Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ಭಯಾನಕ ಮೌನ"

ಕಾಡುತ್ತಿರುವ ಈ ನಿನ್ನ ಮೌನ,
ಕಣ್ಣಕಟ್ಟಿ ಬಿಟ್ಟ ಭಯಾನಕ ಕಾನನ..|೨|
ನಾನರಿಯೆನು ಯಾವ ದಾರಿಯನ್ನ.
ಆದರೂ ಸೇರುವೆ ನಿನ್ನನ್ನ
ಅಯ್ಯ್ಯ ದೇವನೇ ಹೇಗಾದರೂ ಮಾಡಿಸಬಾರದೇ ಸಂಧಾನ..!
--ಇಂಗ್ಗ್ಕವಿ (Engg ಕವಿ)

- ಇಂಗ್ಗ್ಕವಿ

09 May 2017, 11:47 am

"ಆಯ್ಕೆ"

ಮಾಡಿಕೊಳ್ಳದಿರು ನೀ ಹೃದಯಕೆ ಮೋಸ.
ಮಾಡುತ್ತಿರುವೆ ನಾನಲ್ಲಿ ವಾಸ.
ತೀರ್ಮಾನಿಸಿದ್ದಾಗಿದೆ ನೀನೇ ನನ್ನಾಕೆ.
ಆದರೆ..
ನಿನಗಿವೆ ನೂರಾರು ಆಯ್ಕೆ,
ಇನ್ನೂ ಕಾಯುತ್ತಿರುವೆನು ಆ ನಿನ್ನ ಉತ್ತರಕೆ!!
--ಇಂಗ್ಗ್ಕವಿ (Engg ಕವಿ)

- ಇಂಗ್ಗ್ಕವಿ

09 May 2017, 11:47 am

"ಅಪ್ಪುವ ಮಳೆಹನಿ"

ಮೋಡಕವಿದ ವಾತಾವರಣ
ತೋಚುತ್ತಿಲ್ಲ ಯಾವ ಹೊಸಗವನ
ಕರೆಯುತ್ತಿದೆ ಖಾಲಿರೋಡ ಕೈಚಾಚಿ.
ಬಂದಪ್ಪುವೆನು ತಾಳು ಬರಲಿ ನನ್ನೊಡನೆ,
ಮಳೆಹನಿಗಳು ಎದೆಗವಚಿ...
-ಇಂಗ್ಗ್ಕವಿ (Engg ಕವಿ)

- ಇಂಗ್ಗ್ಕವಿ

09 May 2017, 11:46 am

ನೆನಪಾದೆ ಇಂದು

ನಿನಗಾಗಿ ಬರೆಯುವೆ ನಾನಿಂದು ಕವನ
ಎಷ್ಟು ಬರೆದರೂ ಮುಗಿಯದ ಕವನ
ಸುಮಧುರ ಸವಿ ಕ್ಷಣಗಳ
ನನ್ನೆದೆಯ ಗೂಡಲ್ಲಿ ಬಚ್ಚಿಟ್ಟ ಭಾವನೆಗಳನು
ಏನೆಂದು ಹೇಳಲೀ ನಾ ?
ಏನೆಂದು ಬರೆಯಲಿ ಹೇಳು
ನೆನಪಾದೆ ಇಂದು ನೀನು ...
ಹಾಗೆ ಸುಮ್ಮನೆ....
ಪ್ರತಿದಿನ ಪ್ರತಿ ಕ್ಷಣ
ನೆನೆನೆನೆದು ನಿನ್ನನೆ ನಿನ್ನೆ ನಾಳೆಗಳ ನಡುವೆ
ನಿನಗಾಗಿ ನಾನಿಂದು ನುಡಿಯುವೆ
ಹೃದಯಾಳದಿಂದ ನಾಲ್ಕು ನುಡಿಗಳು
ನನ್ನ ಉಸಿರಲ್ಲಿ ಉಸಿರಾಗಿ ಅವಿತಿವೆ
ನಿನ್ನ ನೂರಾರು ನೆನಪುಗಳು...ನನ್ನ ಹೃದಯಲ್ಲಿ...

