರೂಪವಾಗಿ

ಕಣ್ಣಲ್ಲಿ ಕರಗಿದ್ದ ಸೊಗಸಾದ
ಕನಸು ನನಸಾಗಿ ಬಂತೆ ನೀನಾಗಿ

ಹೆಸರಿಡುವ ಮೊದಲೇ ತಿಳಿಸಿಹೊಯ್ತೆ
ನಿನ್ನ ನಗುವಾಗಿ

ಮರೆತಿದ್ದ ಮಾತೊಂದು ಮರೆಯದೆ
ನೆನಪಾಯ್ತೆ ಇಂದು ತಡವಾಗಿ

ಹೇಳೋಕು ಮುನ್ನ ಬದಲಾಯಿತೆ
ನಿನ್ನ ಪ್ರೀತಿಯ ರೂಪವಾಗಿ

- ಚುಕ್ಕಿ

21 May 2017, 11:24 pm

ನನ್ನ ನಗು

ಹುಡುಕಿ ನೋಡಿದೆ ನನ್ನ ನಗುವನ್ನು
ನನ್ನ ತುಟಿಯಲ್ಲಿ ಕಾಣಲಿಲ್ಲ..........
ಕಾಯುತ್ತಿದ್ದೆ ಬರಬಹುದೇನೋ ಅಂತ
ನನ್ನ ಕನಸಲ್ಲಿ ಬರಲಿಲ್ಲ.............

ಬಿಡದೆ ನೋಡುತ್ತಿದ್ದೆ ಅದು
ಕಾಣಬಹುದೇನೋ ಎಂದು ನನ್ನ
ನೆರಳಲ್ಲಿ ಕಂಡಿಲ್ಲ....................

ಕನ್ನಡಿಯ ಮುಂದೆ ನಿಂತು ನೋಡಿದೆ
ಅಡಗಿದಿಯೇನೋ ಎಂದು ಕನ್ನಡಿಯ
ಮರೆಯಲ್ಲಿ ಸಿಗಲಿಲ್ಲ................

ನಾನೆಂತ ದಡ್ಡಿ ಊರೆಲ್ಲಾ ಹುಡುಕುತ್ತಿದ್ದೆ
ಕಳೆದೊದ ನಗುವಿಗಾಗಿ ಮರೆತೇ ಹೋಗಿದ್ದೆ.................

ನಾನು ಅದನ್ನು ಬಚ್ಚಿಟ್ಟಿದ್ದು ಅಮ್ಮನ ಮನಸಲ್ಲಿ
ಅವರು ನನಗಾಗಿ ಮಾಡುವ ಮಾಡುವ ಪ್ರತಿ ಕೆಲಸದಲ್ಲಿ................

ಅವರ ನಗು ಮುಖದಲ್ಲಿ..................

- ಚುಕ್ಕಿ

21 May 2017, 08:16 pm

ಕಂಡೆ, ಕ್ಷಣಕೆ ಮರೆಯಾದೆ..

ಅಲೆಯ ಮೇಲಿನ ಗುಳ್ಳೆಯಂತೆ
ಕಂಡೆ, ಕ್ಷಣಕೆ ಮರೆಯಾದೆ...

ಸುಳಿವ ಕೋಮಲ ಕನಸಿನಲಿ
ಅದ್ದಿ ತೆಗೆಯುವೆ ನಿನ್ನ ರೂಪವ
ಮೂಡಿಸುವೆ ಆಗಸದಲಿ
ನಿನ್ನ ಮೋಹಕ ಚಿತ್ರವ
ತೇಲುವ ಮುಗಿಲಲಿ
ಹುಡುಕುವೆ ನಿನ್ನ ಮೈ ಮಾಟವ
ಅರಳುವ ಹೂವಲಿ
ಅರಸುವೆ ನಿನ್ನ ಗಂಧವ

ಹಗಲಿರುಳು ಅಲೆವ ಮನಕೆ
ನಿನ್ನ ನೆನಪು ಆಸರೆ
ಇಂದಲ್ಲ ನಾಳೆ ನೀ
ಸಿಗುವೆಯೆಂಬ ಭರವಸೆ...

- Indushekar Chinivar

21 May 2017, 07:33 pm

ಒಮ್ಮೊಮ್ಮೆ ಹೀಗೂನು ಇರುವೆನು

ಒಮ್ಮೊಮ್ಮೆ ಹೀಗೂನು ಇರುವೆನು
ಎತ್ತಲೊ ಸಾಗುವ ದಾರಿಯನೆ ನೋಡುತ ಕೂರುವೆನು
ನಾ ಹೋಗಬೇಕಿರುವ ದಾರಿಯನೆ ಮರೆಯುವೆನು

ಕಾಣದವರೊಮ್ಮೆ ಎದುರು ಬಂದಾಗ ಅರಿವಿಲ್ಲದೆ ನೋಡುತ್ತಿರುವೆನು
ಕಂಡವರು ಒಮ್ಮೆ ನೆಪ್ಪಿಡಿದು ಮಾತಿಗಿಳಿದರು ಮೌನಿಯಾಗುವೆನು

ಕಾರಿರುಳ ರಾತ್ರಿಯ ಪ್ರೀತಿಯಿಂದ ಅಪ್ಪಿ‌ ಕೂರುವೆನು
ಅದೆ ರಾತ್ರಿಯನು‌‌ ಶಪಿಸಿ‌ ನೋಯುವೆನು‌

ನನ್ನೆದುರು ಇದ್ದುರು ನೋಡುತ್ತಿದ್ದರು‌ ಅರಿವಿಗೆ ಬಾರದಂತೆ ಸ್ಮೃತಿಪಟಲ ಮುಚ್ಚಿರುವೆನು
ಇನ್ಯಾವುದೊ ಅರಿಯದ ಸಂಗತಿಯ ಮನಸೊಳಗಿಟ್ಟು ಅದರದೆ ಗೊಣಗಾಟದಲಿ ಸಾಗುವೆನು

