ಕನಸುಗಳ ಕಾಣುತ
ನನಸು ಮಾಡಲು ಹೊರಟಿದೆ
ಜೀವನದ ಪಯಣ
ನಿನ್ನೆಗಳ ನೆನಪಿನಲಿ
ನಾಳೆಯ ಭರವಸೆಯಲಿ
ಸಾಗಿದೆ ಬದುಕಿನ ಪಯಣ
ಕನಸೆಲ್ಲ ನನನಸಾಗಿಸಲು
ಪದಗಳ ಜೊತೆಗೂಡಿ
ಬರೆಯುತ ಕವನಗಳ ಸಾಲು
ಭಾವನೆಗಳ ಮರೆಯಲಿ
ಸುಖ ದುಃಖಗಳ ಅಲೆಯಲಿ
ನಗುವಿನ ಜೊತೆಗೆ ಸಾಗುತಿದೆ
ಒಲವಿನ ಪಯಣ
ಮುಗಿಯದ ದಾರಿಯಲಿ
ಕನಸಿನ ಸವಾರಿ ಹೊರಟಿದೆ
ಕಪ್ಪು ಬಿಳಿ ಬದುಕಿನ ಮೇಲೆ ನಡೆಯುತಿದೆ
ಸಪ್ತವರ್ಣಗಳ ಚಿತ್ತಾರದ ಪಯಣ...
ಓ ಮುದ್ದು ಮನಸೆ,
ಮನ್ನಿಸು ಇಲ್ಲವೆ ನಿರಾಕರಿಸು.
ಮನ್ನಿಸುವುದೇ ಆದರೆ ಅದು ಎರಡು ಹೃದಯಗಳಿಗೆ ಬುನಾದಿ, ನೀ ನಿರಾಕರಿಸುವುದೇ ಆದರೆ ಆ ಪುಟ್ಟ ಹೃದಯಗಳಿಗೆ ಅದುವೆ ಸಮಾದಿ,
ಓ ಮುದ್ದು ಮನಸೆ,
ಮನ್ನಿಸು ಇಲ್ಲವೆ ನಿರಾಕರಿಸು....
ಪ್ರೀತಿಯ ಕವನಗಳು ನನ್ನ ಪೆನ್ನಿನಿಂದ ಮೂಡುವುದು ಅತಿ ವಿರಳ
ಲೇಖನಿ ಎಂದು ಪೆನ್ನನ್ನು ಬರೆಯಬೇಕಿತೆಂದು
ಲೆಕ್ಕ ಹಾಕುತ್ತಿರುವಿರೇನು?
ಇರಲಿ ಅಷ್ಟೊಂದು ತಲೆಕೆಡಿಸಿಕೊಳ್ಳಬೇಡಿ
ನನ್ನ ಕವನಗಳೇನಿದ್ದರು
ಇಲ್ಲದವರ ಪರವಾಗಿ
ಅಸಮಾನತೆಯ ವಿರುದ್ಧ
ಅಸಾಮಾನ್ಯ ಶಕ್ತಿಯ ಪರವಲ್ಲ ನಾನು
ದೇವರ ಪೂಜಿಸುವ ಗೊಡವೆಗೆ ಎಂದು ಹೋಗದವನು
ನಾನು ಎಂದೂ ಗೋಡೆ ಕಟ್ಟುವುದರ ವಿರುದ್ಧ
ಕ್ರಾಂತಿಯ ಕೂಗು ನನ್ನ ಪೆನ್ನಿನಿಂದ ಬರುವುದಿಲ್ಲ
ಶಾಂತಿಯ ಮಂತ್ರ ಪಠಿಸುತ್ತವೆ ನನ್ನ ಕವನಗಳು
ನೆತ್ತರ ಕೋಡಿಯ ಕಥೆ ಮಾಡಿ ಹೇಳುವುದಿಲ್ಲ
ನನ್ನ ಕವನಗಳು
ಪ್ರೀತಿಯ ಎತ್ತರ ತಿಳಿಸುತ್ತವೆ....
ರೆಕ್ಕೆ ಬಿಚ್ಚಿ ಹಾರುವ
ಕನಸು ಕಂಡಿದ್ದಳು
ತಾಳಿಯ ಕಟ್ಟಿ ತಾಳಲಿಕ್ಕೆ ಹೇಳಿದರು
ಮೃದು ಕೈಗಳಲ್ಲಿ ಪುಸ್ತಕ ಹಿಡಿಯಬೇಕೆಂದಿದ್ದಳು
ಕೈಗೆ ಮುದ್ದಾದ ಮಗು ಒಂದನ್ನು ಕೊಟ್ಟರು
ತನಗಾದ ಅನ್ಯಾಯಕ್ಕೆ ಕೂಗು ಹಾಕಬೇಕೆಂದಿದ್ದಳು
ಕೂಸು ಆಳುತ್ತಿದೇ ಸುಮ್ಮನಿರಿಸೆಂದರು....
ಅಂತರಾಳದಲಿ ದಿನನಿತ್ಯ ಚಳುವಳಿ..
ಕೊಡಬಾರದೆ ನಿನ್ನ ಪ್ರೀತಿಯ ಬಳುವಳಿ.
ನೀ ದೂರಾದರೆ ಈ ಜೀವಕೆ ಚೆಲುವಲ್ಲಿ..
ಕೊನೆಗೊಮ್ಮೆ ಬಂದು ನೆಲೆಸು ಈ ಹೃದಯ ಸ್ವರ್ಗದಲ್ಲಿ.
--ಇಂಗ್ಗ್ಕವಿ (Engg ಕವಿ)
ಪ್ರೀತಿಯ ಕಾತುರತೆಯಲಿ ಆಗಬಲ್ಲ
ಇಂಜಿನಿಯರ್ ಕೂಡ ಕವಿ
ಯಾರು ಮೆಚ್ಚಿದರು,
ಯಾರೂ ಮೆಚ್ಚದಿದ್ದರೂ
ನನ್ನಾಕೆ ಓದಿದರೆ
ಓದಿ ಮಾರುತ್ತರಿಸಿದರೆ
ತೇಲಾಡುವುದು ಈ ಸಣ್ಣ ಹೃದಯದ ಜೀವಿ..!!!
-- ಇಂಗ್ಗ್ಕವಿ (Engg ಕವಿ)