- Pb

09 May 2017, 11:46 am

ಮರವಾಗೊ ಮಾನವ...

ಮರವೆಂಬ ಮಾನವನೊಳಗೆ
ಕವಲೊಡೆದ ಭಾವಗಳು ರೆಂಬೆಗಳಂತೆ
ರೆಂಬೆಗಳಲು‌ ಸಾವಿರಾರು ಕನಸುಗಳು‌ ಎಲೆಗಳಂತೆ
‌ಹುಟ್ಟುವ, ಸಾಯುವ ಭಾವನೆ ಕನಸುಗಳು ಚಿಗುರು ಒಣಗಿದ ಎಲೆಗಳಂತೆ
ಅಲ್ಲಲ್ಲಿ ನಗಿಸಿ ನಗುವ ಖುಷಿಗಳು‌ ಮನವ ಉಲ್ಲಾಸಿಸುವ ಹೂವುಗಳಂತೆ
ಜೊತೆ ಇದ್ದರು ನನಸಾಗದ ಭಾವ ಕನಸು ನೋವು ಸೋಲು ಕಹಿ ನೆನಪುಗಳು ಕಾಯಿಯಂತೆ
ಕಲಿತ ಜೀವನ ಪಾಠ ನನಸಾದ ಕನಸುಗಳು ಸಿಹಿಯಾದ ನೆನಪುಗಳೇ ಹಣ್ಣಿನಂತೆ
ಇವೆಲ್ಲವ ‌ಹೊತ್ತು ನಿಂತ ಮನಸೇ ಕಾಂಡದಂತೆ
ಎಲ್ಲವ‌ ಮೀರಿ ಮನದೊಳಗೆ ಅಡಗಿ ಮಾನವನ ಗಟ್ಟಿಯಾಗಿಸಿ ನಡೆಸುವವೆಲ್ಲವು ಬೇರುಗಳಂತೆ

ಕತ್ತರಿಸಿದರೇನು ರೆಂಬೆಗಳನು
ಉದುರಿದರೇನು ಒಂದರೆಡು ಒಣಗೆಲೆ
ಬಿಸಿಲೆಂಬ ನೋವಿಗೆ ಬೋಳದರೇನು ಇಡಿ‌ ಮರವೆ......
ಕಳೆದು ಕೊಂಡ ರೆಂಬೆಯ ನೆನೆದು ಪ್ರಾಣ ಬಿಡುವುದೇನು
ಒಣಗಿದಲಿ ಚಿಗುರದೆ ಮತ್ತೊಂದು ಎಲೆ
ವಸಂತನಾಗಮನದಲಿ ನಿಲ್ಲದೆ ಮತ್ತೆ ಹಸಿರು ಹೊತ್ತು ನಿಂತು

ಮರೆಯಾದರೇನು ನಗುವ ಸೂಸೊ ಹೂವುಗಳು
ಹಣ್ಣಗದಿದ್ದರೇನು ಕಾಯಿಗಳು
ಹಣ್ಣುಗಳನ್ನೆಲ್ಲ ಪರರ ಖುಷಿಗೆ ಕೋಯ್ದರೇನು.....
ಆ ಮರದಲಿ ಹೂವುಗಳ ಪುನರಾಗಮನವಗದೇನು
ಆ ಕಹಿ ಕಾಯಿಗಳೇನು ಮರದಲಿ‌ ಶಾಶ್ವತವೇನು
ಮತ್ತೆ ಮರದಲಿ ಹಣ್ಣುಗಳು ಬರದೆ ಇರುವುದೇನು

ಕಾಂಡವ ಕತ್ತರಿಸಿದ ಮರವು ಬದುಕಿದ್ದು ಸತ್ತ ಜೀವವು
ಬೇರೆ ಇಲ್ಲದ ಮರಕ್ಕೆ ಎಲ್ಲಿಹುದು ಉಳಿವು


ಮರವಾಗೊ ಮಾನವ....