ಮನಸೊಳಗೆ ಏನೇನೊ ಬಡಬಡಿಸುವೆನು
ಆದರು ಏನನು ಹೇಳದೆ ಏಕಾಂಗಿಯಾಗುವೆನು

ಸಾವಿರ ನೋವಿದ್ದರು ನಗುತ್ತ ಇರುವೆನು
ಕೆಲವೊಮ್ಮೆ ಖುಷಿಯ ಕಂಡಾಗಲು ಕಣ್ಣೀರು ಹಾಕುವೆನು

ನೋಟವ ಎಲ್ಲೊ‌ ನೆಟ್ಟು‌ ಅದರ ಅರಿವಿರದಂತೆ‌ ಇನ್ನೇನೊ ಯೋಚಿಸುವೆನು
ಕೆಲವೊಮ್ಮೆ ಊಹೆಗು ನಿಲುಕದ್ದ ಮನಸಲೆ‌ ನೋಡುತ ಕಳೆದೋಗುವೆನು

ಕೆಲವೊಮ್ಮೆ ಕೊನೆಯ ಕಾಣದ ಮುಗಿಲಿನಂತೆ‌ ಹರಟುವೆನು
ಮಗದೊಮ್ಮೆ ಮಾತೆಬಾರದೆಂಬಂತೆ ಮೂಕಿಯಾಗುವೆನು

ಹಾಗೊಮ್ಮೆ ಹೀಗೆ, ಹೀಗೊಮ್ಮೆ ಹಾಗೆ
ನಾ ಈ ರೀತಿಯು ಇರುವೆನು

- ಶ್ರೀಕಾವ್ಯ

21 May 2017, 12:16 pm

ಆಂತರ್ಯದ ಅಳಲು

ನಾನಾರೆಂದು ಎಲ್ಲರು ಬಲ್ಲರು
ಒಂದು ತುತ್ತು ನೀಡರು ಯಾರು?
ನನ್ನ ಬಡಕಲು ಕಾಯವ ನೋಡಿ
ಸುಂದರನಿರುವ ಇಲ್ಲಿ ಅದ ಒಡಿ
ಎಂದು ,ಬೆತ್ತದಿ ಬಡಿದು ತಗಳುವರು

ಬಡತನ- ಸಿರಿತನ ನರರನ್ನು ಭಕ್ಷಿಸುವ
ಭಕ್ಷಕನೆಂದು ಅರಿತಿದ್ದೆ ನಾ ಅಂದು
ಅದರ ಕೆನ್ನಾಲಿಗೆ ಆಕ್ರಮಿಸಿದೆ
ಸಕಲ ಜೀವರಾಶಿಗಳನು ಇಂದು

ಇರುಳೆಲ್ಲ ಕಾವಲುಗಾರನಾಗಿ
ಕಾಯುವೆ ನರರ ಮಾನ- ಪ್ರಾಣಗಳನು
ಅವರಾಕುವ ತುತ್ತು ಕೂಳಿಗೆ
ಜೀವಮಾನವೆಲ್ಲ ಋಣಿಯಾಗಿ

ನನ್ನ ಕಾಯವು ದುರ್ಬಲವಾದಾಗ
ನನ್ನ ಕಣ್ಣು ಮಂಜಾದಾಗ
ನನ್ನ ಅಂದವು ವಿರೂಪವಾದಾಗ
ಮಾನವೀಯತೆ, ಮರೆಯಾಗಿ ತಗಳುವರಾಗ....,,,,,,,!

ನಾನೊಂದು ಶ್ವಾನ
ನಿಯತ್ತೆ ನನ್ನ ಪ್ರಾಣ
ನಾನೆಂದು ಕೂಡಿಡುವುದಿಲ್ಲ
ವ್ಯಮೊಹವೆಂದು ನನಗಿಲ್ಲ
ಒಡೆಯನಿಗಾಗೆ ತನುವೆಲ್ಲ
ನೀ, ನಿಯತ್ತಾಗಿ ಬಾಳುವೆಯಲ್ಲ ?


ಶಾರಧ

- ಶಕುಂತಲಾ

21 May 2017, 11:43 am

ತಿಳಿ ನೀರ ಬಾವಿಯ ಕನಸು

ತಿಳಿ ನೀರ ಬಾವಿಯಲ್ಲಿ ಬಂದಿಯಾದ ಚಂದ್ರನ
ಬಿಡಿಸಲು ಸಾಧ್ಯವೆ
(ನನ್ನ ಹೃದಯದಲ್ಲಿ ಬಂದಿಯಾದ ಚಂದ್ರಿಕೆಯಾ
ಬಿಡಿಸಲು ಸಾಧ್ಯವೆ) ಚೆಲುವೆ
ಬಿಡಿಸುವ ನೆಪದಲ್ಲಿ ಬಳಿ ಬಂದು
ಹೃದಯಕ್ಕೆ ಬಾಣ ವಾ ಬಿಟ್ಟು, ಬಿಳಿಯಾಳೆ ಕೊಟ್ಟೆಯಾ...ಚೆಲುವೆ

ಪ್ರದೀಪ್. ಡಿ ಸೊಬಗು

- ಪ್ರದೀಪ್.ಡಿ

21 May 2017, 09:00 am

ಹನಿ..

ದಿನಚರಿಯ
ಬರೆಯಲು
ದಿನಕರ
ಹೊಸ ‌ಪುಟ
ತೆರೆದ ಬೆಳಗು...

- Indushekar Chinivar

21 May 2017, 06:35 am