ಕತ್ತರಿಸದಿದ್ದರೆ ಎಲ್ಲವ‌ ಹೊತ್ತು ನಿಂತ ಕಾಂಡವ
ಬುಡಮೇಲು‌ ಮಾಡದಿದ್ದರೆ ಬದುಕ‌ ದಾರಿಗೆ ಆದರವಾದ ಬೇರನು
ಎಲ್ಲಿಹುದು ಜಾಗ ಬದುಕು ದಾರಿಯಲಿ ನೋಡಲು ಸೋಲಿನ ಸಾವನು........

- ಶ್ರೀಕಾವ್ಯ

09 May 2017, 11:08 am

.......

ಜಾರುತ್ತಿದ್ದವು ನಕ್ಷತ್ರ
ನಿನ್ನ ನೆತ್ತಿಯ ಮೇಲಿಂದ

ಹೊಳಪು ಇಮ್ಮಡಿ
ಗೊಳಿಸಿಕೊಳ್ಳಲಿರಬೇಕು
ನಿನ್ನ ನಯನ ಸೋಕಿ...
ನಿನ್ನಧರರದ ಕೆಂಪಿಗೆ
ಮುಗಿಲು ತೊರೆದು
ಚಂದಿರ ಭುವಿಗೆ
ಧುಮುಕಿದ. .....

ನಿನ್ನ ಮುಂಗುರುಳಿನ
ಸುರುಳಿಗೆ ಸಿಲುಕಿ ತಂಗಾಳಿಯು
ನಾಚುವುದ ಕಂಡು
ಮೇಘಗಳ ಸಾಲು ನಕ್ಕು
ನಲಿಯತೊಡಗಿತು ...

ಭುವಿಯ ತುಂಬಾ ಮುತ್ತ ಹನಿ
ಹನಿಗಳು ನಿನ್ನ ಚಲುವ
ಕಂಡು ನಾಚಿ ನೀರಾದವು..!!

- ಅನಾಮಿಕ..........

09 May 2017, 09:56 am

ಆಸೆ ಹೊತ್ತವರು

ಏನು ಕೇಳಿದಿರಿ?
ಕತ್ತಲ ಗೂಡಲ್ಲಿ ಚಿಮಿಣಿ ಬೆಳಕಲ್ಲಿ
ಬದುಕು ಸಾಗಿಸುವವರು ನಾವು
ನಿಮ್ಮ ಬಾಷಣಗಳಿಗೆ ಕಥೆ ಆದವರು ನಾವು
ನೀವು ಕೊಡುವ ನಾಕಾಣೆಗೆ
ನಮ್ಮ ಕನಸ ಮಾರಿಕೊಂಡವರು
ನಿಮ್ಮ ಆಶ್ವಾಸನೆಗಳು ಶಾಸನಗಳು
ನನಸಾಗುವವೆಂಬ ಕನಸಲ್ಲೆ ಸ್ಮಶಾನ ಸೇರುವವರು
ನಿಮ್ಮ ಬಾಸಣದಲ್ಲಿ ನಮ್ಮ ಕಥೆ ಕೇಳುವವರು
ನಾಕಾಣೆಗೆ ನಮ್ಮನ್ನು ಮಾರಿಕೊಂಡವರು
ಕತ್ತಲೆ ತುಂಬಿದ ಗುಡಿಸಿಲಿನಲ್ಲಿ
ಕಡೆಗೊಮ್ಮೆ ಆದರೂ ಬೆಳಕು ನೋಡಬೇಕೆಂದುಕೊಂಡವರು
ನಿಮ್ಮ ಮದುವೆ ದಿಬ್ಬಣದಲ್ಲಿ ಬೆಳಕು ಹಿಡಿದವರು
ನಮ್ಮ ಮುಖಗಳು ನಿಮಗೆ ಕಾಣಿಸದು ಬಿಡಿ
ಸುತ್ತಲೂ ಕತ್ತಲು ನಮ್ಮನ್ನು ಆವರಿಸಿರುತದೇ ನೋಡಿ
ಕಣ್ಣು ಮಂಜಾಗುವುದರೊಳಗೆ ನಮ್ಮ ಹಾಡಿಯಲ್ಲಿ
ಬೆಳಕು ನೋಡುವ ಬಯಕೆ ಹೊತ್ತವರು ನಾವು

- HarshaHL

09 May 2017, 06:56 am

ಹಲ್ಕಾ ಕವಿತೆಗಳು

ನಿಖರವಾಗಿ ಹೇಳಲಾಗದ ತೊದಲುಗಳಿಗೆ
ಬಲ್ಲವರಾರೋ ಒಲವೆಂದನ್ನುತ್ತಾರಂತೆ
ನಾನಂತೂ ದಟ್ಟ ಕಾಡಿನ ಒರಟುಮರದ
ಮುಳ್ಳಿನ ಮೇಲೆ ಬಿದ್ದ ಗುಲ್ಮೋಹರಿನ
ಎಸಳಿನಂತೆ ಭಾವಿಸುತ್ತೇನೆ

ಕಾರಣಗಳಿಲ್ಲದ ಕವಲೊಡೆಯುವ
ಏಕಾಂತದ ಬಳ್ಳಿ ನನ್ನ ಸುತ್ತಿ ಕೊಂಡಿದ್ದರ
ಪರಿಣಾಮ ಇನ್ನೂ
ಅಸ್ತವ್ಯಸ್ಥ ಉತ್ತರಗಳು ಮುಂದೆ ಕುಣಿಯುತ್ತದೆ
ನಿಮಗೇನಾದರೂ ಗೊತ್ತಿದ್ದರೆ ಬಿಡಿಸಿಬಿಡಿ

ನೀಲಜಡೆಯ ಮುಡಿಗೆ ಗಂಟಾಕಿದ ಮೊಗ್ಗನ್ನು
ನೋಡಿ ಒಲವಾಯಿತಂತೆ ನನಗೆ
ಹಾಗೆಯೇ ಗಾಳಿಯ ಕಡೆ ತೇಲಿಬಿಟ್ಟ
ಮುಂಗುರುಳಿನ ನಲಿದಾಟಕ್ಕೆ ನಾ ಸೋತದ್ದು
ಅನ್ನೋವಾಗ ಇನ್ನೂ ಗೊಜಲು

ಸವೆಯುವುದಕ್ಕಿರುವ ಇದೇ ಜನ್ಮದಲ್ಲಿ
ಸಂಗ ಬರುವವಳಾದರೆ ಸ್ವಾಗತವಿತ್ತು
ಮುಂದಿನ ಜನ್ಮಕ್ಕೆ ಕಾಯುವಷ್ಟು
ದೃಢ ಮನಸ್ಸು ನನ್ನಲ್ಲಿ ಇಲ್ಲ ಹುಡುಗೀ.!!


#ಅವಿಜ್ಞಾನಿ

- ಅವಿಜ್ಞಾನಿ

08 May 2017, 08:33 pm

ನಿಲುಗಡೆ ಇಲ್ಲದ ನಡುಗೆ

ಬೆಳ್ಳಿ ರಥದಲಿ ಬರುವ ಭಾನು
ಬಾನ ಬೆಳಗುವ ಮುನ್ನ
ಬಾಗಿಲ ತೊಳೆಯುವೆ ನೀನು

ಗಡಿ- ಬಿಡಿಯಲಿ ಗಂಟೆ ನೋಡಿ
ರಜ- ಬಳಿದು ಶುಚಿ ಮಾಡಿ
ಹಣಿಗೊಳಿಸುವೆ ಕಾಫಿ- ತಿಂಡಿ

ಎಲ್ಲರ ಆಗು-ಹೊಗುಗಳನು
‌ನೀ ನೋಡಲು ,ಅಳೆಯುವೆ
ಮನೆಯ ಒಳ- ಹೊರಾಂಗಣವನು
ಅಳತೆಯಿಲ್ಲದ ನಡಿಗೆಯಲಿ

ಜ್ಞಾನಕ್ಕೆ ಒಡತಿ ಶಾರದೆ
ಸಂಪತ್ತಿಗೆ ಒಡತಿ ಲಕ್ಷ್ಮಿ
ಮನೆಯ ಸುಖ- ಶಾಂತಿಗೆ
ಒಡತಿ ಸೌಮ್ಯ ವತಿ ತಾಯಿ
ನಿನಗೆ ನನ್ನ ಕೋಟಿ ವಂದನೆ


ಶಾರಧ






- ಶಕುಂತಲಾ

08 May 2017, 07:11 pm

ಪ್ರೇಮಪತ್ರ...

ಸಂಗಾತಿಯ ನೋಡಲು ಕನಸಿನ ಲೋಕಕ್ಕೆ ನಾ ಹೋಗುವೆ..
ಕನಸ್ಸಿನ ಲೋಕದಲ್ಲಿ ಹುಡುಕುವೆ ಅವಳ ಪ್ರತಿ ಗಲ್ಲಿಗಳಲ್ಲಿ...
ಸಿಕ್ಕಾಗ ಹಾಡುವೆ ನಾ , ನೀನೆ ನನ್ನವಳೆಂದು....
ಹಿಂಬಾಲಿಸು ಪ್ರಿಯೆ ನನ್ನ ಪ್ರತಿ ಹೆಜ್ಜೆಗಳನ್ನ...
ಪ್ರಮಾಣ ಮಾಡಿ ಹೇಳುವೆನು....
ಬರಿ ಸುಖವನ್ನೆ ತೋರುವೆ ನನ್ನ ಹೆಜ್ಜೆಗಳಲ್ಲಿ...
ಕೊಡುವೆಯ ಹುಡುಗಿ ನಿನ್ನ ಕಿರುಬೆರಳನ್ನ...
ಹಿಡಿಯುವೆನು ನನ್ನ ಕಿರುಬೆರಳಿನೊಂದಿಗೆ...
ಪ್ರಮಾಣಿಸುವೆನು ಬರಿ ಏಳು ಸುತ್ತಲ್ಲಾ...
ಏಳೇಳು ಜನುಮದಲ್ಲಿಯು ಸುತ್ತುವೆ ನಿನ್ನೊಂದಿಗೆ...
ತಲೆಯ ಬಾಗಿಸುವೆಯ ಒಮ್ಮೆ ನನಗಾಗಿ..
ಕಟ್ಟುವೆನು ಮಂಗಳ ಸೊತ್ರವ
ಬೆಸೆಯುವುದು ನಮ್ಮಿಬ್ಬರ ಸಂಬಂಧ ಶಾಶ್ವತವಾಗಿ...
ಮುಂದಿಡುವಿಯ ಗೆಳತಿ ನಿನ್ನ ಕಾಲ್ಬೆರಳುಗಳ...
ತೊಡಿಸುವೆನು ನಾ ಬೆಳ್ಳಿ ಕಾಲುಂಗುರವ...
ಇರಲಿ ನಿನ್ನ ಪ್ರತಿ ಹೆಜ್ಜೆಯಲ್ಲಿ ನನ್ನ ಗುರುತು...
ಕೊಡುವಿಯ ಪ್ರಿಯ ಸಖಿ ನಿನ್ನ ಕೈಯ...
ತೊಡಿಸುವೆನು ಹಸಿರು ಬಳೆಯ....
ನಮ್ಮ ಪ್ರೀತಿ ಸಂಕೇತವಾಗಿ ಇರಲಿ...
ಸದಾ ನಿನ್ನ ಕೈಗಳಲ್ಲಿ...
ಕೊನೆಉಸಿರೆಳೆಯುವ ಆಸೆಯಾಗಿದೆ ಇಂದು ನಿನ್ನ ಮಡಿಲಲ್ಲಿ..
ಹೊರಡುವೆನು ಕನಸ್ಸಿನ ಲೋಕಕ್ಕೆ ಮತ್ತೋಮ್ಮೆ...
ಹಿಂತಿರುಗಿ ಬರುವೆ ನಿನ್ನ ಮಡಿಲ ಸೇರಲು...
ಹಿಂದಿಗೊ , ಇಂದಿಗೊ , ಎಂದೆಂದಿಗೊ ನೀ ನನ್ನವಳೆ..

- Harsha GR

08 May 2017, 05:58 pm